ಸ್ಟಾರ್ ಅಲಯನ್ಸ್

ವಿಕಿಪೀಡಿಯ ಇಂದ
Jump to navigation Jump to search

ಜಾಗತಿಕ ವಿಮಾನ ಒಕ್ಕೂಟ[ಬದಲಾಯಿಸಿ]

Air Canada, Lufthansa, Scandinavian Airlines, Thai Airways International and United Airlines are the five founding members of the alliance.

ಏರ್ ಇಂಡಿಯಾ ಸೇರ್ಪಡೆ[ಬದಲಾಯಿಸಿ]

  • ಜಾಗತಿಕ ವಿಮಾನಯಾನ ಒಕ್ಕೂಟವು ಸ್ಟಾರ್`ಅಲಯನ್ಸ್ ಎಂದು ಕರೆಯಲ್ಪಡುತ್ತದೆ. ಇದು ಜಾಗತಿಕ ಮಟ್ಟದ 26 ಪ್ರಮುಖ ವಿಮಾನಯಾನ ಸಂಸ್ಥೆಗಳ ಒಕ್ಕೂಟ. ಏರ್ ಇಂಡಿಯಾ ಸಂಸ್ಥೆಯು 7 ವರ್ಷಗಳಕಾಲ ಇದರ ಸದಸ್ಯತ್ವ ಪಡೆಯಲು ಕಾಯುತ್ತಿದ್ದು ಲಂಡನ್ ನಲ್ಲಿ ನೆಡೆದ ಸ್ಟಾರ್ ಅಲಯನ್ಸ್ ಮುಖ್ಯ ಕಾರ್ಯನಿರ್ವಾಹಕ ಮಂಡಳಿ ಸಭೆಯಲ್ಲಿ ಏರ್ ಇಂಡಿಯಾ ಸಂಸ್ಥೆಯನ್ನು ಒಕ್ಕೂಟಕ್ಕೆ ಸೇರಿಸಿಕೊಳ್ಳಲಾಯಿತು.ಇದರಿಂದ ಏರ್ ಇಂಡಿಯಾ ಪ್ರಯಾಣಿಕರಿಗೆ 195 ದೇಶಗಳಲ್ಲಿನ 1,328 ವಿಮಾನ ನಿಲ್ದಾಣಗಳಲ್ಲಿ ಪ್ರತಿನಿತ್ಯ 21,980 ವಿಮಾನ ಯಾನ ಮಾರ್ಗಗಳ ವ್ಯಾಪಕ ಸೇವೆಪಡೆದುಕೊಳ್ಳುವ ಅವಕಾಶ ಸಿಕ್ಕಿದೆ. ಇದರಿಂದ ಏರ್ ಇಂಡಿಯಾದ ವರಮಾನವೂ (4%)ಹೆಚ್ಚುವುದೆಂದು ಅಂದಾಜು.
  • ಜಾಗತಿಕ ವಿಮಾನಯಾನ ಒಕ್ಕೂಟವು ಒಟ್ಟು 4338 ವಿಮಾನಗಳನ್ನು ಹೊಂದಿದೆ.ಅದು ಸುಮಾರು 64 ಕೋಟಿ ಪ್ರಯಾಣಿಕರಿಗೆ ಸೇವೆ ಸಲ್ಲಿಸುತ್ತಿದೆ.ಈಗ ಅದಕ್ಕೆ ಏರ್ ಇಂಡಿಯಾ ಸಂಸ್ಥೆಯ 400 ವಿಮಾನಗಳ ಸೇವೆ ಸೇರುತ್ತವೆ. ಅದು ಇನ್ನೂ ೩೫ ನಗರಗಳ ಸಂಪರ್ಕವನ್ನು ಒದಗಿಸಲಿದೆ. ಜಗತ್ತಿನ ದೊಡ್ಡ ಸಂಸ್ಥೆಗಳು ಈ ಸ್ಟಾರ್ ಅಲಯನ್ಸ್ ಸದಸ್ಯತ್ವ ಹೊಂದಿವೆ.(ಜುಲೈ11ರಿಂದ ಈ ವಿಧಿಕಾರ್ಯರೂಪಕ್ಕೆ ಬರುವುದು.

ಪಕ್ಕದಲ್ಲಿ ಈ ಒಕ್ಕೂಟದ ಸ್ಥಾಪಕ-ಸದಸ್ಯತ್ವ ಹೊಂದಿದ ವಾಯುಯಾನ ಸಂಸ್ಥೆಗಳ ಚಿತ್ರ ನೋಡಬಹುದು.

ಆಧಾರ[ಬದಲಾಯಿಸಿ]

  • ಪಿ.ಟಿ.ಐ.ಸುದ್ದಿ ಮಾಧ್ಯಮ ಪ್ರಜಾವಾಣಿ
  • Star Alliance ವಿಕಿಪೀಡಿಯಾ.[[೧]]