ವಿಷಯಕ್ಕೆ ಹೋಗು

ಸೆಮ್ಮಂಗುಡಿ ಶ್ರೀನಿವಾಸ ಅಯ್ಯರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸೆಮ್ಮಂಗುಡಿ ಶ್ರೀನಿವಾಸ ಅಯ್ಯರ್
ಹಿನ್ನೆಲೆ ಮಾಹಿತಿ
ಹೆಸರುசெம்மங்குடி ஸ்ரீநிவாஸ அயர்
ಜನನ(೧೯೦೮-೦೭-೨೫)೨೫ ಜುಲೈ ೧೯೦೮
ತಿರುಕೋಡಿಕಾವಲ್, ತಂಜಾವೂರ್ ಜಿಲ್ಲೆ, Madras Presidency, India
ಮರಣ೩೧ ಅಕ್ಟೋಬರ್ ೨೦೦೩ (ವಯಸ್ಸು ೯೫)
ಮದ್ರಾಸ್, ತಮಿಳು ನಾಡು,ಭಾರತ
ಸಂಗೀತ ಶೈಲಿCarnatic music - Indian Classical Music
ವೃತ್ತಿಹಾಡುಗಾರ

ಸೆಮ್ಮಂಗುಡಿ ಶ್ರೀನಿವಾಸ ಅಯ್ಯರ್ (ಜುಲೈ 25, 1908 -ಒಕ್ಟೋಬರ್ 31, 2003) ಕರ್ನಾಟಕ ಸಂಗೀತದ ಪ್ರಖ್ಯಾತ ಹಾಡುಗಾರರು. ಇವರ ಸಂಗೀತ ಸಾಧನೆಗೆ ಬಹುತೇಕ ಎಲ್ಲಾ ಪ್ರಶಸ್ತಿಗಳೂ ಸಂದಿವೆ. ಅದರಲ್ಲಿ ಪ್ರಮುಖವಾಗಿ ಪದ್ಮ ವಿಭೂಷಣ, ೧೯೫೩ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಮಧ್ಯಪ್ರದೇಶ ಸರಕಾರ ಕೊಡಮಾಡುವ ಕಾಳೀದಾಸ್ ಸಮ್ಮಾನ್ ಪ್ರಶಸ್ತಿ, ಕೇರಳ ವಿಶ್ವವಿದ್ಯಾಲಯ ನೀಡಿದ ಗೌರವ ಡಾಕ್ಟರೇಟ್ ಪ್ರಶಸ್ತಿಗಳು ಗಮನಾರ್ಹವಾಗಿವೆ. ಇವರನ್ನು ಕರ್ಣಾಟಕ ಸಂಗೀತದ ಪಿತಾಮಹ ಎಂದು ಸಹ ಕರೆಯುವರು. ಇವರು ಭಾರತದ ಶಾಸ್ತ್ರೀಯ ಸಂಗೀತದಲ್ಲೂ ಪರಿಣಿತಿ ಹೊಂದಿರುವರು.

ಐಯರ್ ರವರು ೧೯೫೩ರಲ್ಲಿ ಸಂಗೀತ ನಾಟಕ ಅಕಾಡೆಮಿಯ ಪ್ರಶಸ್ತಿ ಪಡೆಯುತ್ತಿರುವುದು

ಕುಟುಂಬ

[ಬದಲಾಯಿಸಿ]

ಅವರು ತಾಯು ಅಮ್ಮಲ್‌ ಅವರನ್ನು ವಿವಾಹವಾಗಿದ್ದಾರೆ. ಈ ದಂಪತಿಗೆ ಸ್ವಾಮಿನಾಥನ್, ಗೋಪಾಲಸ್ವಾಮಿ ಮತ್ತು ರಾಧಾಕೃಷ್ಣನ್ ಎಂಬ ಮೂರು ಗಂಡು ಮಕ್ಕಳಿದ್ದಾರೆ. - ಶಾಂತಾ, ಧರ್ಮ ಎಂಬ ಎರಡು ಹೆಣ್ಣು ಮಕ್ಕಳಿದ್ದಾರೆ. ಜಯರಮಣ, ಹರಿಹರಣ್, ಶ್ರೀರಾಮನ್, ಲಕ್ಷ್ಮಣನ್, ಯೋಗ, ಬಾಲ, ಪದ್ಮ, ಆನಂದಿ, ಶಂಕರ, ಜಯಶ್ರೀ, ಶ್ರೀನಿವಾಸ, ವಿವೇಕಾನಂದ, ವಿಜಯ, ಜಗನ್ನಾಥ ಎಂಬ ಮೊಮ್ಮಕ್ಕಳಿದ್ದಾರೆ.