ಸೆರೆಯಾಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸೆರೆಯಾಳು (ಬಂದಿ, ಕೈದಿ) ಎಂದರೆ ತನ್ನ ಇಚ್ಛೆಗೆ ವಿರುದ್ಧವಾಗಿ ಸ್ವಾತಂತ್ರ್ಯವಂಚಿತನಾದ ವ್ಯಕ್ತಿ. ಇದು ಬಂಧನ, ಸೆರೆ, ಅಥವಾ ಬಲವಂತದ ನಿಯಂತ್ರಣದಿಂದ ಇರಬಹುದು. ಈ ಪದವು ವಿಶೇಷವಾಗಿ ಸೆರೆಮನೆಯಲ್ಲಿ ಶಿಕ್ಷೆ ಅನುಭವಿಸುತ್ತಿರುವ ವ್ಯಕ್ತಿಗೆ ಅನ್ವಯಿಸುತ್ತದೆ. ಈ ಪದವು ವಿಚಾರಣೆ ಪೂರ್ವ ಶಂಕಿತ ಅಪರಾಧಿಗಳಿಗೆ ಅನ್ವಯಿಸುವುದಿಲ್ಲ. ಸೆರೆಯಾಳುಗಳು ಅನುಭವಿಸುವ ಅತ್ಯಂತ ವಿಪರೀತ ಪ್ರತಿಕೂಲ ಪರಿಣಾಮಗಳ ಪೈಕಿ ದೀರ್ಘಾವಧಿಯವರೆಗೆ ಏಕಾಂಗಿ ಬಂಧನದಿಂದ ಉಂಟಾಗುತ್ತದೆ ಎಂದು ತೋರುತ್ತದೆ. "ವಿಶೇಷ ನಿವಾಸ ಘಟಕಗಳಲ್ಲಿ" ಬಂಧನದಲ್ಲಿರುವಾಗ, ಸೆರೆಯಾಳುಗಳು ಇಂದ್ರಿಯಾನುಭವದ ಅಭಾವ ಮತ್ತು ಸಾಮಾಜಿಕ ಸಂಪರ್ಕದ ಅಭಾವಕ್ಕೆ ಒಳಗಾಗುತ್ತಾರೆ. ಇದು ಅವರ ಮಾನಸಿಕ ಆರೋಗ್ಯದ ಮೇಲೆ ತೀವ್ರ ಋಣಾತ್ಮಕ ಪ್ರಭಾವ ಬೀರಬಹುದು. ದೀರ್ಘಾವಧಿಗಳು ಖಿನ್ನತೆ ಮತ್ತು ಮೆದುಳಿನ ಕ್ರಿಯೆಗಳಲ್ಲಿ ಬದಲಾವಣೆಗೆ ಕಾರಣವಾಗಬಹುದು. ತಮ್ಮ ಪರಿಸರದ ಗ್ರಹಿಕೆಗಳನ್ನು ಮೌಲ್ಯೀಕರಿಸಲು ಅಗತ್ಯವಾದ ಸಾಮಾಜಿಕ ಸನ್ನಿವೇಶದ ಅನುಪಸ್ಥಿತಿಯಲ್ಲಿ, ಸೆರೆಯಾಳುಗಳು ಬಹಳ ಸುನಮ್ಯ, ಅಸಹಜವಾಗಿ ಸೂಕ್ಷ್ಮವಾಗಿಬಿಡುತ್ತಾರೆ, ಮತ್ತು ತಮ್ಮ ಪರಿಸರವನ್ನು ನಿಯಂತ್ರಿಸುವವರ ಪ್ರಭಾವಕ್ಕೆ ಹೆಚ್ಚಿನ ಈಡಾಗುವಿಕೆಯನ್ನು ಪ್ರದರ್ಶಿಸುತ್ತಾರೆ.