ಬೆಳ್ಗಣ್ಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬೆಳ್ಗಣ್ಣ
ಬೇವಿನ ಮರದಲ್ಲಿ ಬೆಳ್ಗಣ್ಣ
Conservation status
Scientific classification
ಸಾಮ್ರಾಜ್ಯ:
Animalia
ವಿಭಾಗ:
Chordata
ವರ್ಗ:
ಗಣ:
ಕುಟುಂಬ:
Zosteropidae (disputed)
ಕುಲ:
ಪ್ರಜಾತಿ:
Z. palpebrosus
Binomial name
Zosterops palpebrosus
(Temminck, 1824)
Synonyms

Sylvia palpebrosa
Zosterops palpebrosa

ಬೆಳ್ಗಣ್ಣ (ಸಾಮಾನ್ಯ ಹೆಸರು: ಮಲ್ಲಿಕಾಕ್ಷ , ಆಂಗ್ಲ-ಹೆಸರು: Indian White-eye (Formerly Oriental_White-eye), ವೈಜ್ಞಾನಿಕ ಹೆಸರು: Zosterops palpebrosus) ಗುಬ್ಬಚ್ಚಿ ಗಾತ್ರದ ಒಂದು ಚಿಕ್ಕ ಹಾಡಿನ-ಹಕ್ಕಿ. ಕಣ್ಣಿನ ಸುತ್ತಲು ಬಿಳಿ ಅಂಚು ಹೊಂದಿರುವ ಹಕ್ಕಿಗಳ ಕುಟುಂಬಕ್ಕೆ ಸೇರಿದ ಇದು ಭಾರತ-ಉಪಖಂಡ, ದಕ್ಷಿಣ ಏಷ್ಯಾ, ಇಂಡೋನೇಷ್ಯಾ, ಮಲೇಷ್ಯಾದ ಕುರಚಲು ಕಾಡು ಮತ್ತು ಅಲ್ಪಾರಣ್ಯಗಳಲ್ಲಿ ಕಾಣಬಹುದಾದ ಹಕ್ಕಿ. ಚಿಕ್ಕ ಗುಂಪುಗಳಲ್ಲಿ ಇರುವ ಇವು, ಹೂವಿನ ಮಕರಂದ, ಚಿಕ್ಕ ಕೀಟಗಳು ಮತ್ತು ಚಿಕ್ಕ ಹಣ್ಣುಗಳನ್ನು ಆಹಾರವಾಗಿ ಸೇವಿಸುತ್ತವೆ. ಬಿಳಿಯ-ಕಣ್ಣಂಚು ಇವುಗಳ ಜಾತ್ಯೋಪಜಾತಿಗಳಿಗೆ ಸಾಮಾನ್ಯ ಲಕ್ಷಣವಾದರೂ, ವಿವಿಧ ಘಾಡತೆಯಲ್ಲಿ ಹಳದಿ, ಹಸಿರುಮಿಶ್ರಿತ-ಹಳದಿ ಮೈ ಮೇಲ್ಭಾಗದ ಬಣ್ಣ ಇವುಗಳ ಜಾತ್ಯೋಪಜಾತಿಗಳಲ್ಲಿನ ವಿಭಿನ್ನತೆಯ ಲಕ್ಷಣಾವಾಗಿದೆ.

ವಿವರ[ಬದಲಾಯಿಸಿ]

ಬೆಳ್ಗಣ್ಣ ಹಕ್ಕಿ 8-9 ಸೆ.ಮೀ ಅಳತೆಯ ಗುಬ್ಬಚ್ಚಿ ಗಾತ್ರದ ಚಿಕ್ಕ ಹಕ್ಕಿ. ಇದರ ಮೈ ಮೇಲಿನ ಭಾಗಗಳು, ಕೊರಳು, ಬಾಲ - ಹಳದಿ ಅಥವಾ ಹಸಿರು ಮಿಶ್ರಿತ ಹಳದಿ, ಕಣ್ಣಿನ ಸುತ್ತಲು ಬಿಳಿ ಉಂಗುರವಿರುವ ಈ ಹಕ್ಕಿಯ - ಹೆಣ್ಣು ಮತ್ತು ಗಂಡು ಹಕ್ಕಿಗಳಲ್ಲಿ ಬಣ್ಣದ ಅಂತರವಿರುವುದಿಲ್ಲ. ಇದರ ಪ್ರಜಾತಿಯ ವ್ಯಾಪ್ತಿ ವಿಸ್ತಾರವಾಗಿದ್ದು ಇವು ಅನೇಕ ಜಾತಿ-ಉಪಜಾತಿಗಳಾಗಿ ಹರಡಿವೆ . ಜೀವಶಾಸ್ತ್ರದಲ್ಲಿ ಇದರ ವಿಂಗಡನೆ ಇನ್ನೂ ಸ್ಪಷ್ಟವಾಗಿಲ್ಲ ಏಕೆಂದರೆ ಕೆಲವೆಡೆ ಕಂಡುಬರುವ ಬೆಳ್ಗಣ್ಣಗಳು ಪ್ರತ್ಯೇಕ ಪ್ರಜಾತಿ ಎಂದು ಗುರುತಿಸಲ್ಪಟ್ಟಿದೆಯಾದರೂ ಅವುಗಳ ಉಪ-ಜಾತಿಗಳಲ್ಲಿನ ವಿಭಿನ್ನತೆಗೆ ಸೂಕ್ತ ಆಧಾರಗಳಿಲ್ಲ. ಉದಾಹರಣೆಗೆ ಇಂಡೊನೇಷ್ಯಾದಲ್ಲಿನ ಬೆಳ್ಗಣ್ಣ ಹಕ್ಕಿಗಳು ಅಲ್ಲಿಯ ತೆಳು-ಬೆಳಗಣ್ಣ (ಪೇಲ್-ವೈಟ್-ಐ Pale White-eye) ಗಳಿಗೆ ಬಹಳ ಹತ್ತಿರ. ಆದರೆ ಇವುಗಳನ್ನು ಅಲ್ಲಿಯ ಹರಟೆ-ಮಲ್ಲ ಹಕ್ಕಿಗಳೊಂದಿಗೆ ವರ್ಗೀಕರಿಸಲಾಗಿರುವುದರಿಂದ ಇವುಗಳ ಕುಟುಂಬದ ವಿಂಗಡನೆಯೇ ಈಗ ಪ್ರಶ್ನೆಯಾಗಿದೆ.[೨]

Z. p. williamsoni, ಸಿಂಗಪುರ್
ಜೋಡಿ ಹಕ್ಕಿಗಳು (ನಾಗ್ಪುರ್, ಭಾರತ )

ಸುಮಾರು 11 ಪ್ರಜಾತಿಗಳು ನಿರ್ದಿಷ್ಟವಾಗಿ ಗುರುತಿಸಲಾಗಿದ್ದು, ಒಮಾನ್, ಅರೇಬಿಯ, ಆಫ್ಗಾನಿಸ್ತಾನ್, ಭಾರತ, ಬಾಂಗ್ಲಾದೇಶ, ಚೈನಾ ಮತ್ತು ಉತ್ತರ ಮಯನ್ಮಾರ್ ಗಳಲ್ಲಿನ ಬೆಳ್ಗಣ್ಣಗಳು ಸಹಜ ಪ್ರಜಾತಿ ಎನಿಸಿದೆ. ಪಶ್ಚಿಮ ಘಟ್ಟಗಳಲ್ಲಿನ ಬೆಳ್ಗಣ್ಣಗಳನ್ನು “ನೀಲಗಿರಿ ಅಥವಾ ಆಕ್ಸಿಡೆಂಟಿಸ್”-ಉಪಜಾತಿ ಎಂದೂ, ಪೂರ್ವ ಘಟ್ಟಗಳಲ್ಲಿನ ಬೆಳ್ಗಣ್ಣಗಳನ್ನು ‘’ಸಲಿಂ-ಆಲಿ’’ ಎಂದು ವರ್ಗೀಕರಿಸಲಾದರೂ ಇವುಗಳನ್ನು ಕೆಲವೊಮ್ಮೆ ಸಹಜ ಬೆಳ್ಗಣ್ಣಗಳೊಂದಿಗೆ ಒಟ್ಟು ಗೂಡಿಸುವುದುಂಟು. ಭಾರತದ ಪ್ರಸ್ತಭೂಮಿ, ಲಕ್ಷದ್ವೀಪ, ಶ್ರೀಲಂಕಗಳಲ್ಲಿನ ಬೆಳ್ಗಣ್ಣಗಳು ‘’ಇರೀಗಿಯ’’ ವರ್ಗವೆಂದು ಕೆಲವರ ಅಭಿಪ್ರಾಯವಾದರೆ, ಇನ್ನು ಕೆಲವರು ‘’ಇರೀಗಿಯ’’ ವರ್ಗದ-ಹೆಸರು ಶ್ರೀಲಂಕದ ಬೆಳ್ಗಣ್ಣಗಳಿಗೆ ಮಾತ್ರ ಸೀಮಿತ ಎನ್ನುವುದುಂಟು.[೩][೪] ದಕ್ಷಿಣ ಮಯನ್ಮಾರ, ಥೈಲ್ಯಾಂಡ್ ಮತ್ತು ಲಾವೋಸ್ ಬೆಳ್ಗಣ್ಣಗಳ ವರ್ಗವನ್ನು “ಸೈಮೆನ್ಸಿಸ್’’ ಎಂದು, ನಿಕೊಬಾರನ ಬೆಳ್ಗಣ್ಣಗಳ ವರ್ಗವನ್ನು ‘‘ನಿಕೊಬರಿಕಾಸ್’’ ಎಂದರೂ ಇದೇ ಹೆಸರನ್ನು ಅಂಡಮಾನ್ ನಲ್ಲಿನ ವಿಭಿನ್ನ ಬೆಳ್ಗಣ್ಣಗಳ ವರ್ಗವೆನಿಸಬೇಕಾದವುಗಳಿಗೂ ಜೋಡಿಸಲಾಗಿದೆ.[೩] ದಕ್ಷಿಣ ಥೈಲ್ಯಾಂಡ್ ಮತ್ತು ಪೂರ್ವ ಕಾಂಬೋಡಿಯಾದಲ್ಲಿನ ಬೆಳ್ಗಣ್ಣಗಳನ್ನು “ವಿಲಿಯಮ್ಸನಿ“ ಎಂದೂ [೫], ಅಗ್ನೇಯ ಏಷ್ಯದ ಮಿಕ್ಕ ಬೆಳ್ಗಣ್ಣಗಳ ವರ್ಗಗಳು “ಅರಿವೆಂಟರ್”, “ಬಕ್ಟೋನಿ”, “ಮೆಲನೂರಸ್” ಮತ್ತು “ಯುನಿಕ್ಸ್“ ಗಳೆಂದು ಕರೆಯಲ್ಪಡುತ್ತವೆ.

ಪಶಿಮಘಟ್ಟದ “ಆಕ್ಸಿಡೆಂಟಿಸ್” (ಸಾಮಾನ್ಯವಾಗಿ ಸಹಜ-ಬೆಳಗಣ್ಣಗಳೊಂದಿಗೆ ವರ್ಗಿಸಲ್ಪಡುವ) ಬೆಳಗಣ್ಣಗಳ ಮೈ ಮೇಲ್ಭಾಗ ಘಾಡ ಹಸಿರು ಮತ್ತು ಎರಡೂ ಪಕ್ಕೆಯ ಭಾಗಗಳಲ್ಲಿ ಮಣ್ಣಿನಬಣ್ಣದ ಸುಳಿವಿರುತ್ತವೆ. “ಸಲೀಂ ಅಲಿ” ವರ್ಗದ ಬೆಳ್ಗಣ್ಣಗಳ ಕೊಕ್ಕು ಮೊಟಕು ಮತ್ತು ಮೈ ಮೇಲ್ಭಾಗ ಘಾಡ ಹಳದಿ-ಹಸಿರು.[೩][೬] ಕೆಲ ತಜ್ಞರ ಪ್ರಕಾರ ಸಿಕ್ಕಿಂ, ಭೂತಾನ್ ಅಸ್ಸಾಂ ಮತ್ತು ಯುನನ್ ಗಳಲ್ಲಿನವಷ್ಟೇ ಸಹಜ-ಬೆಳಗಣ್ಣಗಳು, ಪರ್ಯಾಯದ್ವೀಪದ ಬೆಳ್ಗಣ್ಣಗಳು “ಆಕ್ಸಿಡೆಂಟಿಸ್” ಕುಲದವು ಎಂದು.[೭] (ಅಥವಾ ತಜ್ಞ ವಾಳ್ಟರ-ನಾರ್ಮನ್ ರ ವಿವರದಂತೆ ಕಾತೀವಾರದ ಬಗೆಯ ಬೆಳ್ಗಣ್ಣಗಳಾದರೆ “ಅಮಾಬಿಲಿಸ್”) ಎಂಬುದು ಉಚಿತ.[೩][೮] ಶ್ರೀಲಂಕದ ‘’ಇರೀಗಿಯ’’ ವರ್ಗದ ಬೆಳ್ಗಣ್ಣಗಳು ಶ್ರೀಲಂಕದ ಒಳಬೆಟ್ಟಗಳಲ್ಲಿನ “ಝೆಸ್ಟ್ರೋಪ್ಸ್ ಸಿಲೋನಿಸಿಸ್” ಬೆಳ್ಗಣ್ಣಗಳಿಗಿಂತ ಗಾತ್ರದಲ್ಲಿ ಚಿಕ್ಕದು.

ಪ್ರಸಾರ ಮತ್ತು ಆವಾಸಾ[ಬದಲಾಯಿಸಿ]

Oriental White-eye in Prunus cerasoides

ಬೆಳ್ಗಣ್ಣಗಳ ಆವಾಸ ಬಹಳ ವಿಸ್ತಾರವಾಗಿದ್ದು, ಇವು ಕುರಚಲು ಕಾಡುಗಳು, ಅಲ್ಪ ಹರಿದ್ವರ್ಣ ಕಾಡುಗಳು, ಜಲಗಾಡುಗಳನ್ನು ಒಳಗೊಂಡಿವೆ.[೯] ಭಾರತದ ಪಶ್ಛಿಮ ಒಣ ಮರುಭೂಮಿಗಳಲ್ಲಷ್ಟೇ ಇವು ವಿರಳ.[೧೦]

ನಡತೆ ಹಾಗು ಪರಿಸರ[ಬದಲಾಯಿಸಿ]

ಮುಂಜಾನೆಯ ಕೂಗು, ದಕ್ಷಿಣ ಭಾರತ
ಬೆಳ್ಗಣ್ಣನ ಹಾಡು

ಬೆಳ್ಗಣ್ಣಗಳು ಏಕಾಂಗಿಗಳಲ್ಲ, ಇವು ಹಿಂಡುಗಳಲ್ಲಿ ಕಾಣಿಸಿಕೊಂಡು, ಸಂತಾನ ಅಭಿವೃದ್ಧಿ ಸಮಯದಲ್ಲಷ್ಟೇ ತಾತ್ಕಾಲಿಕವಾಗಿ ಬೇರೆಯಾಗುತ್ತವೆ. ಇವು ನೆಲಕ್ಕಿಳಿಯುವುದು ಬಹಳ ವಿರಳ. ಮರ ಗಿಡಗಳ ಮೇಲೆ ಎಲೆಮರೆಗಳಲ್ಲಿ ಕಾಲಕಳೆಯುತ್ತವೆ. ಫೆಬ್ರವರಿಯಿಂದ - ಸೆಪ್ಟಂಬರ್ ತಿಂಗಳುಗಳ ನಡುವೆ ಸಂತಾನ ಅಭಿವೃದ್ಧಿ ಕ್ರಿಯೆಯಲ್ಲಿ ತೊಡಗಿದರೂ, ಏಪ್ರಿಲ್ ತಿಂಗಳಲ್ಲಿ ಸಂತಾನ ಅಭಿವೃದ್ಧಿ ಚಟುವಟಿಕೆಗಳು ತೀವ್ರವಾಗುತ್ತದೆ.[೧೧] ಜೇಡರ ಬಲೆ, ಕಲ್ಲು ಹೂಗಳು ಮತ್ತು ಮೆತ್ತನೆಯ ಸಸ್ಯ ಭಾಗಗಳಿಂದ ಚಿಕ್ಕ ಬಟ್ಟಲಾಕಾರದ ಗೂಡನ್ನು ಟೊಂಗೆಗಳ ಮೂಲದಲ್ಲಿ 4 ದಿನಗಳಲ್ಲಿ ಕಟ್ಟಿ, ಸಾಧಾರಣವಾಗಿ 2 ಮಂದ ನೀಲಿ ಬಣ್ಣದ ಮೊಟ್ಟೆಗಳನ್ನು 2-3 ದಿನಗಳ ಅಂತರದಲ್ಲಿ ಇಡುತ್ತವೆ.[೧೧]. ಮೊಟ್ಟೆಗಳು 10 ದಿನಗಳಲ್ಲಿ ಮರಿಗಳಾಗುತ್ತವೆ. ತಾಯಿ ಮತ್ತು ತಂದೆ ಹಕ್ಕಿಗಳೆರಡೂ ಸಂತಾನ ಪಾಲನೆಯಲ್ಲಿ ಸಮ ಶ್ರಮಿಗಳು. ಮರಿಗಳು 10 ದಿನಗಳಲ್ಲಿ ಗೂಡು ಬಿಡಲು ತಯಾರಾಗುತ್ತವೆ.[೧೨] ಕೀಟಗಳೇ ಬೆಳ್ಗಣ್ಣಗಳ ಮುಖ್ಯ ಆಹಾರವಾದರೂ, ಇವು ಹಣ್ಣು, ಮಕರಂದಗಳನ್ನೂ ಸೇವಿಸುತ್ತವೆ.[೧೩]

ಆಹಾರ ಸೇವನೆಯ ಸಮಯದಲ್ಲೂ ಇವು ಹಗುರ ಚಿಲಿಪಿಲಿ ಕರೆಗಳ ಮೂಲಕ ಗುಂಪಿನೊಂದಿಗೆ ಸಂಪರ್ಕದಲ್ಲಿರುತ್ತವೆ.[೩]. ಹೂಗಳಲ್ಲಿನ ಕೀಟ ಹಾಗೂ ಮಕರಂದ ಸೇವನೆಯ ಸಮಯದಲ್ಲಿ ಇವು ಪರಾಗಸ್ಪರ್ಶ ಕ್ರಿಯೆಗೆ ಕಾರಣವಾಗುತ್ತವೆ.[೧೪] ಇಂತಹ ಸಮಯಗಳಲ್ಲಿ ಇವುಗಳ ತಲೆ, ಹಣೆಗಳ ಮೇಲಿನ ಕೇಸರದ ಕಣಗಳಿಂದ ಇವುಗಳನ್ನು ಬಣ್ಣದ ನಿರ್ಧಿಷ್ಟತೆಯಿಂದ ತಪ್ಪಾಗಿ ಗುರುತಿಸಿ, ವಿಗಂಡಿಸುವ ಸಾಧ್ಯತೆಗಳಿವೆ.[೧೫] ಎಲೆಗಳಲ್ಲಿ .[೧೬]

ಗೂಡು ಹೂಡಿದ ಸಮಯದಲ್ಲಿ ಬೆಳ್ಗಣ್ಣಗಳು ಗುಂಪುಗಟ್ಟಿ ಅಳಿಲುಗಳನ್ನು ದೂರ ಅಟ್ಟುವುದುಂಟು, ಗಾತ್ರದಲ್ಲಿ ಚಿಕ್ಕದ್ದಾದ್ದರಿಂದ ಇವು ಆಕ್ರಮಿಗಳಲ್ಲ, ರಕ್ಷಣಾರ್ಥಿಗಳು. ಇವುಗಳಿಗೆ ಬಾವುಲಿಗಳು (esp. Megaderma lyra) [೧೭] ಮತ್ತು ಗದ್ದೆ-ಮಿಂಚುಳ್ಳಿಗಳಿಂದ (White-throated Kingfisher).[೧೮] ಆಪತ್ತು. ಇವುಗಳ ರಕ್ತದಲ್ಲಿ ಪರಾವಲಂಬಿ ಜೀವಿಗಳಾದ ಹೀಮೋಸ್ಪೊರೀಡಿಯಗಳು (Haemoproteus) ಕಂಡು ಬಂದರೂ ಇವುಗಳಿಂದ ಸಾವನ್ನನುಭವಿಸುವುದು ವಿರಳ.[೧೯][೨೦]

ಬೆಳ್ಗಣ್ಣಗಳು ಪರ ಪಕ್ಷಿಗಳ ಗೂಡಿನಿಂದ ಗೂಡುಕಟ್ಟುವ ವಸ್ತುಗಳನ್ನು ಕದಿಯುವುದುಂಟು.[೨೧][೨೨] ಬೆಳ್ಗಣ್ಣಗಳು, ಪರಪಕ್ಷಿಗಳ ಮರಿಗಳಿಗೂ, ವಿಶೇಷವಾಗಿ ಬಾಲದಂಡೆ ಹಕ್ಕಿಗಳ ಮರಿಗಳಿಗೂ ಆಹಾರ ಉಣಿಸುವುದು ಕಂಡುಬಂದಿದೆ.[೨೩][೨೪] ಇವು ದೃಢ ಹಾರಾಟ ನಡೆಸಲಾರವು, ಆದರೂ ಗಾಳಿ - ಬಿರುಗಾಳಿಗಳಿಗೆ ಸಿಲುಕಿ ದೂರದ ನೆಲ ಮುಟ್ಟಿ ಅಲ್ಲಿ ನೆಲೆಯೂರಿರುವ ದಾಖಲೆಗಳಿವೆ.[೨೫]

ಮೂಲಗಳು[ಬದಲಾಯಿಸಿ]

 1. BirdLife International (2012). "Zosterops palpebrosus". IUCN Red List of Threatened Species. Version 2012.1. International Union for Conservation of Nature. Retrieved 16 July 2012. {{cite web}}: Invalid |ref=harv (help)
 2. Moyle, R. G., C. E. Filardi, C. E. Smith & Jared Diamond (2009). "Explosive Pleistocene diversification and hemispheric expansion of a "great speciator"". Proc. Nat. Acad. Sci. 106 (6): 1863–1868. doi:10.1073/pnas.0809861105. PMC 2644129. PMID 19181851.{{cite journal}}: CS1 maint: multiple names: authors list (link)
 3. ೩.೦ ೩.೧ ೩.೨ ೩.೩ ೩.೪ Rasmussen, P. C. & J. C. Anderton (2005). Birds of South Asia: The Ripley Guide. Volume 2. Smithsonian Institution & Lynx Edicions. p. 551.
 4. Ali, S. & S. D. Ripley (1999). Handbook of the birds of India and Pakistan. Vol. 10 (2 ed.). Oxford University Press. pp. 59–64. ISBN 0-19-562063-1.
 5. Robinson, H. C. & C. Boden Kloss. "On a new form of white-eye from Siam". Journal of the Natural History Society of Siam. 3 (4): 445.
 6. Whistler, H. (1933). "Description of a new race of the White Eye Zosterops palpebrosa". J. Bombay Nat. Hist. Soc. 36 (4): 811.
 7. Whistler, Hugh (1949). Popular handbook of Indian birds (4th ed.). Gurney and Jackson. pp. 264–265.
 8. Koelz, Walter (1950). "New subspecies of birds from southwestern Asia". American Museum Novitates. 1452. ಟೆಂಪ್ಲೇಟು:Hdl.
 9. Khacher, Lavkumar J. (1970). "Notes on the White-eye (Zosterops palpebrosa) and Whitebreasted Kingfisher (Halcyon smyrnensis)". J. Bombay Nat. Hist. Soc. 67 (2): 333.
 10. Himmatsinhji, M. K. (1966). "Another bird record from Kutch". J. Bombay Nat. Hist. Soc. 63 (1): 202–203.
 11. ೧೧.೦ ೧೧.೧ Oates, Eugene W. (1889). Fauna of British India. Birds. Volume 1. Taylor and Francis. pp. 214–215.
 12. Doyle, E. E. (1933). "Nesting of the White-eye (Zosterops palpebrosa Temm.)". J. Bombay Nat. Hist. Soc. 36 (2): 504–505.
 13. Page, Wesley T. (1912). "Breeding of the Indian White-Eye". Avicultural Magazine. 3 (4): 114–117.
 14. Moreau, R. E., Mary Perrins & J. T. Hughes. "Tongues of the Zosteropidae (White-eyes)" (PDF). Ardea. 57: 29–47. Archived from the original (PDF) on 2011-07-24. Retrieved 2013-09-17. {{cite journal}}: |archive-date= / |archive-url= timestamp mismatch (help)CS1 maint: multiple names: authors list (link)
 15. Harington, H. H. (1910). "The Indian White-eye (Zosterops palpebrosa)". J. Bombay Nat. Hist. Soc. 20 (2): 520–521.
 16. Sundar, K. S. G. & J. Chanda (2002). "Foliage-dew bathing in oriental white-eye Zosterops palpebrosus, Family Zosteropidae". J. Bombay Nat. Hist. Soc. 99 (2): 318–319.
 17. Green, E. Ernest (1907). "Do bats capture and eat birds?". J. Bombay Nat. Hist. Soc. 17 (3): 835–836.
 18. Sen, S. N. (1944). "Food of the White-breasted Kingfisher (Halcyon smyrnensis fusca)". J. Bombay Nat. Hist. Soc. 44: 475.
 19. Chakravarty, Mukundamurari & Amiya Bhusan Kar (1945). "Studies on Hæmosporidia from Indian birds—Series II". Proceedings: Plant Sciences. 22 (2): 63–69.
 20. Ray, H. N. & A. C. Sarkar (1967). "On some new coccidia from the Indian passerine birds, Zosterops palpebrosa (Temm.), Lonchura malabarica (Linn.), L. punctulata (Linn.) and Passer domesticus (Linn.)". Proceedings of the 54th Indian Science Congress. 54: 448–449.
 21. Guest, Sandra J. (1973). A reproductive biology and natural history of the Japanese white-eye (Zosterops japonica japonica) in urban Oahu (PDF). US International Biological Program. Archived from the original (PDF) on 2006-09-10. Retrieved 2013-09-17. {{cite book}}: |archive-date= / |archive-url= timestamp mismatch (help); Unknown parameter |unused_data= ignored (help)
 22. Mahesh, S. S., L. Shyamal & Vinod Thomas (2010). "Nest material kleptoparasitism by the Oriental White-eye Zosterops palpebrosus". Indian Birds. 6 (1): 22–23.{{cite journal}}: CS1 maint: multiple names: authors list (link)
 23. Tehsin, Raza H. & Himalay Tehsin (1998). "White-eye (Zosterops palpebrosa) feeding the chicks of paradise flycatcher (Terpsiphone paradisi)". J. Bombay Nat. Hist. Soc. 95 (2): 348.
 24. Balar, R. (2008). "Interspecific feeding of Asian Paradise-Flycatcher Terpsiphone paradisi nestlings by Oriental White-eye Zosterops palpebrosus". Indian Birds. 4: 163–164.
 25. Betts, F. N. (1956). "Colonization of islands by White-eyes (Zosterops spp.)". J. Bombay Nat. Hist. Soc. 53 (3): 472–473.

ಬಾಹ್ಯ ಕೊಂಡಿಗಳು[ಬದಲಾಯಿಸಿ]