ಸೆಂಟಿನೆಲೀಸ್
ಒಟ್ಟು ಜನಸಂಖ್ಯೆ | |
---|---|
ಸುಮಾರು ೧೫-೫೦೦ | |
ಜನಸಂಖ್ಯಾ ಬಾಹುಳ್ಯದ ಪ್ರದೇಶಗಳು | |
ಉತ್ತರ ಸೆಂಟಿನೆಲೀಸ್ ದ್ವೀಪ (ಭಾರತ) | |
ಭಾಷೆಗಳು | |
ಸೆಂಟಿನೆಲೀಸ್ | |
ಧರ್ಮ | |
ಸಾಂಪ್ರದಾಯಿಕ ಧರ್ಮ | |
ಸಂಬಂಧಿತ ಜನಾಂಗೀಯ ಗುಂಪುಗಳು | |
ಬಹುಶಃ ಜರಾವಾ ಅಥವಾ ಆಂಗ್ಯೆ |
ಸೆಂಟಿನೆಲೀಸ್ (ಸೆಂಟಿನೆಲಿ ಅಥವಾ ನಾರ್ತ್ ಸೆಂಟಿನಲ್ ಐಲ್ಯಾಂಡರ್ಸ್) ಭಾರತದ ಅಂಡಮಾನ್ ದ್ವೀಪಗಳಲ್ಲಿನ ನಾರ್ತ್ ಸೆಂಟಿನಲ್ ದ್ವೀಪದ ಸ್ಥಳೀಯ ಜನರು. ಅಂಡಮಾನೀಸ್ ಜನರಲ್ಲಿ ಒಬ್ಬರು, ಹೊರಗಿನ ಪ್ರಪಂಚದೊಂದಿಗೆ ಯಾವುದೆ ಸಂಪರ್ಕವಿಲ್ಲದೆ ಜೀವಿಸುತಿದ್ದಾರೆ. ಆಧುನಿಕ ನಾಗರೀಕತೆಗೆ ವಾಸ್ತವಿಕವಾಗಿ ಒಳಪಡದೆ ಮತ್ತು ಪ್ರತ್ಯೇಕಿವಾಗಿ ಉಳಿದಿರುವ ಕೊನೆಯ ಅಂಡಮಾನೀಸ್ ಜನರು.
ಸೇಂಟಿನೇಲಿಗಳು ಮೂಲಭೂತವಾಗಿ ಬೇಟೆಗಾರು. ಬೇಟೆಯಾಡುವ, ಮೀನುಗಾರಿಕೆಯ ಮೂಲಕ ಮತ್ತು ಕಾಡುನಲ್ಲಿ ಸಿಗುವ ಆಹಾರ ಸಂಗ್ರಹಿಸುವುದರ ಮೂಲಕ ಜೀವಿಸುತಿದ್ದಾರೆ. ಕೃಷಿ ಅಭ್ಯಾಸಗಳು ಅಥವಾ ಬೆಂಕಿಯನ್ನು ಉಪಯೋಗದ ಬಗ್ಗೆ ಯಾವುದೇ ಪುರಾವೆಗಳಿಲ್ಲ.[೧] ಸೆಂಟಿನೇಲಿಸ್ ಭಾಷೆ ವರ್ಗೀಕರಣಗೊಳ್ಳದೆ ಉಳಿದಿದೆ ಮತ್ತು ಅವರ ಹತ್ತಿರದ ನೆರೆಹೊರೆಯವರ ಜರಾವಾ ಭಾಷೆಯೊಂದಿಗೆ ಪರಸ್ಪರ ಗ್ರಹಿಸಲು ಸಾಧ್ಯವಿಲ್ಲ.[೨] ಭಾರತ ಸರ್ಕಾರವು ಸೆಂಟಿನೇಲೆಗಳನ್ನು ಪರಿಶಿಷ್ಟ ಪಂಗಡವಾಗಿ ಗೊತ್ತುಪಡಿಸಿದೆ[೩]
ಜನಸಂಖ್ಯೆ
[ಬದಲಾಯಿಸಿ]ಸೆಂಟಿನೆಲೀಸ್ ಜನರ ನಿಖರವಾದ ಜನಸಂಖ್ಯೆಯು ತಿಳಿದಿಲ್ಲ. ಅಂದಾಜು 40 ಕ್ಕಿಂತಲೂ ಕಡಿಮೆ, 250 ರ ಮಧ್ಯದವರೆಗೆ, ಮತ್ತು ಗರಿಷ್ಠ 500 ರವರೆಗೆ ಇರಬಹುದುದೆಂದು ಅದಾಜಿಸಲಾಗಿದೆ. 2001 ರಲ್ಲಿ, ಭಾರತದ ಜನಗಣತಿ ಅಧಿಕಾರಿಗಳು 39 ಜನರನ್ನು.[೪] (21 ಪುರುಷರು ಮತ್ತು 18 ಸ್ತ್ರೀಯರು) ದಾಖಲಿಸಿದ್ದಾರೆ, ಈ ಸಮೀಕ್ಷೆಯನ್ನು ದೂರದಿಂದ ನಡೆಸಲಾಯಿತು ಮತ್ತು ಇದು 59.67 ಕಿಮೀ (14,700 ಎಕರೆ) ದ್ವೀಪದ ಜನಸಂಖ್ಯೆಯ ನಿಖರವಾದ ಅಂಕಿ-ಅಂಶಗಳನ್ನು ಪ್ರತಿನಿಧಿಸುವುದಿಲ್ಲ.[೫] 2011 ರ ಭಾರತದ ಜನಗಣತಿ ಕೇವಲ 15 ವ್ಯಕ್ತಿಗಳನ್ನು (12 ಗಂಡು ಮತ್ತು ೩ ಸ್ತ್ರೀಯರು) ದಾಖಲಿಸಿದೆ.[೬] 2004 ರ ಹಿಂದೂ ಮಹಾಸಾಗರದ ಭೂಕಂಪನದಿಂದ ಉಂಟಾದ ಸುನಾಮಿಯ ಪರಿಣಾಮವಾಗಿ ಸೆಂಟಿನೇಲೀಸ್ ಜನಸಂಖ್ಯೆಯ ಮೇಲಾದ ಪರಿಣಾಮತಿಳಿದುಬಂದಿಲ. ಆದರೆ ಅವರು ಉಳಿದುಕೊಂಡಿದ್ದಾರೆ ಎಂಬುದು ದೃಢೀಕರಣಗೊಂಡಿದೆ.[೭]
ಗುಣಲಕ್ಷಣಗಳು
[ಬದಲಾಯಿಸಿ]ಸೆಂಟಿನೆಲೀಸ್ಇ ತರ ಸ್ಥಳೀಯ ಅಂಡಮಾನೀಸ್ ಜನರಂತೆ ನೆಗ್ರಿಟೋಸ್ ಮೂಲದವರ. ನೆಗ್ರಿಟೋಸ್ ಪದವನ್ನು ಆಗ್ನೇಯ ಏಷ್ಯಾದಲ್ಲಿ ವ್ಯಾಪಕವಾಗಿ ನೆಲೆಸಿರುವ ಜನರಿಗೆ ಅನ್ವಯಿಸಲಾಗಿದೆ. ಉದಾಹರಣೆಗೆ ಮಲಯದ ಸೆಮಾಂಗ್, ಫಿಲಿಪೈನ್ಸ್ ದ್ವೀಪಸಮೂಹದ ಐಟಾ ಮತ್ತು ಆಸ್ಟ್ರೇಲಿಯಾದಲ್ಲಿ ಟ್ಯಾಸ್ಮೆನಿಯಾದ ಸ್ಥಳೀಯ ಜನಸಂಖ್ಯೆ ಸೇರಿದೆ. [ಉಲ್ಲೇಖದ ಅಗತ್ಯವಿದೆ] ಸಣ್ಣ ಗಾತ್ರದ ದೇಹ, ಕಪ್ಪು ಚರ್ಮದ, ಸಣ್ಣ ಮತ್ತು ಬಿಗಿಯಾದ ಗುಂಗರು ಕೂದಲು (ಆಫ್ರೊ-ಟೆಕ್ಚರ್ಡ್) ಅವರ ಲಕ್ಷಣಗಳಾಗಿವೆ. ಲೇಖಕ ಹೆನ್ರಿಕ್ ಹ್ಯಾರೆರ್ ಒಬ್ಬ ವ್ಯಕ್ತಿಯನ್ನು ೧.೬ ಮೀ (5 ft 3 in) ಎತ್ತರದ ಮತ್ತು ಎಡಚ ಎಂದು ವಿವರಿಸಿದ್ದಾರೆ.[೮]
ಸಂಸ್ಕೃತಿ
[ಬದಲಾಯಿಸಿ]ಸೆಂಟಿನೇಲ್ಸ್ ವಸ್ತು ಸಂಸ್ಕೃತಿಯ ಬಗ್ಗೆ ತಿಳಿದಿರುವ ಹೆಚ್ಚಿನ ವಿಷಯವು 20 ನೇ ಶತಮಾನದ ಅಂತ್ಯದಲ್ಲಿ ಅವರಸಂಪರ್ಕದ ಪ್ರಯತ್ನಗಳ ಸಮಯದಲ್ಲಿ ಮಾಡಿದ ವೀಕ್ಷಣೆಯನ್ನು ಆಧರಿಸಿದೆ. ಸೆಂಟಿನೆಲೀಸ್ ಮೂಲಭೂತವಾಗಿ ಬೇಟೆಗಾರು. ಬೇಟೆ, ಮೀನುಗಾರಿಕೆ ಮತ್ತು ವನ್ಯ ಸಸ್ಯಗಳನ್ನು ಸಂಗ್ರಹಿಸುವ ಮೂಲಕ ತಮ್ಮ ಜೀವನೋಪಾಯವನ್ನು ಮಾಡುತ್ತಾರೆ. ಯಾವುದೇ ಕೃಷಿ ಪದ್ದತಿಯ ಪುರಾವೆಗಳಿಲ್ಲ.[೯]
ಅವರ ಮನೆಗಳು ಯಾವುದೇ ಅಡ್ಡ ಗೋಡೆಗಳಿಲ್ಲದೆ ಆಶ್ರಯ-ರೀತಿಯ ಗುಡಿಸಲುಗಳು ಮತ್ತು ನೆಲಮಾಳಿಗೆಯನ್ನು ಎಲೆಗಳಿಂದ ಸಮವಾಗಿ ಮಾಡಲಾಗುತ್ತದೆ. ಅವುಗಳು ಮೂರು ಅಥವಾ ನಾಲ್ಕು ಜನರಿರುವ ಕುಟುಂಬಕ್ಕೆ ಸ್ಥಳಾವಕಾಶವನ್ನು ನೀಡುತ್ತವೆ. ಅವಿಭಜಿತ ಕುಟುಂಬದ ಗುಡಿಸಲುಗಳು ವಿಸ್ತಾರವಾಗಿದು, ಕೆಲವು 12 ಚದರ ಮೀಟರ್ ( 130 ಚದರ ಅಡಿ) ಇದು ಮತ್ತು ಎತ್ತರದ ಚಾವಣಿ ಮತ್ತು ಹಲವು ಕೋಣೆಗನ್ನುಹೊಂದಿರುತ್ತವೆ.
ಲೋಹದ ಉಪಯೋಗ ತಿಳಿದಿಲ್ಲ, ಏಕೆಂದರೆ ದ್ವೀಪದಲ್ಲಿನ ಕಚ್ಚಾ ವಸ್ತುಗಳು ಬಹಳ ವಿರಳವಾಗಿವೆ. ಆದಾಗ್ಯೂ, ಕೆಲವು ಕಬ್ಬಿಣದಲ್ಲಿ ವಸ್ತುಗಳನ್ನು ಹೊಂದಿದ್ದು. ತಮ್ಮ ತೀರದಲ್ಲಿ ಬಿಟ್ಟುಹೋದ ಲೋಹದ ವಸ್ತುಗಳ ಬಳಕೆಯನ್ನು ಅವರು ಮಾಡಿದ್ದಾರೆ ಎಂದು ಗಮನಿಸಲಾಗಿದೆ. ಉದಾಹರಣೆಗೆ, 1980 ರ ಉತ್ತರಾರ್ಧದಲ್ಲಿ ಎರಡು ಅಂತರಾಷ್ಟ್ರೀಯ ಸರಕು ಹಡಗುಗಳು ದ್ವೀಪದ ಬಾಹ್ಯ ಹವಳದ ದಿಬ್ಬಗಳ ಮೇಲೆ ಬಿದ್ದವು. ಇವುಗಳಿಂದ ಸೇಂಟಿನೇಲೀಸ್ ಹಲವಾರು ಕಬ್ಬಿಣದ ವಸ್ತುಗಳನ್ನು ಸಂಗ್ರಹಿಸಿದರು.[೧೦] ಮಾರಿಸ್ ವಿಡಾಲ್ ಪೋರ್ಟ್ಮ್ಯಾನ್ ನೇತೃತ್ವದ 1880 ರ ಬ್ರಿಟಿಷ್ ದಂಡಯಾತ್ರೆಯ ಪ್ರಕಾರ, ಸೇಂಟಿನೇಲೀಸ್ ಅಡುಗೆ ವಿಧಾನಗಳು ಮತ್ತು ಆಹಾರವನ್ನು ತಯಾರಿಸುವುದು ಒಂಗ್ಯೆ ಜನರನ್ನು ಹೋಲುತ್ತವೆ, ಆದರೆ ಗ್ರೇಟ್ ಅಂಡಮಾನ್ನ ಮೂಲನಿವಾಸಿಗಳನ್ನು ಹೋಲುವುದಿಲ್ಲ.[೧೧]
ಅವರ ಶಸ್ತ್ರಾಸ್ತ್ರಗಳು ಈಟಿಗಳು, ಚಪಟೆಯಾಕರದ ಬೀಲ್ಲು ಮತ್ತು ಬಾಣಗಳನ್ನು ಒಳಗೊಂಡಿದೆ. ಕನಿಷ್ಠ ಮೂರು ವಿಧದ ಬಾಣಗಳನ್ನು ಮೀನುಗಾರಿಕೆ, ಬೇಟೆಯಾಡುವಿಕೆ, ಮತ್ತು ರಕ್ಷಣೆಗಾಗಿ ಬಳಸಿದ್ದನ್ನು ದಾಖಲಿಸಲಾಗಿದೆ. ಮೀನುಗಾರಿಕೆ ಬಾಣಗಳು ತುದಿಗಳಲ್ಲಿ ಮುಳ್ಳುಗಳನ್ನು ಹೊಂದಿರುತ್ತವೆ, ಬೇಟೆಯ ಬಾಣಗಳು ದುಂಡಾದ ತುದಿ ಹೊಂದಿರುತ್ತವೆ ಹಾಗೂ ಕಬ್ಬಿಣದಿಂದ ಮಾಡಿದ ತುದಿ ಕೆಳಭಾಗದಲ್ಲಿರುತ್ತದೆ. ಬಾಣಗಳು 1 ಮೀ (3 ಅಡಿ) ಉದ್ದವಿದೆ. ಈಟಿ ಮಾದರಿಯ ಬಾಣಗಳು ಉದ್ದವಾಗಿವೆ, ಬಿಲ್ಲುಗಳನ್ನು ಎಸೆಯುವುದಕ್ಕೆ ಬಳಸಬಹುದು. ದೊಡ್ಡ ಮೀನುಗಳನ್ನು ಹಿಡಿಯುವುದಕ್ಕಾಗಿ, ಮೀನುಗಾರಿಕೆ ಬಾಣಗಳ ವಿನ್ಯಾಸ ಹೋಲುವ ಈಟಿ ಬಳಸಲಾಗುತ್ತದೆ, ಅವು ಸುಮಾರು 2.5 ಮೀ (8 ಅಡಿ) ಉದ್ದವಿರುತ್ತವೆ. ಚಾಕುಗಳನ್ನು ಬಳಸುತ್ತಾರೆ.
ಇತರ ಸಲಕರಣೆಗಳೆಂದರೆ ಕಲ್ಲು ಕೊಡಲಿ, ಹೊಡತಿ, ಮಸೆ ಕಲ್ಲುಗಳು, ಮತ್ತು ಚಿಕ್ಕದಾದ ಅಥವಾ ದೊಡ್ಡದಾದ, ವಿವಿಧ ನುಣ್ಣಗೆ ಅಥವಾ ಒರಟಾದ ನೇಯ್ದ ಬುಟ್ಟಿಗಳು, ಹಾಗೆಯೇ ಬಿದಿರು ಮತ್ತು ಮರದ ಪಾತ್ರೆಗಳು ಸೇರಿವೆ. ಮೀನುಗಾರಿಕೆಗೆ ಬಲೆಗಳು ಮತ್ತು ದೋಣಿಗಳು ತೀರದ ಬಳಸಲ್ಪಡುತ್ತವೆ, ಆದರೆ ತೆರೆದ-ಸಮುದ್ರದ ಮೀನುಗಾರಿಕೆ ಅಲ್ಲ.
ಆಹಾರವು ಮುಖ್ಯವಾಗಿ ಕಾಡಿನಲ್ಲಿ ಸಂಗ್ರಹವಾಗಿರುವ ಸಸ್ಯಗಳಾದ ತೆಂಗಿನಕಾಯಿಗಳನ್ನು ಒಳಗೊಂಡಿರುತ್ತದೆ ಮತ್ತು ಹಂದಿಗಳು, ಇತರ ವನ್ಯಜೀವಿಗಳು (ಸಮುದ್ರದ ಆಮೆಗಳು ಹೊರತುಪಡಿಸಿ ಕೆಲವು ಸಣ್ಣ ಹಕ್ಕಿಗಳು ಮತ್ತು ಅಕಶೇರುಕಗಳಿಗೆ ಮಾತ್ರ ಸೀಮಿತವಾಗಿವೆ) ಎಂದು ಕಂಡುಬರುತ್ತದೆ. ಕಾಡು ಜೇನು, ಹಣ್ಣುಗಳು ಅಥವಾ ಸಪೋಡಿಲ್ಲಾ ಮತ್ತು ಪಾಂಡನಸ್ಗಳಂತಹ ಬೀಜಗಳನ್ನು ಸಂಗ್ರಹಿಸುತ್ತಾರೆ.
ಸಂಪರ್ಕದ ಘಟನೆಗಳು
[ಬದಲಾಯಿಸಿ]1880 ರ ಜನವರಿಯಲ್ಲಿ, ಸ್ಥಳೀಯ ವಸಾಹತುಶಾಹಿ ಆಡಳಿತಾಧಿಕಾರಿ ಮೌರಿಸ್ ವಿಡಾಲ್ ಪೋರ್ಟ್ಮ್ಯಾನ್ ನೇತೃತ್ವದ ಸಶಸ್ತ್ರ ಬ್ರಿಟಿಷ್ ಪದೆ, ದ್ವೀಪದ ಸಮೀಕ್ಷೆಯನ್ನು ನಡೆಸಲು ಮತ್ತು ದ್ವೀಪವನ್ನು ತಮ್ಮ ಸುಪರ್ದಿಗೆ ತೆಗೆದುಕೊಳ್ಳಲು ಆಗಮಿಸಿದರು. ಆ ಸಮಯದಲ್ಲಿ, ಬುಡಕಟ್ಟಿನ ಸದಸ್ಯರನ್ನು ಅಪಹರಿಸಿ, ಅವರಗೆ ಚೆನ್ನಾಗಿ ಚಿಕಿತ್ಸೆ ನೀಡಿ, ಉಡುಗೊರೆಗಳನ್ನು ಕೊಟ್ಟು, ಸ್ವಹಾರ್ದತೆಯನ್ನು ಪ್ರದರ್ಶಿಸುವ ಉದ್ದೇಶದಿಂದ ಅವರನ್ನು ಬಿಡುಗಡೆ ಮಾಡಿದರು.ಹೊರಗಿನವರು ಸಮೀಪಿಸುತ್ತಿದ್ದಂತೆ ಕಾಡಿನೊಳಗೆ ಸೇಂಟ್ನಿಲೀಸ್ ಕಣ್ಮರೆಯಾಗುತ್ತಿರುವಾಗ, ಪೋರ್ಟ್ಮ್ಯಾನ್ನ ಪಡೆಯು ಹಲವಾರು ದಿನಗಳ ನಂತರ ವೃದ್ಧ ದಂಪತಿ ಮತ್ತು ನಾಲ್ಕು ಮಕ್ಕಳನ್ನು ಬಂಧಿಸಿ ಮತ್ತು ಪೋರ್ಟ್ ಬ್ಲೇರ್ಗೆ ಕರೆತರಲಾಯಿತು. ವಯಸ್ಸಾದ ದಂಪತಿಗಳು ಅನಾರೋಗ್ಯಗೊಂಡು ಮರಣಹೊಂದಿದರು, ಪ್ರಾಯಶಃ ಅವರು ರೋಗ ನಿರೋಧಕತೆಯನ್ನು ಹೊಂದಿರದ ರೋಗಗಳಿಂದ. ನಾಲ್ಕು ಮಕ್ಕಳನ್ನು ಉಡುಗೊರೆಗಳನ್ನು ನೀಡ ದ್ವೀಪಕ್ಕೆ ಹಿಂದಿರುಗಿಸಲಾಯಿತು ನಂತರ ಮಕ್ಕಳು ಕಾಡಿನಲ್ಲಿ ಕಣ್ಮರೆಯಾದರು. ಈ ಘಟನೆಯ ನಂತರ, ಬ್ರಿಟೀಷರು ಸೆಂಟಿನೇಲೆಗಳನ್ನು ಮತ್ತೆ ಸಂಪರ್ಕಿಸಲು ಪ್ರಯತ್ನಿಸಲಿಲ್ಲ. ಪೋರ್ಟ್ಮ್ಯಾನ್ನ ದ್ವೀಪದ ದಂಡಯಾತ್ರೆ ಹೊರಗಿನವರ ಮೊದಲನೆಯ ಸಂಪರ್ಕ ಎಂದು ನಂಬಲಾಗಿದೆ.[೧೨]
1967 ರಲ್ಲಿ, ಭಾರತೀಯ ಸರ್ಕಾರವು ದ್ವೀಪಕ್ಕೆ "ಸಂಪರ್ಕ ಯಾತ್ರೆಗಳನ್ನು" ಪ್ರಾರಂಭಿಸಿತು. ಈ ಕಾರ್ಯಕ್ರಮವನ್ನು ಬುಡಕಟ್ಟು ಕಲ್ಯಾಣ ನಿರ್ದೇಶಕ ಮತ್ತು ಮಾನವಶಾಸ್ತ್ರಜ್ಞ ಟಿ. ಎನ್. ಪಂಡಿತ್ ಅವರು ನಿರ್ವಹಿಸಿದ್ದಾರೆ.[೧೩] ಪಂಡಿತ್ ನೇತೃತ್ವದ ಮೊದಲ ದಂಡಯಾತ್ರೆ ಸಶಸ್ತ್ರ ಪೊಲೀಸ್ ಮತ್ತು ನೌಕಾ ಅಧಿಕಾರಿಗಳನ್ನು ಒಳಗೊಂಡಿತ್ತು. ಸೆಂಟಿನೆಲೀಸ್ ಕಾಡಿನಲ್ಲಿ ಕಣ್ಮರೆಯಾದರು, ಮತ್ತು ಯಾತ್ರೆ ಅವರಲ್ಲಿ ಯಾವುದೇ ಸಂಪರ್ಕವನ್ನು ಮಾಡಲು ವಿಫಲವಾಯಿತು. ಈ ಯಾತ್ರೆಯ ಸಮಯದಲ್ಲಿ, ಭಾರತೀಯ ನೌಕಾದಳದ ಹಡಗು ಹವಳದ ದಿಬ್ಬಗಳ ಹೊರಗೆ ಲಂಗರು ಹಾಕುತ್ತದೆ ಮತ್ತು ಕಡಲತೀರಗಳನ್ನು ಸಮೀಪಿಸಲು ಸಣ್ಣ ದೋಣಿಗಳನ್ನು ಕಳುಹಿಸುತ್ತದೆ ಮತ್ತು ದೂರದಿಂದ ಸಿಬ್ಬಂದಿಗಳು ಹಲವಾರು ಉಡುಗೊರೆಗಳನ್ನು ಸೆಂಟಿನೆಲೀಸ್ ತೀರಕ್ಕೆ ಬಂದು ತೆಗೆದುಕೊಳ್ಳಬಹುದೆಂದು ಉಡುಗೊರೆಗಳನ್ನು ನೀರಿನಲ್ಲಿ ತೆಲಿಬಿಟ್ಟರು.[೧೨]
29 ಮಾರ್ಚ್ 1970 ರಂದು ಪಂಡಿತ್ ಒಳಗೊಂಡ ಭಾರತೀಯ ಮಾನವಶಾಸ್ತ್ರಜ್ಞರ ಸಂಶೋಧನಾ ಪಕ್ಷವು ನಾರ್ತ್ ಸೆಂಟಿನೆಲ್ ಮತ್ತು ಕಾನ್ಸ್ಟನ್ಸ್ ಐಲೆಂಡ್ ನಡುವಿನ ಬಂಡೆಗಳ ಹಿಂಭಾದಿಂದ ದೋಣಿಯ ಕಡಲತೀರದಲ್ಲಿ ಸಾಗುವುತಿರುವಾಗ ಪ್ರತ್ಯಕ್ಷವಾಗಿ ನೋಡಿ ಈ ಕೆಳಗಿನಂತೆ ದಾಖಲಿಸಿದ್ದಾನೆ,
"ಕೆಲವರು ತಮ್ಮ ಶಸ್ತ್ರಾಸ್ತ್ರಗಳನ್ನು ಬಿಟ್ಟು, ಮೀನುಗಳನ್ನು ಸಂಗ್ರಹಿಸಲು ಸನ್ನದ್ಧರಾಗಿದ್ದರು. ಮಹಿಳೆಯರು ನಮ್ಮ ವರ್ತನೆಗಳನ್ನು ವೀಕ್ಷಿಸಲು ನೆರಳಿನಿಂದ ಹೊರಬಂದರು. ... ಕೆಲವು ಪುರುಷರು ಬಂದರು ಮತ್ತು ಮೀನು ಎತ್ತಿಕೊಂಡು. ಅವರು ಕೃತಜ್ಞತೆ ತೊರಿಸಿಕೊಂಡರು, ಆದರೆ ಅವರ ಪ್ರತಿಕೂಲ ವರ್ತನೆಗೆ ಮೃದುತ್ವ ತೋರುತ್ತಿರಲಿಲ್ಲ. ... ಎಲ್ಲರೂ ಕೆಲವು ಗ್ರಹಿಸಲಾಗದ ಪದಗಳನ್ನು ಕೂಗಲು ಆರಂಭಿಸಿದರು. ನಾವು ಮತ್ತೆ ಕೂಗುತ್ತೇವೆ ಮತ್ತು ನಾವು ಸ್ನೇಹಿತರಾಗಬೇಕೆಂದು ಬಯಸಿದ್ದೇವೆ ಎಂದು ಸೂಚಿಸಲು ಸಮ್ಮತಿಸಿದ್ದೇವೆ. ಈ ಸಮಯದಲ್ಲಿ, ಒಂದು ವಿಚಿತ್ರವಾದ ವಿಷಯ ಸಂಭವಿಸಿತು ಒಬ್ಬ ಯೋಧನು ಮಹಿಳೆಯೊಂದಿಗೆ ಜೋಡಿಯಾಗಿ ಮರಳಿನ ಮೇಲೆ ಭಾವೋದ್ರಿಕ್ತ ಅಪ್ಪಿಕೊಂಡು ಕುಳಿತುಕೊಂಡಿದ್ದಾನೆ. ಈ ಕಾರ್ಯವನ್ನು ಇತರರಿಂದ ಪುನರಾವರ್ತಿಸಲಾಗುತ್ತಿತ್ತು, ಪ್ರತಿಯೊಬ್ಬರು ತಾನೇ ಸ್ವತಃ ಯೋಧ ಎಂದು ಹೇಳಿಕೊಂಡಿದ್ದಾರೆ, ಅದು ಒಂದು ವಿಧದ ಸಮುದಾಯದ ಸಂಯೋಗದ ಪ್ರಕಾರ. ಹೀಗೆ ಉಗ್ರವಾದ ಗುಂಪು ಕಡಿಮೆಯಾಯಿತು. ಇದು ಸ್ವಲ್ಪ ಸಮಯದವರೆಗೆ ಮುಂದುವರೆಯಿತು ಮತ್ತು ಅಪೇಕ್ಷೆಯ ಈ ವಿಲಕ್ಷಣ ನೃತ್ಯದ ಗತಿ ಕ್ಷೀಣಿಸಿದಾಗ ದಂಪತಿಗಳು ಕಾಡಿನ ನೆರಳಿನಲ್ಲಿ ಮರೆಯಾದರು. ಆದಾಗ್ಯೂ, ಕೆಲವು ಯೋಧರು ಈಗಲೂ ಕಾವಲಿನಲ್ಲಿದ್ದರು. ನಾವು ತೀರಕ್ಕೆ ಹತ್ತಿರವಾಗಿ ಕೆಲವು ಮೀನುಗಳನ್ನು ಎಸೆದಿದ್ದೇವೆ ಮತ್ತು ಅದನ್ನು ಕೆಲವು ಯುವಕರು ತಕ್ಷಣವೇ ಹಿಂಪಡೆದರು. ಇದು ಮಧ್ಯಾಹ್ನವಾಗಿತ್ತು ಮತ್ತು ನಾವು ಹಡಗಿಗೆ ಮರಳಿದೆವು". .[೧೪]
1974 ರ ಆರಂಭದಲ್ಲಿ, ನ್ಯಾಶನಲ್ ಜಿಯೋಗ್ರಾಫಿಕ್ ಫಿಲ್ಮ್ ಸಿಬ್ಬಂದಿ ದ್ವೀಪಕ್ಕೆ ಹೋದರು, ದ್ವೀಪದಲ್ಲಿ ಮಾಡಿದ ಅತ್ಯಂತ ಯಶಸ್ವಿ ಯಾತ್ರೆಗಳಲ್ಲಿ ಒಂದು. ಮ್ಯಾನ್ ಇನ್ ಸರ್ಚ್ ಆಫ್ ಮ್ಯಾನ್ ಎಂಬ ಸಾಕ್ಷ್ಯಚಿತ್ರವನ್ನು ಚಿತ್ರೀಕರಿಸುವ ಮಾನವಶಾಸ್ತ್ರಜ್ಞರ ತಂಡವು ನಾರ್ತ್ ಸೆಂಟಿನೆಲಗೆ ಭೇಟಿ ನೀಡಿದೆ. ತಂಡವು ಸಶಸ್ತ್ರ ಪೋಲಿಸ್ ಅಧಿಕಾರಿಗಳು ಮತ್ತು ನ್ಯಾಷನಲ್ ಜಿಯಾಗ್ರಫಿಕ್ ಛಾಯಾಗ್ರಾಹಕ ಜೊತೆಯಲ್ಲಿತ್ತು. ಯಾಂತ್ರಿಕೃತ ದೋಣಿ ತಡೆಗೋಡೆ ಬಂಡೆಗಳ ಮೂಲಕ ಹೋಗುವಾಗ, ಸ್ಥಳೀಯರು ಅರಣ್ಯದಿಂದ ಹೊರಬಂದರು. ಸೆಂಟಿನೇಲೆಗಳು ಬಾಣಗಳ ಬಿಟ್ಟು ಪ್ರತಿಕ್ರಿಯಿಸಿದರು. ರಕ್ಷಾಕವಚ ಧರಿಸಿದ್ದ ಒಂದು ಪೊಲೀಸ್ ದೋಣಿ ತೀರದಲ್ಲಿ ಇಳಿಯಿತು ಮತ್ತು ಮರಳಿನಲ್ಲಿ ಚಿಕ್ಕ ಪ್ಲಾಸ್ಟಿಕ್ ಕಾರ್, ಕೆಲವು ತೆಂಗಿನಕಾಯಿ, ಜೀವಂತ ಹಂದಿ, ಗೊಂಬೆ ಮತ್ತು ಅಲ್ಯೂಮಿನಿಯಂ ಪಾತ್ರೆಯ ಉಡುಗೊರೆಗಳನ್ನು ಬಿಟ್ಟುಕೊಟ್ಟಿತು.[೧೫] ಪೊಲೀಸರು ದೋಣಿಗೆ ಮರಳಿದರು. ಸ್ಥಳೀಯರು ಉಡುಗೊರೆಗಳನ್ನು ನೋಡಲು ಕಾಯುತ್ತಿದ್ದರು. ಮತ್ತೊಂದು ಸುತ್ತಿನ ಬಾಣ ಪ್ರತಿಕ್ರಿಯೆಯಾಗಿತ್ತು, ಅದರಲ್ಲಿ ಒಂದು ಸಾಕ್ಷ್ಯಚಿತ್ರ ನಿರ್ದೇಶಕನನ್ನು ಎಡ ತೊಡೆಯಲ್ಲಿ ನಾಟಿತು. ನಿರ್ದೇಶಕನನ್ನು ಗಾಯಗೊಳಿಸಿದ ವ್ಯಕ್ತಿಯು ನೆರಳಿನಲ್ಲಿ ಕುಳಿತುಕೊಂಡು ನಗುತಿರಲು, ಇತರರು ಹರಡಿಕೊಂಡರು, ನಂತರ ಹಂದಿಯನ್ನು ಸಮಾಧಿ ಮಾಡಿ, ಗೊಂಬೆ ಬಿಟ್ಟು, ತೆಂಗಿನಕಾಯಿಗಳು ಮತ್ತು ಅಲ್ಯೂಮಿನಿಯಂ ಪಾತ್ರೆಯನ್ನು ಮಾತ್ರ ತೆಗೆದುಕೊಂಡರು.[೧೫][೧೬] 1980 ರಲ್ಲಿ ಆಂಗ್ಗೆ ಮಾತನಾಡುವ ವ್ಯಕ್ತಿಗಳನ್ನು ಉತ್ತರ ಸೆಂಟಿನಲ್ ದ್ವೀಪಕ್ಕೆ ಸಂವಹನ ನಡೆಸಲು ಪ್ರಯತ್ನಿಸಿದಾಗ ಆನಿವಾಸಿಗಳು ಮಾತನಾಡುವ ಯಾವುದೇ ಭಾಷೆಯನ್ನು ಅವರು ಗುರುತಿಸಲು ಸಾಧ್ಯವಾಗಲಿಲ್ಲ.[೧೭]
1981 ರ ಆಗಸ್ಟ್ 2 ರಂದು, ಎಂವಿ ಪ್ರೈಮ್ರೋಸ್ ಹಡಗನ್ನು ನಾರ್ತ್ ಸೆಂಟಿನಲ್ ದ್ವೀಪದ ನೆಲಕ್ಕೆ ಓಡಿಸಿದನ್ನು. ಇಪ್ಪತ್ತೆಂಟು ಸೆಂಟಿನಲ್ ಜನರು ಹತ್ತಿರ ಬಂದರು. ಮರುದಿನ ಬೆಳಿಗ್ಗೆ, ಹಡಗಿನ ಕ್ಯಾಪ್ಟನ್ ತುರ್ತು ಸಂದೇಶಗಳನ್ನು ಪ್ರಸಾರ ಮಾಡಿದರು, ಸ್ಥಳೀಯರು ಬಾಣ ಮತ್ತು ಈಟಿ ದಾಳಿ ಮಾಡುವ ಅಂಚಿನಲ್ಲಿದ್ದರು ಎಂದು ಸೂಚಿಸಿದರು.[೧೮] ನೌಕಾಘಾತಕ್ಕೊಳಗಾದ ಎರಡು ವಾರಗಳ ನಂತರ, ಹಡಗಿನಲ್ಲಿದ್ದ ಎಲ್ಲ ಸಿಬ್ಬಂದಿ ಮತ್ತು ಪ್ರಯಾಣಿಕರು ಯಶಸ್ವಿಯಾಗಿ ಹೆಲಿಕಾಪ್ಟರ್ನಿಂದ ಸ್ಥಳಾಂತರಿಸಲ್ಪಟ್ಟರು.
1990 ರ ದಶಕದ ಆರಂಭದಲ್ಲಿ, ದೋಣಿಗಳು ದಡಕ್ಕೆ ಹತ್ತಿರ ಬರಲು ಸೆಂಟಿನೇಲೆಗಳು ಬಿಟರು, ಮತ್ತು ಕೆಲವೊಮ್ಮೆ ಅವರನ್ನು ಸ್ವಾಗತಿಸಿದರು. ಆದಾಗ್ಯೂ, ಕೆಲವು ನಿಮಿಷಗಳ ನಂತರ, ಬಾಣಬಿರುಸುಗಳು ಇಲ್ಲದೆ ಬೆದರಿಕೆಗಳು ಮತ್ತು ಗುಂಡಿನ ಬಾಣಗಳನ್ನು ಬಿಟರು. 1996 ರಲ್ಲಿ, ಭಾರತೀಯ ಸರ್ಕಾರದ ಪ್ರಯತ್ನಗಳ ಸರಣಿಯ ನಂತರ "ಸಂಪರ್ಕ ಎಕ್ಸ್ಪೆಡಿಶನ್ಸ್" ಅನ್ನು ಕೊನೆಗೊಳಿಸಿತು. ದಕ್ಷಿಣ ಮತ್ತು ಮಧ್ಯ ಅಂಡಮಾನ್ ದ್ವೀಪಗಳ ಜರಾವಾ ಜನರೊಂದಿಗೆ ನಡೆಸಿದ ಇದೇ ರೀತಿಯ ಕಾರ್ಯಕ್ರಮಗಳಲ್ಲಿ ಹಲವಾರು ಸಾವುಗಳು ಸಂಭವಿಸಿವೆ ಮತ್ತು ರೋಗಗಳನ್ನು ಪರಿಚಯಿಸುವ ಅಪಾಯದ ಕಾರಣದಿಂದಾಗಿ ಇದು ಸಂಭವಿಸಿತು.[೧೨]
2004 ಹಿಂದೂ ಮಹಾಸಾಗರದ ಸುನಾಮಿಯಿಂದ ಸೆಂಟ್ನಿಲೀಸ್ ಅಪಾಯದಿಂದ ಪಾರಗಿದ್ದಾರೆ ಎಂದು ಕಂಡುಬರುತ್ತದೆ. ಸುನಾಮಿಯ ನಂತರ ಮೂರು ದಿನಗಳಲ್ಲಿ, ಭಾರತೀಯ ನೌಕಾ ಹೆಲಿಕಾಪ್ಟರ್ ಅವರನ್ನು ಪರೀಕ್ಷಿಸಲು ಮತ್ತು ಸಮುದ್ರತೀರದಲ್ಲಿ ಆಹಾರವನ್ನು ಬಿಡಲು ಕಳುಹಿಸಲಾಯಿತು. ಸೆಂಟ್ನೆಲೀಸ್ ಯೋಧರು ಕಾಡಿನಿಂದ ಹೊರಬಂದು ಬಿಲ್ಲು ಮತ್ತು ಬಾಣವನ್ನು ಹೊಡೆದು ಅವರನ್ನು ಎಚ್ಚರಿಸಿದರು.[೧೨]
2006 ರಲ್ಲಿ, ಸೆಂಟಿನೇಲ್ಸ್ ಬಿಲ್ಲುಗಾರರು ದ್ವೀಪದ ವ್ಯಾಪ್ತಿಯಲ್ಲಿ ಮಣ್ಣಿನ ಏಡಿಗಳಿಗಾಗಿ ಅಕ್ರಮವಾಗಿ ಮೀನುಗಾರಿಕೆ ಮಾಡುತ್ತಿದ್ದ ಇಬ್ಬರು ಮೀನುಗಾರರನ್ನು ಕೊಂದರು. ದೇಹಗಳನ್ನು ಹಿಂಪಡೆಯಲು ಕಳುಹಿಸಲಾದ ಭಾರತೀಯ ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್ ಅನ್ನು ಸೆನೆನೆಲೀಸ್ ಯೋಧರು ಓಡಿಸಿದರು[೧೯] [೨೦]ಕೊಲೆಗಾರರನ್ನು ಬಂದಿಸಲು ಭಾರತೀಯ ಸರ್ಕಾರವು ಯಾವುದೇ ಪ್ರಯತ್ನ ಮಾಡಲಿಲ್ಲ. [22]
ಪ್ರಸ್ತುತ ಪರಿಸ್ಥಿತಿ
[ಬದಲಾಯಿಸಿ]ಅವರ ದ್ವೀಪಗಳು ಕಾನೂನುಬದ್ಧವಾಗಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಇಂಡಿಯನ್ ಯೂನಿಯನ್ ಪ್ರಾಂತ್ಯದ ಭಾಗವಾಗಿದೆ. ಆಚರಣೆಯಲ್ಲಿ, ಸೆಂಟ್ನೆಲೀಸ್ ತಮ್ಮ ವ್ಯವಹಾರಗಳ ಮೇಲೆ ಸಂಪೂರ್ಣ ಸಾರ್ವಭೌಮತ್ವದ ಹೊಂದಿದ್ದಾರೆ. ಭಾರತೀಯ ಅಧಿಕಾರಿಗಳು ವಿರಳ ಮತ್ತು ಸಂಕ್ಷಿಪ್ತ ಭೇಟಿಗಳ ಸಾಂದರ್ಭಿಕ ಮೇಲ್ವಿಚಾರಣೆ ಮಾಡುತ್ತಾರೆ. ದ್ವೀಪಕ್ಕೆ ಯಾವುದೇ ಪ್ರವೇಶ ನಿರ್ಬಂಧಿಸಲಾಗಿದೆ. ಹಿಂಸಾತ್ಮಕ ಅಥವಾ ಅಹಿಂಸಾತ್ಮಕ (ಸಶಸ್ತ್ರ ಅಥವಾ ನಿಶ್ಶಸ್ತ್ರ) ಭವಿಷ್ಯದ ಸಂಪರ್ಕದ ಸಾಧ್ಯತೆಯನ್ನು ವಿವಿಧ ಸಂಘಟನೆಗಳು ಮತ್ತು ರಾಷ್ಟ್ರಗಳ ಜೊತೆ ಚರ್ಚಿಸಲಾಗಿದೆ.
ಉಲ್ಲೇಖಗಳು
[ಬದಲಾಯಿಸಿ]- ↑ https://www.worldcat.org/title/cartography-for-development-of-outlying-states-and-islands-of-india-short-papers-submitted-at-natmo-seminar-calcutta-december-3-6-1990/oclc/26542161
- ↑ http://censusindia.gov.in/Ad_Campaign/drop_in_articles/06-Enumeration_of_Primitive_Tribes_in_A&N_Islands.pdf#page=3
- ↑ http://censusindia.gov.in/Tables_Published/SCST/ST%20Lists.pdf
- ↑ https://web.archive.org/web/20141211011020/http://censusindia.gov.in/Ad_Campaign/drop_in_articles/06-Enumeration_of_Primitive_Tribes_in_A%26N_Islands.pdf#page=3
- ↑ http://ls1.and.nic.in/doef/WebPages/ForestStatistics2013.pdf
- ↑ http://censusindia.gov.in/2011census/dchb/3500_PART_B_DCHB_ANDAMAN%20&%20NICOBAR%20ISLANDS.pdf#page=177
- ↑ https://news.nationalgeographic.com/news/2005/01/0125_050125_tsunami_island.html
- ↑ https://books.google.co.in/books?id=Nl8iAAAAMAAJ&redir_esc=y
- ↑ https://www.worldcat.org/title/cartography-for-development-of-outlying-states-and-islands-of-india-short-papers-submitted-at-natmo-seminar-calcutta-december-3-6-1990/oclc/26542161<
- ↑ https://web.archive.org/web/20130402170506/http://andaman.org/BOOK/chapter8/text8.htm#sentineli
- ↑ https://books.google.co.in/books?id=Y1o8AQAAIAAJ&pg=PA728&redir_esc=y
- ↑ ೧೨.೦ ೧೨.೧ ೧೨.೨ ೧೨.೩ http://www.neatorama.com/2013/07/08/The-Forbidden-Island/
- ↑ https://www.jstor.org/stable/41213066?seq=1#page_scan_tab_contents
- ↑ https://web.archive.org/web/20130603135711/http://andaman.org/BOOK/chapter12/text12.htm
- ↑ ೧೫.೦ ೧೫.೧ https://books.google.co.in/books?pg=PA357&id=9UzX63tCpXQC&redir_esc=y#v=onepage&q&f=false
- ↑ https://www.youtube.com/watch?v=kJQuYKYxdVI
- ↑ https://books.google.co.in/books?id=ocgNvcvYc9gC&pg=PA361&lpg=PA361&dq=Sentinelese+language&source=bl&ots=BFfSxej5H5&sig=ZcMaP2t7Plo8uDGkfZxX-gxFGKo&hl=en&ei=SDHNSt-mCMSQlAeasuTMBg&sa=X&oi=book_result&ct=result&redir_esc=y#v=onepage&q=Sentinelese%20language&f=false
- ↑ https://www.upi.com/Archives/1981/08/25/Twenty-eight-sailors-shipwrecked-for-nearly-two-weeks-off-a/1381367560000/
- ↑ https://www.telegraph.co.uk/news/worldnews/asia/india/1509987/Stone-Age-tribe-kills-fishermen-who-strayed-on-to-island.html
- ↑ https://www.theguardian.com/world/2006/feb/12/theobserver.worldnews12