ವಿಷಯಕ್ಕೆ ಹೋಗು

ಹಯಗ್ರೀವ ಮಾಧವ ದೇವಾಲಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹಯಗ್ರೀವ ಮಾಧವ ದೇವಾಲಯವು ಮೋನಿಕೂಟ್ ಗುಡ್ಡದ ಮೇಲೆ ಸ್ಥಿತವಾಗಿದೆ.[೧] ಗುಡ್ಡವು ಭಾರತದ ಅಸ್ಸಾಂ ರಾಜ್ಯದ ಕಾಮ್ರೂಪ್ ಜಿಲ್ಲೆಯ ಹಾಜೊದಲ್ಲಿ ಸ್ಥಿತವಾಗಿದೆ, ಗುವಾಹಾಟಿಯ ಪಶ್ಚಿಮಕ್ಕೆ ಸುಮಾರು ೩೦ ಕಿ.ಮಿ. ದೂರದಲ್ಲಿ. ಕ್ರಿ.ಶ. ೧೧ನೇ ಶತಮಾನದಲ್ಲಿ ಕಾಮರೂಪದಲ್ಲಿ ರಚಿಸಲಾದ ಕಾಲಿಕಾ ಪುರಾಣವು ವಿಷ್ಣುವಿನ ಈ ರೂಪದ ಮೂಲ ಮತ್ತು ಮೋನಿಕೂಟ್ ಗುಡ್ಡದಲ್ಲಿ ಅವನ ಅಂತಿಮ ಪ್ರತಿಷ್ಠಾಪನೆ ಬಗ್ಗೆ ಮಾತನಾಡುತ್ತದೆ. ಅಲ್ಲೇ ಈಗಿನ ದೇವಾಲಯವು ಸ್ಥಿತವಾಗಿದೆ. [೨] ಈಗಿನ ದೇವಾಲಯದ ರಚನೆಯನ್ನು ರಾಜ ರಘುದೇವ ನಾರಾಯಣನು ೧೫೮೩ರಲ್ಲಿ ನಿರ್ಮಿಸಿದನು.[೩] ಕೆಲವು ಇತಿಹಾಸಕಾರರ ಪ್ರಕಾರ ಪಾಲ ರಾಜವಂಶದ ರಾಜನು ಇದನ್ನು ೧೦ನೇ ಶತಮಾನದಲ್ಲಿ ನಿರ್ಮಿಸಿದನು. ಇದು ಕಲ್ಲಿನ ದೇವಾಲಯವಾಗಿದ್ದು ಹಯಗ್ರೀವ ಮಾಧವನ ಒಂದು ವಿಗ್ರಹವನ್ನು ಹೊಂದಿದೆ. ಈ ಭವ್ಯವಾದ ದೇವಾಲಯದಲ್ಲಿ ವಿಷ್ಣು ಪ್ರಧಾನ ದೇವತೆಯಾಗಿದ್ದಾನೆ. ಇವನ ವಿಗ್ರಹವು ಕಪ್ಪುಶಿಲೆಯದ್ದಾಗಿದ್ದು ಗರ್ಭಗೃಹದಲ್ಲಿ ಪೂಜಿಸಲ್ಪಡುತ್ತದೆ.

ಉಲ್ಲೇಖಗಳು[ಬದಲಾಯಿಸಿ]

  1. "Hayagriva Madhava Temple - Hayagriva Madhava Temple Hajo, Hayagriva Madhava Temple Assam". Bharatonline.com. Retrieved 2013-04-23.
  2. Lavoni, Sama (2014). "SHAYAGRIVA MADHAVA TEMPLE AND SACRED GEOGRAPHY OF HAJO". Proceedings of the Indian History Congress. 75: 364–370. ISSN 2249-1937. JSTOR 44158404.
  3. MustSeeIndia.com. "Hajo: Hayagriva Madhava Temple, Hajo Tourist Places to Visit for". Mustseeindia.com. Archived from the original on 21 July 2012. Retrieved 2013-04-23.