ವಿಷಯಕ್ಕೆ ಹೋಗು

ಹಸಿರು ಮೈ ಬೆಳ್ಗಣ್ಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಹಅಸಿರು ಮೈ ಬೆಳ್ಗಣ್ಣ ಇಂದ ಪುನರ್ನಿರ್ದೇಶಿತ)

ಹಸಿರು ಮೈ "ಬೆಳ್ಗಣ್ಣ"ಗುಬ್ಬಚ್ಚಿಗಿಂತ ಚಿಕ್ಕ ಗಾತ್ರದ ಹಸಿರು ಮಿಶ್ರಿತ ಹಳದಿ ಮೈ ಬಣ್ಣದ ಹಕ್ಕಿ ಇದು.ಆಂಗ್ಲ ಭಾಷೆಯಲ್ಲಿ ಇದು 'ಓರಿಯೆಂಟಲ್ ವೈಟ್ ಐ'.

ಲಕ್ಷಣಗಳು

[ಬದಲಾಯಿಸಿ]

ಹೊಟ್ಟೆ ಭಾಗ ಬಿಳಿ. ಕೊಕ್ಕು ಹಾಗೂ ಕಾಲುಗಳು ಕಪ್ಪು. ಕಣ್ಣಿನ ಸುತ್ತ ಪ್ರಧಾನವಾಗಿ ಬಿಳಿ ಉಂಗುರ ಇದೆ. ಹಾಗಾಗಿ ಈ ಹಕ್ಕಿಯನ್ನು 'ಶ್ವೇತ ನೇತ್ರ' ಎಂದೂ ಕರೆಯವುದುಂಟು.

ಹರಡುವಿಕೆ

[ಬದಲಾಯಿಸಿ]

ಕರಾವಳಿಯಲ್ಲಿ ಮುಖ್ಯವಾಗಿ ಪಶ್ಚಿಮ ಘಟ್ಟದಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತದವೆ. 'ಬೆಳ್ಗಣ್ಣ'ಗೆ ಊರಿಗಿಂತಲೂ ಕಾಡು ಪ್ರದೇಶ ಹೆಚ್ಚು ಇಷ್ಟ. ಶೋಲಾ ಅರಣ್ಯ, ಪರ್ಣಫಪಾತಿ ಕಾಡು, ಕುರುಚಲು ಕಾಡು, ಹಣ್ಣಿನ ತೋಟಗಳಲ್ಲಿ ಸಾಮಾನ್ಯವಾಗಿ ಇರುತ್ತದೆ. ಬಿಳಿಗಿರಿ ರಂಗನ ಬೆಟ್ಟ, ಕೊಡಗು, ಮೇಲುಕೋಟೆ, ಎಚ್.ಡಿ.ಕೋಟೆ ಸೇರಿದಂತೆ ನಮ್ಮ ಮೈಸೂರಿನ ಚಾಮುಂಡಿ ಬೆಟ್ಟದಲ್ಲೂ ಕಾಣಲು ಸಿಗುತ್ತವೆ.

ಸಾಮಾನ್ಯವಾಗಿ ಜೋಡಿ, ಜೋಡಿಯಾಗಿಯೋ ಅಥವಾ ಸಣ್ಣ ಗುಂಪುಗಳಲ್ಲಿ ಒಂಥರ ರಾಗಮಯವಾಗಿ ಹಾಡುತ್ತ ಮರದಿಂದ ಮರಕ್ಕೆ ಹಾರುತ್ತ ಕೀಟಗಳನ್ನು ಭಕ್ಷಿಸುತ್ತವೆ.

ಕಂಬಳಿಹುಳು, ಸಣ್ಣ ಗಾತ್ರದ ಹೂ ಮೊಗ್ಗು, ಬೀಜ, ಮಕರಂದ, ಅರಳಿ ಹಣ್ಣು ಅದಕ್ಕೆ ಇಷ್ಟ.

ಸಂತಾನೋತ್ಪತ್ತಿ

[ಬದಲಾಯಿಸಿ]

ಏಪ್ರಿಲ್-ಸೆಪ್ಟೆಂಬರ್ನಲ್ಲಿ ಹುಲ್ಲು, ಬೇರು, ನಾರು, ಜೇಡನ ಬಲೆ, ಪಾಚಿ ಸೇರಿಸಿ ಜೋಲಿ ಮಾದರಿಯ ಗೂಡು ಕಟ್ಟುವುದು. ಸುಮಾರು ಒಂದರಿಂದ ಆರು ಮೀಟರ್ ಎತ್ತರದ ಮರೆಯಾಗಿರುವ ಕೊಂಬೆಯ ಕವಲಿನಲ್ಲಿ ಗೂಡು ಕಟ್ಟುವ ಕೆಲಸ ಹೆಣ್ಣಿನದು. ಎರಡರಿಂದ ನಾಲ್ಕು ತಿಳಿ ನೀಲಿ ಬಣ್ಣದ ಮೊಟ್ಟೆ ಇಡುತ್ತದೆ. ಆದರೆ ಮೊಟ್ಟೆಗೆ ಕಾವು ಕೊಡುವುದು ಹಾಗೂ ಮರಿಗಳಿಗೆ ಉಣಿಸುವಲ್ಲಿ ಗಂಡು, ಹೆಣ್ಣು ಎರಡೂ ಪಾಲ್ಗೊಳ್ಳುತ್ತವೆ. ಹತ್ತರಿಂದ ಹನ್ನೊಂದು ದಿವಸಗಳ ಬಳಿಕ ಮೊಟ್ಟೆ ಒಡೆದು ಮರಿ ಹೊರ ಬರುತ್ತವೆ.

ವೈಜ್ಞಾನಿಕ ಹೆಸರು

[ಬದಲಾಯಿಸಿ]

ವೈಜ್ಞಾನಿಕ ಹೆಸರು 'ಜಾಸ್ಟರಾಪ್ಸ್ ಪಾಲ್ಪಿಬ್ರೊಸ'. 'ಪಾಸ್ಸರಿಫಾರ್ಮಿಸ್' ಗಣದ 'ಜಾಸ್ಟರಾಪಿಡಿ' ಕುಟುಂಬಕ್ಕೆ ಸೇರಿದೆ.