ಸಿ. ಕೆ. ತಾರ

ವಿಕಿಪೀಡಿಯ ಇಂದ
Jump to navigation Jump to search

ವಿದುಷಿ ಸಿ.ಕೆ.ತಾರಾ, ಸಂಗೀತ ಗುರು, ಸುಗಮ ಸಂಗೀತದ ವಿಶಿಷ್ಟ ಗಾಯಕಿ, ಕರ್ನಾಟಕ ಸಂಗೀತ ಶೈಲಿಯ ಒಬ್ಬ ಸಂಗೀತಮಯ ವ್ಯಕ್ತಿತ್ವದ ಲೋಕ ಸಂಸಾರಿ. ಅವರ ಮನೆ ಒಂದು ಚರ್ಚೆಯ ಚಾವಡಿ, ಆಪ್ತ ಸಲಹಾ ಕೇಂದ್ರವಾಗಿತ್ತು. ಸ್ಮರಣ ಶಕ್ತಿ ಅದ್ಭುತವಾಗಿತ್ತು. ದಶಕಗಳ ಹಿಂದೆ ಪ್ರಸಾರವಾದ ಸಂಗೀತ ರೂಪಕಗಳ ಸಕಲ ವಿವರಗಳು ಅವರಿಗೆ ಮನದಟ್ಟಾಗಿದ್ದವು. ತಾರಾ ಮಾರ್ಗದರ್ಶಿಗಳಲ್ಲಿ, ಡಾ. ದೊರೆಸ್ವಾಮಿ ಅಯ್ಯಂಗಾರ್, ಒಬ್ಬರಾದರೆ, ತಾರಾರವರ ನಾಯಕಿ ಕಂಠದಲ್ಲಿ, ಹಾಗೂ, ಡಾ. ಎಂ. ಬಾಲಮುರಳೀ ಕೃಷ್ಣರವರು ನಾಯಕ ಕಂಠದಲ್ಲಿ ತಮ್ಮ ಯೋಗದಾನಮಾಡಿದ್ದರು.

ತಾರಾರವರ ವೈಶಿಷ್ಟ್ಯತೆ[ಬದಲಾಯಿಸಿ]

ಸಾಹಿತ್ಯ ಶುದ್ಧಿ, ಮತ್ತು ಹಾಡುಗಳನ್ನು ಪರಾಮರ್ಶಿಸುವ ಗುಣ ಅನನ್ಯ. ಸಂಗೀತ ಸಂಯೋಜನೆಯೂ ಅವರ ಮತ್ತೊಂದು ಆಸಕ್ತಿಯ ವಿಷಯಗಳಲ್ಲೊಂದು. ಪ್ರಚಾರವಿಲ್ಲದೆಯೂ ನೂರಾರು ಪ್ರಸಿದ್ಧ ಹಾಡುಗಳನ್ನು ಸಂಯೋಜಿಸಿದರು. ವ್ಯಕ್ತಿ ಮಾತ್ಸರ್ಯದ ಅನ್ಯಾಯಗಳಿಗೆ ಅವರು ಹಲವುಬಾರಿ ಒಳಗಾಗದರೂ, ಬೇಸರಗೊಳ್ಳುತ್ತಿರಲಿಲ್ಲ. ಶಿಷ್ಯರಿಗೆ ಸಂಗೀತ ಶಿಕ್ಷಣ ಕೊಡುವಾಗ ಸಂತೋಷಪಡುತ್ತಿದ್ದರು. ಎಷ್ಟೋ ಸಂಗೀತ ಕಚೇರಿಗೆ ಸಂಭಾವನೆಯನ್ನು ತೆಗೆದುಕೊಳ್ಳುತ್ತಿರಲಿಲ್ಲ.

ಪ್ರಶಸ್ತಿಗಳು[ಬದಲಾಯಿಸಿ]

  • 'ರಾಜ್ಯೋತ್ಸವ ಪ್ರಶಸ್ತಿ'
  • 'ಸಂತ ಶಿಶುನಾಳ ಷರೀಫ ಪ್ರಶಸ್ತಿ'

ನಿಧನ[ಬದಲಾಯಿಸಿ]

೭೮ ವರ್ಷ ಪ್ರಾಯದ ತಾರಾರವರು, ೨೬, ೦೫, ೨೦೧೦ ರಂದು ನಿಧನರಾದರು.