ಸಿಂಪ್ಯೂಟರ್
ಸಿಂಪ್ಯೂಟರ್ - ಇದು ಭಾರತದಲ್ಲಿ ತಯಾರಾದ ಕಡಿಮೆ ಖರ್ಚಿನ ಕಂಪ್ಯೂಟರಿನ ಹೆಸರು. ಸಮಾಜದ ಎಲ್ಲ ವರ್ಗದವರಿಗೂ ಕಂಪ್ಯೂಟರ್ ದೊರಕುವಂತಾಗಬೇಕು ಎನ್ನುವ ಉದ್ದೇಶದಿಂದ ತಯಾರಾದ ಈ ಸಾಧನ ಮಾರುಕಟ್ಟೆಯಲ್ಲಿ ಹೆಚ್ಚಿನ ಸಾಧನೆಯನ್ನೇನೂ ಮಾಡಲಿಲ್ಲ.
ಹಿನ್ನೆಲೆ
[ಬದಲಾಯಿಸಿ]ನಮ್ಮ ದೇಶ ಮಾಹಿತಿ ತಂತ್ರಜ್ಞಾನದ ತವರು. ನಮ್ಮ ನಗರಗಳು ಐಟಿ ಯುಗದಲ್ಲಿ ಮುನ್ನುಗ್ಗುತ್ತಿದ್ದರೂ ಕೂಡ ಗ್ರಾಮೀಣ ಪ್ರದೇಶಗಳು ಈ ಭರಾಟೆಯಿಂದ ದೂರವೇ ಉಳಿದಿದ್ದವು. ಈ ಬೇಧ ಕೊನೆಯಾಗಿ, ಎಲ್ಲರ ಕೈಗೂ ಕಂಪ್ಯೂಟರ್ ಬರುವಂತಾಗಬೇಕೆಂಬ ಮಹತ್ವಾಕಾಂಕ್ಷೆಯ ಫಲವಾಗಿ ಜನ್ಮತಳೆದ ಪುಟಾಣಿ ಕಂಪ್ಯೂಟರ್‌ನ ಹೆಸರೇ 'ಸಿಂಪ್ಯೂಟರ್'. ಇದನ್ನು ರೂಪಿಸಿದವರು ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಸೈನ್ಸ್, ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಮುಂತಾದ ಸಂಸ್ಥೆಗಳ ಸಹಭಾಗಿತ್ವದಲ್ಲಿ ರಚಿತವಾದ ಸಿಂಪ್ಯೂಟರ್ ಟ್ರಸ್ಟ್‌ನ ವಿಜ್ಞಾನಿಗಳು. ಸರಳ ಗಣಕಯಂತ್ರ ಅಥವಾ ಸಿಂಪಲ್ ಕಂಪ್ಯೂಟರ್ ಎಂಬ ಹೆಸರಿನ ಹೃಸ್ವರೂಪವಾದ ಈ ಸಿಂಪ್ಯೂಟರ್, ಸಾಮಾನ್ಯ ಕಂಪ್ಯೂಟರ್‌ಗಳಿಗೆ ಹೋಲಿಸಿದಾಗ ನಾಲ್ಕೈದು ಪಟ್ಟು ಕಡಿಮೆಬೆಲೆಗೆ ಲಭ್ಯವಾಗುತ್ತದೆ ಎನ್ನಲಾಗಿತ್ತು.