ಹಣದ ಮಾರುಕಟ್ಟೆ
ಈ ಹೊಸ ವಿಕಿಪೀಡಿಯ ಪುಟವನ್ನು ಕ್ರೈಸ್ಟ್ ವಿಶ್ವವಿದ್ಯಾಲಯ ವಿಕಿಪೀಡಿಯ ಶಿಕ್ಷಣ ಯೋಜನೆಯ ಅಂಗವಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಹೊಸದಾಗಿ ವಿಕಿಪೀಡಿಯ ಕಲಿಯುತ್ತಿರುವವರಿಂದ ತಯಾರಾದ ಲೇಖನವಿದು. ವಿಕಿಪೀಡಿಯದ ಉತ್ತಮ ಲೇಖನದ ಎಲ್ಲ ಗುಣಮಟ್ಟಗಳನ್ನು ಇದು ಒಳಗೊಂಡಿಲ್ಲದಿರಬಹುದು. ಸಮುದಾಯದವರು ಈ ಲೇಖನವನ್ನು ಉತ್ತಮ ಲೇಖನವನ್ನಾಗಿಸಬಹುದು. ಹಾಗೆ ಮಾಡುವುದರಿಂದ ಲೇಖನ ತಯಾರಿಸಿದ ಹೊಸ ಸಂಪಾದಕರಿಗೆ ಉತ್ತಮ ಲೇಖನ ಹೇಗಿರಬೇಕು ಎಂಬ ಮಾಹಿತಿಯೂ ದೊರೆಯುತ್ತದೆ. |
ಹಣದ ಮಾರುಕಟ್ಟೆಯು ಹಣಕಾಸಿನ ಮಾರುಕಟ್ಟೆಯ ಒಂದು ಭಾಗವಾಗಿದ್ದು, ಅಲ್ಪಾವಧಿಯ ಹೆಚ್ಚಿನ ದ್ರವತ್ವ ಹೊಂದಿರುವ ಹಣಕಾಸಿನ ಸ್ವತ್ತುಗಳಲ್ಲಿ ವ್ಯಾಪಾರ ಮಾಡಲಾಗುವುದು. ಸಂಕ್ಷಿಪ್ತವಾಗಿ, ಇದೊಂದು ಅಲ್ಪಾವಧಿ ಹಣ ಅಥಾವಾ ಆಲ್ಪಾವಧಿ ಬಂಡವಾಳ ಪತ್ರಗಳ ಮಾರುಕಟ್ಟೆಯಾಗಿರುತ್ತದೆ. ಈ ಮಾರುಕಟ್ಟೆಯು ಅಲ್ಪಾವಧಿ ಸಾಧನಗಳಾದ ಖಜಾನೆ ಹುಂಡಿಗಳು, ವಾಣಿಜ್ಯ ಪತ್ರಗಳು, ಬ್ಯಾಂಕುಗಳ ಸ್ವೀಕೃತಿಗಳು ಮತ್ತು ಠೇವಣಿ ಪ್ರಮಾಣ ಪತ್ರಗಳು ಮೊದಲಾದವುಗಳ ಲೇವಾದೇವಿ ಅಥವಾಾ ಖರೀದಿ ಮತ್ತು ಮಾರಾಟವನ್ನು ಒಳಗೊಂಡಿರುತ್ತದೆ. ಭಾರತ್ತೀಯ ರಿಸರ್ವ್ ಬ್ಯಾಂಕು, ವಾಣಿಜ್ಯ ಬ್ಯಾಂಕುಗಳು, ರಾಜ್ಯ ಸರಕಾರಗಳು, ಬೃಹತ್ ಕಂಪನಿಗಳು, ಅನ್ಯೋನ್ಯ ನಿಧಿಗಳು ಮತ್ತು ಬ್ಯಾಕೇತರ ಹಣಕಾಸಿನ ಕಂಪನಿಗಳು ಹಣದ ಮಾರುಕಟ್ಟೆಯಲ್ಲಿ ಭಾಗವಹಿಸುವವರಾಗಿರುತ್ತಾರೆ.
ಭಾರತೀಯ ರಿಸರ್ವ್ ಬ್ಯಾಂಕು ಹಣಕಾಸಿನ ಮಾರುಕಟ್ಟೆಯಲ್ಲಿ ಪ್ರಮುಖ ಅಂಗವಾಗಿದೆ. ಭಾರತೀಯ ರಿಸರ್ವ್ ಬ್ಯಾಂಕಿನ ಪ್ರಕಾರ, ಹಣದ ಮಾರುಕಟ್ಟೆ ಎಂದರೆ "ಅಲ್ಪಾವಧಿ ಲಕ್ಷಣ ಹೊಂದಿರುವ ಹಣದ ಸ್ವತ್ತಿನ ಲೇವಾದೇವಿ ಮಾಡುವ ಕೇಂದ್ರ; ಅಂದರೆ ಸಾಲ ಪಡೆಯುವವರ ಅಲ್ಪಾವಧಿ ಅವಶ್ಯಕತೆಗಳು ಮತ್ತು ಸಾಲಕೊಡುವವರಿಗೆ ದ್ರವತ್ವ ಅಥವಾಾ ನಗದನ್ನು ಪೂರೈಸುತ್ತದೆ."
ಹಣದ ಮಾರುಕಟ್ಟೆಯ ಸಾಧನಗಳು ಅಥವಾ ಅಲ್ಪಾವಧಿ ಪತ್ತಿನ ಪತ್ರಗಳು
ಹಣದ ಮಾರುಕಟ್ಟೆಯು ಈ ಕೆಳಗಿನ ಅಲ್ಪಾವಧಿ ಪತ್ತಿನ ಪತ್ರಗಳು ಅಥವಾಾ ಸಾಧನಗಳನ್ನು ಒಳಗೊಂಡಿರುತ್ತದೆ.
೧. ಖಜಾನೆ ಹುಂಡಿಗಳು : ಖಜಾನೆ ಹುಂಡಿಗಳೆಂದರೆ ಭಾರತ ಸರಕಾರವು ಅಲ್ಪಾವಧಿ ಸಾಲವನ್ನು ಪಡೆದುಕೊಳ್ಳುವ ಒಂದು ಸಾಧನವಾಗಿದೆ. ಸಾಮಾನ್ಯವಾಗಿ ಇದರ ಅವಧಿಯು ೧೪ ದಿನಗಳಿಂದ ೩೬೪ ದಿನಗಳವರೆಗೆ ಇರುತ್ತದೆ. ಈ ಖಜಾನೆ ಹುಂಡಿಗಳು ವಾಗ್ದಾನ ಪತ್ರಗಳ ಸ್ವರೂಪವನ್ನು ಹೊಂದಿದೆ. ಇವುಗಳು ಹೆಚ್ಚಿನ ದ್ರವತ್ವ, ಖಾತರಿಯಾದ ಪ್ರತಿಫಲ ಮತ್ತು ಅತ್ಯಲ್ಪ ಪ್ರಮಾಣದ ನಷ್ಟಭಯವನ್ನು ಹೊಂದಿರುತ್ತದೆ. ಈ ಹುಂಡಿಗಳನ್ನು ಅವುಗಳ ಮುಖಬೆಲೆಗಿಂತಲೂ ಕಡಿಮೆ ಬೆಲೆಗೆ ನೀಡಲಾಗುತ್ತದೆ. ಮುಖಬೆಲೆ ಮತ್ತು ನೀಡುವ ಬೆಲೆಯ ವ್ಯತ್ಯಾಸವನ್ನು ಸೋಡಿ ಎಂದು ಕರೆಯಲಾಗುತ್ತದೆ. ಸೋಡಿಯು, ಹುಂಡಿಗಳ ಮೇಲೆ ಪಡೆಯಬೇಕಾಗಿರುವ ಬಡ್ಡಿಯಾಗಿರುತ್ತದೆ. ಖಜಾನೆ ಹುಂಡಿಗಳು ಸ್ವಾಮಿತ್ವವರ್ಗಾವಣೆಯ ಪತ್ರಗಳಾಗಿದ್ದು ಮುಕ್ತವಾಗಿ ವರ್ಗಾವಣೆ ಮಾಡಬಹುದಾಗಿದೆ.
೨. ಕರೆಹಣ : ಕರೆಹಣವೆಂದರೆ ತಾತ್ಕಾಲಿಕವಾಗಿ ಹಣದ ಕೊರತೆ ಇರುವ ಬ್ಯಾಂಕುಗಳು, ಅಲ್ಪಾವಧಿಗಾಗಿ ಹಣವನ್ನು ಇತರೆ ಬ್ಯಾಂಕುಗಳಿಂದ ಸಾಲ ಪಡೆದುಕೊಳ್ಳುವ ವಿಧಾನವಾಗಿರುತ್ತವೆ. ಕರೆಹಣದ ಅವಧಿಯು ಅತ್ಯಂತ ಅಲ್ಪಾವಧಿಯಾಗಿರುತ್ತದೆ. ಅಂದರೆ ಈ ಸಾಲಗಳ ಅವಧಿಯು ಒಂದು ದಿನದಿಂದ ಹದಿನೈದು ದಿನಗಳವರೆಗೆ ಇರುತ್ತದೆ. ಭಾರತ್ತೀಯ ರಿಸರ್ವ್ ಬ್ಯಾಂಕ್ ತನ್ನ ನಗದು ಮೀಸಲು ಅನುಪಾತವನ್ನು ಸಮಯಕ್ಕನುಗುಣವಾಗಿ ಬದಲಾಯಿಸುವಾಗ ಸಾಲವನ್ನು ಕೊಡಲು ವಾಣಿಜ್ಯ ಬ್ಯಾಂಕುಗಳು ವಿತ್ತೀಯ ಕೊರತೆಯನ್ನು ಎದುರಿಸಬೇಕಾಗುತ್ತದೆ. ಅಂತಹ ಸಂದರ್ಭದಲ್ಲಿ ವಾಣಿಜ್ಯ ಬ್ಯಾಂಕುಗಳು, ಕರೆಹಣ ವಿಧಾನದ ಮೂಲಕ ಅಲ್ಪಾವಧಿ ಹಣವನ್ನು ಸಂಗ್ರಹಿಸುತ್ತದೆ. ಕರೆಹಣ ಸಾಲದ ಮೇಲೆ ಕೊಡುವ ಬಡ್ಡಿ ದರವನ್ನು ಕರೆದರ ಎನ್ನುತ್ತರೆ. ಕರೆದರವು ಅತ್ಯಂತ ಸೂಕ್ಷ್ಮವಾಗಿದ್ದು ದಿನದಿಂದ ದಿನಕ್ಕೆ ಮತ್ತು ಗಂಟೆಯಿಂದ ಗಂಟೆಗೆ ಬದಲಾಗುತ್ತಾ ಹೋಗುತ್ತದೆ.
೩. ಠೇವಣಿ ಪ್ರಮಾಣ ಪತ್ರ : ವಾಣಿಜ್ಯ ಬ್ಯಾಂಕುಗಳು ನೀಡುವ ಅಲ್ಪಾವಧಿಯ, ಭದ್ರತೆ ಇಲ್ಲದ, ವರ್ಗಾವಣೆಯ ಪತ್ರಗಳಾಗಿದ್ದು ಧಾರಕ ರೂಪದಲ್ಲಿರುತ್ತದೆ. ಇವುಗಳನ್ನು ವ್ಯಕ್ತಿಗಳಿಗೆ, ನಿಗಮಗಳಿಗೆ, ಮತ್ತು ಕಂಪನಿಗಳಿಗೆ ನೀಡಲಾಗುತ್ತದೆ. ಈ ಪ್ರಮಾಣಪತ್ರದಲ್ಲಿ ವಾಯಿದೆ ದಿನಾಂಕ, ನಿಶ್ಚಿತ ಬಡ್ಡಿದರ ಮತ್ತು ಪರಿಪಕ್ವ ಮೌಲ್ಯಗಳು ಒಳಗೊಂಡಿರುತ್ತದೆ. ಸಾಮಾನ್ಯವಾಗಿ ಇದರ ವಾಯಿದೆಯು ೩ ತಿಂಗಳಿನಿಂದ ಒಂದು ವರ್ಷದ ಒಳಗೆ ಇರುತ್ತದೆ. ಇವುಗಳಿಗೆ ಸ್ಟಾಂಪನ್ನು ಹಾಕಲಾಗಿದ್ದು ಠೇವಣಿ ಪ್ರಮಾಣಪತ್ರಗಳ ಮೇಲೆ ಸಿಗುವ ಪ್ರತಿಫಲವು ಖಜಾನೆ ಹುಂಡಿಯ ಮೇಲೆ ಸಿಗುವ ಪ್ರತಿಫಲಕ್ಕಿಂತಲೂ ಹೆಚ್ಚಾಗಿರುತ್ತದೆ. ಏಕೆಂದರೆ ಅದು ಹೆಚ್ಚಿನ ಮಟ್ಟದ ನಷ್ಟಭಯವನ್ನು ಹೊಂದಿರುತ್ತದೆ.
೪. ವಾಣಿಜ್ಯ ಪತ್ರಗಳು : ವಾಣಿಜ್ಯ ಪತ್ರಗಳನ್ನು ಹಣದ ಮಾರುಕಟ್ಟೆಯ ಸಾಧನವಾಗಿ ೧೯೯೦ ರಲ್ಲಿ ಪರಿಚಯಿಸಲಾಯಿತು. ವಾಣಿಜ್ಯ ಪತ್ರವು ದೊಡ್ಡ ಮತ್ತು ಸಾಲಯೋಗ್ಯ ಕಂಪೆನಿಗಳು ನೀಡಿದ ಅಲ್ಪಾವಧಿಯ, ಭದ್ರತಾ ರಹಿತ ವಾಗ್ದಾನ ಪತ್ರವಾಗಿದ್ದು, ನಿಶ್ಚಿತ ಅವಧಿಯನ್ನು ಹೊಂದಿದ್ದು, ಹಿಂಬರಹದೊಂದಿಗೆ ಸ್ವಾಮಿತ್ವ ವರ್ಗಾವಣೆ ಮಾಡಬಹುದಾದ ಸಾಧನವಾಗಿದೆ.
ಸಾಮಾನ್ಯವಾಗಿ ಇದರ ಅವಧಿಯು ೧೫ ದಿನಗಳಿಂದ ಒಂದು ವರ್ಷದ ಒಳಗೆ ಇರುತ್ತದೆ. ಇದನ್ನು ಸೋಡಿಯಲ್ಲಿ ಮರಾಟ ಮಾಡಿ ಮುಖ ಬೆಲೆಗೆ ಹಿಂದಕ್ಕೆ ಪಡೆಯುತ್ತಾರೆ. ಅವುಗಳು ಖಜಾನೆ ಹುಂಡಿಗಿಂತಲೂ ಹೆಚ್ಚಿನ ಪ್ರತಿಫಲವನ್ನು ಕೊಡುತ್ತದೆ. ಕಾರಣವೇನೆಂದರೆ, ತುಲನಾತ್ಮಕವಾಗಿ ವಾಣಿಜ್ಯ ಪತ್ರಗಳು ಕಡಿಮೆ ಭದ್ರತೆಯನ್ನು ಒದಗಿಸುತ್ತದೆ. ಆದರೂ, ಹಿಂದಿರುಗಿಸಿದೇ ಇರುವ ಸಾಧ್ಯತೆಯು ಅತ್ಯಂತ ನಗಣ್ಯವಾಗಿರುತ್ತದೆ.
೫. ವಾಣಿಜ್ಯ ಹುಂಡಿಗಳು : ವಣಿಜ್ಯ ಹುಂಡಿಗಳು ಅಲ್ಪಾವಧಿಯ ಮತ್ತು ಸ್ವದ್ರವೀಕರಣಹೊಂದುವ, ಕಡಿಮೆ ನಷ್ಟ ಭಯವಿರುವ ಹಣದ ಮಾರುಕಟ್ಟೆಯ ಸಾಧನಗಳಾಗಿರುತ್ತದೆ. ಇದು ಒಂದು ವಿನಿಮಯ ಪತ್ರವಾಗಿದ್ದು ವ್ಯವಹಾರಗಳಿಗೆ ಕಾರ್ಯಶೀಲ ಬಂಡವಾಳವನ್ನು ಒದಗಿಸುತ್ತದೆ. ಸರಕಿನ ಮಾರಟಗಾರನು (ರಚಕ) ಖರೀದಿಗಾರನ ಮೇಲೆ ವಿನಿಮಯ ಪತ್ರವನ್ನು ಬರೆಯುತ್ತಾನೆ. ಖರೀದಿಗಾರನು ವಿನಿಮಯ ಪತ್ರಕ್ಕೆ ಒಪ್ಪಿಗೆ ಸೂಚಿಸಿದ ನಂತರ, ಅದು ಮಾರಾಟ ಯೋಗ್ಯ ಸಾಧನವಾಗುತ್ತದೆ ಮತ್ತು ಅದನ್ನು ವ್ಯಾಪಾರಿ ವಿನಿಮಯ ಪತ್ರವೆಂದು ಕರೆಯುತ್ತಾರೆ. ವಾಯಿದೆ ದಿನಾಂಕದ ಒಳಗೆ ರಚಕನಿಗೆ ಹಣದ ಅವಶ್ಯಕತೆ ಇದ್ದಲ್ಲಿ ವ್ಯಾಪಾರಿ ವಿನಿಮಯ ಪತ್ರವನ್ನು ಬ್ಯಾಂಕಿನಲ್ಲಿ ಸೋಡೀಕರಿಸಬಹುದು. ವಾಣಿಜ್ಯ ಬ್ಯಾಂಕುಗಳು ಸ್ವೀಕಾರ ಮಾಡಿದಗ ಅದು ವಾಣಿಜ್ಯ ವಿನಿಮಯ ಪತ್ರವೆಂದೆನಿಸಿಕೊಳ್ಳುತ್ತದೆ.
ಅಭಿವೃದ್ಧಿ ಹೊಂದಿದ ಹಣದ ಪೇಟೆಯ ಲಕ್ಷಣಗಳು
ಹಣದ ಪೇಟೆಯು ಎಲ್ಲಾ ದೇಶಗಳಲ್ಲಿ ಏಕ ರೀತಿಯಲ್ಲಿ ಅಭಿವೃದ್ಧಿ ಹೊಂದಿರುವುದಿಲ್ಲ. ಕೆಲ ದೇಶಗಳಲ್ಲಿ ಸುಸಂಘಟಿತವಾಗಿ ಅಭಿವೃದ್ಧಿ ಹೊಂದಿದ್ದರೆ. ಇನ್ನೂ ಕೆಲವು ದೇಶಗಳಲಿ ಸುಸಂಘಟಿತವಾಗಿ ಅಭಿವೃದ್ಧಿ ಹೊಂದಿರುವುದಿಲ್ಲ. ಅಭಿವೃದ್ಧಿ ಹೊಂದಿರುವ ಹಣದ ಪೇಟೆಯು ಆರ್ಥಿಕ ಅಭಿವೃದ್ಧಿಯ ಒಂದು ಮಾನದಂಡವಾಗಿರುತ್ತದೆ. ಅಭಿವೃದ್ಧಿ ಹೊಂದಿದ ಹಣದ ಪೇಟೆಯ ವಿಶಿಷ್ಟ ಲಕ್ಷಣಗಳು ಈ ರೀತಿ ಇವೆ.
೧. ಸುವ್ಯವಸ್ಥಿತವಾದ ಬ್ಯಾಂಕಿಂಗ್ ಪದ್ಧತಿ : ಸುವ್ಯವಸ್ಥಿತವಾದ ಬ್ಯಾಂಕಿಂಗ್ ಪದ್ಧತಿಯ ಅಸ್ತಿತ್ವವು ಅಭಿವೃದ್ಧಿ ಹೊಂದಿದ ಹಣದ ಪೇಟೆಯ ಲಕ್ಷಣವಾಗಿರುತ್ತದೆ. ಈ ಪೇಟೆಯಲ್ಲಿ ವಾಣಿಜ್ಯ ಬ್ಯಾಂಕುಗಳು ಪ್ರಮುಖ ಸ್ಥಾನವನ್ನು ಪಡೆದಿರುತ್ತದೆ. ಈ ಬ್ಯಾಂಕುಗಳು ಹಣದ ಪೇಟೆಯ ವಿವಿಧ ಅಂಗಗಳ ಹಾಗೂ ಕೇಂದ್ರ ಬ್ಯಾಂಕುಗಳ ನಡುವೆ ನೇರವಾದ ಸಂಬಂಧ ಕಲ್ಪಿಸುವ ಸಾಧನಗಳಾಗಿರುತ್ತದೆ.
೨. ವಿಶಿಷ್ಟವಾದ ಉಪ-ಮಾರುಕಟ್ಟೆಗಳ ಅಸ್ತಿತ್ವ : ಅಭಿವೃದ್ಧಿ ಹೊಂದಿದ ಹಣದ ಪೇಟೆಯಲ್ಲಿ ವಿವಿಧ ಬಗೆಯ ವ್ಯವಹಾರಕ್ಕೂ ವಿವಿಧ ಬಗೆಯ ವಿಶಿಷ್ಟ ಹಾಗೂ ಪ್ರತ್ಯೇಕವಾದ ಉಪ-ಪೇಟೆಗಳು ವ್ಯವಸ್ಥೆ ಇರುತ್ತದೆ. ಇಂತಹ ಪೇಟೆಗಳೆಂದರೆ ಕರೆ ಪೇಟೆ, ಸಹಾಯಕ ಪೇಟೆ, ಹುಂಡಿ ಪೇಟೆ ಇತ್ಯಾದಿ. ಈ ಉಪ ಪೇಟೆಗಳ ನಡುವೆ ಪರಸ್ಪರ ಹೊಂದಾಣಿಕೆ ಇರುತ್ತದೆ.
೩. ಕೇಂದ್ರ ಬ್ಯಾಂಕಿನ ಅಸ್ತಿತ್ವ : ಅಭಿವೃದ್ಧಿ ಹೊಂದಿದ ಹಣದ ಪೇಟೆಯಲ್ಲಿ ದಕ್ಷವಾದ ಕೇಂದ್ರ ಬ್ಯಾಂಕಿನ ಅಸ್ತಿತ್ವ ಇರುತ್ತದೆ. ಕೇಂದ್ರ ಬ್ಯಾಂಕು ದೇಶದ ಹಣಕಾಸಿನ ಹಾಗೂ ಬ್ಯಾಂಕಿಂಗ್ ವ್ಯವಸ್ಥೆಯನ್ನು ನಿಯಂತ್ರಕವಾಗಿ, ಮಾರ್ಗದರ್ಶಕನಾಗಿ, ನೇಕಾರನಾಗಿ ಕೆಲಸ ಮಾಡಿತ್ತದೆ.
೪. ಯೋಗ್ಯ ಪತ್ತಿನ ಪರಿಕರಗಳ ಅಸಿತ್ವ : ಅಭಿವೃದ್ಧಿ ಹೊಂದಿದ ಹಣದ ಪೇಟೆಯಲ್ಲಿ ಯೋಗ್ಯವಾದ ಪತ್ತಿನ ಪರಿಕರಗಳು ಅಸ್ತಿತ್ವದಲ್ಲಿರುತ್ತವೆ. ಇಂತಹ ಪರಿಕರಗಳೆಂದರೆ ಹುಂಡಿಗಳು, ಖಜಾನೆ ಹೊಂಡಿಗಳು,ಸರ್ಕಾರದ ಸಾಲ ಪತ್ರಗಳು, ವಾಗ್ದಾನ ಪತ್ರಗಳು ಇತ್ಯಾದಿ. ಈ ಸಾಧನಗಳು ಅಧಿಕವಾಗಿದ್ದರೆ ಹಣದ ಪೇಟೆಯ ವ್ಯವಹಾರಗಳು ಸುಗಮವಾಗಿ ನಡೆಯುತ್ತದೆ.
೫. ಸಾಕಷ್ಟು ಸಂಪನ್ಮೂಲಗಳ ಲಭ್ಯತೆ : ಅಭಿವೃದ್ಧಿ ಹೊಂದಿದ ಹಣದ ಪೇಟೆಯಲ್ಲಿ ಸಾಕಷ್ಟು ಹಣಕಾಸಿನ ಸಂಪನ್ಮೂಲಗಳ ಲಭ್ಯತೆ ಇರುತ್ತದೆ. ಅಧಿಕ ಸಂಪನ್ಮೂಲಗಳಿಂದಾಗಿ ಬೃಹತ್ ಪ್ರಮಾಣದ ವ್ಯವಹಾರಗಳನ್ನು ಸಾಗಿಸಿಕೊಂಡು ಹೋಗಲು ಸಾಧ್ಯವಾಗುತ್ತದೆ.
೬. ಬಡ್ಡಿಯ ದರಗಳಲ್ಲಿ ಸಾಮ್ಯತೆ : ಅಭಿವೃದ್ಧಿ ಹೊಂದಿದ ಹಣದ ಪೇಟೆಯಲ್ಲಿ ಬಡ್ಡಿಯ ದರಗಳು ಏಕ ಪ್ರಕಾರವಾಗಿ ಇರಬೇಕು. ಹಣದ ಪೇಟೆಯ ವಿವಿಧ ಉಪ-ಪೇಟೆಗಳು ವಿಧಿಸುವ ಬಡ್ಡಿಯ ದರಗಳಲ್ಲಿ ಸಾಮ್ಯತೆ ಇರಬೇಕು. ವೈವಿಧ್ಯಮಯ ಬಡ್ಡಿಯ ದರ ಅಭಿವೃದ್ಧಿ ಹೊಂದಿದ ಹಣದ ಪೇಟೆಯಲ್ಲಿ ಸಾಧ್ಯವಿಲ್ಲ.
೭. ಪಾವತಿ ಸೌಲಭಗಳು : ಅಭಿವೃದ್ಧಿ ಹೊಂದಿದ ಹಣದ ಪೇಟೆಯಲ್ಲಿ ಕಡಿಮೆ ವೆಚ್ಚದಲ್ಲಿ ಪಾವತಿ ಸೌಲಭ್ಯಗಳು ಇರುತ್ತವೆ ಒಂದು ಪೇಟೆಯಿಂದ ಇನ್ನೊಂದು ಪೇಟೆಗೆ ಸುಲಭವಾಗಿ ಹಣವನ್ನು ರವಾನಿಸುವ ಸೌಲಭ್ಯಗಳಿರುತ್ತವೆ.
೮. ಇತರ ಅಂಶಗಳು : ಅಭಿವೃದ್ಧಿ ಹೊಂದಿದ ಹಣದ ಪೇಟೆಯ ಅಸ್ತಿತ್ವಕ್ಕೆ ರಾಜಕ್ಕೀಯ ಸ್ಥಿರತೆ ಪರಸ್ಪರ ಸಹಕಾರ ವಿದೇಶಿ ವ್ಯಾಪಾರದ ಬೆಳವಣಿಗೆ, ಕೈಗಾರಿಕೆಗಳ ಅಭಿವೃದ್ಧಿ, ಹಣದ ಪೇಟೆಯ ಸ್ಥಿರತೆ , ಜನರ ವಿಶ್ವಾಸಗಳಿಸುವಿಕೆ ಮತ್ತು ಸರಕಾರದ ಯೋಗ್ಯ ನಿಯಂತ್ರಣ ಮುಂತಾದ ಅಂಶಗಳು ಕಾರಣವಾಗಿರುತ್ತದೆ.
ಹೀಗೆ ಅಭಿವೃದ್ಧಿ ಹಣದ ಪೇಟೆಯು ಹಲವಾರು ಪ್ರಮುಖ ಲಕ್ಷಣಗಳನ್ನು ಹೊಂದಿರುತ್ತದೆ. ಈ ಎಲ್ಲಾ ಲಕ್ಷಣಗಳನ್ನು ಪೇಟೆಗಳಲ್ಲಿ ಕಣುವುದು ವಿರಳ. ಲಂಡನ್ ಮತ್ತು ನ್ಯೂಯಾರ್ಕ್ ಹಣದ ಪೇಟೆಗಳನ್ನು ಅಭಿವೃದ್ಧಿ ಹೊಂದಿದ ಪೇಟೆಗಳೆಂದು ಪರಿಗಣಿಸಲಾಗಿದೆ.
ಹಣದ ಪೇಟೆಯ ಪ್ರಾಮುಖ್ಯತೆ
ಆರ್ಥಿಕ ಜಗತ್ತಿನಲ್ಲಿ ಹಣದ ಪೇಟೆಯು ಪ್ರಮುಖ ಪಾತ್ರ ವಹಿಸುತ್ತದೆ. ಹಣದ ಪೇಟೆಯ ಪ್ರಾಮುಖ್ಯತೆಯನ್ನು ಅದಿ ನಿರ್ವಹಿಸುವ ಕಾರ್ಯಗಳಿಂದ ತಿಳಿದು ಕೊಳ್ಳಬಹುದು. ಅವುಗಳೆಂದರೆ :
೧. ಹಣದ ಪೇಟೆಯು ಕೈಗಾರಿಕೆ ಮತ್ತು ವ್ಯಾಪಾರ-ವಾಣಿಜ್ಯ ಅಭಿವೃದ್ಧಿಗೆ ಪ್ರೇರಕವಾಗಿರುತ್ತದೆ. ಅಂದರೆ ಕೈಗಾರಿಕಾಭಿವೃದ್ಧಿ ಹಾಗೂ ಗಣಿಯ ಹಾಗೂ ವಿದೇಶಿ ವ್ಯಾಪಾರಕ್ಕೆ ಅಗತ್ಯವಾದ ಹನಕಾಸು ತಿರುವು ನೀಡುತ್ತದೆ.
೨. ಹಣದ ಪೇಟೆಯು ವಾಣಿಜ್ಯ ಬ್ಯಾಂಕುಗಳ ಬೆಳವಣಿಗೆಗೆ ಪೂರಕ ವಾಗಿರುತ್ತವೆ. ವಾಣಿಜ್ಯ ಬ್ಯಾಂಕುಗಳು ತಮ್ಮ ಠೇವಣಿ ಹಣವನ್ನು ಲಾಭದಯಕವಾಗಿ ಬೆಳೆಸಲು ಅವಕಾಶ ಮಾಡಿಕೊಡುತ್ತದೆ.
೩. ಹಣದ ಪೇಟೆಯು ವ್ಯವಸ್ಥಿತವಾಗಿ ಅಸ್ತಿತ್ವದಲ್ಲಿದ್ದರೆ, ಕೇಂದ್ರ ಬ್ಯಾಂಕಿನ ಕಾರ್ಯಾಚರಣೆ ಸುಗಮವಾಗಿ ಸಾಗಲು ಅವಕಾಶವಾಗುತ್ತದೆ.
೪. ಉತ್ತಮ ಹಣದ ಪೇಟೆ ಅಸ್ತಿತ್ವದಿಂದಾಗಿ ಸರ್ಕಾರ ಅಲ್ಪಕಾಲಿಕ ಆರ್ಥಿಕ ಮುಗ್ಗಟ್ಟನ್ನು ನಿವಾರಿಸಿಕೊಳ್ಳಲು ಸಾಧ್ಯವಾಗುತ್ತದೆ. ಖಜಾನೆ ಹೊಂಡಿಗಳ ಮೂಲಕ ಸಾಲವನ್ನು ಪಡೆಯಬಹುದಾಗಿದೆ.
೫. ಹಣದ ಪೇಟೆಯು ಹಣವನ್ನು ಯೋಗ್ಯವಾದ ಹೂಡಿಕೆ ಚಟುವಟಿಕೆಗಳತ್ತ ಹರಿಸಿ, ಉತ್ಪನ್ನಕಾರಕವನ್ನಾಗಿಸಬಹುದು.
೬. ಹಣದ ಪೇಟೆಯು 'ಸಾಮಪ್ಯ ಹಣ' ವನ್ನು ಹಣವನ್ನಾಗಿ ಪರಿವರ್ತಿಸಲು ಸಹಕರಿಸುತ್ತದೆ.
೭. ಹಣದ ಪೇಟೆಯು ಜನರನ್ನು ಉಳಿತಾಯ ಮಾಡಲು ಪರೋಕ್ಷವಾಗಿ ಪ್ರೇರೇಪಿಸಿ, ಉಳಿತಾಯದ ಹಣವನ್ನು ಹೂಟೆಯಾಗಿ ಪರಿವರ್ತಿಸಲು ಸಹಕರಿಸುತ್ತದೆ.
೮. ಹಣದ ಪೇಟೆಯಲ್ಲಿ ಪಡೆದ ಸಾಲವನ್ನು ಬಂಡವಾಳ ಪೇಟೆಯಲ್ಲಿ ತೊಡಗಿಸಬಹುದು. ಈ ಕಾರಣದಿಂದಾಗಿ ಹಣದ ಪೇಟೆಯು ಬಂಡವಾಳ ಪೇಟೆಯ ಅಭಿವೃದ್ಧಿಗೆ ಪ್ರೇರಕವಾಗುತ್ತದೆ.
ಒಟ್ಟಿನಲ್ಲಿ ಆರ್ಥ್ಕ ವ್ಯವಸ್ಥೆಯಲ್ಲಿನ ಎಲ್ಲಾ ವ್ಯವಹಾರಗಳು ಸುಗಮವಾಗಿ ನಡೆಯಬೇಕಾದರೆ ಹಣದ ಪೇಟೆಯು ಪ್ರಮುಖ ಪಾತ್ರವನ್ನು ವಹಿಸುತ್ತದೆ.