ಸೀತಾಳಯ್ಯನ ಗಿರಿ
Jump to navigation
Jump to search
ಸೀತಾಳಯ್ಯನ ಗಿರಿಯು ಮುಳ್ಳಯ್ಯನಗಿರಿ ಬೆಟ್ಟದ ಸಾಲಿನಲ್ಲಿ ಬರುವ ಮತ್ತೊಂದು ಪ್ರವಾಸಿ ಹಾಗು ಧಾರ್ಮಿಕ ಸ್ಥಳ. ಇದು ಮುಳ್ಳಯ್ಯನಗಿರಿಗೆ ರಸ್ತೆ ಮಾರ್ಗದಲ್ಲಿ ಹೋಗುವಾಗ ಮುಳ್ಳಯ್ಯನಗಿರಿಗಿಂತ ಸುಮಾರು ೩ ಕಿ.ಮೀ ಮೊದಲು ಸಿಗುತ್ತದೆ. ಇಲ್ಲಿ ಸೀತಾಳಯ್ಯನವರ ದೇವಾಲಯವಿದೆ. ಸುತ್ತ ಮುತ್ತಲಿನ ಗ್ರಾಮಗಳ ಜನರು ಇಲ್ಲಿನ ದೇವಾಲಯಕ್ಕೆ ಶ್ರದ್ದೆ ಭಕ್ತಿಯಿಂದ ನಡೆದುಕೊಳ್ಳುತ್ತಾರೆ. ಇಲ್ಲಿಂದ ಪ್ರಕೃತಿಯ ಸುಂದರ ಸೊಬಗನ್ನು ಕಾಣಬಹುದು. ಸ್ಥಳೀಯ ಜನರು ಮುಳ್ಳಯ್ಯನಗಿರಿಗೆ ಹೋಗುವ ಮುನ್ನ ಸೀತಾಳಯ್ಯನ ಗಿರಿಯ ದೇವಸ್ಥಾನದಲ್ಲಿ ದೇವರ ದರ್ಶನ ಪಡೆದು ಹೋಗುವುದು ಪ್ರತೀತಿ. ಹಾಗೆಯೆ ಇಲ್ಲಿಂದ ಮುಳ್ಳಯ್ಯನಗಿರಿಗೆ ಹೋಗಲು ರಸ್ತೆ ಮಾರ್ಗ ಬಿಟ್ಟರೆ ಕಾಲು ದಾರಿ ಕೂಡ ಇದೆ.