ವಿಷಯಕ್ಕೆ ಹೋಗು

ಸ್ತ್ರೀ ಗಾನರೀಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಸ್ತ್ರೀ ಗಾನರೀಯ

[ಬದಲಾಯಿಸಿ]

ಸ್ತ್ರೀಯರಲ್ಲಿ ಈ ರೋಗ ಪುರುಷನಲ್ಲಿದ್ದಷ್ಟು ತೀವ್ರವಾಗಿರದೆ ಜನನೇಂದ್ರಿಯ ಮತ್ತು ಮೂತ್ರಾಂಗಗಳಿಗೆ ಮಾತ್ರ ಸೀಮಿತವಾಗಿರುತ್ತದೆ. ಮೂತ್ರನಾಳ, ಗರ್ಭಕೋಶಕಂಠ ಮತ್ತು ಭಗಗ್ರಂಥಿಗಳ ಮೇಲಿದ್ದ ಅಂಟು ಪೊರೆಯನ್ನು ಗಾನರೀಯ ಕ್ರಿಮಿ ಹೊಕ್ಕು ಅನೇಕ ರೀತಿಯ ಲಕ್ಷಣಗಳನ್ನು ಪ್ರದರ್ಶಿಸುತ್ತದೆ. ಪದೇಪದೇ ಮೂತ್ರವಿಸರ್ಜನೆ, ರಜಸ್ಸು ಚಕ್ರ ಬದಲಾಗುವಿಕೆ, ಒಂದು ಮಗುವಾದ ಬಳಿಕ ಬಂಜೆತನ ಮತ್ತು ಯೋನಿಯೊಳಗಿಂದ ಬಿಳಿಸ್ರಾವವಾಗುವುದು - ಇವು ಹೆಂಗಸರಲ್ಲಿ ಕಾಣಬರುವ ಮುಖ್ಯ ಲಕ್ಷಣಗಳು. ಇವೆಲ್ಲಕ್ಕಿಂತಲೂ ಮುಖ್ಯವಾಗಿ ರೋಗಿ ಅನಿಶ್ಚಿತ ಅಸ್ವಸ್ಥತೆಯಿಂದ ನರಳುತ್ತಾಳೆ. ಭಗೋಷ್ಠಗಳ ಬಾಯುವಿಕೆ, ಯೋನಿಯ ಹಿಂಭಾಗದ ಮೂಲೆಯಲ್ಲಿ ಉರಿಯೂತ, ಗರ್ಭಕೋಶ ಕಂಠದ ಮೇಲೆ ಗಾಯ ಮತ್ತು ಅದರ ದ್ವಾರ ತೆರೆದು ಬಿರಿತು ಕೀವು ಸ್ರವಿಸುವುದು ಇನ್ನಿತರ ಲಕ್ಷಣಗಳು. ಗರ್ಭಕೋಶ ಕಂಠದ ಅಂಟುಪೊರೆಯಲ್ಲಿ ಕ್ರಿಮಿಗಳು ಬಹಳ ಕಾಲ ಇರಬಹುದಾದ್ದರಿಂದ ಗಾನರೀಯ ಹೆಂಗಸರಲ್ಲಿ ದೀರ್ಘಕಾಲದ ರೋಗವಾಗುತ್ತದೆ. ಗರ್ಭಕೋಶಕಂಠನಾಳದಿಂದ ಅಂಡನಾಳವನ್ನು ಕ್ರಿಮಿ ಪ್ರವೇಶಿಸಿದಾಗ ಉರಿಯೂತ ಉಂಟಾಗಿ, ಅಂಡನಾಳ ಉಬ್ಬಿ ಹೊಟ್ಟೆನೋವು ಬರಬಹುದು. ಹೀಗೆ ಅನೇಕ ಸಲ ಉರಿಯೂತವಾಗಿ ಕೊನೆಗೆ ಅಂಡನಾಳ ಸಂಕುಚಿತವಾಗಬಹುದು. ಸಂಕುಚಿತವಾದರೆ ವೀರ್ಯಾಣು ಚಲಿಸಲು ಅಡ್ಡಿಯಾಗಿ ಗರ್ಭಧಾರಣೆಗೆ ಆತಂಕವಾಗಿ ಹೆಂಗಸು ಬಂಜೆಯಾಗಬಹುದು.