ಸಿಂಗೋರಿ
Jump to navigation
Jump to search
ಮೂಲ | |
---|---|
ಮೂಲ ಸ್ಥಳ | ಭಾರತ |
ಪ್ರಾಂತ್ಯ ಅಥವಾ ರಾಜ್ಯ | ಉತ್ತರಾಖಂಡ್, ಉತ್ತರ ಭಾರತ |
ವಿವರಗಳು | |
Course | ಸಿಹಿ ತಿನಿಸು |
ಮುಖ್ಯ ಘಟಕಾಂಶ(ಗಳು) | ಖೋವಾ, ಸಕ್ಕರೆ |
ಸಿಂಗೋರಿ (ಸಿಂಗೋಡಿ ಎಂದೂ ಉಚ್ಚರಿಸಲ್ಪಡುತ್ತದೆ) ಅಥವಾ ಸಿಂಗೌರಿ ಕುಮಾವ್ಞೂ ಪ್ರದೇಶದ ಒಂದು ಭಾರತೀಯ ಸಿಹಿ ತಿನಿಸಾಗಿದೆ. ಇದನ್ನು ಖೋವಾದಿಂದ ತಯಾರಿಸಿ ಮಾಲು ಎಲೆಯಲ್ಲಿ ಸುತ್ತಲಾಗುತ್ತದೆ.[೧] ಇದು ಕಲಾಕಂದ್‌ನ್ನು ಹೋಲುತ್ತದೆ.
ಖೋವಾವನ್ನು ನುಣ್ಣಗಾಗುವವರೆಗೆ ಜಜ್ಜಲಾಗುತ್ತದೆ. ಆಮೇಲೆ ಒಂದು ಬಾಣಲೆಗೆ ಅದನ್ನು ಹಾಕಿ ಸಕ್ಕರೆ ಸೇರಿಸಬೇಕು. ಖೋವಾ ಕರಗುವವರೆಗೆ ೧೦ ನಿಮಿಷ ಕಾಲ ಬೇಯಿಸಬೇಕು. ನಂತರ ತುರಿದ ಕೊಬ್ಬರಿಯನ್ನು ಸೇರಿಸಿ ಅಂಟದಂತೆ ೧೫ ನಿಮಿಷ ಕಲಕುತ್ತಿರಬೇಕು. ನಂತರ ತಣ್ಣಗಾಗಲು ಬಿಡಬೇಕು.
ಇತಿಹಾಸ[ಬದಲಾಯಿಸಿ]
ಕೆಲವು ಇತಿಹಾಸಕಾರರ ಪ್ರಕಾರ, ಅಲ್ಮೋರದ ಹಳೆ ಪ್ರಾಂತ್ಯವು ಸಿಂಗೋರಿಯ ಮೂಲವೆಂದು ನಂಬುತ್ತಾರೆ. ಸಾಂಪ್ರದಾಯಿಕವಾಗಿ ಇದನ್ನು ಖೋಯಾದಿಂದ ತಯಾರಿಸಿ ಮಾಲು ಎಲೆಗಳಲ್ಲಿ ಶಂಕುವಿನಾಕಾರದ ರೂಪದಲ್ಲಿ ಸುತ್ತಲಾಗುತ್ತದೆ.
ಈ ಶಂಕುವಿನಾಕಾರದ ಸಿಹಿ ತಿನಿಸು ಕೇವಲ ಉತ್ತರಾಖಂಡ್‍ನ ಕುಮಾವ್ಞೂ ಪ್ರದೇಶದಲ್ಲಿ ಲಭ್ಯವಿದೆ.