ವಿಷಯಕ್ಕೆ ಹೋಗು

ಸುದ್ದಿಗಾರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸ್ಥಳದಲ್ಲಿರುವ ಸುದ್ದಿಗಾರ

ಸಾಮಾನ್ಯವಾಗಿ ಸುದ್ದಿಗಾರ ಅಥವಾ ಬಾತ್ಮಿದಾರನು ದೂರದ ಸ್ಥಳದಿಂದ ಮ್ಯಾಗಜ಼ೀನ್‍ಗಳಿಗೆ ಸುದ್ದಿ ಒದಗಿಸುವ ಪತ್ರಕರ್ತ ಅಥವಾ ವ್ಯಾಖ್ಯಾನಕಾರ, ಅಥವಾ ಹೆಚ್ಚು ಸಾಮಾನ್ಯವಾಗಿ ಹೇಳುವುದಾದರೆ, ವೃತ್ತಪತ್ರಿಕೆ, ಅಥವಾ ರೇಡಿಯೊ ಅಥವಾ ದೂರದರ್ಶನ ಸುದ್ದಿಗಳು, ಅಥವಾ ಬೇರೊಂದು ಬಗೆಯ ಕಂಪನಿಗೆ ವರದಿಗಳ ಕೊಡುಗೆ ನೀಡುವ ಏಜಂಟು. ವಿದೇಶಿ ಸುದ್ದಿಗಾರನು ಒಂದು ವಿದೇಶದ ರಾಷ್ಟ್ರದಲ್ಲಿ ನೆಲೆಗೊಂಡಿರುತ್ತಾನೆ. ಮೂಲತಃ ಸುದ್ದಿಗಾರರು ಅಂಚೆಪತ್ರದ ಮೂಲಕ ಸುದ್ದಿ ವರದಿಗಳನ್ನು ದಾಖಲಿಸುತ್ತಿದ್ದರು. ಇದು ಮೊದಲಿನ ಅಭ್ಯಾಸವಾಗಿತ್ತು. ಸುದ್ದಿಗಾರರ ಅತ್ಯಂತ ದೊಡ್ಡ ಜಾಲವು ಜರ್ಮನಿಯ ಏಆರ್‌ಡಿ ಮತ್ತು ಯು.ಕೆ.ಯ ಬಿಬಿಸಿಗೆ ಸೇರಿದೆ.

ಕಾನೂನು ವರದಿಗಾರನು ಕಾನೂನು ಅಥವಾ ಅಪರಾಧಿಕ ನ್ಯಾಯದ ವಿಷಯಗಳನ್ನು ಒಳಗೊಂಡ ಸಮಸ್ಯೆಗಳ ಬಗ್ಗೆ ವರದಿ ಮಾಡುತ್ತಾನೆ, ಮತ್ತು ಹಲವುವೇಳೆ ನ್ಯಾಯಾಲಯದ ಹತ್ತಿರದಿಂದ ವರದಿ ಮಾಡಬಹುದು.

ವಿದೇಶಿ ಸುದ್ದಿಗಾರನು ಮುಖ್ಯವಾಗಿ ವಿದೇಶದ ಸ್ಥಳಗಳಿಂದ ವರದಿ ಮಾಡುವ ವ್ಯಕ್ತಿಯಾಗಿರುತ್ತಾನೆ.

ಯುದ್ಧ ವರದಿಗಾರನು ಒಂದು ಯುದ್ಧ ಕ್ಷೇತ್ರದಿಂದ ಖುದ್ದಾಗಿ ವರದಿ ಮಾಡುವ ವಿದೇಶಿ ಸುದ್ದಿಗಾರ.