ಸ್ಪುತ್ನಿಕ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಇದು ಹಿಂದಿನ ಸೋವಿಯತ್ ಒಕ್ಕೂಟ ಜಗತ್ತಿನಲ್ಲೇ ಪ್ರಪ್ರಥಮವಾಗಿ ಪ್ರಾರಂಭಿಸಿದ ಕೃತಕ ಭೂ ಉಪಗ್ರಹ ಸರಣಿ.ಸ್ಪುತ್ನಿಕ್ ಎಂದರೆ ರಷ್ಯನ್ ಬಾಷೆಯಲ್ಲಿ ಸಹಪ್ರಯಾಣಿಕ ಎಂದರ್ಥ.ಈ ಕಾರ್ಯಕ್ರಮದ ಮೊದಲ ಉಪಗ್ರಹವೇ ಭೂಮಿಯ ಮೊದಲ ಕೃತಕ ಉಪಗ್ರಹ ಸ್ಪುತ್ನಿಕ್-೧.೧೯೫೭ರ ಅಕ್ಟೋಬರ್ ೪ರಂದು ಅಮತರಿಕ್ಷದಲ್ಲಿ ಭೂಮಿಯ ಸುತ್ತ ಒಂದು ಸುತ್ತು ಹಾಕಿ ಈ ಉಪಗ್ರಹ ಅಂತರಿಕ್ಷ ಯುಗವನ್ನು ಪ್ರಾರಂಭಿಸಿತು.ಸ್ಪುತ್ನಿಕ್ ಸರನಣಿಯಲ್ಲಿ ಒಟ್ಟು ಹತ್ತು ಉಪಗ್ರಹಗಳನ್ನು ಉಡಾಯಿಸಲಾಯಿತು.ಪ್ರಥಮ ಕೃತಕ ಭೂ ಉಪಗ್ರಹ ೮೪ಕಿಗ್ರಾಂ ತೂಕದ ಟೊಳ್ಳಾದ ಲೊಹದ ಗೋಲವಾಗಿತ್ತು.ಅಂತರಿಕ್ಷ ಪರಿಸರದ ಉಷ್ಣತೆಯನ್ನು ತಿಳಿಯುವ ಸಂವೇದಕ,ಆ ಮಾಹಿತಿಯನ್ನು ಭೂಮಿಗೆ ವರದಿ ಮಾಡುವ ರೇಡಿಯೋ ವ್ಯವಸ್ಥೆ ಕಡ್ಡಿಯಾಕಾರದ ಆಂಟನಾಗಳು ಹಾಗು ಬೇಕಾದ ವಿದ್ಯುಚ್ಛಕ್ತಿ ಸರಬರಾಜು ಮಾಡುವ ವಿದ್ಯುತ್ ಕೋಶ ಅದರಲ್ಲಿದ್ಧವು.ಅಂತರಿಕ್ಷದಲ್ಲಿ ಭೂಮಿಯನ್ನು ಅಂಡಾಕಾರದ ಕಕ್ಷೆಯಲ್ಲಿ ಸುಮಾರು ೩ತಿಂಗಳು ಸುತ್ತಿದ ಸ್ಪುತ್ನಿಕ-೧,೧೯೫೮ರ ಜನವರಿಯಲ್ಲಿ ಭೂವಾತಾವರಣವನ್ನು ಪ್ರವೇಶಿಸಿ ಉಲ್ಕೆಯಂತೆ ಉರಿದು ಬೂದಿಯಾಯಿತು.ಇನ್ನು ಭೂಮಿಯ ಎರಡನೇಯ ಕೃತಕ ಉಪಗ್ರಹ ಸ್ಪುತ್ನಿಕ್-೨ ಅಂತರಿಕ್ಷಕ್ಕೆ ಜೀವಿಯೊಂದನ್ನು ಕೊಂಡೊಯ್ದ ಪ್ರಥಮ ಉಪಗ್ರಹವೂ ಆಯಿತು.ಅಂತರಿಕ್ಷ ಯುಗ ಪ್ರಾರಂಭವಾದ ಒಂದು ತಿಂಗಳ ಸುಮಾರಿಗೆ ಆ ಉಪಗ್ರಹದಲ್ಲಿ ತೆರಳಿದ ಲೈಕ ಎಂಬ ನಾಯಿ ಸುಮಾರು ಹತ್ತು ದಿನಗಳ ಕಾಲ ಅಂತರಿಕ್ಷದ ವಿಸಿಷ್ಟ ಪರಿಸರದಲ್ಲಿ ಯಾವ ಅಹಿತಕರ ಪರಿಣಾಮವನ್ನೂ ಎದುರಿಸದೇ ಜೀವಿಸಿತ್ತು. ಅನಂತರ ಸ್ಪುತ್ನಿಕ್-೨ ಉಪಗ್ರಹದಲ್ಲಿನ ಆಕ್ಸಿಜನ್ ಪೂರೈಕೆ ಮುಗಿದು ಅದು ಅಸುನೀಗಿತ್ತು.ಸ್ಪುತ್ನಿಕ್ ಸರಣಿಯ ಮೂರನೆ ಉಪಗ್ರಹ ಸ್ಪುತ್ನಿಕ್-೩ ಸುಮಾರು ೧೩೦೦ಕಿಗ್ರಾಂ ತೂಕವಿದ್ದು ಅಂತರಿಕ್ಷ ಪರಿಸರವನ್ನು ಅಭ್ಯಾಸಿಸುವ ಅನೇಕ ವೈಜ್ಞಾನಿಕ ಉಪಕರಣಗಳನ್ನು ಒಳಗೊಂಡಿತ್ತು.ಅಷ್ಟು ಹೆಚ್ಚಿನ ತೂಕದ ಉಪಗ್ರಹವನ್ನು ರಷ್ಯಾ ಆ ದನಗಳಲ್ಲಿ(ಮೇ ೧೯೫೮) ಉಡಾಯಿಸಿದ್ದು ಅನೇಕ ದೇಶಗಳನ್ನು ದಂಗು ಬಡಿಸಿತು.೨೦-೮-೧೯೬೦ರಲ್ಲಿ ಹಾರಿಬಿಟ್ಟ ಸ್ಪುತ್ನಿಕ್-೫ ಉಪಗ್ರಹದಲ್ಲಿ ಬೇಲ್ಕಾ ಮತ್ತು ಸ್ತ್ರೇಲ್ಕಾ ಎಂಬ ಎರಡು ನಾಯಿಗಳು ೧೭ ಭೂ ಪರಿಭ್ರಮಣೆಗಳನ್ನು ಯಶಸ್ವಿಯಾಗಿ ಮಾಡಿ ಭೂಮಿಗೆ ಜೀವಂತ ಹಿಂದಿರುಗಿದವು.