ವಿಷಯಕ್ಕೆ ಹೋಗು

ಸ್ಪೆರೋಥೆಕಾ ವರ್ಷಾಭು (ಕಪ್ಪೆ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸ್ಪೆರೋಥೆಕಾ ವರ್ಷಾಭು ಎಂಬುದು ಒಂದು ಕಪ್ಪೆಯ ಪ್ರಬೇಧ. ಇವು ಬಿಲದ ಕಪ್ಪೆ ವರ್ಗದಡಿಯಲ್ಲಿ ಬರುವ ಕಪ್ಪೆಯ ಜಾತಿಯಾಗಿದೆ. ೨೦೨೪ರಲ್ಲಿ ಬೆಂಗಳೂರಿನ ರಾಜಾನುಕುಂಟೆ ಹತ್ತಿರದ ಬುದುಮನಹಳ್ಳಿಯಲ್ಲಿ ಇದು ಮೊದಲ ಬಾರಿಗೆ ಪತ್ತೆಯಾಯಿತು. [][] ಇವು ಮಳೆಯ ಆರಂಭದಲ್ಲಿ ಹೊರಗೆ ಕಾಣಸಿಗುವುದರಿಂದ ಇದಕ್ಕೆ 'ವರ್ಷಾಭು' ಎನ್ನುವ ಹೆಸರಿಡಲಾಗಿದೆ. ಸಂಸ್ಕೃತದಲ್ಲಿ ವರ್ಷಾ ಎಂದರೆ ಮಳೆ, ಮತ್ತು ಭೂ ಎಂದು ಹುಟ್ಟುವುದು. ಈ ಕಪ್ಪೆಯ ಕುರಿತ ಅಧ್ಯಯನ ವರದಿಯು ನ್ಯೂಝಿಲ್ಯಾಂಡಿನ ಅಂತಾರಾಷ್ಟ್ರೀಯ ಜರ್ನಲ್ ಝೂಟಾಕ್ಸಾದಲ್ಲಿ ಪ್ರಕಟವಾಗಿದೆ.[]

ವಾಸಸ್ಥಳ

[ಬದಲಾಯಿಸಿ]

ಇವು ಸಾಮಾನ್ಯವಾಗಿ ನೆಲದಡಿಯಲ್ಲಿ ವಾಸಿಸುತ್ತವೆ. ಮಳೆಯ ನೀರು ಬಿದ್ದು ನೆಲವು ಒದ್ದೆಯಾದಾಗ ಮತ್ತು ನೀರು ಒಳಹೋದಾಗ ಇವು ಹೊರಬರುತ್ತವೆ. ಮಳೆಯಿಂದ ಇವು ಮಾನ್ಸೂನ್ ಬರುವನ್ನು ತಿಳಿದುಕೊಳ್ಳುತ್ತವೆ. ಮಳೆಗಾಲ ಹೊರತಾದ ಋತುಮಾನದಲ್ಲಿ ಮಣ್ಣಿನ ಒಳಗಿನ ಬಿಲಗಳಲ್ಲಿ ವಾಸಿಸುತ್ತವೆ. ಇದರ ಕಾಲಿನ ಪಾದಗಳಲ್ಲಿ ಹಾರಿ ಮಾದರಿ ಚಿಕ್ಕ ಅಂಗಾಂಗಗಳಿದ್ದು ಮಣ್ಣನ್ನು ಅಗೆದು ಬಿಲ ನಿರ್‍ಮಿಸಿಕೊಳ್ಳುತ್ತವೆ. ಇವು ನಗರೀಕರಣಕ್ಕೆ ಹೊಂದಿಕೊಂಡಂತಹ ಗುಣ ಹೊಂದಿದ್ದು ಸಾಮಾನ್ಯ ಇತರ ಕಪ್ಪೆಗಳಂತೆ ಕೆರೆ ಮುಂತಾದ ನೀರಿನ ತಾಣಗಳ ದಂಡೆಗಳಲ್ಲಿ ವಾಸಿಸುವುದಿಲ್ಲ. ಮಳೆಗಾಗದಲ್ಲಿ ಹೊರತುಪಡಿಸಿ ಬೇರೆ ಕಾಲಗಳಲ್ಲಿ ಇವು ಹೊರಗೆ ಕಾಣದೇ ಬಿಲಗಳಲ್ಲಿ ವಾಸಿಸುತ್ತವೆ. []

ಭೌಗೋಳಿಕ ವ್ಯಾಪ್ತಿ ಮತ್ತು ಗುಣಲಕ್ಷಣಗಳು

[ಬದಲಾಯಿಸಿ]

ಬಿಲಗಪ್ಪೆಗಳು ದಕ್ಷಿಣಾ ಏಷಿಯಾದಲ್ಲಿ ಸಾಮಾನ್ಯವಾಗಿ ಕಾಣಸಿಗುತ್ತವೆ. ಈ 'ವರ್ಷಾಭು' ಕಪ್ಪೆಗಳು ಬೆಂಗಳೂರಿನಲ್ಲಿ ಪತ್ತೆಯಾಗಿದ್ದು ನಗರದ ಪರಿಸರಕ್ಕೆ ಹೊಂದಿಕೊಂಡು ಜೀವಿಸಿವೆ. ನಗರ ಪರಿಸರಕ್ಕೆ ಹೊಂದಿಕೊಂಡ ನಡವಳಿಕೆಗಳು ಮತ್ತು ದೈಹಿಕ ಗುಣಲಕ್ಷಣಗಳನ್ನು ಪ್ರದರ್ಶಿಸುತ್ತದೆ.

ಸಂಶೋಧನಾ ತಂಡ

[ಬದಲಾಯಿಸಿ]

ಈ ಕಪ್ಪೆಯ ಪತ್ತೆಯು ಹಲವು ಸಂಸ್ಥೆಗಳ ಸಾಂಘಿಕ ಪ್ರಯತ್ನದಿಂದ ಆಯಿತು. ಅವುಗಳೆಂದರೆ,

  • ಮೌಂಟ್ ಕಾರ್‍ಮೆಲ್ ಕಾಲೇಜು, ಜುಆಲಜಿಕಲ್ ಸರ್‍ವೆ ಆಫ್ ಇಂಡಿಯಾ, ವೆಸ್ಟರ್ ರೀಜನಲ್ ಸೆಂಟರ್, ಪುಣೆ
  • ಜೈನ್ ವಿಶ್ವವಿದ್ಯಾಲಯ, ಬೆಂಗಳೂರು
  • Institute of Systematics, Evolution, Biodiversity, National Museum of Natural History, CNRS, Sorbonne University, Paris, France;
  • Laboratory of Animal Behaviour and Conservation, College of Biology and the Environment, Nanjing Forestry University, Jiangsu, ಚೀನಾ
  • ಸೆಂಟರ್ ಫಾರ್ ಇಕಾಲಜಿಕಲ್ ಸೈನ್ಸಸ್, ಇಂಡಿಯನ್ ಇನ್ಸ್ಟ್ರಿಟ್ಯೂಟ್ ಆಫ್ ಸೈನ್ಸ್, ಬೆಂಗಳೂರು,
  • ಜೆನೆಟಿಕ್ಸ್ ರಿಸರ್ಚ್ ಲ್ಯಾಬೋರೇಟರ್, ಜೀವಶಾಸ್ತ್ರ ವಿಭಾಗ, ಯುವರಾಜ ಕಾಲೇಜು, ಮೈಸೂರು ವಿಶ್ವವಿದ್ಯಾಲಯ

ಉಲ್ಲೇಖಗಳು

[ಬದಲಾಯಿಸಿ]
  1. "New species of burrowing frog named 'Sphaerotheca Varshaabhu' discovered in Bengaluru".
  2. https://www.thehindu.com/news/national/karnataka/researchers-identify-new-species-of-burrowing-frog-in-urban-bengaluru/article67795686.ece
  3. P. Deepak, K.P. Dinesh, K.S. Chetan Nag, Annemarie Ohler, Kartik Shanker, Princia D Souza, Vishal Kumar Prasad and J.S. Ashadevi. 2024. Discovery and Description of A New Species of Burrowing Frog Sphaerotheca Günther, 1859 (Anura: Dicroglossidae) from the suburban landscapes of Bengaluru, India. Zootaxa. 5405(3); 381-410. DOI: 10.11646/zootaxa.5405.3.3
  4. https://www.udayavani.com/district-news/bangalore-city-news/frog-discovery-of-a-new-species