ಸೂಪರ್ ರೆಕಗ್ನೈಸರ್
೨೦೦೯ ರಲ್ಲಿ ಲಂಡನ್‌ನಲ್ಲಿನ ಹಾರ್ವರ್ಡ್ ಯೂನಿವರ್ಸಿಟಿ ಕಾಲೇಜಿನ ಸಂಶೋಧಕರು ಸರಾಸರಿಗಿಂತ ಉತ್ತಮವಾದ ಮುಖ ಗುರುತಿಸುವ ಸಾಮರ್ಥ್ಯವನ್ನು ಹೊಂದಿರುವ ಜನರಿಗಾಗಿ ಸೂಪರ್ ರೆಕಗ್ನೈಸರ್ ಎಂಬ ಪದವನ್ನು ಸೃಷ್ಟಿಸಿದರು.[೧][೨] ಸೂಪರ್ ರೆಕಗ್ನೈಸರ್‌ಗಳು ಒಂದೇ ಬಾರಿಗೆ ನೋಡಿದ ಸಾವಿರಾರು ಮುಖಗಳನ್ನು ನೆನಪಿಟ್ಟುಕೊಳ್ಳುವ ಮತ್ತು ನೆನಪಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದ್ದಾರೆ. [೩]
ಕೌಶಲ್ಯ
[ಬದಲಾಯಿಸಿ]ಇದು ಪ್ರೊಸೊಪಾಗ್ನೋಸಿಯಾಕ್ಕೆ ವಿರುದ್ಧವಾಗಿದೆ. ಜನಸಂಖ್ಯೆಯ ೧ ರಿಂದ ೨% ರಷ್ಟು ಜನರು ಸೂಪರ್ ರೆಕಗ್ನೈಸರ್[೩] ಆಗಿದ್ದಾರೆ ಎಂದು ಅಂದಾಜಿಸಲಾಗಿದೆ, ಹಾಗೂ ಅವರು ೨೦% ಸಾಮಾನ್ಯ ಜನಸಂಖ್ಯೆಗೆ[೪] ಹೋಲಿಸಿದರೆ ಅವರು ನೋಡಿದ ೮೦% ಮುಖಗಳನ್ನು ನೆನಪಿಸಿಕೊಳ್ಳುತ್ತಾರೆ, ಆದರೆ ಈ ಅಂಕಿಅಂಶಗಳು ವಿವಾದಾಸ್ಪದವಾಗಿವೆ.[೫]ಕೆಲವು ಸಂದರ್ಭಗಳಲ್ಲಿ ಕಂಪ್ಯೂಟರ್ ಗುರುತಿಸುವಿಕೆ ವ್ಯವಸ್ಥೆಗಳಿಗಿಂತ ಸೂಪರ್ ರೆಕಗ್ನೈಸರ್‌ಗಳು ಮುಖಗಳನ್ನು ಉತ್ತಮವಾಗಿ ಗುರುತಿಸಬಹುದು.[೩][೬][೭] ಇದರ ಹಿಂದಿನ ವಿಜ್ಞಾನವನ್ನು ಸರಿಯಾಗಿ ಅರ್ಥಮಾಡಿಕೊಳ್ಳಲಾಗದಿದ್ದರೂ ಇದು ಮೆದುಳಿನ ಫ್ಯೂಸಿಫಾರ್ಮ್ ಮುಖದ ಭಾಗಕ್ಕೆ ಸಂಬಂಧಿಸಿರಬಹುದೆಂದು ಅಂದಾಜಿಸಲಾಗಿದೆ.[೩]
ಪ್ರಾಯೋಗಿಕ ಅನ್ವಯಗಳು
[ಬದಲಾಯಿಸಿ]ಬ್ರಿಟಿಷ್ ಗುಪ್ತಚರ ಸಮುದಾಯದಲ್ಲಿ ಈ ಕೌಶಲ್ಯವನ್ನು ಗುರುತಿಸಿ ಬಳಸಿಕೊಳ್ಳಲಾಗಿದೆ.[೮]
ಮೇ ೨೦೧೫ರಲ್ಲಿ, ಲಂಡನ್ ಮೆಟ್ರೋಪಾಲಿಟನ್ ಪೋಲೀಸ್ ಅಧಿಕೃತವಾಗಿ ಜನರನ್ನು ಗುರುತಿಸುವ ಈ ಉನ್ನತ ಸಾಮರ್ಥ್ಯ ಹೊಂದಿರುವ ಜನರ ತಂಡವನ್ನು ರಚಿಸಿತು ಮತ್ತು ಸಿಸಿಟಿವಿಯಲ್ಲಿ ಸೆರೆಯಾಗಿರುವ ವ್ಯಕ್ತಿಗಳನ್ನು ಗುರುತಿಸುವ ಕೆಲಸಕ್ಕೆ ಅವರನ್ನು ತೊಡಗಿಸಿಕೊಂಡಿತು.[೩]ಸ್ಕಾಟ್‌ಲ್ಯಾಂಡ್ ಯಾರ್ಡ್ ೨೦೦ಕ್ಕೂ ಹೆಚ್ಚು ಸೂಪರ್ ರೆಕಗ್ನೈಸರ್‌ಗಳ ತಂಡವನ್ನು ಹೊಂದಿದೆ. [೯] ಆಗಸ್ಟ್ ೨೦೧೮ರಲ್ಲಿ,ಸೆರ್ಗೆಯ್ ಮತ್ತು ಯುಲಿಯಾ ಸ್ಕ್ರಿಪಾಲ್ ಮೇಲಿನ ದಾಳಿಯ ಶಂಕಿತರನ್ನು ಗುರುತಿಸಲು ಮೆಟ್ರೋಪಾಲಿಟನ್ ಪೋಲೀಸರು ಸ್ಯಾಲಿಸ್‌ಬರಿ ಮತ್ತು ದೇಶಾದ್ಯಂತ ಹಲವಾರು ವಿಮಾನ ನಿಲ್ದಾಣಗಳಿಂದ ೫,೦೦೦ ಗಂಟೆಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪತ್ತೆಹಚ್ಚಿದ ನಂತರ ಎರಡು ಸೂಪರ್ ರೆಕಗ್ನೈಸರ್‌ಗಳನ್ನು ಬಳಸಿದ್ದಾರೆ ಎಂದು ವರದಿಯಾಗಿದೆ.[೧೦][೧೧] ಥೇಮ್ಸ್ ವ್ಯಾಲಿ ಪೋಲಿಸ್, ಸಿಟಿ ಆಫ್ ಲಂಡನ್ ಪೋಲಿಸ್, ಜೆರ್ಸಿ ಪೋಲಿಸ್ ಮತ್ತು ವೆಸ್ಟ್ ಮಿಡ್‌ಲ್ಯಾಂಡ್ಸ್ ಪೋಲಿಸ್ ಅನ್ನು ಒಳಗೊಂಡಂತೆ ಇತರ ಪೋಲೀಸ್ ಪಡೆಗಳು ಸೂಪರ್ ರೆಕಗ್ನೈಸರ್‌ಗಳನ್ನು ಬಳಸುತ್ತವೆ.[೧೨]
೨೦೨೦ರ ಸ್ಟಟ್‌ಗಾರ್ಟ್ ಗಲಭೆಯ ಹಿನ್ನೆಲೆಯಲ್ಲಿ ಜರ್ಮನ್ ಪೋಲೀಸ್ ಪಡೆಗಳು ಶಂಕಿತರನ್ನು ಗುರುತಿಸುವುದಕ್ಕಾಗಿ ಸೂಪರ್ ರೆಕಗ್ನೈಸರ್‌ಗಳ ಬಳಕೆಯನ್ನು ಹೆಚ್ಚಿಸಿವೆ.[೧೩]
ಗ್ಲ್ಯಾಸ್ಗೋ ಫೇಸ್ ಹೊಂದಾಣಿಕೆಯ ಪರೀಕ್ಷೆ
[ಬದಲಾಯಿಸಿ]ನಿಯಂತ್ರಣ ಗುಂಪಿಗೆ ಹೋಲಿಸಿದರೆ ಸೂಪರ್ ರೆಕಗ್ನೈಸರ್‌ಗಳು ಗ್ಲ್ಯಾಸ್ಗೋ ಫೇಸ್ ಮ್ಯಾಚಿಂಗ್ ಟೆಸ್ಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದರು.[೧೪]
ಉಲ್ಲೇಖಗಳು
[ಬದಲಾಯಿಸಿ]- ↑ Russell, Richard; Duchaine, Brad; Nakayama, Ken (April 2009). "Super-recognizers: People with extraordinary face recognition ability". Psychonomic Bulletin & Review. 16 (2): 252–257. doi:10.3758/PBR.16.2.252. PMC 3904192. PMID 19293090.
- ↑ Dahl, Melissa (August 13, 2020). "What Does It Mean If You're Really Really Good at Recognizing Faces?". The Cut (in ಇಂಗ್ಲಿಷ್). Retrieved 2018-09-27.
- ↑ ೩.೦ ೩.೧ ೩.೨ ೩.೩ ೩.೪ Moshakis, Alex (11 November 2018). "Super recognisers: the people who never forget a face". The Guardian. Retrieved 2018-11-13.
- ↑ "I put names to faces as a police super-recogniser". www.ft.com. Retrieved 17 February 2020.
- ↑ Ramon, Meike; Bobak, Anna K.; White, David (August 2019). "Super-recognizers: From the lab to the world and back again". British Journal of Psychology. 110 (3): 461–479. doi:10.1111/bjop.12368. PMC 6767378. PMID 30893478.
- ↑ Barry, Ellen (2018-09-06). "From Mountain of CCTV Footage, Pay Dirt: 2 Russians Are Named in Spy Poisoning". The New York Times. Retrieved 6 September 2018.
- ↑ Keefe, Patrick Radden (15 August 2016). "The Detectives Who Never Forget a Face". The New Yorker. Retrieved 6 September 2018.
- ↑ "Super Recognisers". Crime + Investigation (in ಇಂಗ್ಲಿಷ್). 2017-07-05. Retrieved 2018-09-27.
- ↑ Jaslow, Ryan (2013-09-27). "London police using 200 super-recognizers: What makes them "super"?". CBS News. Retrieved 2020-01-23.
- ↑ Hopkins, Nick; Harding, Luke; MacAskill, Ewen (6 August 2018). "UK poised to ask Russia to extradite Salisbury attack suspects". the Guardian.
- ↑ Brunt, Martin (28 August 2018). "Super recogniser squad tracks Skripal novichok attackers". news.sky.com.
- ↑ "Thames Valley Police: 'Super-recognisers' used to patrol for sex offenders". BBC News. 25 August 2023.
- ↑ "Jeder zweite Verdächtige wiedererkannt – dank »Super-Recogniser«" [One in two suspects identified - thanks to 'super recognisers']. Der Spiegel (in ಜರ್ಮನ್). 25 August 2021. Retrieved August 31, 2021.
- ↑ Robertson, David James (24 March 2016). "Could super recognisers be the latest weapon on the war on terror?". The Conversation. Retrieved 31 August 2021.