ವಿಷಯಕ್ಕೆ ಹೋಗು

ಸ್ನೂಕರ್‌

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸ್ನೂಕರ್‌
Snooker player playing a shot with a rest
ಪ್ರಮುಖ ಆಡಳಿತ ನಡೆಸು ಮಂಡಳಿ World Snooker Association
ಮೊದಲ ಆಟ19th century
ವಿಶೇಷಗುಣಗಳು
ವರ್ಗೀಕರಣCue sport
ಸಲಕರಣೆsnooker balls
ಒಲಿಂಪಿಕ್No

ಸ್ನೂಕರ್‌ ಎಂಬುದು ನಾಲ್ಕೂ ತುದಿಗಳಲ್ಲಿ ಹಾಗೂ ನೀಳವಾದ ಅಂಚುಮೆತ್ತೆಗಳಲ್ಲಿ ಚೀಲಗಳಿರುವ ಅಗಲವಾದ ಹಸಿರು ಬೈಜ್‌ ಬಟ್ಟೆಯಿಂದ ಆವೃತವಾದ ಮೇಜಿನಲ್ಲಿ ದಾಂಡಿ/ಕೋಲಿನ ಸಹಾಯದಿಂದ ಆಡುವ ಕ್ಯೂ ಕ್ರೀಡೆಯಾಗಿದೆ. ವಿಧಾಯಕ ಗಾತ್ರದ (ಪೂರ್ಣ-ಗಾತ್ರ) ಮೇಜಿದು 12 ft × 6 ft (3.7 m × 1.8 m). ಇದನ್ನು ಒಂದು ಕೋಲು/ದಾಂಡು ಹಾಗೂ ಸ್ನೂಕರ್‌ ಚೆಂಡುಗಳೊಂದಿಗೆ ಆಡಲಾಗುತ್ತದೆ : ಒಂದು ಬಿಳಿಬಣ್ಣದ cue ball, ಒಂದು ಅಂಕ ಮೌಲ್ಯದ 15 red balls, ಹಾಗೂ ವಿವಿಧ ಬಣ್ಣಗಳ ಆರು ಚೆಂಡುಗಳು colours ಹಳದಿ (2 ಅಂಕಗಳು), ಹಸಿರು (3), ಕಂದು (4), ನೀಲಿ (5), ಗುಲಾಬಿ (6) ಹಾಗೂ ಕಪ್ಪು ಬಣ್ಣದ್ದು (7).[೧] ಓರ್ವ ಆಟಗಾರ (ಅಥವಾ ತಂಡ), ಕೆಂಪು ಹಾಗೂ ಬಣ್ಣಗಳ ಚೆಂಡುಗಳೊಂದಿಗೆ ಕೋಲು/ದಾಂಡು ಚೆಂಡನ್ನು pot ಮಾಡುವ ಮೂಲಕ ತನ್ನ ಎದುರಾಳಿ(ಗಳಿ)ಗಿಂತ ಹೆಚ್ಚಿನ ಅಂಕಗಳನ್ನು ಗಳಿಸುವ ಮೂಲಕ ಸ್ನೂಕರ್‌ನ frame (ಏಕ ಪಂದ್ಯ)ವನ್ನು ಗೆಲ್ಲಬಹುದು. ಓರ್ವ ಆಟಗಾರ ನಿರ್ದಿಷ್ಟ ಸಂಖ್ಯೆಯ ಸುತ್ತುಗಳಲ್ಲಿ ಗೆಲ್ಲುವ ಮೂಲಕ ಪಂದ್ಯವನ್ನು ಗೆಲ್ಲಬಹುದು.

ಸಾಧಾರಣವಾಗಿ ಬ್ರಿಟಿಷ್‌ ಸೇನಾ ಅಧಿಕಾರಿಗಳಿಂದ ಭಾರತದಲ್ಲಿ ಆವಿಷ್ಕರಿಸಲಾದ ಕ್ರೀಡೆ ಎಂದು ಭಾವಿಸಲ್ಪಟ್ಟಿರುವುದಲ್ಲದೇ, ಕೆಲ ಉನ್ನತ ವೃತ್ತಿಪರ ಆಟಗಾರರು ಈ ಕ್ರೀಡೆಯಿಂದ ಬಹು-ದಶಲಕ್ಷ ಪೌಂಡ್ಗಳ‌ ಆದಾಯದ ವೃತ್ತಿಜೀವನವನ್ನು ಕಂಡುಕೊಂಡಿರುವುದಲ್ಲದೇ ಸ್ನೂಕರ್‌ ಕ್ರೀಡೆಯು ಅನೇಕ ಆಂಗ್ಲ-ಭಾಷಿಕ ಹಾಗೂ ಕಾಮನ್‌ವೆಲ್ತ್‌ ರಾಷ್ಟ್ರಗಳಲ್ಲಿ[೨] ಜನಪ್ರಿಯವಾಗಿದೆ.[೩] ಈ ಕ್ರೀಡೆಯು ನಿರ್ದಿಷ್ಟವಾಗಿ ಚೀನಾದಲ್ಲಿ ಹೆಚ್ಚು ಜನಪ್ರಿಯಗೊಳ್ಳುತ್ತಿದೆ.[೪]

ಇತಿಹಾಸ[ಬದಲಾಯಿಸಿ]

ಜರ್ಮನಿಯ ಟ್ಯೂಬಿಂಗೆನ್‌ನಲ್ಲಿ 19ನೇ ಶತಮಾನದ ಆದಿಯಲ್ಲಿದ್ದ ಮೂರು ಚೆಂಡುಗಳ ಪಾಕೆಟ್‌ ಬಿಲಿಯರ್ಡ್ಸ್‌ ಆಟದ ಚಿತ್ರ

19ನೇ ಶತಮಾನದ ಉತ್ತರಾರ್ಧದಲ್ಲಿ ಸ್ನೂಕರ್‌ ಹುಟ್ಟಿತು ಎಂಬುದು ಸಾಧಾರಣ ಒಪ್ಪಿತ ಅಭಿಪ್ರಾಯ.[೫] ಭಾರತದಲ್ಲಿ ಉಳಿದುಕೊಂಡಿದ್ದ ಬ್ರಿಟಿಷ್‌ ಸೇನಾಧಿಕಾರಿಗಳ ಜನಪ್ರಿಯ ಚಟುವಟಿಕೆ ಬಿಲಿಯರ್ಡ್ಸ್‌ ಆಟವಾಗಿದ್ದುದಲ್ಲದೇ, ಹೆಚ್ಚು ಸಾಂಪ್ರದಾಯಿಕವಾಗಿದ್ದ ಬಿಲಿಯರ್ಡ್‌ ಕ್ರೀಡೆಗಳಲ್ಲಿ ವೈವಿಧ್ಯತೆಯನ್ನು ರಚಿಸಲಾಯಿತು. ಜಬಲ್ಪುರ್‌ನ ಅಧಿಕಾರಿಗಳ ಉಪಹಾರ ಕೇಂದ್ರದಲ್ಲಿ 1874[೬] ಅಥವಾ 1875,[೫] ರ ಅವಧಿಯಲ್ಲಿ ಹಾಗೆ ರಚಿಸಿದ ಮಾರ್ಪಾಟಾದ ಕ್ರೀಡೆಯು ಪಿರಮಿಡ್‌ ಪೂಲ್‌ ಹಾಗೂ ಲೈಫ್‌ ಪೂಲ್‌ಗಳಲ್ಲಿ ಬಳಸುತ್ತಿದ್ದ ಕೆಂಪು ಹಾಗೂ ಕಪ್ಪು ಬಣ್ಣದ ಚೆಂಡುಗಳ ಜೊತೆಗೆ ಇತರೆ ಬಣ್ಣದ ಚೆಂಡುಗಳನ್ನು ಸೇರಿಸಿತ್ತು.[೭] ಸ್ನೂಕರ್ ‌ ಎಂಬ ಪದ ಕೂಡಾ ಸೈನ್ಯಮೂಲದ್ದಾಗಿದ್ದು ಪ್ರಥಮ-ವರ್ಷದ ಸೈನಿಕರನ್ನು ಅಥವಾ ಹೊಸ ಸಿಬ್ಬಂದಿಗಳನ್ನು ಸಂಭೋದಿಸಲು ಈ ಪದವನ್ನು ಗ್ರಾಮ್ಯ ಪದವಾಗಿ ಬಳಸಲಾಗುತ್ತಿತ್ತು.[೫] ಘಟನಾವಳಿಯ ಒಂದು ಆವೃತ್ತಿಯ ಪ್ರಕಾರ ಡೆವನ್‌ಷೈರ್‌ ತುಕಡಿಯ ಕರ್ನಲ್‌ ಸರ್‌‌ ನೆವಿಲ್ಲೆ ಚೇಂಬರ್‌ಲೇನ್‌ ಈ ನವೀನ ಆಟವನ್ನು ಆಡುತ್ತಿದ್ದಾಗ ಎದುರಾಳಿಯು ಚೆಂಡನ್ನು ಕುಳಿಗೆ ಹಾಕಲು ವಿಫಲರಾದಾಗ ಚೇಂಬರ್‌ಲೇನ್‌ ಆತನನ್ನು ಸ್ನೂಕರ್ ‌ ಎಂದು ಲೇವಡಿ ಮಾಡಿದರು.[೭] ಹಾಗಾಗಿ ಈ ಪದವು ಬಿಲಿಯರ್ಡ್ಸ್‌ ಆಟಕ್ಕೆ ಅಂಟಿಕೊಂಡು ಅನನುಭವಿ ಆಟಗಾರರನ್ನು ಸ್ನೂಕರ್‌ಗಳೆಂದು ಕರೆಯಲಾಯಿತು.[೮]

19ನೇ ಶತಮಾನದ ಉತ್ತರಾರ್ಧ ಹಾಗೂ 20ನೇ ಶತಮಾನದ ಆದಿಯಲ್ಲಿ ಸ್ನೂಕರ್‌ ಆಟವು ಅಭಿವೃದ್ಧಿ ಹೊಂದಿತಲ್ಲದೇ, 1927ರ ವೇಳೆಗೆ ಕ್ರೀಡೆಯನ್ನು ಸಾಧಾರಣ ಕಾಲಕ್ಷೇಪದ ಬದಲಿಗೆ ಹೆಚ್ಚಿನ ವೃತ್ತಿಪರ ಪರಿಧಿಗೆ ಕರೆತಂದ ಓರ್ವ ವೃತ್ತಿಪರ ಆಂಗ್ಲ ಬಿಲಿಯರ್ಡ್ಸ್‌ ಹಾಗೂ ಸ್ನೂಕರ್‌ ಆಟಗಾರ ಜೋ ಡೇವಿಸ್‌, ಪ್ರಥಮ ವಿಶ್ವ ಸ್ನೂಕರ್‌ ಚಾಂಪಿಯನ್‌ಷಿಪ್‌[೫] ಅನ್ನು ಆಯೋಜಿಸಿದರು.[೯] ಜೋ ಡೇವಿಸ್‌ 1946ರಲ್ಲಿ ತಾವು ನಿವೃತ್ತಿಯಾಗುವವರೆಗೆ ನಡೆದ ಪ್ರತಿ ವಿಶ್ವ ಚಾಂಪಿಯನ್‌ಷಿಪ್‌ಯನ್ನು ಜಯಿಸಿದ್ದರು. ಆಟವನ್ನಾಡುತ್ತಿರುವವರನ್ನು ಬಿಟ್ಟು ಉಳಿದವರಲ್ಲಿ ಹೆಚ್ಚೇನೂ ಆಸಕ್ತಿ ಹುಟ್ಟಿಸದ ಕಾರಣ 1950ರ ದಶಕದಿಂದ 1960ರ ದಶಕದುದ್ದಕ್ಕೂ ಆಟವು ಅಧೋಗತಿಗಿಳಿಯಿತು. 1959ರಲ್ಲಿ, ಡೇವಿಸ್‌ ಆಟದ ಜನಪ್ರಿಯತೆಯನ್ನು ಹೆಚ್ಚಿಸುವ ಪ್ರಯತ್ನದಲ್ಲಿ ಹೆಚ್ಚುವರಿ ಎರಡು ಬಣ್ಣಗಳನ್ನು ಸೇರಿಸಿ ಸ್ನೂಕರ್‌ ಪ್ಲಸ್‌ ಎಂಬ ಈ ಆಟದ ಮತ್ತೊಂದು ಮಾರ್ಪಾಟನ್ನು ಪರಿಚಯಿಸಿದರು. ಆದಾಗ್ಯೂ ಯಾವುದೇ ಪ್ರಯೋಜನವಾಗಲಿಲ್ಲ. 1969ರಲ್ಲಿ ಆಗಿನ BBCಯ ಉನ್ನತ ಅಧಿಕಾರಿಯಾಗಿದ್ದ ಡೇವಿಡ್‌ ಅಟೆನ್‌ಬರೋ ವರ್ಣಪ್ರಸಾರದ ಅನುಕೂಲಗಳನ್ನು ಬಿಂಬಿಸಲು ಸೂಕ್ತವಾದ ಹಸಿರು ಮೇಜು ಹಾಗೂ ಬಹುವರ್ಣೀಯ ಚೆಂಡುಗಳೊಂದಿಗೆ ವರ್ಣ ಕಿರುತೆರೆಯ ಸಾಮರ್ಥ್ಯದ ನಿದರ್ಶನ ನೀಡಲು ಪಾಟ್‌ ಬ್ಲಾಕ್‌ ಎಂಬ ಸ್ನೂಕರ್‌ ಪಂದ್ಯಾವಳಿಯನ್ನು ಆಯೋಜಿಸಿದಾಗ ಪ್ರಮುಖ ಬೆಳವಣಿಗೆಯುಂಟಾಯಿತು.[೧೦][೧೧] ಈ ಕಿರುತೆರೆ ಸರಣಿಯ ಶ್ರೇಯಾಂಕವು ಯಶಸ್ವಿಯಾಗಿ ವೃದ್ಧಿಸಿತಲ್ಲದೇ ಕೆಲ ಸಮಯದವರೆಗೆ BBC Two/ಟು ವಾಹಿನಿಯಲ್ಲಿ ಎರಡನೇ ಅತಿ ಜನಪ್ರಿಯ ಕಾರ್ಯಕ್ರಮವೆನಿಸಿತ್ತು.[೧೨] ಕ್ರೀಡೆಯಲ್ಲಿನ ಜನರ ಆಸಕ್ತಿ ವೃದ್ಧಿಸಿತಲ್ಲದೇ 1978ರ ವಿಶ್ವ ಚಾಂಪಿಯನ್‌ಷಿಪ್‌ ಪ್ರಪ್ರಥಮ ಬಾರಿಗೆ ಪೂರ್ಣಪ್ರಮಾಣದ ಕಿರುತೆರೆ ಪ್ರಸಾರ ಕಂಡಿತು.[೨][೧೩] UK, ಐರ್‌ಲೆಂಡ್‌ ಹಾಗೂ ಕಾಮನ್‌ವೆಲ್ತ್‌ನ ಬಹುತೇಕ ರಾಷ್ಟ್ರಗಳಲ್ಲಿ ಈ ಆಟವು ಬಹುಬೇಗ ಮುಖ್ಯವಾಹಿನಿಯ ಕ್ರೀಡೆಯಾಯಿತಲ್ಲದೇ[೧೪] ಕಿರುತೆರೆ ಪ್ರಸಾರಿತ ಶ್ರೇಯಾಂಕಿತ ಪಂದ್ಯಾವಳಿಗಳಲ್ಲಿ ಒಂದಾಗಿ ಕಳೆದ 30 ವರ್ಷಗಳಲ್ಲಿ ಬಹಳಷ್ಟು ಯಶಸ್ಸನ್ನು ಕಂಡಿದೆ. 1985ರಲ್ಲಿ ಡೆನ್ನಿಸ್‌ ಟೇಲರ್‌ ಹಾಗೂ ಸ್ಟೀವ್‌ ಡೇವಿಸ್‌ ನಡುವಿನ ವಿಶ್ವ ಚಾಂಪಿಯನ್‌ಷಿಪ್‌ ಅಂತಿಮ ಪಂದ್ಯದ ಕೊನೆಯ ಸುತ್ತನ್ನು ಒಟ್ಟಾರೆ 18.5 ದಶಲಕ್ಷ ವೀಕ್ಷಕರು ವೀಕ್ಷಿಸಿದ್ದರು.[೧೫] ಇತ್ತೀಚಿನ ವರ್ಷಗಳಲ್ಲಿ ತಂಬಾಕು ಕಂಪೆನಿಗಳ ಪ್ರಾಯೋಜನೆ ಇಲ್ಲದ ಕಾರಣ ಹೊಸ ಪ್ರಾಯೋಜಕರನ್ನು ಹೊಂದಿಸಿದ್ದರೂ ಅನೇಕ ವೃತ್ತಿಪರ ಪಂದ್ಯಾವಳಿಗಳ ಸಂಖ್ಯೆಯಲ್ಲಿ ಕುಸಿತ ಕಂಡಿದೆ;[೧೬] ಆದಾಗ್ಯೂ ಲಿಯಾಂಗ್‌ ವೆನ್‌ಬೋರಂತಹಾ ಉದಯೋನ್ಮುಖ ಪ್ರತಿಭೆಗಳ ಹಾಗೂ ವಿಶ್ವದ ಆ ಭಾಗದಲ್ಲಿ ಕ್ರೀಡೆಗೆ ಉತ್ತಮ ಭವಿಷ್ಯ ನೀಡಬಲ್ಲ ಡಿಂಗ್‌ ಜುನ್‌ಹುಯಿ ಹಾಗೂ ಮಾರ್ಕೊ ಫುರಂತಹಾ ಯಶಸ್ವಿ ಆಟಗಾರರಿಂದ ದೂರ ಪ್ರಾಚ್ಯ ಹಾಗೂ ಚೀನಾಗಳಲ್ಲಿ ಜನಪ್ರಿಯತೆ ಹೆಚ್ಚಿದೆ.[೪][೧೭]

ಕ್ರೀಡೆಯ ವಿಧಾನ[ಬದಲಾಯಿಸಿ]

ಚೆಂಡುಗಳು ತಮ್ಮ ಆರಂಭಿಕ ಸ್ಥಾನಗಳಲ್ಲಿರುವ ಸ್ನೂಕರ್‌ ಮೇಜು
ಅರ್ಧ ಗಾತ್ರದ ಮೇಜಿನಲ್ಲಿ ನಡೆಯುತ್ತಿರುವ ಪಂದ್ಯ. ಹಾಕುವುದರಲ್ಲಿರುವ ಕೆಂಪು ಚೆಂಡು.

ಪೂರ್ವನಿರ್ಧರಿತ ಕ್ರಮದಲ್ಲಿ ಚೆಂಡನ್ನು ಹಾಕುವ ಮೂಲಕobject balls ಎದುರಾಳಿಗಿಂತ ಹೆಚ್ಚಿನpoints ಅಂಕವನ್ನು ಗಳಿಸುವುದು ಆಟದ ಗುರಿ. ಸುತ್ತಿನ ಆರಂಭದಲ್ಲಿ, ಚೆಂಡುಗಳನ್ನು ತೋರಿಸಿದ ರೀತಿಯಲ್ಲಿ ಇರಿಸಲಾಗಿರುತ್ತದೆ, ಆಟಗಾರರು ಸರತಿಯ ಮೇಲೆ ಅವುಗಳನ್ನು ದಾಂಡಿ/ಕೋಲಿನ tipರ ಮೂಲಕ ಒಂದೇ ಬೀಸಿನಲ್ಲಿ, ಕೆಂಪು ಚೆಂಡುಗಳಲ್ಲಿ ಒಂದನ್ನು ಗುರಿ ಮುಟ್ಟಿಸಿ ಅಂಕ ಗಳಿಸುತ್ತಾರೆ. ಅವರು ಕನಿಷ್ಟ ಒಂದು ಕೆಂಪು ಚೆಂಡನ್ನು ಹಾಕಿದರೆ, ಅದು ಚೀಲದೊಳಗೆ ಇರುತ್ತದಲ್ಲದೇ ಅವರಿಗೆ ಮತ್ತೊಂದು ಅವಕಾಶ ಸಿಗುತ್ತದೆ- ಈ ಬಾರಿ ಬೇರೆ ವರ್ಣಗಳ ಚೆಂಡನ್ನು ಹೊಡೆಯಬೇಕಾಗಿರುತ್ತದೆ. ಅವರು ಯಶಸ್ವಿಯಾದರೆ ಹಾಕಿದ ಬಣ್ಣದ ಅಂಕ ಗಳಿಸುತ್ತಾರೆ. ಅದನ್ನು ಮತ್ತೆ ತನ್ನ ಸರಿಯಾದ ಸ್ಥಾನದಲ್ಲಿಟ್ಟ ನಂತರ ಅವರು ಮತ್ತೊಂದು ಕೆಂಪು ಚೆಂಡನ್ನು ಹಾಕಲು ಪ್ರಯತ್ನಿಸಬೇಕು. ಈ ಪ್ರಕ್ರಿಯೆಯು ಅವರು ಬೇಕಾದ ಚೆಂಡನ್ನು ಹಾಕಲು ಸೋಲುವವರೆಗೆ ನಡೆಯುತ್ತದೆ, ಆಗ ಅವರ ಎದುರಾಳಿಯು ಮೇಜಿಗೆ ಹಿಂತಿರುಗಿ ತನ್ನ ಮುಂದಿನ ಹೊಡೆತ ನೀಡುತ್ತಾರೆ. ಆಟವು ಇದೇ ಮಾದರಿಯಲ್ಲಿ ಎಲ್ಲಾ ಕೆಂಪುಚೆಂಡುಗಳನ್ನು ಹಾಕುವವರೆಗೆ ಮುಂದುವರೆಯುತ್ತದೆ ಆಗ ಕೇವಲ 6 ಬಣ್ಣದ ಚೆಂಡುಗಳು ಮಾತ್ರವೇ ಮೇಜಿನ ಮೇಲಿರುತ್ತವೆ; ಆ ಸಮಯದಲ್ಲಿ ಹಳದಿ, ಹಸಿರು, ಕಂದು, ನೀಲಿ, ಗುಲಾಬಿ, ಕಪ್ಪು ಈ ಕ್ರಮದಲ್ಲಿ ಬಣ್ಣದ ಚೆಂಡುಗಳನ್ನು ಹಾಕುವುದು ಗುರಿಯಾಗಿರುತ್ತದೆ. ಸುತ್ತಿನ ಈ ಭಾಗದಲ್ಲಿ ಬಣ್ಣದ ಚೆಂಡನ್ನು ಹಾಕಿದರೆ ಅದು ಮೇಜಿನ ಹೊರಗೇ ಉಳಿಯುತ್ತದೆ. ಕೊನೆಯ ಚೆಂಡನ್ನು ಹಾಕಿದಾಗ, ಹೆಚ್ಚಿನ ಅಂಕಗಳನ್ನು ಪಡೆದಿರುವ ಆಟಗಾರ ಜಯಿಸುತ್ತಾನೆ.[೧]

ಆಟಗಾರ'ನ ಎದುರಾಳಿಯು fouls ಮಾಡಿದಾಗಲೂ ಆಟದಲ್ಲಿ ಅಂಕಗಳನ್ನು ಗಳಿಸಬಹುದು. ಆಟಗಾರ ಕೆಂಪು ಚೆಂಡನ್ನು ಹೊಡೆಯಲು ಪ್ರಯತ್ನಿಸುವಾಗ ಬಣ್ಣದ ಚೆಂಡನ್ನು ಮೊದಲು ಹೊಡೆಯುವುದು, ಕೋಲು/ದಾಂಡು ಚೆಂಡನ್ನೇ ಹಾಕುವುದು, ಅಥವಾ "a snooker" ದಿಂದ ಪಾರಾಗಲು ಸಾಧ್ಯವಾಗದೇ ಇರುವುದು (ಹಿಂದಿನ ಆಟಗಾರ ಗುರಿಚೆಂಡನ್ನು ನೇರವಾಗಿ ಹೊಡೆಯಲಾಗದ ಸ್ಥಿತಿಯಲ್ಲಿ ಕೋಲು/ದಾಂಡು ಚೆಂಡನ್ನು ಬಿಟ್ಟು ತಮ್ಮ ಸರದಿ ಮುಗಿಸಿದ ಸನ್ನಿವೇಶ) ಮುಂತಾದ ಅನೇಕ ಕಾರಣಗಳಿಂದಾಗಿ ತಪ್ಪು ನಡೆ ಸಂಭವಿಸಬಹುದು. ತಪ್ಪು ನಡೆಯಿಂದ ಗಳಿಸಬಹುದಾದ ಅಂಕಗಳು ಕನಿಷ್ಟ 4ರಿಂದ ಕಪ್ಪು ಚೆಂಡು ಒಳಗೊಂಡಿದ್ದರೆ ಗರಿಷ್ಟ 7ರವರೆಗೆ ವ್ಯತ್ಯಾಸಗೊಳ್ಳುತ್ತವೆ.[೧]

ಚೆಂಡುಗಳು ತಮ್ಮ ಆರಂಭಿಕ ಸ್ಥಾನದಿಂದ ಕೊನೆಯ ಚೆಂಡನ್ನು ಹಾಕುವವರೆಗಿನ ಒಂದು ಆಟgameವನ್ನು, ಒಂದು ಸುತ್ತುframe ಎನ್ನುತ್ತಾರೆ. ಪಂದ್ಯವೊಂದುmatch ಸಾಧಾರಣವಾಗಿ ಪೂರ್ವನಿರ್ಧರಿತ ಸಂಖ್ಯೆಯ ಸುತ್ತುಗಳನ್ನು ಹೊಂದಿದ್ದು ಅತಿ ಹೆಚ್ಚಿನ ಸಂಖ್ಯೆಯ ಸುತ್ತುಗಳನ್ನು ಗೆದ್ದ ಆಟಗಾರ ಪಂದ್ಯವನ್ನು ಒಟ್ಟಾರೆಯಾಗಿ ಗೆಲ್ಲುತ್ತಾನೆ. ಬಹುಪಾಲು ವೃತ್ತಿಪರ ಪಂದ್ಯಗಳಲ್ಲಿ ಆಟಗಾರನು ಐದು ಸುತ್ತುಗಳನ್ನು ಜಯಿಸಬೇಕಾಗಿದ್ದು, ಹಾಗೂ ಅವರನ್ನು "ಒಂಬತ್ತರಲ್ಲಿ ಅತ್ಯುತ್ತಮ" ಎಂದು ಅದೇ ಗರಿಷ್ಟಸಾಧ್ಯ ಸುತ್ತುಗಳ ಸಂಖ್ಯೆಯಾದುದರಿಂದ ಕರೆಯುತ್ತಾರೆ. ಪಂದ್ಯಾವಳಿಯ ಅಂತಿಮ ಪಂದ್ಯಗಳು ರೂಢಿಗತವಾಗಿ 17ರಲ್ಲಿ ಅತ್ಯುತ್ತಮ ಅಥವಾ 19ರಲ್ಲಿ ಅತ್ಯುತ್ತಮವಾದರೆ, ವಿಶ್ವ ಚಾಂಪಿಯನ್‌ಷಿಪ್‌ ದೀರ್ಘ ಪಂದ್ಯಗಳನ್ನು ಹೊಂದಿರುತ್ತದೆ - ಅರ್ಹತಾಸುತ್ತು ಹಾಗೂ ಪ್ರಥಮ ವಿಹಿತ ಸುತ್ತಿಗೆ 19ರಲ್ಲಿ ಅತ್ಯುತ್ತಮದಿಂದ ಹಿಡಿದು 35 ಸುತ್ತುಗಳವರೆಗೆ ವ್ಯಾಪಿಸಿರಬಹುದಲ್ಲದೇ (ಮೊದಲನೆಯದರಿಂದ 18), ಅದನ್ನು ಎರಡು ದಿನಗಳ ಕಾಲ ಆಡಲಾಗುತ್ತದೆ.[೧೮]

ವೃತ್ತಿಪರ ಹಾಗೂ ಸ್ಪರ್ಧಾತ್ಮಕ ಹವ್ಯಾಸಿ ಪಂದ್ಯಗಳನ್ನು ರೆಫರಿಯೋರ್ವರು ನಡೆಸುತ್ತಾರಲ್ಲದೇ, ಅವರೇ ಯುಕ್ತ ಆಟದ ಏಕೈಕ ತೀರ್ಪುಗಾರರಾಗಿರುತ್ತಾರೆ. ರೆಫರಿಯವರೇ ಮೇಜಿನ ಮೇಲಿನ ಬಣ್ಣದ ಚೆಂಡುಗಳನ್ನು ಮರುಹೊಂದಿಸುವರಲ್ಲದೇ ಮಧ್ಯಂತರದಲ್ಲಿ ಆಟಗಾರನ ಅಂಕಗಳೆಷ್ಟು ಎಂದು ಘೋಷಿಸುತ್ತಾರೆ. ವೃತ್ತಿಪರ ಆಟಗಾರರು ರೆಫರಿ ಗುರುತಿಸಿರದ ತಪ್ಪು ನಡೆಗಳನ್ನು ಘೋಷಿಸುವುದು, ಎದುರಾಳಿಯ ಉತ್ತಮ ನಡೆಯನ್ನು ಪ್ರಶಂಸಿಸುವುದು ಅಥವಾ ಅನುಕೂಲಕರ ನಡೆಗಾಗಿ ಕ್ಷಮೆ ಯಾಚಿಸಲು ಕೈ ಎತ್ತುವುದೂ ಸೇರಿದಂತೆ ಸಾಧಾರಣವಾಗಿ ಕ್ರೀಡಾಮನೋಭಾವದಲ್ಲಿ ಆಡುತ್ತಾರೆ.

ಕೈಗಳಿಂದ ಹೊಂದಿಸಬಹುದಾದದಕ್ಕಿಂತ ದೂರದಲ್ಲಿರುವ ಚೆಂಡುಗಳ ಮೇಲಿನ ಹೊಡೆತಕ್ಕೆ ತಡೆಯಾಗಿರುವ [45]ಲು ಬಳಸಬಹುದಾದ ವಿಸ್ತರಿತ [44]

ಸ್ನೂಕರ್‌ನಲ್ಲಿ ಬಳಸುವ ಮತ್ತೊಂದು ಪಾರಿಭಾಷಿಕ ಪದವೆಂದರೆ ಆಟಗಾರನು ಶೇಖರಿಸಿದ ಮೇಜಿಗೆ ನೀಡಿದ ಒಂದು break ಭೇಟಿಯಲ್ಲಿ ಸಂಗ್ರಹಿಸಿದ (ತಪ್ಪು ನಡೆಗಳನ್ನು ಹೊರತುಪಡಿಸಿ) ಅನುಕ್ರಮ ಅಂಕಗಳ ಮೊತ್ತವಾದ ಆಟಗಾರನ ವಿರಾಮvisit. 15ರ ವಿರಾಮ ಗಳಿಸಿದ ಓರ್ವ ಆಟಗಾರ ಉದಾಹರಣೆಗೆ, ಮುಂದಿನ ಕೆಂಪು ಚೆಂಡನ್ನು ಹಾಕಲು ವಿಫಲಗೊಳ್ಳುವ ಮುಂಚೆ ಮೊದಲಿಗೆ ಕೆಂಪು ನಂತರ ಕಪ್ಪು, ನಂತರ ಕೆಂಪು ನಂತರ ಗುಲಾಬಿ ಚೆಂಡುಗಳನ್ನು ಹಾಕಿರಬಹುದು. ಸ್ನೂಕರ್‌ನಲ್ಲಿನ ಸಾಂಪ್ರದಾಯಿಕ ಗರಿಷ್ಟ ವಿರಾಮವೆಂದರೆ ಎಲ್ಲಾ ಕೆಂಪು ಚೆಂಡುಗಳನ್ನು, ಕಪ್ಪು ಚೆಂಡುಗಳನ್ನು ನಂತರ ಎಲ್ಲಾ ಬಣ್ಣದ ಚೆಂಡುಗಳನ್ನು ಹಾಕಿದಾಗ ಸಿಗುವ 147 ಅಂಕಗಳು; ಇದನ್ನು ಅನೇಕವೇಳೆ "147" ಅಥವಾ "ಗರಿಷ್ಟ"ವೆನ್ನುತ್ತಾರೆ.[೧೯] ಇದನ್ನೂ ನೋಡಿ: ಹೆಚ್ಚಿನ ಮೊತ್ತದ ಸ್ನೂಕರ್‌ ವಿರಾಮಗಳು .

ಸ್ನೂಕರ್‌ ವಿರಾಮದ ನಂತರದ ಹೊಡೆತದ ವಿಡಿಯೋ

ಸ್ನೂಕರ್‌ನಲ್ಲಿ ಬಳಸುವ ಪರಿಕರಗಳೆಂದರೆ ದಾಂಡಿ/ಕೋಲಿನ ತುದಿಗೆ ಬಳಸುವ ಸೀಮೆಸುಣ್ಣ/ಚಾಕ್‌ chalk, ಅನೇಕ ರೀತಿಯ ಊರೆrestsಗಳು (ಪೂರ್ಣಗಾತ್ರದ ಮೇಜಿನಿಂದಾಗಿ ಅನೇಕವೇಳೆ ಬೇಕಾಗುತ್ತದೆ), ಕೆಂಪು ಚೆಂಡುಗಳನ್ನು ಹಾಗೂ ಅಂಕಪಟ್ಟಿಗಳಿಗೆ ಆಧಾರವಾಗಿಡಲುrack ಒಂದು ತ್ರಿಕೋನಾಕೃತಿ. ಪೂರ್ಣ ಗಾತ್ರದ ಮೇಜಿನ ಸ್ನೂಕರ್‌ನ ಒಂದು ನ್ಯೂನತೆಯೆಂದರೆ, ಎಲ್ಲಾ ಮಗ್ಗಲುಗಳಲ್ಲಿ ಸಮಾಧಾನಕರವಾಗಿ ಕೋಲನ್ನು ಆಡಿಸಲು ಬೇಕಾಗುವಷ್ಟು ಕೋಣೆಯ ಅಳತೆ (22' x 16' ಅಥವಾ ಸರಿಸುಮಾರು 5 m x 7 m).[೨೦] ಇದು ಆಟವನ್ನು ಸುಲಭವಾಗಿ ಆಡಬಹುದಾದ ಸ್ಥಾನಗಳ ಸಂಖ್ಯೆಯನ್ನು ನಿಯಂತ್ರಿಸುತ್ತದೆ. ಅನೇಕ ಪಬ್‌ಗಳಲ್ಲಿ ಪೂಲ್‌ ಮೇಜುಗಳು ಸಾಧಾರಣವಾಗಿ ಲಭ್ಯವಿದ್ದರೂ, ಸ್ನೂಕರ್‌ ಆಟವನ್ನು ಖಾಸಗಿ ಸ್ಥಳಗಳಲ್ಲಿ ಅಥವಾ ಸಾರ್ವಜನಿಕ ಸ್ನೂಕರ್‌ ಕೊಠಡಿಗಳಲ್ಲಿ ಆಡಲಾಗುತ್ತದೆ. ಕ್ರೀಡೆಯನ್ನು ಸಣ್ಣ ಮೇಜಿನಲ್ಲಿ ಕಡಿಮೆ ಸಂಖ್ಯೆಯ ಕೆಂಪು ಚೆಂಡುಗಳೊಂದಿಗೆ ಕೂಡಾ ಆಡಲಾಗುತ್ತದೆ. ಮೇಜಿನ ತರಹೇವಾರಿ ಅಳತೆಗಳು ಹೀಗಿವೆ : 10' x 5', 9' x 4.5', 8' x 4', 6' x 3' (ವಾಸ್ತವಿಕ ಆಟಕ್ಕೆ ಬೇಕಾದ ಅತಿ ಸಣ್ಣ ಅಳತೆ) ಹಾಗೂ 4' x 2'. ಮಡಿಸಬಹುದಾದ ಅಥವಾ ಪರಿವರ್ತನೀಯ ಊಟದ ಮೇಜಿನಂತಹಾ ವಿವಿಧ ಶೈಲಿಗಳಲ್ಲಿ ಸಣ್ಣ ಮೇಜುಗಳು ಲಭ್ಯವಿವೆ.

ನಿಯಂತ್ರಣ ಹಾಗೂ ಪಂದ್ಯಾವಳಿಗಳು[ಬದಲಾಯಿಸಿ]

2007ರಲ್ಲಿನ ದ ಮಾಸ್ಟರ್ಸ್‌ ಪಂದ್ಯಾವಳಿಯ ದೃಶ್ಯ

ವರ್ಲ್ಡ್‌ ಪ್ರೊಫೆಷನಲ್‌ ಬಿಲಿಯರ್ಡ್ಸ್‌ ಅಂಡ್‌ ಸ್ನೂಕರ್‌ ಅಸೋಸಿಯೇಷನ್‌ (WPBSA, ವಿಶ್ವ ಸ್ನೂಕರ್‌ ಎಂದೂ ಕರೆಯಲಾಗುತ್ತದೆ),ಅನ್ನು ಪ್ರೊಫೆಷನಲ್‌ ಬಿಲಿಯರ್ಡ್‌ ಪ್ಲೇಯರ್ಸ್‌ ಅಸೋಸಿಯೇಷನ್‌,[೨೧] ಎಂಬ ಹೆಸರಿನಿಂದ ವೃತ್ತಿಪರ ಕ್ರೀಡೆಗೆ ನಿಯಂತ್ರಣ ಸಂಸ್ಥೆಯಾಗಿ 1968ರಲ್ಲಿ ಸ್ಥಾಪಿಸಲಾಗಿತ್ತು. ಅದರ ಅಂಗಸಂಸ್ಥೆಯಾದ ಇಂಗ್ಲೆಂಡ್‌ನ ಬ್ರಿಸ್ಟಾಲ್‌ ಮೂಲದ, ವರ್ಲ್ಡ್‌ ಸ್ನೂಕರ್‌ ವೃತ್ತಿಪರ ಪ್ರವಾಸ/ಪಂದ್ಯಾವಳಿಗಳನ್ನು ಏರ್ಪಡಿಸುತ್ತದೆ. ವರ್ಷಗಳ ಅವಧಿಯಲ್ಲಿ WPBSAಯ ಆಡಳಿತ ಮಂಡಳಿಯು ಅನೇಕ ಬಾರಿ ಬದಲಾಗಿದೆ, ಕೆಲವರ ವಾದದ ಪ್ರಕಾರ ಇದು ಕ್ರೀಡೆಯಲ್ಲಿ ಭಿನ್ನಾಭಿಪ್ರಾಯದ ಸೂಚನೆಯಾಗಿದೆ.[೨೨][೨೩][೨೪] ಇಂಟರ್‌ನ್ಯಾಷನಲ್‌ ಬಿಲಿಯರ್ಡ್ಸ್‌ ಅಂಡ್‌ ಸ್ನೂಕರ್‌ ಫೆಡರೇಷನ್‌ (IBSF) ಹವ್ಯಾಸಿ ಪಂದ್ಯಗಳನ್ನು ನಿಯಂತ್ರಿಸುತ್ತದೆ.[೨೫]

ವೃತ್ತಿಪರ ಸ್ನೂಕರ್‌ ಆಟಗಾರರು ವರ್ಲ್ಡ್‌ ಸ್ನೂಕರ್‌ ಪ್ರಧಾನ ಪ್ರವಾಸೀ ಶ್ರೇಯಾಂಕ ಸರಣಿಗಳಲ್ಲಿ ಆಡಬಹುದಾಗಿರುತ್ತದೆ. ಆಟಗಾರರು ಕಳೆದೆರಡು ಋತುಗಳಲ್ಲಿ ತಾವು ಗಳಿಸಿದ ಶ್ರೇಯಾಂಕ ಸೂಚಿತ ಅಂಕಗಳು ಪ್ರಸಕ್ತ ವಿಶ್ವ ಶ್ರೇಯಾಂಕವನ್ನು ನಿರ್ಧರಿಸುತ್ತದೆ.[೨೬] ಓರ್ವ ಆಟಗಾರನ ಶ್ರೇಯಾಂಕವು ಅವರಿಗೆ ಶ್ರೇಯಾಂಕಿತ ಪಂದ್ಯಾವಳಿಗಳಲ್ಲಿ ಭಾಗವಹಿಸಲು ಬೇಕಾದ ಅರ್ಹತೆಯ ಮಟ್ಟವನ್ನು ನಿರ್ಧರಿಸುತ್ತದೆ. ಯಾವುದೇ ಪಂದ್ಯಾವಳಿಗಳಿಗೆ ಅರ್ಹತಾಪರೀಕ್ಷೆ ಬೇಕಾಗಿರದ "ಶ್ರೇಷ್ಟ 16" ಶ್ರೇಯಾಂಕಿತ ಆಟಗಾರರನ್ನು,[೨೭] ವೃತ್ತಿಪರ ಸ್ನೂಕರ್‌ನ ಗಣ್ಯರು ಎಂದು ಪರಿಗಣಿಸಲಾಗುತ್ತದೆ.[೨೮] ಪ್ರವಾಸವು 96 ಆಟಗಾರರನ್ನೊಳಗೊಂಡಿರುತ್ತದೆ - ಹಿಂದಿನೆರಡು ಋತುಗಳ ಶ್ರೇಷ್ಟ 64 ಕ್ರೀಡಾಳುಗಳು, ಶ್ರೇಷ್ಟ 64ರ ಗುಂಪಿನಲ್ಲಿರದ ವರ್ಷದ ಒಟ್ಟಾರೆ ಅಂಕಗಳಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿದ 8 ಮಂದಿ, ಕಳೆದ ಋತುವಿನ ಪಾಂಟಿನ್ಸ್‌ ಇಂಟರ್‌ನ್ಯಾಷನಲ್‌ ಓಪನ್‌ ಸೀರೀಸ್‌ (PIOS)ನ ಶ್ರೇಷ್ಟ 8 ಮಂದಿ, ಹಾಗೂ ಅನೇಕ ಪ್ರಾಂತೀಯ, ಕಿರಿಯ ಹಾಗೂ ಹವ್ಯಾಸೀ ಚಾಂಪಿಯನ್‌ಗಳು ಇವರಲ್ಲಿರುತ್ತಾರೆ.

1927ರಿಂದ ವಾರ್ಷಿಕವಾಗಿ ನಡೆಯುತ್ತಿರುವ (1958ರಿಂದ 1963ರ ನಡುವೆ ಹಾಗೂ ಎರಡನೇ ವಿಶ್ವ ಸಮರದ ವೇಳೆ ಹೊರತುಪಡಿಸಿ) ವಿಶ್ವ ಚಾಂಪಿಯನ್‌ಷಿಪ್‌[೨೯] ವೃತ್ತಿಪರ ಸ್ನೂಕರ್‌ನ ಪ್ರಧಾನ ಸಂಗತಿಯಾಗಿದೆ. 1977ರಿಂದ ಷೆಫೀಲ್ಡ್‌ನ (ಇಂಗ್ಲೆಂಡ್‌) ಕ್ರೂಸಿಬಲ್‌ ಥಿಯೇಟರ್‌ನಲ್ಲಿ ಪಂದ್ಯಾವಳಿಯನ್ನು ನಡೆಸಲಾಗುತ್ತಿದೆ, 1976ರಿಂದ 2005ವರೆಗಿನ ಅವಧಿಯಲ್ಲಿ ದೂತಾವಾಸವು ಇವುಗಳನ್ನು ಪ್ರಾಯೋಜಿಸುತ್ತಿತ್ತು.[೧೬] 2005ರಿಂದ, ಯುನೈಟೆಡ್‌ ಕಿಂಗ್‌ಡಂ‌ನಲ್ಲಿ ತಂಬಾಕು ಕಂಪೆನಿಗಳು ಪಂದ್ಯಾವಳಿಗಳನ್ನು ಪ್ರಾಯೋಜಿಸುವುದಕ್ಕೆ ಅನುಮತಿ ಇಲ್ಲದಿರುವುದರಿಂದ, ವಿಶ್ವ ಸ್ನೂಕರ್‌ ಚಾಂಪಿಯನ್‌ಷಿಪ್‌ ಹೊಸ ಪ್ರಾಯೋಜಕರನ್ನು ಹುಡುಕಬೇಕಾಯಿತು. ಜನವರಿ 2006ರಲ್ಲಿ 2006–2010ರ ವಿಶ್ವ ಚಾಂಪಿಯನ್‌ಷಿಪ್‌ಗಳನ್ನು ಆನ್‌ಲೈನ್‌ ಕ್ಯಾಸಿನೊ/ಜೂಜುಕಟ್ಟೆ 888.comಯು ಪ್ರಾಯೋಜಿಸುತ್ತದೆ ಎಂದು ಘೋಷಿಸಲಾಯಿತು. 888.com ತಮ್ಮ ಐದು ವರ್ಷಗಳ ಪ್ರಾಯೋಜಕತ್ವದಿಂದ ಮೂರು ವರ್ಷಗಳ ನಂತರ ಹಿಂದೆ ಸರಿದ ಕಾರಣ ಪ್ರಸ್ತುತ ಚಾಂಪಿಯನ್‌ಷಿಪ್‌ಅನ್ನು BetFred.com ಪ್ರಾಯೋಜಿಸುತ್ತಿದೆ.[೩೦] 15 ಏಪ್ರಿಲ್‌ 2009ರಂದು ವಿಶ್ವ ಸ್ನೂಕರ್‌ ಚಾಂಪಿಯನ್‌ಷಿಪ್‌ ಜಾಲತಾಣವು Betfred.com ಸಂಸ್ಥೆಯು ಮುಂದಿನ ನಾಲ್ಕು ವರ್ಷಗಳ ಕಾಲ ವಿಶ್ವ ಚಾಂಪಿಯನ್‌ಷಿಪ್‌ನ ಪ್ರಾಯೋಜಕರಾಗಿರುತ್ತಾರೆ ಎಂದು ಘೋಷಿಸಿತು.[೩೧][೩೨]

ವಿಶ್ವ ಚಾಂಪಿಯನ್‌ಷಿಪ್‌ಅನ್ನು ಗೆದ್ದ ಪಟ್ಟವು ಶ್ರೇಷ್ಠವಾಗಿರುತ್ತದಲ್ಲದೇ ಸಿಗುವ ಆರ್ಥಿಕ ಸಂಭಾವನೆ (ವಿಜೇತರಿಗೆ £250,000 ನೀಡಲಾಗುತ್ತದೆ)[೩೩] ಹಾಗೂ ಪ್ರತಿಷ್ಠೆ ಎರಡೂ ದೃಷ್ಠಿಯಿಂದ ವೃತ್ತಿಪರ ಸ್ನೂಕರ್‌ನಲ್ಲಿಯೇ ಹೆಚ್ಚಿನ ಮೌಲ್ಯದ ಪ್ರಶಸ್ತಿ[೩೪] ಯಾಗಿದೆ. ವಿಶ್ವ ಚಾಂಪಿಯನ್‌ಷಿಪ್‌ಅನ್ನು UKನಲ್ಲಿ BBC[೩೫] ವ್ಯಾಪಕವಾಗಿ ಪ್ರಸಾರ ಮಾಡುತ್ತಿದೆ ಹಾಗೂ ಮಧ್ಯಪ್ರಾಚ್ಯ ಹಾಗೂ ಯೂರೋಸ್ಪೋರ್ಟ್[೩೬] ನ ಮೂಲಕ ಯೂರೋಪ್‌ನಲ್ಲಿ ಪ್ರಸಾರಿಸಲಾಗುತ್ತಿದೆ.

ಪಂದ್ಯಾವಳಿಗಳ ಪ್ರಾಮುಖ್ಯತೆಯಲ್ಲಿ ಮುಂದಿನ ಆದ್ಯತೆ ಇತರೆ ಶ್ರೇಯಾಂಕ ಪಂದ್ಯಾವಳಿಗಳದ್ದು. ಈ ಪಂದ್ಯಾವಳಿಗಳಲ್ಲಿನ ಆಟಗಾರರು ವಿಶ್ವ ಶ್ರೇಯಾಂಕಗಳನ್ನು ಪಡೆಯಬಲ್ಲರು. ಉತ್ತಮ ಶ್ರೇಯಾಂಕವು ಮುಂದಿನ ವರ್ಷದ ಪಂದ್ಯಾವಳಿಗಳಿಗೆ ಅರ್ಹತೆಯನ್ನು, ಆಹ್ವಾನ ಪಂದ್ಯಾವಳಿಗಳಿಗೆ ಆಹ್ವಾನವನ್ನು ಹಾಗೂ ಪಂದ್ಯಾವಳಿಗಳಲ್ಲಿನ ಫಲಿತಾಂಶಗಳಲ್ಲಿ ಪೂರಕ ಸರಿಸಮತೆಗಳನ್ನು ನಿಶ್ಚಿತಗೊಳಿಸುತ್ತದೆ.[೨೭] ಇವುಗಳಲ್ಲಿ ವಿಶ್ವ ಚಾಂಪಿಯನ್‌ಷಿಪ್‌ ನಂತರದ ಪ್ರತಿಷ್ಠಿತವಾದುದೆಂದರೆ UK ಚಾಂಪಿಯನ್‌ಷಿಪ್‌. ಮೂರನೆಯದೆಂದರೆ ಆಹ್ವಾನ ಪಂದ್ಯಾವಳಿಗಳು ಇದಕ್ಕೆ, ಬಹುತೇಕ ಉನ್ನತ ಶ್ರೇಯಾಂಕಿತ ಆಟಗಾರರನ್ನು ಆಹ್ವಾನಿಸಲಾಗುತ್ತದೆ. ಈ ವರ್ಗದ ಪ್ರಮುಖ ಪಂದ್ಯಾವಳಿ ಎಂದರೆ ಬಹಳಷ್ಟು ಆಟಗಾರರಿಗೆ ಎರಡನೇ ಅಥವಾ ಮೂರನೆಯ ಆದ್ಯತೆಯ ಪ್ರಶಸ್ತಿಯಾಗಿರುವ ದ ಮಾಸ್ಟರ್ಸ್[೩೭].[೩೮]

ಕಿರುತೆರೆ ಪ್ರಸಾರಿತ ಪಂದ್ಯಗಳು ನಿಧಾನವಾಗಬಲ್ಲವು ಅಥವಾ ದೀರ್ಘಕಾಲೀನ ಸುರಕ್ಷತಾ ವಿನಿಮಯಗಳಲ್ಲಿ ಸಿಲುಕಿಕೊಳ್ಳಬಹುದು ಹಾಗೂ ಜಾಹೀರಾತುದಾರರಿಗೆ,[೩೯] ದೀರ್ಘಕಾಲೀನ ಪಂದ್ಯಗಳು ತೊಂದರೆಯುಂಟುಮಾಡಬಹುದು ಎಂಬ ಟೀಕೆಗಳಿಗೆ ಉತ್ತರಿಸುವ ಸಲುವಾಗಿ, ಬದಲಿ ನಿಗದಿತ ಸಮಯದ ಪಂದ್ಯಾವಳಿಗಳ ಸರಣಿಯನ್ನು ಮ್ಯಾಚ್‌ರೂಮ್‌ ಸ್ಪೋರ್ಟ್‌ನ ಅಧ್ಯಕ್ಷ ಬ್ಯಾರಿ ಹರ್ನ್‌ ಆಯೋಜಿಸಿದರು. ಹೊಡೆತ-ಸಮಯದ ಪ್ರೀಮಿಯರ್‌ ಲೀಗ್‌ ಸ್ನೂಕರ್‌ ಅನ್ನು ಸ್ಥಾಪಿಸಿ, ಯುನೈಟೆಡ್‌ ಕಿಂಗ್‌ಡಂ‌ನ ವಾಡಿಕೆಯ ತಾಣಗಳಲ್ಲೇ ಏಳು ಆಟಗಾರರನ್ನು ಸ್ಪರ್ಧಿಸಲು ಆಹ್ವಾನಿಸಲಾಯಿತು, ಹಾಗೂ ಸ್ಕೈ ಸ್ಪೋರ್ಟ್ಸ್‌ನಲ್ಲಿ ಪ್ರಸಾರ ಮಾಡಲಾಯಿತು. ಆಟಗಾರರಿಗೆ ಪ್ರತಿ ಹೊಡೆತಕ್ಕೆ ಇಪ್ಪತ್ತೈದು ಸೆಕೆಂಡ್‌ಗಳ ಕಾಲಾವಕಾಶವಿರುತ್ತದೆ, ಪ್ರತಿ ಆಟಗಾರನ ಪ್ರತಿ ಪಂದ್ಯಕ್ಕೆ ಐದು ಮೀರಿದ-ಕಾಲಸೂಚಿಗಳಿದ್ದವು. ಈ ಮಾದರಿಯ ಪಂದ್ಯಾವಳಿಯಲ್ಲಿ ಸ್ವಲ್ಪಮಟ್ಟಿಗೆ ಯಶಸ್ಸು ಸಿಕ್ಕಿತಾದರೂ, ವಾಡಿಕೆಯ ಶ್ರೇಯಾಂಕಿತ ಪಂದ್ಯಾವಳಿಗಳಷ್ಟು ಮಾಧ್ಯಮದ ಗಮನ ಹಾಗೂ ಪ್ರತಿಷ್ಠೆ ಪಡೆಯಲಿಲ್ಲ.

ವಿಶ್ವ ಶ್ರೇಯಾಂಕ ಪಡೆಯದ ಹಾಗೂ ಕಿರುತೆರೆ ಪ್ರಸಾರ ಕಾಣದ ಕಡಿಮೆ ಪ್ರಾಮುಖ್ಯತೆಯ ಯಾವುದೇ ಇತರ ಅನೇಕ ಪಂದ್ಯಾವಳಿಗಳೂ ಇವೆ. ಇವು ಪಂಚಾಂಗಗಳು ಹಾಗೂ ಪ್ರಾಯೋಜಕರ ಅನುಸಾರ ಪ್ರತಿವರ್ಷ ಬದಲಾಗುವ ಸಾಧ್ಯತೆ ಇರುತ್ತದೆ.

ಸಾಧನಗಳು[ಬದಲಾಯಿಸಿ]

ಚಾಕ್‌/ಸೀಮೆಸುಣ್ಣ
ದಾಂಡಿ/ ಕೋಲಿನ ತುದಿಗೆ 'ಚಾಕ್‌/ಸೀಮೆಸುಣ್ಣವನ್ನು' ಹಚ್ಚಿ ಕೋಲು/ದಾಂಡು ಹಾಗೂ ಕೋಲು/ದಾಂಡು-ಚೆಂಡುಗಳ ನಡುವೆ ಉತ್ತಮ ಸಂಪರ್ಕವಿರುವಂತೆ ಮಾಡಲಾಗುತ್ತದೆ.
ಕೋಲು/ದಾಂಡು
ಮರ ಅಥವಾ ನಾರುಗಾಜಿನಿಂದ ಮಾಡಿರುವ ಕೋಲು/ದಾಂಡು -ಚೆಂಡನ್ನು ತುದಿಯ ಮೂಲಕ ಹೊಡೆಯಲು ಬಳಸುವ ದಂಡ.
ವಿಸ್ತರಣ
ದಾಂಡಿ/ ಕೋಲಿನ ಹಿಂಬದಿಯ ಮೇಲೆ ಅಥವಾ ತಿರುಪಿನ ಮೂಲಕ ಕೂಡಿಕೊಂಡು ಅದನ್ನು ಲಂಬಗೊಳಿಸುವ ಸಣ್ಣ ದಂಡ. ಕೋಲು/ದಾಂಡು-ಚೆಂಡು ಆಟಗಾರನಿಗಿಂತ ದೂರವಿರುವಂತಹಾ ಹೊಡೆತಗಳಲ್ಲಿ ಇದನ್ನು ಬಳಸಲಾಗುತ್ತದೆ.
ಊರೆ
ಸಾಮಾನ್ಯ ವಿಸ್ತರಣೆಯ ನಂತರವೂ ಕೋಲು/ದಾಂಡು ಚೆಂಡು ದೂರವಿದ್ದಾಗ ದಾಂಡಿ/ ಕೋಲಿಗೆ ಆಸರೆ ಒದಗಿಸಲು ಬಳಸುವ X-ಆಕೃತಿಯ ತಲೆಯೊಂದಿಗಿರುವ ಕೋಲು/ದಾಂಡು.
ಕೊಕ್ಕೆ ಊರೆ
ಸಾಧಾರಣ ಊರೆಯ ತರಹವೇ ಇರುವ ಆದರೆ ಲೋಹದ ಕೊಕ್ಕೆಯನ್ನು ತುದಿಯಲ್ಲಿ ಹೊಂದಿರುವ ಊರೆ. ಮತ್ತೊಂದು ಚೆಂಡಿನ ಆಸುಪಾಸಿನಲ್ಲಿ ಊರೆಯನ್ನು ಹೊಂದಿಸಲು ಇದನ್ನು ಬಳಸಲಾಗುತ್ತದೆ. ಈ ಕೊಕ್ಕೆ ಊರೆಯು ಸ್ನೂಕರ್‌ನಲ್ಲಿನ ಇತ್ತೀಚಿನ ಆವಿಷ್ಕಾರವಾಗಿದೆ.
ಸ್ಪೈಡರ್‌/ಜೇಡ
ಸಾಧಾರಣ ಊರೆಯ ತರಹವೇ ಇರುವ ಆದರೆ ಕಮಾನಿನ ಆಕೃತಿಯ ತಲೆಯಿರುವ ಊರೆ; ಇದನ್ನು ದಾಂಡಿ/ಕೋಲಿನ ತುದಿಯನ್ನು ಕೋಲು/ದಾಂಡು-ಚೆಂಡಿಗಿಂತ ಎತ್ತರಿಸಿ ಅದಕ್ಕೆ ಆಧಾರ ನೀಡಲು ಬಳಸುತ್ತಾರೆ.
ರಾಜಹಂಸ/ಸ್ವಾನ್‌ (ಅಥವಾ ರಾಜಹಂಸ/ಸ್ವಾನ್‌ನ-ಕುತ್ತಿಗೆ ಹೊಂದಿರುವ ಸ್ಪೈಡರ್‌/ಜೇಡ)
ವಿಸ್ತರಿಸಿದ ಕುತ್ತಿಗೆ ಹಾಗೂ ಕೊನೆಯಲ್ಲಿ ಕವಲೊಡೆದ ತ್ರಿಶೂಲವನ್ನು ಹೊಂದಿರುವ ಊರೆಯಾದ ಈ ಉಪಕರಣವನ್ನು ಚೆಂಡುಗಳ ಗುಂಪಿನ ಮೇಲೆ ಹೆಚ್ಚುವರಿ ಹೊಡೆತದ ದೂರವನ್ನು ನೀಡಲು ಬಳಸುತ್ತಾರೆ.
ತ್ರಿಕೋನಾಕೃತಿ/ಪತ್ತಿಗೆ
ವಿರಾಮದ ನಂತರ ಸುತ್ತನ್ನು ಆರಂಭಿಸುವಾಗ ಅಗತ್ಯ ಆಕಾರದಲ್ಲಿ ಕೆಂಪು ಚೆಂಡುಗಳನ್ನು ಜೋಡಿಸಲು ಬಳಸುವ ಉಪಕರಣ.
ವಿಸ್ತರಿತ ಊರೆ
ಸಾಧಾರಣ ಊರೆಯ ತರಹವೇ ಇರುತ್ತದೆ, ಆದರೆ ಬೊಡ್ಡೆಯ ತುದಿಯಲ್ಲಿ ಮೂರು ಅಡಿಗಳಷ್ಟು ನೀಳಗೊಳಿಸಲು ಸಾಧ್ಯವಾಗುವಂತಹಾ ವ್ಯವಸ್ಥೆ ಹೊಂದಿರುತ್ತದೆ.
ವಿಸ್ತರಿತ ಸ್ಪೈಡರ್‌/ಜೇಡ
ಸ್ವಾನ್‌ ಹಾಗೂ ಸ್ಪೈಡರ್‌ಗಳ ಮಿಶ್ರಉಪಕರಣ. ಕೆಂಪು ಚೆಂಡುಗಳ ದೊಡ್ಡ ಪ್ಯಾಕ್‌ /ಪಿಂಡಿಗಳ ನಡುವೆ ಸಂಪರ್ಕ ಸಾಧಿಸುವುದು ಇದರ ಬಳಕೆಯ ಉದ್ದೇಶ. ಇತ್ತೀಚಿನ ದಿನಗಳಲ್ಲಿ ವೃತ್ತಿಪರ ಸ್ನೂಕರ್‌ನಲ್ಲಿ ಅಪರೂಪವಾಗಿದ್ದು ಒಂದು ಅಥವಾ ಹೆಚ್ಚಿನ ಚೆಂಡುಗಳ ಇರುವಿಕೆಯು ಸ್ಪೈಡರ್‌ಅನ್ನು ಆಟಗಾರ ಇಚ್ಚೆ ಪಡುವ ಕಡೆ ಇಡಲು ಸಾಧ್ಯವಾಗದಾಗ ಇದನ್ನು ಬಳಸಬಹುದು.
ಹಾಫ್‌ ಬಟ್‌
ಸಾಧಾರಣವಾಗಿ ಮೇಜಿನ ಪಾರ್ಶ್ವಗಳ ಕೆಳಗೆ ಇರಿಸಲ್ಪಡುವ, ಹಾಫ್‌ ಬಟ್‌ ಮೇಜಿನಷ್ಠೇ ಉದ್ದವಿರುವ ಊರೆ ಹಾಗೂ ಕೋಲು/ದಾಂಡು ಚೆಂಡನ್ನು ಮೇಜಿನ ಇಡೀ ಉದ್ದವೇ ನಿಜವಾದ ಸಮಸ್ಯೆಯೆನಿಸುವ ಹಾಗೆ ಮಾಡಬೇಕಾದ ಸಂದರ್ಭಗಳಲ್ಲಿ ಮಾತ್ರ ಬಳಸುವ ದಾಂಡಿ/ ಕೋಲಿನ ಸಂಯೋಜನೆ.
ಬಾಲ್‌ ಮಾರ್ಕರ್‌
'D' ಆಕಾರದ ಕೊಯ್ತವಿರುವ ರೆಫರಿ (1) ಚೆಂಡಿನ ಸ್ಥಾನ ಗುರುತಿಸಲು ಅದರ ಮುಂದಿಡಲು ಬಳಸಬಹುದಾದ ಬಹೂಪಯೋಗಿ ಉಪಕರಣ. ನಂತರ ಅವರು ಚೆಂಡನ್ನು ಸ್ವಚ್ಛಗೊಳಿಸಲು ತೆಗೆಯಬಹುದು; (2) ಯಾವುದೇ ಚೆಂಡು ಇತರ ಯಾವುದೇ ಬಣ್ಣದ ಚೆಂಡನ್ನು ಅದರ ಸ್ಥಾನದಲ್ಲಿಡಲು ಅಡ್ಡಿಯುಂಟು ಮಾಡುತ್ತಿದೆಯೇ ಎಂದು ನಿರ್ಧರಿಸಲು; (3) ಕೋಲು/ದಾಂಡು ಚೆಂಡು "ಬಾಲ್‌ ಆನ್‌"ನ ತುತ್ತತುದಿಯನ್ನು ಮುಟ್ಟಬಲ್ಲದೇ ಎಂದು ನಿರ್ಧರಿಸಲು ಮುಕ್ತ ಚೆಂಡಿನ ಅವಕಾಶ ನೀಡುವಾಗ ಬಳಸಲಾಗುತ್ತದೆ (ಸಂಭಾವ್ಯ ಅಡ್ಡವಾಗಿರುವ ಚೆಂಡಿನ ಪಕ್ಕದಲ್ಲಿಡುವ ಮೂಲಕ).

ಪ್ರಮುಖ ಆಟಗಾರರು[ಬದಲಾಯಿಸಿ]

ಜೋ ಡೇವಿಸ್‌ರೊಂದಿಗೆ 1930ರ ದಶಕದಲ್ಲಿ ಆರಂಭವಾಗಿ ಇಂದಿನವರೆಗೂ ಮುಂದುವರೆದಿರುವ ವೃತ್ತಿಪರ ಯುಗದಲ್ಲಿ, ಸಾಪೇಕ್ಷವಾಗಿ ಅಲ್ಪ ಸಂಖ್ಯೆಯ ಆಟಗಾರರಷ್ಟೇ ಶ್ರೇಷ್ಟಮಟ್ಟ ಮುಟ್ಟಲು ಸಾಧ್ಯವಾಗಿದ್ದು.[೪೦] ನೈಸರ್ಗಿಕ ಸಾಮರ್ಥ್ಯದೊಂದಿಗೆ ಅನೇಕ ವರ್ಷಗಳ ಸಮರ್ಪಣೆ ಹಾಗೂ ಪ್ರಯತ್ನಗಳು ಅಗತ್ಯವಾಗುವಂತಹಾ ಪಂದ್ಯ ಮಾನಕಗಳ ಕಾರಣ ಸ್ನೂಕರ್‌ ಗಣ್ಯರ ಸ್ಥಾನ ಪಡೆಯುವುದು ಹಾಗೂ ಅದನ್ನು ಉಳಿಸಿಕೊಳ್ಳುವುದು ಕಠಿಣ ಕಾರ್ಯ.[೪೧]

ನಿರ್ದಿಷ್ಟ ಆಟಗಾರರು ದಶಕಗಳ ಕಾಲ ಪಂದ್ಯಗಳಲ್ಲಿ ಸಾರ್ವಭೌಮತೆ ಮೆರೆದರು. ರೇ ರೇರ್ಡನ್‌ 1970ರ ದಶಕದುದ್ದಕ್ಕೂ ಸ್ಟೀವ್‌ ಡೇವಿಸ್‌ 1980ರ ದಶಕದುದ್ದಕ್ಕೂ ಹಾಗೂ ಸ್ಟೀಫನ್‌ ಹೆಂಡ್ರಿ 1990ರ ದಶಕದುದ್ದಕ್ಕೂ, ಅನುಕ್ರಮವಾಗಿ 6, 6 ಹಾಗೂ 7 ವಿಶ್ವ ಚಾಂಪಿಯನ್‌ಷಿಪ್‌ಗಳನ್ನು ಗೆದ್ದು ಅಗ್ರಗಣ್ಯ ಆಟಗಾರರೆಂದು ಪರಿಗಣಿತರಾಗಿದ್ದಾರೆ. ರಾನ್ನಿ O'ಸುಲ್ಲಿವಾನ್‌ ಮೂರು ಬಾರಿ ಹಾಗೂ ಮಾರ್ಕ್‌ ವಿಲಿಯಮ್ಸ್‌ ಮತ್ತು ಜಾನ್‌ ಹಿಗ್ಗಿನ್ಸ್‌ ಎರಡು ಬಾರಿ ಗೆಲ್ಲುವುದರೊಂದಿಗೆ 2000ರ ದಶಕದಲ್ಲಿ ಯಾರೂ ಪ್ರಾಬಲ್ಯ ಹೊಂದಲಿಲ್ಲ ; 1998ರಲ್ಲಿ ಗೆದ್ದಿದ್ದನ್ನೂ ಸೇರಿಸಿ ಹಿಗ್ಗಿನ್ಸ್‌ ಒಟ್ಟಾರೆ ಮೂರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ.[೪೨]

ಮಾರ್ಪಾಟುಗಳು[ಬದಲಾಯಿಸಿ]

ಇವನ್ನೂ ಗಮನಿಸಿ[ಬದಲಾಯಿಸಿ]

ಆಕರಗಳು[ಬದಲಾಯಿಸಿ]

 1. ೧.೦ ೧.೧ ೧.೨ "The Rules". World Snooker. Retrieved 2009-05-03.
 2. ೨.೦ ೨.೧ ಎವರ್ಟನ್‌, C. "ಟೇಕ್‌ ಸ್ನೂಕರ್‌ ಟು ದ ವರ್ಲ್ಡ್‌", BBC ಸ್ಪೋರ್ಟ್‌ , 5 ಮೇ 2002, (ಪಡೆದಿದ್ದು 24 ಫೆಬ್ರವರಿ 2007)
 3. ರೇರ್ಡನ್‌, R. "ವೇರ್‌ ಡಸ್‌ ರಾನ್ನಿ ರ್ರ್ಯಾಂಕ್‌?", BBC ಸ್ಪೋರ್ಟ್‌ , 21 ಫೆಬ್ರವರಿ 2005, (ಪಡೆದಿದ್ದು 25 ಫೆಬ್ರವರಿ 2007)
 4. ೪.೦ ೪.೧ "ಚೀನಾ ಇನ್‌ ಡಿಂಗ್‌'ಸ್‌ ಹ್ಯಾಂಡ್ಸ್", BBC ಸ್ಪೋರ್ಟ್‌ , 22 ಜನವರಿ 2007, (ಪಡೆದಿದ್ದು 25 ಫೆಬ್ರವರಿ 2007)
 5. ೫.೦ ೫.೧ ೫.೨ ೫.೩ ಮೌಮೆ, C." Archived 2008-09-29 ವೇಬ್ಯಾಕ್ ಮೆಷಿನ್ ನಲ್ಲಿ.ಸ್ಪೋರ್ಟಿಂಗ್‌ ವರ್ನಾಕ್ಯುಲರ್‌ 11. Archived 2008-09-29 ವೇಬ್ಯಾಕ್ ಮೆಷಿನ್ ನಲ್ಲಿ.ಸ್ನೂಕರ್‌" Archived 2008-09-29 ವೇಬ್ಯಾಕ್ ಮೆಷಿನ್ ನಲ್ಲಿ., ದ ಇಂಡಿಪೆಂಡೆಂಟ್‌ , 26 ಏಪ್ರಿಲ್‌ 1999, (ಪಡೆದಿದ್ದು 25 ಫೆಬ್ರವರಿ 2007)
 6. ಬೇಡಿ, R. [೧]"ಓಪನಿಂಗ್‌ ಮೀಟ್‌ ಫೈಂಡ್ಸ್‌ ಇಂಡಿಯಾಸ್‌ ಓನ್ಲೀ ಹಂಟ್‌ ಇನ್‌ ಪಿಂಕ್‌", ದ ಟೆಲಿಗ್ರಾಫ್‌ , 19 ಜುಲೈ 2004, (ಪಡೆದಿದ್ದು 25 ಫೆಬ್ರವರಿ 2007)
 7. ೭.೦ ೭.೧ ಷಾಮೊಸ್‌ , ಮೈಕ್ (1993), ದ ಕಂಪ್ಲೀಟ್‌ ಬುಕ್‌ ಆಫ್‌‌ ಬಿಲಿಯರ್ಡ್ಸ್‌ . ISBN 0-03-063748-1
 8. ಅಪರಿಚಿತ ಲೇಖಕ "ಆರಿಜಿನ್ಸ್‌ ಆಫ್‌ ದ ಗೇಮ್‌ ಆಫ್‌ ಸ್ನೂಕರ್‌", ಟೈಟನ್‌ ಕ್ರೀಡೆಗಳು , ಅಜ್ಞಾತ ದಿನಾಂಕ, (ಪಡೆದಿದ್ದು 25 ಫೆಬ್ರವರಿ 2007), (ರಕ್ಷಿತ ಆವೃತ್ತಿ)
 9. ಅಪರಿಚಿತ ಲೇಖಕ "ಸ್ನೂಕರ್‌ ಟೈಮ್‌ಲೈನ್‌" "ಜೋ ಡೇವಿಸ್‌ ವಿಲ್‌ ರೀಇನ್‌ವೆಂಟ್‌ ದಿಸ್‌ ಆಫ್ಟರ್‌-ಡಿನ್ನರ್‌ ಪಾಸ್‌ಟೈಂ ಅಂಡ್‌ ಬಿಕಂ ವರ್ಲ್ಡ್‌ ಚಾಂಪಿಯನ್‌" , cuesnviews.co.uk , ಅಜ್ಞಾತ ದಿನಾಂಕ, (ಪಡೆದಿದ್ದು 24 ಫೆಬ್ರವರಿ 2007), (ರಕ್ಷಿತ ಆವೃತ್ತಿ)
 10. "ಪಾಟ್‌ ಬ್ಲಾಕ್‌ ರಿಟರ್ನ್ಸ್‌", BBC ಸ್ಪೋರ್ಟ್‌ , 27 ಅಕ್ಟೋಬರ್‌ 2005, ಪಡೆದಿದ್ದು 24 ಫೆಬ್ರವರಿ 2007
 11. ಪಾರ್ಟರ್, H. " Archived 2009-08-13 ವೇಬ್ಯಾಕ್ ಮೆಷಿನ್ ನಲ್ಲಿ.ಕ್ಯೂ ಚೀನಾ Archived 2009-08-13 ವೇಬ್ಯಾಕ್ ಮೆಷಿನ್ ನಲ್ಲಿ., ಟೈಂ ಮ್ಯಾಗಜೀನ್‌ , 20 ಜೂನ್‌ 2008, (ಪಡೆದಿದ್ದು 23 ಜೂನ್‌ 2008)
 12. ಅಪರಿಚಿತ ಲೇಖಕ, "ಪಾಟ್‌ ಬ್ಲಾಕ್‌ ರೇಟಿಂಗ್ಸ್" "ಸರ್‌ಪ್ರೈಸಿಂಗ್‌ಲಿ, ದ ಪ್ರೋಗ್ರಾಂ ರೇಸ್‌ಡ್‌ ಟು ಸೆಕೆಂಡ್ ಪ್ಲೇಸ್‌ ಇನ್‌ BBC2 ರೇಟಿಂಗ್ಸ್‌" , ಅಜ್ಞಾತ ದಿನಾಂಕ, (ಪಡೆದಿದ್ದು 24 ಫೆಬ್ರವರಿ 2007) (ರಕ್ಷಿತ ಆವೃತ್ತಿ)
 13. ಅಪರಿಚಿತ ಲೇಖಕ "1978 - ದ ವರ್ಲ್ಡ್‌ ಸ್ನೂಕರ್‌ ಚಾಂಪಿಯನ್‌ಷಿಪ್ಸ್‌‌", "1977ರ ಹಾಗೆ, ಆಟಗಾರರು ಯಾವುದೇ ತೊಂದರೆಯಿಲ್ಲದೇ ಸ್ಟಷ್ಟವಾಗಿ ಕಾಣಿಸುವಂತೆ ಹೊಸ ದೀಪದ ವ್ಯವಸ್ಥೆ ಮಾಡಿದ್ದರೂ, ಮುಂದಿನ ವರ್ಷ ಆಬ್ರೆ ಸಿಂಗರ್‌ 16 ದಿನಗಳ ಕಾಲ ಪ್ರತಿದಿನ ಒಂದು ಗಂಟೆಗಳ ಕಾಲ ಪ್ರಮುಖಾಂಶಗಳ ಪ್ರಸಾರವೂ ಸೇರಿದಂತೆ ವಿಶ್ವ ಚಾಂಪಿಯನ್‌ಷಿಪ್‌ಗಳ ಪ್ರಸಾರವನ್ನು ಪೂರ್ಣ ಪ್ರಮಾಣದಲ್ಲಿ ವರದಿ ಮಾಡಲು ಒಪ್ಪಿಕೊಂಡಿದ್ದರು" , ಅಜ್ಞಾತ ದಿನಾಂಕ, (ಪಡೆದಿದ್ದು 24 ಫೆಬ್ರವರಿ 2007), (ರಕ್ಷಿತ ಆವೃತ್ತಿ)
 14. ಮೆಕ್‌ಇನ್ನೆಸ್‌, P."ಥಾಚ್‌ ಆಫ್‌ ದ ಡೇ", ದ ಗಾರ್ಡಿಯನ್‌ , 10 ಫೆಬ್ರವರಿ 2004, (ಪಡೆದಿದ್ದು 24 ಫೆಬ್ರವರಿ 2007)
 15. "1985: ದ ಬ್ಲಾಕ್‌ ಬಾಲ್‌ ಫೈನಲ್" BBC ಸ್ಪೋರ್ಟ್‌
 16. ೧೬.೦ ೧೬.೧ ಆನ್‌ಸ್ಟೆಡ್‌, M."ಸ್ನೂಕರ್‌ ಫೈಂಡ್ಸ್‌ ಸ್ಪಾನ್ಸರ್‌ ವಿತ್‌ ಡೀಪ್‌ ಪಾಕೆಟ್ಸ್‌", ದ ಗಾರ್ಡಿಯನ್‌ , 19 ಜನವರಿ 2006, (ಪಡೆದಿದ್ದು 24 ಫೆಬ್ರವರಿ 2007), (ರಕ್ಷಿತ ಆವೃತ್ತಿ)
 17. "ಕುಡ್‌ ಡಿಂಗ್‌ ಬಿ ದ ಸ್ನೂಕರ್‌'ಸ್‌ ಸೇವಿಯರ್‌?", BBC ಸ್ಪೋರ್ಟ್‌ , 4 ಏಪ್ರಿಲ್‌ 2005, (ಪಡೆದಿದ್ದು 25 ಫೆಬ್ರವರಿ 2007)
 18. "ವರ್ಲ್ಡ್‌ ಟೈಟಲ್‌ ವಿಕ್ಟರಿ ಡಿಲೈಟ್ಸ್‌ ಡಾಟ್", BBC ಸ್ಪೋರ್ಟ್‌ , (ಪಡೆದಿದ್ದು 24 ಫೆಬ್ರವರಿ 2007)
 19. "ಡಿಂಗ್‌ ಕಂಪೈಲ್ಸ್‌ ಮ್ಯಾಕ್ಸಿಮಮ್‌ ಅಟ್‌ ಮಾಸ್ಟರ್ಸ್‌", BBC ಸ್ಪೋರ್ಟ್‌ , (ಪಡೆದಿದ್ದು 24 ಫೆಬ್ರವರಿ 2007)
 20. ಪೀಟರ್‌ ಇಯೆಟ್ಸವಾರ್ಟ್, "ಥರ್ಸ್‌ಟನ್‌ ಸ್ನೂಕರ್‌ ಟೇಬಲ್‌ ಮೇಕರ್ಸ್‌", ಪೂರ್ಣಪ್ರಮಾಣದ ಮೇಜಿಗೆ ಶಿಫಾರಿತ ಕೋಣೆ ಅಳತೆ 22 ft x 16 ft , ಅಜ್ಞಾತ ದಿನಾಂಕ, (ಪಡೆದಿದ್ದು 25 ಫೆಬ್ರವರಿ 2007), (ರಕ್ಷಿತ ಆವೃತ್ತಿ)
 21. "WPBSA v TSN", BBC ಸ್ಪೋರ್ಟ್‌ , 16 ಫೆಬ್ರವರಿ 2001, (ಪಡೆದಿದ್ದು 25 ಫೆಬ್ರವರಿ 2007), (ರಕ್ಷಿತ ಆವೃತ್ತಿ)
 22. "ಸ್ನೂಕರ್‌'ಸ್‌ ಬಿಗ್ಗೆಸ್ಟ್‌ ಬ್ರೇಕ್‌", BBC ಸ್ಪೋರ್ಟ್‌ , 7 ಡಿಸೆಂಬರ್‌ 2000, (ಪಡೆದಿದ್ದು 25 ಫೆಬ್ರವರಿ 2007), (ರಕ್ಷಿತ ಆವೃತ್ತಿ)
 23. "ಸ್ನೂಕರ್‌ ಅಥಾರಿಟೀಸ್‌ ಸರ್ವೈವ್‌ ಬಿಡ್‌", BBC ಸ್ಪೋರ್ಟ್‌ , 13 ನವೆಂಬರ್‌‌ 2002, (ಪಡೆದಿದ್ದು 25 ಫೆಬ್ರವರಿ 2007), (ರಕ್ಷಿತ ಆವೃತ್ತಿ)
 24. "ಸ್ನೂಕರ್‌ ಅಟ್‌ ದ ಕ್ರಾಸ್‌ರೋಡ್ಸ್‌", BBC ಸ್ಪೋರ್ಟ್‌ , 14 ನವೆಂಬರ್‌‌ 2002, (ಪಡೆದಿದ್ದು 25 ಫೆಬ್ರವರಿ 2007), (ರಕ್ಷಿತ ಆವೃತ್ತಿ)
 25. "IBSF", (ಪಡೆದಿದ್ದು 24 ಫೆಬ್ರವರಿ 2007), (ರಕ್ಷಿತ ಆವೃತ್ತಿ)
 26. WPBSA "ಪ್ರೊಫೆಷನಲ್‌ ಟೂರ್‌ ರ್ರ್ಯಾಂಕಿಂಗ್‌ ಪಾಯಿಂಟ್ಸ್‌", ವರ್ಲ್ಡ್‌ ಸ್ನೂಕರ್‌ , (ಪಡೆದಿದ್ದು 25 ಜನವರಿ 2010)
 27. ೨೭.೦ ೨೭.೧ "ಸ್ವೈಲ್‌ ಟಾರ್ಗೆಟಿಂಗ್‌ ಪ್ಲೇಸ್‌ ಇನ್‌ ಟಾಪ್ 16", BBC ಸ್ಪೋರ್ಟ್‌ , 1 ಆಗಸ್ಟ್‌‌ 2006, (ಪಡೆದಿದ್ದು 25 ಫೆಬ್ರವರಿ 2007)
 28. "ದ ಸೀಡ್ಸ್‌ ಆಫ್‌ ಸಕ್ಸೆಸ್", BBC ಸ್ಪೋರ್ಟ್‌ , 24 ನವೆಂಬರ್‌‌ 2000, (ಪಡೆದಿದ್ದು 25 ಫೆಬ್ರವರಿ 2007), (ರಕ್ಷಿತ ಆವೃತ್ತಿ)
 29. "ವರ್ಲ್ಡ್‌ ಟೈಟಲ್‌ ವಿಕ್ಟರಿ ಡಿಲೈಟ್ಸ್‌ ಡಾಟ್‌", BBC ಸ್ಪೋರ್ಟ್‌ , 2 ಮೇ 2006, (ಪಡೆದಿದ್ದು 25 ಫೆಬ್ರವರಿ 2007)
 30. "ಹ್ಯೂಜ್‌ ಫೈನಾನ್ಷಿಯಲ್‌ ಬ್ಲೋ ಹಿಟ್ಸ್‌ ಸ್ನೂಕರ್‌ ", BBC ಸ್ಪೋರ್ಟ್‌, 6 ಆಗಸ್ಟ್‌‌ 2008, (ಪಡೆದಿದ್ದು 6 ಆಗಸ್ಟ್‌‌ 2008)
 31. "ಕ್ರೂಸಿಬಲ್‌ ಈವೆಂಟ್‌ ಗೆಟ್ಸ್‌ ನ್ಯೂ ಸ್ಪಾನ್ಸರ್‌ ", BBC ಸ್ಪೋರ್ಟ್‌ , 15 ಜನವರಿ 2006, (ಪಡೆದಿದ್ದು 25 ಫೆಬ್ರವರಿ 2007), (ರಕ್ಷಿತ ಆವೃತ್ತಿ)
 32. ವರ್ಲ್ಡ್‌ ಸ್ನೂಕರ್‌ ಅನೌನ್ಸ್‌ಮೆಂಟ್ಸ್‌ : Betfred.com ವಿಶ್ವ ಸ್ನೂಕರ್‌ ಚಾಂಪಿಯನ್‌ಷಿಪ್‌ನ ಹೆಸರಿಸಿದ ಪ್ರಶಸ್ತಿ ಪ್ರಾಯೋಜಕ ಸಂಸ್ಥೆ
 33. "ವರ್ಲ್ಡ್‌'ಸ್‌ ಬೆಸ್ಟ್‌ ರೆಡಿ ಫಾರ್‌ ಕ್ರೂಸಿಬಲ್‌", BBC ಸ್ಪೋರ್ಟ್‌ , 13 ಏಪ್ರಿಲ್‌ 2006, (ಪಡೆದಿದ್ದು 25 ಫೆಬ್ರವರಿ 2007), (ರಕ್ಷಿತ ಆವೃತ್ತಿ)
 34. "ಡೊಹೆರ್ಟಿ ಸೆಟ್ಸ್‌ ಔಟ್‌ ಟು ರೀಗೇನ್‌ ಗ್ರೇಟೆಸ್ಟ್‌ ಪ್ರೈಜ್‌ " Archived 2008-10-05 ವೇಬ್ಯಾಕ್ ಮೆಷಿನ್ ನಲ್ಲಿ., ದ ಇಂಡಿಪೆಂಡೆಂಟ್‌ , 20 ಏಪ್ರಿಲ್‌ 2001, (ಪಡೆದಿದ್ದು 25 ಫೆಬ್ರವರಿ 2007)
 35. "ಸ್ನೂಕರ್‌ ಸೈನ್ಸ್‌ ಫೈವ್‌-ಇಯರ್‌ BBC ಡೀಲ್", BBC ಸ್ಪೋರ್ಟ್‌ , 26 ಅಕ್ಟೋಬರ್‌‌ 2005, (ಪಡೆದಿದ್ದು 25 ಫೆಬ್ರವರಿ 2007, (ರಕ್ಷಿತ ಆವೃತ್ತಿ)
 36. "ಯೂರೋಸ್ಪೋರ್ಟ್‌ ಪಾಟ್ಸ್‌ TV ಸ್ನೂಕರ್‌ ರೈಟ್ಸ್‌", ದ ಗಾರ್ಡಿಯನ್‌ , 27 ಏಪ್ರಿಲ್‌ 2006, (ಪಡೆದಿದ್ದು 25 ಫೆಬ್ರವರಿ 2007, ನೊಂದಾಯಿಕೆ ಅಥವಾ BugMeNot ಅಗತ್ಯವಿದೆ)
 37. "ಸ್ನೂಕರ್‌ ಫೈಂಡ್ಸ್‌ ನ್ಯೂ ಮಾಸ್ಟರ್ಸ್‌ ಸ್ಪಾನ್ಸರ್", BBC ಸ್ಪೋರ್ಟ್‌ , 13 ಜನವರಿ 2006, (ಪಡೆದಿದ್ದು 25 ಫೆಬ್ರವರಿ 2007, (ರಕ್ಷಿತ ಆವೃತ್ತಿ)
 38. ಹ್ಯಾರಿಸ್‌, N. [೨] Archived 2007-11-19 ವೇಬ್ಯಾಕ್ ಮೆಷಿನ್ ನಲ್ಲಿ."ಆನ್‌ ಇಮೇಲ್‌ ಕಾನ್‌ವರ್ಸೇಷನ್‌ ವಿತ್‌ ಗ್ರೇಮ್‌ ಡಾಟ್‌ : 'ವಿ ನೀಡ್‌ ಆನ್‌ ಅಬ್ರಾಂವಿಚ್‌ ಟು ಟೇಕ್‌ ದ ಗೇಂ ಟು ಎ ನ್ಯೂ ಲೆವೆಲ್‌ " Archived 2007-11-19 ವೇಬ್ಯಾಕ್ ಮೆಷಿನ್ ನಲ್ಲಿ., ದ ಇಂಡಿಪೆಂಡೆಂಟ್‌ , 15 ಜನವರಿ 2007, (ಪಡೆದಿದ್ದು 25 ಫೆಬ್ರವರಿ 2007)
 39. ರೋನೆ, B. "ಟೂ ಡಲ್‌ ಟು ಮಿಸ್", ದ ಗಾರ್ಡಿಯನ್‌ , 27 ಅಕ್ಟೋಬರ್‌ 2006, (ಪಡೆದಿದ್ದು 25 ಫೆಬ್ರವರಿ 2007)
 40. "O'ಸುಲ್ಲಿವನ್‌ ಇನ್‌ ಎಕ್ಸಾಲ್ಟಡ್‌ ಕಂಪೆನಿ", BBC ಸ್ಪೋರ್ಟ್‌ , 10 ಮೇ 2002, (ಪಡೆದಿದ್ದು 25 ಫೆಬ್ರವರಿ 2007), (ರಕ್ಷಿತ ಆವೃತ್ತಿ)
 41. ಹಂಟರ್‌, P. "ಪುಟ್ಟಿಂಗ್‌ ಇನ್‌ ದ ಪ್ರಾಕ್ಟೀಸ್‌", BBC ಸ್ಪೋರ್ಟ್‌ , 5 ನವೆಂಬರ್‌‌ 2004, (ಪಡೆದಿದ್ದು 25 ಫೆಬ್ರವರಿ 2007)
 42. "ವರ್ಲ್ಡ್‌ ಸ್ನೂಕರ್‌ ಚಾಂಪಿಯನ್‌ಷಿಪ್‌ -ಹಿಸ್ಟರಿ" Archived 2008-07-02 ವೇಬ್ಯಾಕ್ ಮೆಷಿನ್ ನಲ್ಲಿ., ವಿಶ್ವ ಸ್ನೂಕರ್‌ ಅಧಿಕೃತ ಜಾಲತಾಣ , (ಪಡೆದಿದ್ದು 26 ಸೆಪ್ಟೆಂಬರ್‌ 2007)

ಹೊರಗಿನ ಕೊಂಡಿಗಳು[ಬದಲಾಯಿಸಿ]