ಸಿಂಥನ್ ಟಾಪ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸಿಂಥನ್ ಟಾಪ್‍ನ ನೋಟ

ಸಿಂಥನ್ ಟಾಪ್ ಪರ್ವತದ ಕಣಿವೆದಾರಿಯಾಗಿದೆ. ಇದು ದಕ್ಷಿಣ ಕಾಶ್ಮೀರದ ಅನಂತ್‍ನಾಗ್ ಜಿಲ್ಲೆಯ ಬ್ರೆಂಗ್ ಕಣಿವೆ ಮತ್ತು ಚೆನಾಬ್ ಕಣಿವೆಯ ಕಿಶ್ತ್ವರ್ ಜಿಲ್ಲೆಯ ನಡುವೆ ಇದೆ.[೧]

ಸ್ಥಳ[ಬದಲಾಯಿಸಿ]

ಸಿಂಥನ್ ಕಣಿವೆಮಾರ್ಗವು ಅನಂತನಾಗ್‍ನ್ನು ಕಿಶ್ತ್ವರ್‌ನೊಂದಿಗೆ ಜೋಡಿಸುತ್ತದೆ. ಇದು ವರ್ಷದ ಬಹುಪಾಲು ಹಿಮದಿಂದ ಆವೃತವಾಗಿರುತ್ತದೆ. ಸಿಂಥನ್ ಟಾಪ್ ಸ್ಥಳೀಯ ಜನರನ್ನು ಹೊಂದಿಲ್ಲ. ಕೋಕರ್‌ನಾಗ್, ಡುಕ್ಸುಮ್‍ನಂತಹ ಪಕ್ಕದ ಸ್ಥಳಗಳ ಕುರುಬರು ಮತ್ತು ಪ್ರವಾಸಿಗರು ಹಾಗೂ ಪ್ರವಾಸೋದ್ಯಮದಲ್ಲಿ ಕೆಲಸ ಮಾಡುವವರು ಡೇರೆಗಳಲ್ಲಿ ರಾತ್ರಿಯಿಡೀ ಉಳಿಯಬಹುದು.

ಪ್ರವಾಸೋದ್ಯಮ[ಬದಲಾಯಿಸಿ]

ಕಣಿವೆಯ ಇತರ ಪ್ರದೇಶಗಳಂತೆ, ಸಿಂಥನ್ ಟಾಪ್ ತನ್ನ ಸೌಂದರ್ಯ ಮತ್ತು ಅದ್ಭುತ ಪ್ರವಾಸಿ ಆಕರ್ಷಣೆಗಳಿಗೆ ಹೆಸರುವಾಸಿಯಾಗಿದೆ. ಈ ಸ್ಥಳವು ಚೆನಾಬ್ ಕಣಿವೆಯಲ್ಲಿನ ಪ್ರಮುಖ ಪ್ರವಾಸಿ ತಾಣವಾಗಿ ವೇಗವಾಗಿ ಬೆಳೆಯುತ್ತಿದೆ. ಪರ್ವತಾರೋಹಣ, ಚಾರಣ ಮತ್ತು ಸ್ಕೀಯಿಂಗ್‌ಗಾಗಿ ಈ ಸ್ಥಳವು ಹೊರಹೊಮ್ಮುತ್ತಿದೆ.

'360 ಡಿಗ್ರಿ ವ್ಯೂ' ಎಂಬ ಸ್ಥಳದಲ್ಲಿ, ಕಾಶ್ಮೀರ ಮತ್ತು ಜಮ್ಮು ಎರಡೂ ವಿಭಾಗಗಳ ಪ್ರದೇಶಗಳನ್ನು ನೋಡಬಹುದು.

ಉಲ್ಲೇಖಗಳು[ಬದಲಾಯಿಸಿ]