ಸುಕ ದೇವಾಲಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸುಕ ದೇವಾಲಯವು ಒಡಿಶಾ ರಾಜ್ಯದ ರಾಜಧಾನಿಯಾದ ಭುವನೇಶ್ವರದಲ್ಲಿರುವ ಒಂದು ಪರಿತ್ಯಕ್ತ ಹಾಗೂ ಉಪಯೋಗದಲ್ಲಿಲ್ಲದ ದೇವಾಲಯವಾಗಿದೆ. ಈ ದೇವಾಲಯವು ಉಪರ ಜಂಘದಲ್ಲಿನ ದಿಕ್ಪಾಲಕರ ಸ್ತ್ರೀರೂಪಗಳಿಗೆ ಸಮರ್ಪಿತವಾಗಿದೆ. ಈ ದೇವಾಲಯವನ್ನು ಒಡಿಶಾದ ದೇವಾಲಯ ನಿರ್ಮಾಣ ಸಂಪ್ರದಾಯದ ಪ್ರೌಢ ಹಂತದಲ್ಲಿ ನಿರ್ಮಿಸಲಾಗಿತ್ತು.

ಸುಕ ಸಾರಿ ದೇವಾಲಯದಲ್ಲಿ ಕಲ್ಲಿನಲ್ಲಿ ಕೊರೆದು ಹುದುಗಿಸಲಾದ ದೇವಿ

ಸುಕ ದೇವಸ್ಥಾನವು ಭುವನೇಶ್ವರದ ಹಳೆ ಪಟ್ಟಣದಲ್ಲಿ ಸ್ಥಿತವಾಗಿದೆ. ಇದು ಬಿಂದುಸಾಗರ ಕೊಳದ ದಕ್ಷಿಣದ ಒಡ್ಡಿನ ಹತ್ತಿರ ಸ್ಥಿತವಾಗಿದೆ. ದೇವಾಲಯವು ಪಶ್ಚಿಮಾಭಿಮುಖವಾಗಿದೆ. ದೇವಾಲಯವು ಬಳಕೆಯಲ್ಲಿಲ್ಲವಾದರೂ ದೇವಾಲಯದ ಹೊರಗಿನ ಗೋಡೆಗಳ ಮೇಲಿನ ಶಿಲ್ಪಕಲಾ ಅಲಂಕರಣಗಳು ಈ ದೇವಾಲಯವು ಮೂಲತಃ ಶಿವನಿಗೆ ಸಮರ್ಪಿತವಾಗಿತ್ತು ಎಂದು ಸೂಚಿಸುತ್ತವೆ. ಈ ದೇವಾಲಯವು ವಾಸ್ತುಶಿಲ್ಪರೀತ್ಯ ಮತ್ತು ಶಿಲ್ಪಕಲಾರೀತ್ಯ ಸುಸ್ಥಿತಿಯಲ್ಲಿದೆಯಾದರೂ, ಇದು ಪರಿತ್ಯಕ್ತವಾಗಿದ್ದು ಬಳಕೆಯಲ್ಲಿಲ್ಲ. ದೇವಾಲಯವು ಈಗಿನ ನೆಲದ ಮಟ್ಟಕ್ಕಿಂತ ೧.೮ ಮೀಟರ್ ಕೆಳಗಿದೆ. ಇದರ ಕಾಲ ಕ್ರಿ.ಶ. ೧೩ನೇ ಶತಮಾನವೆಂದು ಹೇಳಲಾಗಿದೆ ಅಂದರೆ ಸುಮಾರು ಗಂಗರ ಆಳ್ವಿಕೆಯ ಕಾಲದಲ್ಲಿ.

ಉಲ್ಲೇಖಗಳು[ಬದಲಾಯಿಸಿ]

  1. http://ignca.nic.in/asi_reports/orkhurda171.pdf Archived 2016-03-03 ವೇಬ್ಯಾಕ್ ಮೆಷಿನ್ ನಲ್ಲಿ.
  2. http://ignca.nic.in/asp/all.asp?projectid=orkhr1710001 Archived 2016-03-03 ವೇಬ್ಯಾಕ್ ಮೆಷಿನ್ ನಲ್ಲಿ.
  3. Book: Lesser Known Monuments of Bhubaneswar by Dr. Sadasiba Pradhan ( )