ವಿಷಯಕ್ಕೆ ಹೋಗು

ಸ್ಟಾಂಗ್‍ದೇ ಮಠ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸ್ಟಾಂಗ್‍ದೇ ಮಠವು (ಅಥವಾ ಟಾಂದೇ ಅಥವಾ ಥೋಂಡೇ) ತೀವ್ರವಾಗಿ ಅಭಿವೃದ್ಧಿ ಹೊಂದುತ್ತಿರುವ ಒಂದು ಬೌದ್ಧ ಮಠ. ಇದು ಉತ್ತರ ಭಾರತದ ಲಡಾಖ್‍ನ ಜ಼ನ್‍ಸ್ಕಾರ್‌ನಲ್ಲಿ ಸ್ಥಿತವಾಗಿದೆ.[]

ಈ ಗೊಂಪಾವನ್ನು 1052 ರಲ್ಲಿ ನರೋಪಾನ ಶಿಷ್ಯನಾದ ಪ್ರಸಿದ್ಧ ಅನುವಾದಕ ಲಾಮಾ ಮಾರ್ಪಾ ಲೋಟ್ಸಾವಾ (1012-1097) ಸ್ಥಾಪಿಸಿದನು. ಇದನ್ನು ಸುಮಾರು ನಾಲ್ಕು ಶತಮಾನಗಳ ನಂತರ ಗೆಲುಗ್ಪಾ ಸ್ವಾಧೀನಪಡಿಸಿಕೊಂಡಿತು ಮತ್ತು ಜೆ ಸೋಂಗ್‌ಖಾಪಾಗೆ ಸಮರ್ಪಿತವಾಯಿತು.[][]

ಇದು ಜ಼ನ್‍ಸ್ಕಾರ್‌ನಲ್ಲಿರುವ ಎರಡನೇ ಅತಿದೊಡ್ಡ ಸಂನ್ಯಾಸಿ ಸಂಸ್ಥೆಯಾಗಿದ್ದು, ಸುಮಾರು 60 ಗೆಲುಕ್ಪಾ ಸಂನ್ಯಾಸಿ ಸಮುದಾಯವನ್ನು ಹೊಂದಿದೆ.[] ಪ್ರತಿ ವರ್ಷ ಟಿಬೆಟಿಯನ್ ಕ್ಯಾಲೆಂಡರ್‌ನ ಹನ್ನೊಂದನೇ ತಿಂಗಳಲ್ಲಿ 28 ಮತ್ತು 29 ನೇ ದಿನದಂದು ಗಸ್ಟರ್ ಉತ್ಸವವನ್ನು ನಡೆಸಲಾಗುತ್ತದೆ.

ಒಟ್ಟು ಏಳು ದೇವಸ್ಥಾನಗಳಿವೆ. ಷೋಗ್ಸ್-ಖಾಂಗ್ ಅನ್ನು ಸೊಗಸಾದ ಚಿತ್ರಕಲೆಯಿಂದ ಅಲಂಕರಿಸಲಾಗಿದೆ. ಇವುಗಳಲ್ಲಿ ಕಪ್ಪು ಬಣ್ಣದ ಹಿನ್ನೆಲೆಯಲ್ಲಿ ಚಿನ್ನದ ಬಾಹ್ಯರೇಖೆಯಿರುವ ಕೆಲವು ದೇವತೆಗಳ ಚಿತ್ರಗಳೂ ಸೇರಿವೆ.[]

ಅಡಿಟಿಪ್ಪಣಿಗಳು

[ಬದಲಾಯಿಸಿ]

 

  1. ೧.೦ ೧.೧ "Stongdey Monastery". Buddhist-temples.com. Retrieved 20 October 2009. ಉಲ್ಲೇಖ ದೋಷ: Invalid <ref> tag; name "Temples" defined multiple times with different content
  2. "Stongdey Monastery". Buddhist-temples.com. Retrieved 20 October 2009."Stongdey Monastery". Buddhist-temples.com. Retrieved 20 October 2009.
  3. ೩.೦ ೩.೧ Rizvi (1996), p. 255.

ಉಲ್ಲೇಖಗಳು

[ಬದಲಾಯಿಸಿ]
  • Janet Rizvi. (1996). Ladakh: Crossroads of High Asia. Second Edition. Oxford University Press, Delhi.  ISBN 0-19-564546-4.
  • Schettler, Margaret & Rolf (1981). Kashmir, Ladakh & Zanskar. Lonely Planet Publications. South Yarra, Victoria, Australia.  ISBN 0-908086-21-0.