ವಿಷಯಕ್ಕೆ ಹೋಗು

ಸಿಪಾಹಿಜೊಲಾ ವನ್ಯಜೀವಿ ಅಭಯಾರಣ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Sepahijala Wildlife Sanctuary
IUCN category IV (habitat/species management area)
Map
Interactive map of Sepahijala Wildlife Sanctuary
LocationBishalgarh, West Tripura district
Nearest cityAgartala
Area18.53 km2 (7.15 sq mi)
Established1987

ಸಿಪಾಹಿಜೊಲಾ ವನ್ಯಜೀವಿ ಅಭಯಾರಣ್ಯವು ಭಾರತದ ತ್ರಿಪುರ ರಾಜ್ಯದಲ್ಲಿರುವ ಒಂದು ವನ್ಯಜೀವಿ ಅಭಯಾರಣ್ಯವಾಗಿದೆ. ಇದರ ವಿಸ್ತೀರ್ಣ ಸುಮಾರು ೧೮.೫೩ ಚದರ ಕಿಲೋಮೀಟರ್. ಇದು ನಗರ ಕೇಂದ್ರದಿಂದ ಸುಮಾರು ೨೫ ಕಿಲೋಮೀಟರ್ ದೂರದಲ್ಲಿದ್ದು ಬಿಶಾಲ್‍ಗಢ್‍ನಲ್ಲಿ ಸ್ಥಿತವಾಗಿದೆ.[೧] ಇದು ಕಾಡುಪ್ರದೇಶವಾಗಿದ್ದು ಇಲ್ಲಿ ಒಂದು ಕೃತಕ ಸರೋವರ, ನೈಸರ್ಗಿಕ ಸಸೋದ್ಯಾನ ಮತ್ತು ಮೃಗಾಲಯಗಳಿವೆ. ಇದು ತನ್ನ ಮೋಡದ ಚಿರತೆಗಳ ಪ್ರಾಕಾರಗಳಿಗೆ ಪ್ರಸಿದ್ಧವಾಗಿದೆ.

ಈ ಅಭಯಾರಣ್ಯವು ಬಗೆಬಗೆಯ ಪಕ್ಷಿಗಳು, ಪ್ರೈಮೇಟುಗಳು ಮತ್ತು ಇತರ ಪ್ರಾಣಿಗಳನ್ನು ಹೊಂದಿದೆ. ಭೂಪ್ರದೇಶವು ವರ್ಷದಾದ್ಯಂತ ಹಸಿರಾಗಿರುತ್ತದೆ ಮತ್ತು ಎರಡು ಆರ್ದ್ರ ಬೇಸಿಗೆ ತಿಂಗಳುಗಳಾದ ಮಾರ್ಚ್ ಮತ್ತು ಏಪ್ರಿಲ್‌ನ್ನು ಹೊರತುಪಡಿಸಿ ಹವಾಮಾನವು ಸಮಶೀತೋಷ್ಣವಾಗಿರುತ್ತದೆ. ೧೯೭೨ರಲ್ಲಿ ಆರಂಭವಾದ ಅಭಯಾರಣ್ಯವು ಐದು ವಿಭಾಗಗಳನ್ನು ಹೊಂದಿದೆ: ಮಾಂಸಾಹಾರಿಗಳು, ಪ್ರೈಮೇಟುಗಳು, ಗೊರಸುಳ್ಳ ಪ್ರಾಣಿಗಳು, ಸರೀಸೃಪಗಳು ಮತ್ತು ಪಕ್ಷಿ ಆವರಣ. ಇಲ್ಲಿ ಹಲವಾರು ಸರೋವರಗಳಿವೆ; ಅವುಗಳ ಪೈಕಿ ಅಮೃತ್ ಸಾಗರ್ ಎಂಬ ಹೆಸರಿನ ಕೆರೆಯು ದೋಣಿ ಸೌಕರ್ಯವನ್ನು ಹೊಂದಿದೆ.[೨]

ಉಲ್ಲೇಖಗಳು

[ಬದಲಾಯಿಸಿ]
  1. ↑ tripurainfo
  2. ↑ "ಆರ್ಕೈವ್ ನಕಲು". Archived from the original on 2016-03-04. Retrieved 2020-08-30.

ಹೊರಗಿನ ಕೊಂಡಿಗಳು

[ಬದಲಾಯಿಸಿ]