ಸೋಮಾರಿತನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸೋಮಾರಿತನ ಎಂದರೆ ತಮಗೆ ಕಾರ್ಯನಿರ್ವಹಿಸುವ ಅಥವಾ ಪ್ರಯಾಸಪಡುವ ಸಾಮರ್ಥ್ಯವಿದ್ದರೂ ಚಟುವಟಿಕೆ ಅಥವಾ ಪರಿಶ್ರಮದ ಬಗ್ಗೆ ನಿರಾಸಕ್ತಿ. ಇದನ್ನು ಹಲವುವೇಳೆ ತುಚ್ಛಾರ್ಥಕ ಪದವಾಗಿ ಬಳಸಲಾಗುತ್ತದೆ; ಸೋಮಾರಿಯಾಗಿರುವ ವ್ಯಕ್ತಿಗೆ ಆಂಗ್ಲದಲ್ಲಿ ಬಳಸಲಾಗುವ ಪದಗಳಲ್ಲಿ ಕೌಚ್ ಪೊಟೇಟೊ, ಸ್ಲ್ಯಾಕರ್, ಮತ್ತು ಬ್ಲಜರ್ ಸೇರಿವೆ.

ತಾವು ನಪಾಸಾಗುವುದಕ್ಕೆ ಸೋಮಾರಿತನ ಕಾರಣ ಎಂದು ಪ್ರೌಢಶಾಲಾ ವಿದ್ಯಾರ್ಥಿಗಳು ಹೇಳುವ ಸಾಧ್ಯತೆ ಹೆಚ್ಚಿದ್ದರೆ, ಶಿಕ್ಷಕರು ಪ್ರಮುಖ ಕಾರಣವಾಗಿ "ಸಾಮರ್ಥ್ಯದ ಕೊರತೆ" ಎಂದು ಹೇಳಿದರು, ಮತ್ತು ಎರಡನೇ ಸ್ಥಾನವನ್ನು ಸೋಮಾರಿತನಕ್ಕೆ ನೀಡಿದರು ಎಂದು ೧೯೩೧ರ ಒಂದು ಸಮೀಕ್ಷೆ ಕಂಡುಕೊಂಡಿತು.[೧]

ಸೋಮಾರಿತನ ಮಾನಸಿಕ ಆರೋಗ್ಯ ಸಮಸ್ಯೆ ಅಲ್ಲ ಬದಲಾಗಿ ಒಂದು ರೂಢಿ. ಅದು ಆತ್ಮಾಭಿಮಾನದ ಕೊರತೆ, ಇತರರಿಂದ ಸಕಾರಾತ್ಮಕ ಗುರುತಿಸುವಿಕೆಯ ಕೊರತೆ, ಕಡಿಮೆ ಆತ್ಮವಿಶ್ವಾಸದಿಂದ ಉಂಟಾದ ಶಿಸ್ತಿನ ಕೊರತೆ, ಅಥವಾ ಚಟುವಟಿಕೆಯಲ್ಲಿ ಆಸಕ್ತಿ ಅಥವಾ ಅದರ ಪರಿಣಾಮಕಾರಿತ್ವದಲ್ಲಿ ನಂಬಿಕೆಯ ಕೊರತೆಯನ್ನು ಪ್ರತಿಬಿಂಬಿಸಬಹುದು. ಸೋಮಾರಿತನವು ವಿಳಂಬ ಪ್ರವೃತ್ತಿ ಅಥವಾ ಅನಿಶ್ಚಿತತೆಯಾಗಿ ವ್ಯಕ್ತವಾಗಬಹುದು. ಸೋಮಾರಿತನವು ಪ್ರೇರಣೆಯ ಕುಗ್ಗಿದ ಮಟ್ಟದಿಂದ ಉಂಟಾಗಬಹುದು ಎಂದು ಪ್ರೇರಣೆಯ ಅಧ್ಯಯನಗಳು ಸೂಚಿಸುತ್ತವೆ. ಇದು ಪ್ರತಿಯಾಗಿ ಅತಿ ಪ್ರಚೋದನೆ ಅಥವಾ ಅತಿಯಾದ ಆವೇಗಗಳು ಅಥವಾ ಚಿತ್ತ ಚಾಂಚಲ್ಯಗಳಿಂದ ಉಂಟಾಗಿರಬಹುದು. ಇವು ಪ್ರತಿಫಲ ಮತ್ತು ಸಂತೋಷಕ್ಕೆ ಹೊಣೆಯಾದ ನರಪ್ರೇಕ್ಷಕವಾದ ಡೋಪಮೈನ್‍ನ ಬಿಡುಗಡೆಯನ್ನು ಹೆಚ್ಚಿಸುತ್ತವೆ. ಹೆಚ್ಚು ಡೋಪಮೈನ್ ಬಿಡುಗಡೆಯಾದಂತೆ, ಫಲದಾಯಕ ಮತ್ತು ಪ್ರತಿಫಲದ ಕ್ರಿಯೆಗಳಿಗೆ ಬೆಲೆ ಕೊಡುವ ಮತ್ತು ಸ್ವೀಕರಿಸುವ ಬಗ್ಗೆ ಒಬ್ಬರ ಅಸಹಿಷ್ಣುತೆ ಹೆಚ್ಚಾಗುತ್ತದೆ. ಈ ಕುಂದಿದ ಸಂವೇದನಶೀಲತೆಯಿಂದ ನರವ್ಯೂಹದ ಮಾದರಿಗಳು ಜಡಗೊಳ್ಳುತ್ತವೆ ಮತ್ತು ಅಪಾಯ ಗ್ರಹಿಕೆಗೆ ಹೊಣೆಯಾದ ಮಿದುಳಿನ ಮುಂಭಾಗದ ಇನ್ಸುಲಾ ಮೇಲೆ ನಕಾರಾತ್ಮಕ ಪ್ರಭಾವ ಬೀರುತ್ತವೆ.

ಬಹು ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಗಮನ/ಕೇಂದ್ರಿಕರಣ ವೈಫಲ್ಯ ಅಥವಾ ಪರಿಪೂರ್ಣತೆ ಮತ್ತು ತರುವಾಯ ನಿರಾಶಾವದದಂತಹ ವರ್ತನ ಸಮಸ್ಯೆಗಳನ್ನು ಉಂಟುಮಾಡಬಹುದು ಎಂದು ಎಡಿಎಚ್‍ಡಿ ತಜ್ಞರು ಹೇಳುತ್ತಾರೆ. ಈ ಸಂದರ್ಭಗಳಲ್ಲಿ ಸೋಮಾರಿತನವು ನಕಾರಾತ್ಮಕ ನಿಭಾವಣಾ ವಿಧಾನವಾಗಿ (ತಿರಸ್ಕಾರ) ವ್ಯಕ್ತವಾಗಬಹುದು, ಹೇಗೆ ಅಂದರೆ ಕೆಲವು ಅನುಭವಗಳು ಹಾಗೂ ಪೂರ್ವಭಾವಿ ಕೆಟ್ಟ ಫಲಿತಾಂಶಗಳನ್ನು ವಿರೋಧಿಸುವ ಭರವಸೆಯಿಂದ ಕೆಲವು ಪರಿಸ್ಥಿತಿಗಳನ್ನು ತಪ್ಪಿಸುವ ಬಯಕೆಯಾಗಿ. ಸೋಮಾರಿತನವು ಸಮಾಜ ಸಂಬಂಧಿ ಸಿದ್ಧತೆ ಹಾಗೂ ನಕಾರಾತ್ಮಕ ಮಕ್ಕಳ ಪಾಲನಾ ಅಭ್ಯಾಸಗಳಿಂದ ಮೂಲಕಲ್ಪನೆಗಳ ವ್ಯಕ್ತಪಡಿಸುವಿಕೆ ಎಂದು ಲೆಸೇನಿಯನ್ ಚಿಂತನೆ ಹೇಳುತ್ತದೆ. ಕೆಲವೊಮ್ಮೆ ಬೇಸರವನ್ನು ಸೋಮಾರಿತನದೊಂದಿಗೆ ಒಗ್ಗೂಡಿಸಲಾಗುತ್ತದೆ.

ಉಲ್ಲೇಖಗಳು[ಬದಲಾಯಿಸಿ]

  1. Harry Howard Gilbert (Jan 1931), High-School Students' Opinions on Reasons for Failure in High-School Subjects, vol. 23, The Journal of Educational Research, pp. 46–49, JSTOR 27525294
ಉಲ್ಲೇಖ ದೋಷ: <ref> tag with name "belphegor" defined in <references> is not used in prior text.