ವಿಷಯಕ್ಕೆ ಹೋಗು

ಹಲಸಿನ ದಿಂಡಿನ ಚಟ್ನಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕರಾವಳಿ ಪ್ರದೇಶದಲ್ಲಿ ಆಟಿ ತಿಂಗಳಿನ ತಿನಿಸುಗಳನ್ನು ಸವಿಯುವುದು ಇಂದಿಗೆ ಒಂದು ವಿಶೇಷ ಸಂತೋಷದ ಸಂಗತಿಯಾಗಿದ್ದು, ಒಮ್ಮೆ ಬಡತನದ ಪ್ರತೀಕವಾಗಿದ್ದ ಆಟಿ ತಿಂಗಳ ಆಹಾರಗಳು ಈಗ ಆ ಕಾಲದ ಅರಿವನ್ನು ನೀಡುವ ಹೊಸ ವ್ಯವಸ್ಥೆಯನ್ನು ಉಂಟುಮಾಡಿವೆ.ರಾಜ್ಯದ ಇತರ ಭಾಗಗಳಲ್ಲಿ ಆಷಾಡ ಉತ್ಸಾಹದ ಸಮಯವಾಗಿದ್ದರೆ, ತುಳುವಿನಲ್ಲಿ ಅದನ್ನು ಆಟಿ ಎಂದೂ ಕರೆಯುತ್ತಾರೆ.

ಆಟಿ ತಿಂಗಳ ಆಹಾರ

[ಬದಲಾಯಿಸಿ]

ಈ ತಿಂಗಳು ತುಳುವರಿಗೆ ಚೈತನ್ಯ ಮತ್ತು ಉತ್ಸಾಹವನ್ನು ತುಂಬುತ್ತದೆ. ಒಂದು ಕಾಲದಲ್ಲಿ, ಆಟಿ ತಿಂಗಳು ಬಡತನ ಮತ್ತು ಹಸಿವಿನ ಸಮಯವಾಗಿತ್ತು. ಆ ಕಾಲದ ಜನರ ನಂಬಿಕೆಗೆ ತಕ್ಕಂತೆ, ಬಡತನ ಮತ್ತು ಹಸಿವಿನ ಸ್ಥಿತಿಯಲ್ಲಿದ್ದರೆ ಆರೋಗ್ಯ ಕಾಪಾಡಲು ಸಾಧ್ಯವಾಗುತ್ತದೆ ಎಂದು ಪೂರಣ. ಅದಕ್ಕಾಗಿಯೇ, ನಮ್ಮ ಪೂರ್ವಿಕರು ನೂರು ವರ್ಷಕ್ಕೂ ಹೆಚ್ಚು ಕಾಲ ಆಯಸ್ಸು ಹೊಂದಿದ್ದರು. ಪ್ರಕೃತಿಯಿಂದ ದೊರಕಿದ ಆಹಾರವನ್ನು ಸೇವಿಸುತ್ತಾ, ಅವರು ಒಂದು ರೀತಿಯ ವೃತಾಚರಣೆಯನ್ನು ಕೈಗೊಳ್ಳುತ್ತಿದ್ದರು. ಇದೊಂದು ಆಯುರ್ವೇದದ ಆಹಾರ ಪದ್ಧತಿಗೆ ಸಮಾನವಾಗಿತ್ತು.[]

ಹಲಸಿನ ದಿಂಡಿನ ಚಟ್ನಿ ಮಾಡಲು ಬೇಕಾಗುವ ಸಾಮಗ್ರಿಗಳು

[ಬದಲಾಯಿಸಿ]

ಮೆತ್ತಗಿರುವ ಒಂದು ಉದ್ದದ ಹಲಸಿನ ಗುಂಜಿ ಅಥಾವ ದಿಂಡು

ಸ್ವಲ್ಪ ತೆಂಗಿನ ಕಾಯಿತುರಿ

4-5 ಚಮಚ ತೆಂಗಿನ ಎಣ್ಣೆ

ಒಂದು ಚಮಚ ಸಾಸಿವೆ

ನಾಲ್ಕೈದು ಹುರಿದ ಒಣಮೆಣಸು

ನೆಲ್ಲಿಗಾತ್ರದಷ್ಟುಹುಳಿ

ಸ್ವಲ್ಪ ಇಂಗು

ರುಚಿಗೆ ತಕ್ಕಷ್ಟುಉಪ್ಪು

ಹಲಸಿನ ದಿಂಡಿನ ಚಟ್ನಿ ಮಾಡುವ ವಿಧಾನ

[ಬದಲಾಯಿಸಿ]

ಮೊದಲು ಹಲಸಿನ ದಿಂಡನ್ನು ಸಣ್ಣ ಸಣ್ಣ ಚೂರುಗಳನ್ನಾಗಿ ಕತ್ತರಿಸಿಕೊಳ್ಳಬೇಕು. ನಂತರ ಒಲೆಯ ಮೇಲೆ ಬಾಣಲೆಯನ್ನು ಇಟ್ಟು ಅದಕ್ಕೆ ನಾಲ್ಕೈದು ಚಮಚ ಎಣ್ಣೆ ಹಾಕಿ ಸಾಸಿವೆ ಹಾಕಿ ಅದು ಸಿಡಿಯಲು ಪ್ರಾರಂಭವಾದ ಬಳಿಕ ಇಂಗನ್ನು ಹಾಕಿ ಮಗುಚುತ್ತಿರಬೇಕು. ಅದಕ್ಕೆ ಕತ್ತರಿಸಿಟ್ಟುಕೊಂಡ ಹಲಸಿನ ದಿಂಡನ ತುಂಡುಗಳನ್ನು ಹಾಕಿ ಹುರಿಯಬೇಕು. ಅದು ತಣಿದ ಬಳಿಕ ಅದಕ್ಕೆ ತೆಂಗಿನಕಾಯಿತುರಿ, ಒಣಮೆಣಸು, ಹುಳಿ, ಉಪ್ಪು ಹಾಕಿ ಗಟ್ಟಿಯಾಗಿ ರುಬ್ಬಬೇಕು. ಈ ಚಟ್ನಿಯನ್ನು ತೆಳುವಾಗಿ ಮತ್ತು ಗಟ್ಟಿಯಾಗಿ ಎರಡೂ ರೀತಿಯಲ್ಲೂ ಮಾಡಬಹುದು. ಇದು ಅನ್ನ, ದೋಸೆ, ಇಡ್ಲಿಗೂ ಹೊಂದಿಕೆಯಾಗುತ್ತದೆ. []

ಮಳೆಯ ಕಾಲದಲ್ಲಿ ರೋಗರುಗಳು ಹೆಚ್ಚಾಗಿ ಬಾಧಿಸುತ್ತಿದ್ದ ಕಾರಣ, ರೋಗ ನಿರೋಧಕ ಶಕ್ತಿ ವೃದ್ಧಿಸುವ ಮತ್ತು ದೇಹದ ಉಷ್ಣತೆಯನ್ನು ಸಮತೋಲನದಲ್ಲಿ ಇಡುವಂತಹ ಆಹಾರ ಪದ್ಧತಿ ರೂಢಿಯಲ್ಲಿತ್ತು. ಭತ್ತದ ಬೆಳೆ ಇಡುವ ಕಾರ್ಯ ಮುಗಿದ ನಂತರ ಕೃಷಿ ಚಟುವಟಿಕೆಗಳಲ್ಲಿ ಸ್ವಲ್ಪ ವಿರಾಮ ಸಿಗುತ್ತಿತ್ತು. ನಮ್ಮ ಪೂರ್ವಿಕರು ಜನಸ್ನೇಹಿಗಳು ಮಾತ್ರವಲ್ಲ, ಭೋಜನ ಪ್ರಿಯರೂ ಆಗಿದ್ದರಲ್ಲ ಎಂಬುದಕ್ಕೆ ಈ ಆಹಾರ ಪದ್ಧತಿಗಳು ಸಾಕ್ಷಿ.

ಉಲ್ಲೇಖಗಳು

[ಬದಲಾಯಿಸಿ]
  1. "Food Cuture: ಆಟಿಯ ತಿನಿಸು ತಿನ್ನಲು ಸೊಗಸು". Asianet News Network Pvt Ltd.
  2. "ಹಲಸಿನ ಬಹುಬಗೆ ಖಾದ್ಯ;ಸಾಗರದ ಗೀತಾ ಹಲಸಿಂದ 400 ರೆಸಿಪಿ ಮಾಡ್ತಾರೆ!". Asianet News Network Pvt Ltd.