ಸ್ಥಾಯೀ ವಿದ್ಯುದ್ವಿಜ್ಞಾನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸ್ಥಾಯೀ ವಿದ್ಯುದ್ವಿಜ್ಞಾನವು ಸ್ಥಾಯೀ ವಿದ್ಯುದಾವೇಶಗಳನ್ನು ಅಧ್ಯಯಿಸುವ ವಿಜ್ಞಾನಶಾಖೆ (ಎಲೆಕ್ಟ್ರೊಸ್ಟ್ಯಾಟಿಕ್ಸ್). ವಿದ್ಯುತ್ತಟಸ್ಥವಾಗಿರುವ ಅಥವಾ ವಿದ್ಯುದಾವಿಷ್ಟವಲ್ಲದ ವಸ್ತುವಿನಲ್ಲಿ ಋಣಾತ್ಮಕ ಆವೇಶಗಳಷ್ಟೇ ಅಲ್ಲದೆ ಧನಾತ್ಮಕ ಆವೇಶಗಳೂ ಇರುತ್ತವೆ. ವಿದ್ಯುತ್ತಟಸ್ಥವಲ್ಲದ ಅಥವಾ ವಿದ್ಯುದಾವಿಷ್ಟ ವಸ್ತುವಿನಲ್ಲಿ ಈ ಆವೇಶಗಳ ಪೈಕಿ ಯಾವುದಾದರೂ ಒಂದರ ಕೊರತೆ ಮತ್ತು ಇನ್ನೊಂದರ ಮಿಗತೆ ಇರುತ್ತವೆ. ಯಾವುದೇ ಸ್ವತಂತ್ರ ವ್ಯವಸ್ಥೆಯಲ್ಲಿ ಆವೇಶಗಳ ಮರುಹಂಚಿಕೆ ಆದರೂ ಆವೇಶಗಳ ಮೊತ್ತ ಬದಲಾಗದೆ ಸ್ಥಿರವಾಗಿರುತ್ತದೆ. ಈ ವಿದ್ಯಮಾನವೇ ವಿದ್ಯುದಾವೇಶ ಸಂರಕ್ಷಣೆ (ಕನ್ಸರ್ವೇಶನ್ ಆಫ್ ಚಾರ್ಜ್). ವಿದ್ಯುದಾವೇಶಗಳ ನಡುವೆ ಸದಾ ವರ್ತಿಸುತ್ತಿರುವ ಸ್ಥಾಯೀ ವಿದ್ಯುದ್ಬಲ (ಅಥವಾ ವಿದ್ಯುದ್ಬಲ) ಅವುಗಳ ನಡುವಿನ ಆಕರ್ಷಣೆ ಅಥವಾ ವಿಕರ್ಷಣೆಗಳಿಗೆ ಕಾರಣ. ವಿದ್ಯುತ್‌ಕ್ಷೇತ್ರ (ಎಲೆಕ್ಟ್ರಿಕ್ ಫೀಲ್ಡ್) ಮತ್ತು ವಿದ್ಯುದ್ವಿಭವ (ಎಲೆಕ್ಟ್ರಿಕ್ ಪೊಟೆನ್ಷಿಯಲ್) ಪ್ರಕಟವಾಗುವುದೂ ವಿದ್ಯುದಾವೇಶಗಳಿಂದಾಗಿಯೇ. ಯಾವುದೇ ವಿದ್ಯುತ್‌ಕ್ಷೇತ್ರದಲ್ಲಿ ಸ್ಥಾಯೀವಿದ್ಯುತ್ ಶಕ್ತಿ ನೆಲಸಿರುತ್ತದೆ. ಈ ಎಲ್ಲ ವಿಷಯಸಂಬಂಧೀ ಅಧ್ಯಯನಗಳು ಸ್ಥಾಯೀ ವಿದ್ಯುತ್ ವಿಜ್ಞಾನದ ವ್ಯಾಪ್ತಿಯಲ್ಲಿವೆ.

ಹೊರಗಿನ ಕೊಂಡಿಗಳು[ಬದಲಾಯಿಸಿ]

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: