ಹಗಲುಗನಸು
ಹಗಲುಗನಸು ಪ್ರಸಕ್ತ ಬಾಹ್ಯ ಕಾರ್ಯಗಳಿಂದ ನಿರ್ಲಿಪ್ತವಾಗುವಂತೆ ಮಾಡುವ ಪ್ರಜ್ಞೆಯ ಹರಿವು ಮತ್ತು ಹಗಲುಗನಸು ಕಾಣುವವರ ಗಮನವು ಹೆಚ್ಚು ವೈಯಕ್ತಿಕ ಹಾಗೂ ಆಂತರಿಕ ದಿಕ್ಕಿನತ್ತ ಸಾಗುತ್ತದೆ (ಆಂಗ್ಲದಲ್ಲಿ ಡೇಡ್ರೀಮಿಂಗ್). ಈ ವಿದ್ಯಮಾನವು ಜನರ ದೈನಂದಿನ ಜೀವನದಲ್ಲಿ ಸಾಮಾನ್ಯವಾಗಿದೆ ಎಂದು ದೊಡ್ಡ ಪ್ರಮಾಣದ ಅಧ್ಯಯನವು ತೋರಿಸಿಕೊಟ್ಟಿತು. ಈ ಅಧ್ಯಯನದಲ್ಲಿ ಭಾಗವಹಿಸಿದವರು ತಮ್ಮ ಜಾಗೃತ ಸಮಯದಲ್ಲಿನ ಸರಾಸರಿ ಶೇಕಡ ೪೭ ರಷ್ಟು ಸಮಯವನ್ನು ಹಗಲುಗನಸು ಕಾಣುವುದರಲ್ಲಿ ಕಳೆದರು.[೧] ಈ ವಿದ್ಯಮಾನಕ್ಕೆ ವಿವಿಧ ಹೆಸರುಗಳಿವೆ, ಮನಸ್ಸಿನ ಅಲೆದಾಟ, ಕಲ್ಪಿತ ಭ್ರಮಾಚಿತ್ರ, ಅಪ್ರಯತ್ನಿತ ವಿಚಾರಗಳು, ಮುಂತಾದವು. ಜೆರೋಮ್ ಎಲ್. ಸಿಂಗರ್ ಡೇಡ್ರೀಮಿಂಗ್ ಎಂಬ ಪದವನ್ನು ಮೊದಲು ಬಳಸಿದರು. ಇವರ ಸಂಶೋಧನಾ ಯೋಜನೆಗಳು ಈ ಕ್ಷೇತ್ರದಲ್ಲಿನ ಬಹುತೇಕ ಇಂದಿನ ಎಲ್ಲ ನಂತರದ ಸಂಶೋಧನೆಗೆ ಅಡಿಪಾಯ ಹಾಕಿದವು. ಇಂದು ಸಂಶೋಧಕರು ನಿಗದಿಮಾಡಿದ ಪದಗಳ ಪಟ್ಟಿಯು ಹಗಲುಗನಸಿನ ವಿದ್ಯಮಾನದ ಸಾಮಾನ್ಯ ಲಕ್ಷಣಗಳನ್ನು ಗುರುತಿಸುವುದರ ಮೇಲೆ ಮತ್ತು ಸಂಶೋಧಕರ ನಡುವೆ ಸಾಮೂಹಿಕ ಕಾರ್ಯವನ್ನು ವೃದ್ಧಿಪಡಿಸುವಲ್ಲಿ ಸವಾಲುಗಳನ್ನು ಹಾಕುತ್ತದೆ.[೨]
ಉಲ್ಲೇಖಗಳು
[ಬದಲಾಯಿಸಿ]- ↑ Gilbert, Daniel T.; Killingsworth, Matthew A. (2010-11-12). "A Wandering Mind Is an Unhappy Mind". Science. 330 (6006): 932–932. doi:10.1126/science.1192439. ISSN 0036-8075. PMID 21071660.
- ↑ Singer, Jerome L.; Kaufman, Scott Barry; McMillan, Rebecca (2013). "Ode to positive constructive daydreaming". Frontiers in Psychology (in English). 4. doi:10.3389/fpsyg.2013.00626. ISSN 1664-1078.
{{cite journal}}
: CS1 maint: unflagged free DOI (link) CS1 maint: unrecognized language (link)