ಸಿದ್ಧಾರ್ಥ್ ಕಾಕ್

ವಿಕಿಪೀಡಿಯ ಇಂದ
Jump to navigation Jump to search
ಸುರಭಿ ಕಾರ್ಯಕ್ರಮದಲ್ಲಿ, ಶ್ರೀ ಕಾಕ್ ಹಾಗೂ ರೇಣುಕಾ ಶಹಾಣೆ

ಪರಿಚಯ[ಬದಲಾಯಿಸಿ]

ಸಿದ್ಧಾರ್ಥ್ ಕಾಕ್ ಭಾರತದ ಒಬ್ಬ ಸಮರ್ಥ ಟೆಲೆವಿಶನ್ ಆಂಕರ್, ವೃತ್ತ-ಚಿತ್ರ ನಿರ್ಮಾಪಕರು. ನಮ್ಮ ದೇಶದ ವೈವಿಧ್ಯಮಯ ಜೀವನದ ಬಣ್ಣಗಳನ್ನು ಚಿಕ್ಕ ತೆರೆಯಮೇಲೆ, ಅತ್ಯಂತ ಮನೋಜ್ಞವಾಗಿ, ಸುಂದರವಾಗಿ, ಹಳ್ಳಿಯ ಅತಿ-ಅವಿದ್ಯಾವಂತ ಕುಟುಂಬಗಳಿಂದ, ಪಟ್ಟಣದ ಅತ್ಯಂತ ನವನಾಗರಿಕ ಪರಿವಾರದ ಸದಸ್ಯರೊಂದಿಗೆ ಒಟ್ಟಿಗೆ ಕುಳಿತು, ವೀಕ್ಷಿಸಬಹುದಾದ ಜನಪ್ರಿಯ ಸುರಭಿ, ಧಾರಾವಾಹಿಯನ್ನು ತಂದವರಲ್ಲಿ ಮೊದಲಿಗರು. ಅವರ ಯಶಸ್ಸಿನಗುಟ್ಟೆಂದರೆ, ದೂರದರ್ಶನದಲ್ಲಿ ಆ ಕಾರ್ಯಕ್ರಮಗಳು ಬಿತ್ತರವಾದದ್ದು. ಲಕ್ಷಾಂತರ ಮನೆಗಳ, ಮನಗಳಲ್ಲಿ ಅವರು ಕೆಲವೇ ವರ್ಷಗಳಲ್ಲಿ ಮರೆಯಲಾರದ ಆದರದ ಪಹುಣೆ ಯಾಗಿ, ಅತಿಥಿಯಾಗಿಬಿಟ್ಟರು. ಅವರ ಕಾರ್ಯಕ್ರಮಕ್ಕೆ ಜನರು ಕಾದು ಕುಳಿತುರುತ್ತಿದ್ದರು. ಭಾರತದ ಹೊಸ-ಹೊಸ, ತಿಂಡಿ-ತಿನಸುಗಳು, ಮತ್ತು ಆಯಾಯ ಪ್ರದೇಶಗಳ ಜನಪ್ರಿಯ ಖಾದ್ಯವಸ್ತುಗಳನ್ನು ತಯಾರಿಸುವ, ಮತ್ತು ಅವನ್ನು ಲಕ್ಷಣವಾಗಿ ಬಡಿಸುವ ಅನೇಕ ವಿಧಗಳನ್ನು ಹೃದಯಂಗಮವಾಗಿ ಜನರಿಗೆ ಹೇಳುವ ವಿಧಾನ ಅನನ್ಯ. ಹೈದರಾಬಾದ್, ಲಖ್ಮೋವಿ, ಮೈಸೂರ್, ಉಡುಪಿ,ಖಾದ್ಯಗಳು, ಮತ್ತಿತರ ರಾಜ್ಯಗಳ ಉಡುಪು, ಬಟ್ಟೆ ಬರೆಗಳು, ಗಂಜಾಫ್ ಇಸ್ಪೀಟ್ ಎಲೆಗಳು, ತಾಳೆಗರಿಯ ಪುರಾತನ-ಗ್ರಂಥಗಳು, ಸಂಗೀತ, ಲಲಿತಕಲೆ, ಸಾಹಿತ್ಯ, ಸುಂದರ ಸನ್ನಿವೇಶಗಳು, ಹಾಗೂ ಪರಿಸರ, ಪ್ರಾಣಿಗಳು, ಮಕ್ಕಳು, ಸ್ತ್ರೀಯರು, ವೃದ್ದರು, ಎಳೆಯರು, ವಯಸ್ಕರು, ಇತ್ಯಾದಿ. ಹಳೆಯ ವಾಡಿಗಳು, ಮೊಹಲ್ಲಾಗಳು, ವಠಾರಗಳು, ವೇಷ-ಭೂಷಣಗಳು, ಇತ್ಯಾದಿ, ಇತ್ಯಾದಿಗಳೆಲ್ಲಾ ಸುರಭಿಯಲ್ಲಿ ತೆರೆಕಾಣುವ ವಿಧಾನಗಳು ಅವಿಸ್ಮರಣೀಯವಾದವುಗಳು.

ಹುಟ್ಟಿದ್ದು[ಬದಲಾಯಿಸಿ]

ಸಿದ್ಧಾರ್ಥ್ ಜನ್ಮಿಸಿದ್ದು ಹೊಸ-ದೆಹಲಿಯಲ್ಲಿ. ಅವರು ದೂರದರ್ಶನದಲ್ಲಿ ರೇಣುಕಾ ಶಹಾಣೆ,' ಯವರ ಜೊತೆಗೂಡಿ ಪ್ರಾರಂಭಿಸಿದ ಸುರಭಿ ಕಾರ್ಯಕ್ರಮ, ಬಹುವರ್ಷಗಳ ಕಾಲ, ಅತ್ಯಂತ ಜನಪ್ರಿಯ ಧಾರಾವಾಹಿಯಾಗಿ ನಡೆಯಿತು.

ಟ್ರಾವೆಲ್ ಶೋ, ಇಂಡಿಯ ಧನುಶ್[ಬದಲಾಯಿಸಿ]

ಈಗ ಕಾಕ್, ಆಮಿ ತ್ರಿವೇದಿ ಯವರ ಜೊತೆಗೂಡಿ ( ಗುಜರಾತಿ, ಜನಪ್ರಿಯ ರಂಗಭೂಮಿ ಕಲಾವಿದರು), ಟ್ರಾವೆಲ್ ಶೋ -ಎಂಬ ಇಂಡಿಯ ಧನುಶ್ ಕಾರ್ಯಕ್ರಮವನ್ನು ಪ್ರದರ್ಶಿಸುತ್ತಿರುವ, ಎನ್.ಡಿ.ಟಿ.ವಿ ಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿದ್ಧಾರ್ಥ್ ಕಾಕ್ ರವರ ಪ್ರೀತಿಯ ಪತ್ನಿ, ಗೀತಾ ರವರು, ಬಾಲಿವುಡ್ ಹಿಂದಿ ಚಲನ-ಚಿತ್ರಗಳಲ್ಲಿ ಆಗಾಗ ಚಿಕ್ಕ-ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಹೊರವಲಯದ ಕೊಂಡಿಗಳು[ಬದಲಾಯಿಸಿ]