ಸೀಟಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸೀಟಿಯು ಅನಿಲದ ಪ್ರವಾಹದಿಂದ, ಅತ್ಯಂತ ಸಾಮಾನ್ಯವಾಗಿ ಗಾಳಿಯಿಂದ ಧ್ವನಿಯನ್ನು ಸೃಷ್ಟಿಸುವ ಉಪಕರಣ. ಇದನ್ನು ಬಾಯಿಯಿಂದ ಊದಬಹುದು ಅಥವಾ ಗಾಳಿ ಒತ್ತಡ, ಆವಿ ಅಥವಾ ಇತರ ವಿಧಾನಗಳಿಂದ ನಿರ್ವಹಿಸಬಹುದು. ಸೀಟಿಗಳು ಗಾತ್ರಗಳಲ್ಲಿ ಚಿಕ್ಕ ಜಾರು ಸೀತಿ ಅಥವಾ ನಾಸಿಕ ಕೊಳಲಿನ ಬಗೆಯಿಂದ ಹಿಡಿದು ದೊಡ್ಡ ಬಹುನಳಿಕೆಯ ಆರ್ಗನ್‍ವರೆಗೆ ಬದಲಾಗುತ್ತವೆ.

ಸೀಟಿಗಳು ಮುಂಚಿನ ಮಾನವರು ಮೊದಲ ಬಾರಿಗೆ ಬುರುಡೆ ಅಥವಾ ರೆಂಬೆಯನ್ನು ಕೆತ್ತಿ ಅದರಿಂದ ಧ್ವನಿ ಹೊರಡಿಸಬಹುದೆಂದು ಕಂಡುಕೊಂಡ ಕಾಲದಿಂದ ಅಸ್ತಿತ್ವದಲ್ಲಿವೆ. ಪ್ರಾಗೈತಿಹಾಸಿಕ ಈಜಿಪ್ಟ್‌ನಲ್ಲಿ, ಚಿಕ್ಕ ಕಪ್ಪೆಚಿಪ್ಪುಗಳನ್ನು ಸೀಟಿಗಳಾಗಿ ಬಳಸಲಾಗುತ್ತಿತ್ತು.[೧] ಅನೇಕ ಇಂದಿನ ದಿನದ ಗಾಳಿವಾದ್ಯಗಳು ಈ ಮುಂಚಿನ ಸೀಟಿಗಳ ವಾರಸುದಾರರಾಗಿವೆ. ಹೆಚ್ಚಿನ ಯಾಂತ್ರಿಕ ಶಕ್ತಿಯ ಏಳಿಗೆಯೊಂದಿಗೆ, ಇತರ ರೂಪಗಳ ಸೀಟಿಗಳನ್ನು ಅಭಿವೃದ್ಧಿಪಡಿಸಲಾಗಿದೆ.

ಸೀಟಿಯ ಒಂದು ಗುಣಲಕ್ಷಣವೆಂದರೆ ಅದು ಅಪ್ಪಟ, ಅಥವಾ ಬಹುತೇಕ ಅಪ್ಪಟ ಸ್ವರವನ್ನು ಸೃಷ್ಟಿಸುತ್ತದೆ.

ಉಲ್ಲೇಖಗಳು[ಬದಲಾಯಿಸಿ]

  1. Arroyos, Rafael Pérez (2003). Egypt: Music in the Age of the Pyramids (1st ed.). Madrid: Centro de Estudios Egipcios. p. 28. ISBN 978-8493279615.
"https://kn.wikipedia.org/w/index.php?title=ಸೀಟಿ&oldid=1177144" ಇಂದ ಪಡೆಯಲ್ಪಟ್ಟಿದೆ