ವಿಷಯಕ್ಕೆ ಹೋಗು

ಸಿ.ರೈಟ್ ಮಿಲ್ಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸಿ ರೈಟ್ ಮಿಲ್ಸ್
Born
ಚಾರ್ಲ್ಸ್ ರೈಟ್ ಮಿಲ್ಸ್

(೧೯೧೬-೦೮-೨೮)೨೮ ಆಗಸ್ಟ್ ೧೯೧೬
ವಾಚೊ, ಟೆಕ್ಸಸ್
DiedMarch 20, 1962(1962-03-20) (aged 45)
ವೆಸ್ಟ್ ನ್ಯಾಕ್, ನ್ಯೂ ಯಾರ್ಕ್
Alma materಟೆಕ್ಸಾಸ್ (BA, MA); ವಿಸ್ಕಾನ್ಸಿನ್-ಮ್ಯಾಡಿಸನ್ ವಿಶ್ವವಿದ್ಯಾಲಯ (PhD)
Occupationರಾಜಕೀಯ ಸಮಾಜಶಾಸ್ತ್ರ
Known forಪವರ್ ಎಲೈಟ್
ವೈಟ್ ಕಾಲರ್
ಸೋಷಿಯಲ್ ಇಮ್ಯಾಜಿನೇಷನ್

ಸಿ.ರೈಟ್ ಮಿಲ್ಸ್ ಅಮೆರಿಕನ್ ಸಮಾಜಶಾಸ್ತ್ರಜ್ಞ ಮತ್ತು ಕೊಲ೦ಬಿಯ ವಿಶ್ವವಿದ್ಯಾಲಯದಲ್ಲಿ ಸಮಾಜಶಾಸ್ತ್ರದ ಪ್ರಾಧ್ಯಾಪಕರಾಗಿದ್ದರು (೧೯೪೬ ರಿ೦ದ ೧೯೬೨ವರೆಗೆ ).ಮಿಲ್ಸ್ ರವರ ಬೌದ್ಧಿಕ ಲೇಖನಗಳು ಬಹಳ ಜನಪ್ರಿಯವಾಗಿದ್ದವು.ಅವರು ಬರೆದ 'ದಿ ಪವರ್ ಎಲೈಟ್' ಎ೦ಬ ಪುಸ್ತಕ ಪ್ರಮುಖವಾಗಿದ್ದು.ಈ ಪುಸ್ತಕವು ಅಮೆರಿಕಾದ ರಾಜಕೀಯ, ಮಿಲಿಟರಿ ಮತ್ತು ಪ್ರಸಿದ್ಧ ಆರ್ಥಿಕ ಗಣ್ಯರ ನಡುವಿನ ಸ೦ಬ೦ದ ಮತ್ತು ವರ್ಗ ಮೈತ್ರಿಗಳ ಬಗ್ಗೆ ವಿವರಿಸಲಾಗಿದೆ. ಅಮೆರಿಕಾದ ಮಧ್ಯಮವರ್ಗದವರ ಮೇಲಿರುವ ವೈಟ್ ಕಾಲರ್ ಮತ್ತು ಸಾಮಾಜಿಕ ಇಮ್ಯಾಜಿನೇಷನ್ ನನ್ನು ಮಿಲ್ಸ್ ರವರು ತಮ್ಮ ಜೀವನ ಚರಿತ್ರೆಯಲ್ಲಿ ವಿವರಿಸಿದ್ದಾರೆ. ಸಿ.ರೈಟ್ಮಿ ಮಿಲ್ಸ್ ರವರು ಆಗಸ್ಟ್ ೨೮,೧೯೧೬ ರಲ್ಲಿ ವಾಕೊ, ಟೆಕ್ಸಾಸ್ ನಲ್ಲಿ ಜನಿಸಿದರು. ಇವರ ತ೦ದೆ ಚಲ್ಸ್೯ ಗ್ರೊವರ್ ವಿಮಾ ಸೇಲ್ಸ್ಮ್ಯಾನ್ ಆಗಿದ್ದರು ಮತ್ತು ತಾಯಿ ಫ್ರಾನ್ಸೆಸ್ ರೈಟ್ ಮಿಲ್ಸ್ ಗೃಹಿಣಿಯಾಗಿದ್ದರು. ಇವರ ತ೦ದೆ ತಮ್ಮ ತವರೂರಾದ ಫ್ಲೋರಿಡಾ ರಾಜ್ಯವನ್ನು ಬಿಟ್ಟು ತನ್ನ ತಾಯಿ ಮತ್ತು ಪುವ೯ಜರು ಹುಟ್ಟಿ ಬೆಳೆದ ಟೆಕ್ಸಾಸ್ ಗೆ ಬ೦ದು ನೆಲೆಸಿದರು. ಮಿಲ್ಸ್ ರವರು ತಮ್ಮ ಬಾಲ್ಯವನ್ನು ವಾಚೊ, ವಿಚಿಟಾ ಫಾಲ್ಸ್, ಫೋರ್ಟ್ ವರ್ತ್, ಶೆರ್ಮನ್, ಡಲ್ಲಾಸ್, ಆಸ್ಟಿನ್, ಮತ್ತು ಸ್ಯಾನ್ ಆಂಟೋನಿಯೊ ನಗರಗಳಲ್ಲಿ ಕಳೆದರು. ಅವರು 1934 ರಲ್ಲಿ ಡಲ್ಲಾಸ್ ತಾಂತ್ರಿಕ ಹೈಸ್ಕೂಲ್ನಿಂದ ಪದವೀಧರನಾದರು. ಮಿಲ್ಸ್ ರವರು ಟೆಕ್ಸಾಸ್ ನಲ್ಲಿರುವ ಎ & ಎಂ ವಿಶ್ವವಿದ್ಯಾಲಯಕ್ಕೆ ಆರಂಭದಲ್ಲಿ ಸೇರಿದರು ಆದರೆ ಮೊದಲ ವಷ೯ದ ನ೦ತರ ಆ ವಿಶ್ವವಿದ್ಯಾಲಯವನ್ನು ಬಿಟ್ಟು ಆಸ್ಟಿನ್ನಲ್ಲಿರುವ ಟೆಕ್ಸಾಸ್ ವಿಶ್ವವಿದ್ಯಾಲಯದಲ್ಲಿ ೧೯೩೯ರಲ್ಲಿ ಸಮಾಜಶಾಸ್ತ್ರ ಪದವಿಯ ಜೊತೆಗೆ ತತ್ವಶಾಸ್ತ್ರ ಸ್ನಾತಕೋತ್ತರದಲ್ಲಿ ಪದವಿಯನ್ನು ಪಡೆದರು.

ಪ್ರಬಂಧ ಮತ್ತು ವೃತ್ತಿ

[ಬದಲಾಯಿಸಿ]

೧೯೪೨ ಅವರು ಮ್ಯಾಡಿಸನ್ ನಲ್ಲಿರುವ ವಿಸ್ಕಾನ್ಸಿನ್ ವಿಶ್ವವಿದ್ಯಾಲಯದಲ್ಲಿ ಸಮಾಜಶಾಸ್ತ್ರದಲ್ಲಿ ಪಿ.ಎಚ್ ಡಿ ಪಡೆದರು.ಅವರ ಪ್ರೌಢಪ್ರಬಂಧ "ಎ ಸೊಶಿಯೊಲೋಜಿಕಲ್ ಅಕೌಟ್ ಆಫ್ "ಪ್ರಾಗ್ಮಾಟಿಸಂ: ಎನ್ ಎಸ್ಸೆ ಆನ್ ದಿ ಸೊಶಿಯೊಲೋಜಿ ಆಫ್ ನಾಲೆಡ್ಜ್ ಮಂಡಿಸಿದರು.೧೯೪೬ ರಿ೦ದ ೧೯೬೨ವರೆಗೆ ಕೊಲ೦ಬಿಯ ವಿಶ್ವವಿದ್ಯಾಲಯದಲ್ಲಿ ಸಮಾಜಶಾಸ್ತ್ರದ ಪ್ರಾಧ್ಯಾಪಕರಾಗಿದ್ದರು.

ಪುಸ್ತಕಗಳು

[ಬದಲಾಯಿಸಿ]
  • ವೈಟ್ ಕಾಲರ್ (1951)
  • ಪವರ್ ಎಲೈಟ್ (1956): ಈ ಪುಸ್ತಕವು ರಾಜಕೀಯ, ಸೇನಾ ಮತ್ತು ಆರ್ಥಿಕ ಗಣ್ಯರ ನಡುವಿನ ಸ೦ಬ೦ಧವನ್ನು ವಿವರಿಸುತ್ತದೆ.
  • ಎಸ್ಸೆ ಇನ್ ಸೋಷಿಯೋಲಜಿ (೧೯೪೬),
  • ದಿ ನ್ಯು ಮೆನ್ ಆಫ್ ಪವರ್ (೧೯೪೮),
  • ದಿ ಸೋಷಿಯೋಲಜಿಕಲ್ ಇಮ್ಯಾಜಿನೇಷನ್ (೧೯೫೯),
  • ದಿ ಮಾ೯ಕಿಸ್ಟ್ (೧೯೬೨) .

ಸಿ.ರೈಟ್ ಮಿಲ್ಸ್ ಪ್ರಶಸ್ತಿ

[ಬದಲಾಯಿಸಿ]

ಸ್ಟಡಿ ಆಫ್ ಸೋಷಿಯಲ್ ಪ್ರಾಬ್ಲಮ್ಸ್ ಸಂಸ್ಥೆ 1964 ರಲ್ಲಿ ಸಿ ರೈಟ್ ಮಿಲ್ಸ್ ಪ್ರಶಸ್ತಿ ಸ್ಥಾಪಿಸಿ ಪ್ರಧಾನ ಮಾಡುತ್ತಿದೆ. ಈ ಪ್ರಶಸ್ತಿ ಅತ್ಯುತ್ತಮ ಸಾಮಾಜಿಕ ವಿಜ್ಞಾನದ ಸಂಶೋಧನಾ ಮತ್ತು ದೊಡ್ಡ ತಿಳುವಳಿಕೆ,ವೈಯಕ್ತಿಕ ಮತ್ತು ಸಮಾಜದ ವಿಶೇಷ ಸಮಾಜಶಾಸ್ತ್ರಜ್ಞ, ರಿಗೆ ಪ್ರಧಾನ ಮಾಡಲಾಗುವದು.ಈ ಪ್ರಶೆಸ್ತಿಗೆ ಅತ್ಯಂತ ಪರಿಣಾಮಕಾರಯಾದ ಮಾನದಂಡಗಳನ್ನು ಹೊಂದಿದೆ.

  • ಲಾರೆನ್ಸ್ ರಾಲ್ಫ್(೨೦೧೪),
  • ನ್ಯಾನ್ಸಿ ಡಿ ಟೊಮಸೊ(೨೦೧೩),
  • ಶ್ಯಾಮಸ್ ರಹಮಾನ್ ಖಾನ್(೨೦೧೧),
  • ಮಾರಿಯೋ ಲೂಯಿಸ್(೨೦೦೯),
  • ಮಾರ್ಟಿನ್ ಸ್ಯಾಂಚೆಝ್(೨೦೦೮) ಮು೦ತಾದವರು ಈ ಪ್ರಶಸ್ತಿಯನ್ನು ಪಡೆದಿದ್ದಾರೆ.

ಉಲ್ಲೇಖಗಳು

[ಬದಲಾಯಿಸಿ]


https://en.wikipedia.org/wiki/C._Wright_Mills