ಹಳ್ಳಿಕೇರಿ ಗುದ್ಲೆಪ್ಪ

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search

ಹಳ್ಳಿಕೇರಿ ಗುದ್ಲೆಪ್ಪನವರು ಹಾವೇರಿ ಜಿಲ್ಲೆಹೊಸರಿತ್ತಿಯಲ್ಲಿ ೧೯೦೬ ಜೂನ್ ೬ ರಂದು ಜನಿಸಿದರು. ತಂದೆ ವೀರಪ್ಪ, ತಾಯಿ ವೀರಮ್ಮ. ಪ್ರಾಥಮಿಕ ಶಿಕ್ಷಣದ ನಂತರ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಧಾರವಾಡಕರ್ನಾಟಕ ಹೈಸ್ಕೂಲು ಸೇರಿಕೊಂಡರು. ೧೯೨೪ ರಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಸ್ವಯಂಸೇವಕರಾಗಿದ್ದರು. ಗಾಂಧೀಜಿಯಿಂದ ಪ್ರಭಾವಿತರಾದ ಗುದ್ಲೆಪ್ಪನವರು ಸ್ವಾತಂತ್ರ್ಯ ಆಂದೋಲನದಲ್ಲಿ ಸೇರ್ಪಡೆಯಾದರು. ೧೯೨೮ರಿಂದ ೧೯೪೨ರ ವರೆಗಿನ ಅವಧಿಯಲ್ಲಿ ಗುದ್ಲೆಪ್ಪನವರು ಅನೇಕ ವಿಧಾಯಕ ಕಾರ್ಯಕ್ರಮಗಳನ್ನು ಕೈಗೊಂಡರು. ಹೊಸರಿತ್ತಿಯಲ್ಲಿ ಭಾರತೀಯ ತರುಣ ಸಂಘ, ಗಾಂಧೀ ಆಶ್ರಮ, ಗ್ರಾಮಿಣ ಮಕ್ಕಳಿಗಾಗಿ ಪ್ರೌಢಶಾಲೆ ಪ್ರಾರಂಭಿಸಿದರು. ೧೯೩೦ರಲ್ಲಿ ದಂಡಿಯಾತ್ರೆಗೆ ಕರ್ನಾಟಕದ ಪ್ರಥಮ ಸತ್ಯಾಗ್ರಹಿಯಾಗಿ ಆಯ್ಕೆಯಾದರು. ಉಪ್ಪಿನ ಸತ್ಯಾಗ್ರಹದಲ್ಲಿ ಎರಡು ಬಾರಿ ಜೈಲುವಾಸ ಅನುಭವಿಸಿದರು. ೧೯೩೨ರಲ್ಲಿ ಅಸಹಕಾರ ಆಂದೋಲನದಲ್ಲಿ ಎರಡು ವರ್ಷ ಜೈಲುಶಿಕ್ಷೆಗೊಳಗಾದರು. ೧೯೪೨ರಲ್ಲಿ ಚಲೇಜಾವ್ ಚಳುವಳಿಯಲ್ಲಿ ೩ ವರ್ಷ ಜೈಲುವಾಸಕ್ಕೊಳಗಾದರು.

ಗುದ್ಲೆಪ್ಪನವರು ೧೯೪೬ ರಿಂದ ೧೯೬೦ ರವರೆಗೆ ನಿರಂತರ ೧೫ ವರ್ಷ ಧಾರವಾಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ೧೯೫೦ ರಿಂದ ೧೯೫೫ ರವರೆಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿದ್ದರು. ೧೯೫೨ರಲ್ಲಿ ಮುಂಬಯಿ ರಾಜ್ಯ ವಿಧಾನಸಭೆಗೆ ಹಾವೇರಿ ತಾಲೂಕಿನಿಂದ ಅಯ್ಕೆಯಾದರು.೧೯೫೪ರಲ್ಲಿ ಚೀನಾ ಪ್ರವಾಸವನ್ನು ಮಾಡಿದರು.೧೯೬೦ರಲ್ಲಿ ರಾಷ್ಟ್ರೀಯ ನಿಯೋಗದ ಪ್ರತಿನಿಧಿಯಾಗಿ ಇಂಗ್ಲಂಡ,ಜರ್ಮನಿ ಹಾಗು ಇಜಿಪ್ತ ದೇಶಗಳಿಗೆ ಭೆಟ್ಟಿ ನೀದಿದರು. ೧೯೫೬ ರಿಂದ ೧೯೬೧ ರವರೆಗೆ ಕರ್ನಾಟಕ ರಾಜ್ಯ ಗಾಮೋದ್ಯೋಗ ಮಂಡಳಿಯ ಅಧ್ಯಕ್ಷರಾಗಿದ್ದರು. ೧೯೬೦ ರಲ್ಲಿ ಮೈಸೂರು ವಿಧಾನ ಪರಿಷತ್ತಿಗೆ ಆಯ್ಕೆಯಾದರು. ೧೯೬೧ ರಿಂದ ೧೯೬೬ ರವರೆಗೆ ವಿಧಾನ ಪರಿಷತ್ ಸಭಾಪತಿಯಾಗಿದ್ದರು. ೧೯೬೭ ರಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷರಾದರು. ೧೯೭೧ರಲ್ಲಿ ಎರಡನೆ ಅವಧಿಗೆ ವಿಧಾನ ಪರಿಷತ್ ಸಭಾಪತಿಯಾದರು.

ಹಳ್ಳಿಕೇರಿ ಗುದ್ಲೆಪ್ಪನವರು ೧೫ ಮೇ ೧೯೭೧ ರಂದು ನಿಧನರಾದರು.

ಟೆಂಪ್ಲೇಟು:ರಾಜಕೀಯ