ಸಿ. ಎನ್. ಟವರ್, ಟೊರಾಂಟೋ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search
'ರೋಜರ್ ಸೆಂಟರ್ ಸ್ಟೇಡಿಯಮ್ ಒಳಗಿನಿಂದ ಸಿ.ಎನ್.ಟವರ್ ಕಾಣಿಸುವ ರೀತಿ'
'ರಾತ್ರಿ ಹೊತ್ತಿನಲ್ಲಿ ಸಿ.ಎನ್.ಟವರ್ ಕಾಣಿಸುವ ರೀತಿ'

ಸಿ.ಎನ್.ಟವರ್, ಆಧುನಿಕ ವಿಶ್ವದ ಸೋಜಿಗಗಳಲ್ಲೊಂದು' ಎಂದು ವರ್ಣಿಸಲ್ಪಟ್ಟಿರುವ ಈ ಅದ್ಭುತ ಗಗನಚುಂಬೀ ಗೋಪುರ, ವಿಶ್ವದ ಅತಿ ಎತ್ತರದ ಕಟ್ಟಡ ಕೆನಡಾರಾಜ್ಯದ ಟೊರಾಂಟೋ ನಗರದಲ್ಲಿದೆ. ಟೊರಾಂಟೋ ನಗರದ ನಾಗರೀಕರಿಗೆ ದಿನರಾತ್ರಿ ಈ ಗೋಪುರದ ಬಗ್ಗೆ ಕಾಳಜಿಯಿದೆ. ೧,೧೩೬ ಅಡಿ ಎತ್ತರ ಸಾಗಿ ಅಲ್ಲಿನ ರೆಸ್ಟಾರೆಂಟ್ ನಲ್ಲಿ ಪೇಯಗಳನ್ನೂ, ತಿಂಡಿ-ತಿನಸುಗಳನ್ನೂ ಮೆಲ್ಲುವುದು ಹದಿಹರೆಯದ ಯುವ ಜನರಿಂದ ಹಿಡಿದು ಎಲ್ಲಾ ವಯೋಮಿತಿಯ ಜನರಿಗೂ ಬಲು ಮುದ ಕೊಡುವ ಸಂಗತಿ. [೧]

ಸಿ.ಎನ್ ಟವರ್ ನಿರ್ಮಾಣ ಕಾರ್ಯ[ಬದಲಾಯಿಸಿ]

'ಸಿ.ಎನ್.ಟವರ್' ನಿರ್ಮಾಣ ಕಾರ್ಯ, ೧೯೭೩ ರ ಫೆಬ್ರವರಿ, ೬ ರಂದು ಆರಂಭವಾಯಿತು. ಟವರ್ ನ ಅಡಿಪಾಯವನ್ನು ಹಾಕುವುದಕ್ಕೆ ಬಹಳ ಕೆಳಮಟ್ಟದವರೆಗೆ ಅಗಿಯಲಾಯಿತು. ತಳಪಾಯದ ಕೆಲಸ ಮುಗಿಯುವ ಹೊತ್ತಿಗೆ ೫೬,೦೦೦ ಟನ್, (೬೧,೭೨೯ ಶಾರ್ಟ್ ಟನ್ಸ್; ೫೫,೧೧೬ ಲಾಂಗ್ ಟನ್ಸ್)ಭೂಮಿ ಮತ್ತು ಮಣ್ಣನ್ನು ಹೊರತೆಗೆಯಲಾಯಿತು. ೧೫ ಮೀಟರ್, (೪೯.೨ ಅಡಿ)ಮಧ್ಯದಲ್ಲಿ ಮತ್ತು ಪಾಯದಲ್ಲಿ ೭,೦೦೦ ಕ್ಯು.ಮೀ. (೯,೧೫೬ ಕ್ಯೂಬಿಕ್ ಅಡಿ) ಕಾಂಕ್ರೀಟ್ ೪೫೦ ಟನ್ (೪೯೬ ಶಾರ್ಟ್ ಟನ್ಸ್; ೪೪೩ ಲಾಂಗ್ ಟನ್ಸ್) 'ರೆಬರ್' (short for reinforcing bar) ಮತ್ತು ೩೬ ಟನ್ (೪೦ ಶಾರ್ಟ್ ಟನ್ಸ್; ೩೫ ಉದ್ದ ಟನ್ಸ್) 'ಸ್ಟೀಲ್ ಕೇಬಲ್' ಕಟ್ಟಲಾಯಿತು. ೬.೭ ಮೀ. ದಪ್ಪ, (೨೨.೦ ಅಡಿ). ಈಭಾಗವನ್ನು ಶೀಘ್ರವಾಗಿ ೪ ತಿಂಗಳಿನಲ್ಲಿ ಕಟ್ಟಿ ಮುಗಿಸಿದರು.

ಉಲ್ಲೇಖಗಳು[ಬದಲಾಯಿಸಿ]

  1. 'ಸಿ.ಎನ್.ಟವರ್, ಟೊರಾಂಟೊ ನಗರ'