ಹಲಸಿನ ಬೆರಟಿ
ಹಲಸಿನ ಬೆರಟಿ ಎಂದರೆ ಒಂದು ಬಗೆಯ ತಿನಿಸಿ.ಇದು ಜಾಸ್ತಿಯಾಗಿ ಆಟಿ ತಿಂಗೊಳುಗಾಗಿ ಶೇಖರಿಸಿ ಇಡುವ ಆಹಾರ ಖಾದ್ಯ .ಆಟಿಯ ಜೋರು ಮಳೆಯ ಸಮದಲ್ಲಿ ಹಲಸಿನ ಹಣ್ಣು ಸಿಗುವುದು ಕಡಿಮೆ .ಸಿಕ್ಕಿದರು ಆಟಿಯ ಹಲಸಿನ ಹಣ್ಣು ತಿನ್ನಲು ಆರೋಗ್ಯ ದೃಷ್ಟಿಯಿಂದ ಒಳ್ಳೆಯದಲ್ಲ ಮಳೆಯ ಸೀರು ಹೀರಿದ ಹಣ್ಣು ತಿಂದರೆ ಕಾಯಿಲೆ ಬರುವುದು ಜಾಸ್ತಿ.ಅದಕ್ಕಾಗಿ ಹಲಸಿನ ಹಣ್ಣು ಸಿಗುವುದು ಸಮಯದಲ್ಲಿ ಅದನ್ನು ಶೇಖರಿಸಿ ಇಡುವ ಕ್ರಮವೇ ಬೆರಟಿ ಮಾಡುವುದು.
ಹಲಸಿನ ಹಣ್ಣಿನಲ್ಲಿ ಇರುವ ಪೋಷಕಾಂಶ
[ಬದಲಾಯಿಸಿ]ಹಲಸಿನ ಹಣ್ಣಿನಲ್ಲಿ ಸಕ್ಕರೆಯ ಅಂಶ, ಅನ್ನಾಂಗ, ಸಾರಜನಕ, ಪಿಷ್ಟ, ಖನಿಜಾಂಶ ಇರುತ್ತದೆ. ಇದು ಪಿತ್ತನಾಶಕ, ಬಲವರ್ಧಕವಾಗಿರುತ್ತದೆ. ಇದರಲ್ಲಿ ಇರುವ 'ಸಿ' ಸತ್ವ ವೈರಲ್- ಬ್ಯಾಕ್ಟೀರಿಯಾ ಸೋಂಕಿನಿಂದ ರಕ್ಷಣೆ ನೀಡುತ್ತದೆ. ಮನುಷ್ಯನಿಗೆ ಯಾವುದೇ ಕಾಯಿಲೆ ಬರದಿರುವ ಹಾಗೇ ರೋಗ ನಿರೋಧಕ ಶಕ್ತಿ ಹಲಸಿನ ಹಣ್ಣಿನಿಂದ ಸಿಗುತ್ತದೆ . ಕ್ಯಾನ್ಸರನ್ನು ಎದುರಿಸುವಂತಹ ಶಕ್ತಿ ಇದರಲ್ಲಿ ಇದೆ. ಇದರಲ್ಲಿರುವ ನಾರಿನ ಅಂಶದಿಂದಾಗಿ ಜೀರ್ಣ ಶಕ್ತಿ ಹೆಚ್ಚಾಗಿ ಅಲ್ಸರ್ ನಿವಾರಣೆ ಮಾಡುತ್ತದೆ. ಇದರಲ್ಲಿರುವ 'ಎ' ಸತ್ವ ಕಣ್ಣು, ಚರ್ಮಗಳಿಗೆ ಒಳ್ಳೆಯದು .ಹಲಸಿನ ಹಣ್ಣಿನಲ್ಲಿರುವ ಸುಕ್ರೋಸ್ ಮತ್ತು ಪ್ರೊಕ್ಟೋಸ್ ಎಂಬ ಸಕ್ಕರೆ ಅಂಶಗಳು ಶರೀರಕ್ಕೆ ಚೈತನ್ಯ ಕೊಡುತ್ತದೆ. ಹಲಸಿನ ಮರದ ಬೇರಲ್ಲಿ ಮಾಡಿದ ಕಷಾಯ ಉಬ್ಬಸ ಸೋಂಕಿಗೆ ರಾಮಬಾಣ . ಹಲಸಿನ ಹಣ್ಣಿನಲ್ಲಿರುವ ತಾಮ್ರದ ಅಂಶ ಥೈರಾಯಿಡ್ ಬರದಿರುವಂತೆ ಸಹಾಯ ಮಾಡುತ್ತದ
ಬೆರಟಿ ಮಾಡುವ ವಿಧಾನ
[ಬದಲಾಯಿಸಿ]ಹಲಸಿನ ಹಣ್ಣನ್ನು ಕೊಯ್ಯಿದ್ದು ಸೊಳೆ ಬಿಡಿಸಿ ಕನ್ನಿ, ಬೀಜ ,ಎಲ್ಲವನ್ನು ಸೊಳೆಯನ್ನು ಚೆನ್ನಾಗಿ ಸಣ್ಣಕೆ ಕೊಚ್ಚಿ ಆಮೇಲೆ ಒಲೆಯ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಸ್ವಲ್ಪ ತುಪ್ಪ ಹಾಕಿ ಕೊಚ್ಚಿ ಇಟ್ಟ ಸೊಳೆಯನ್ನು ಹಾಕಿ ಚೆನ್ನಾಗಿ ಬೆಯಿಸ ಬೇಕು ಅದು ಬೆಂದು ಚೆನ್ನಾಗಿ ಗಟ್ಟಿಯಾಗಿ ಅಂಟಾಗಿ ಉಂಡೆಯಾಗುವ ತನಕ ಕಾಯಿಸ ಬೇಕು.ಆಮೇಲೆ ಅದನ್ನು ಒಲೆಯಿಂದ ಇಳಿಸಿ ತಣ್ಣಾಗಾಗುವ ತನಕ ಬಿಟ್ಟು ಆಮೇಲೆ ಭರಣಿಯಲ್ಲಿ ತುಂಬಿಸಿ ಇಡಬೇಕು.ಹಲಸಿನ ಹಣ್ಣನ್ನು ಇರದಿರುವ ಸಮಯದಲ್ಲಿ ಬೇಕಾದಾಗ ತೆಗೆದು ಉಪಯೋಗಿಸ ಬಹುದು .
ಬೆರಟಿಯ ಉಪಯೋಗ
[ಬದಲಾಯಿಸಿ]- ಪಾಯಸ ಮಾಡುವಾಗ ಈ ಬೆರಟಿಯನ್ನು ಸೇರಿಸಿ ಪಾಯಸ ಮಾಡಿದರೆ ಹಲಸಿನ ಹಣ್ಣಿನಿಂದ ತಯಾರಿಸಿದ ಪಾಯಸ ರುಚಿಯ ಹಾಗೆ ಇರುತ್ತದೆ .
- ಅಕ್ಕಿ ರುಬ್ಬುವಾಗ ಬೆರಟಿ ಸೇರಿಸಿ ರುಬ್ಬಿ ಬಾಲೆಯ ಎಲೆಯಲ್ಲಿ ಮಡಿಚಿ ಇಟ್ಟು ದೀದ್ ತಂದೊರಲ್ಲಿ ಬೆಯಿಸಿದರೆ ಹಲಸಿನ ಗಟ್ಟಿ ಮಾಡಿದಂತಾಗುತ್ತದೆ .
- ಅಕ್ಕಿ ರುಬ್ಬುವಾಗ ಬೆರಟಿ ಸೇರಿಸಿ ರುಬ್ಬಿ ಅಪ್ಪದ ಕಾವೆಲಿಯಲ್ಲಿ ಹೊಯ್ಯಿದ್ದು ಬೆಯಿಸಿದರೆ ಅಪ್ಪದಡ್ಯೆ ಆಗುತ್ತದೆ