ಸಾಸಾಕಿಯಾ ಚಾರೊಂಡ
ಗ್ರೇಟ್ ಪರ್ಪಲ್ ಎಂಪರರ್ ಚಿಟ್ಟೆ | |
---|---|
ಪುರುಷ ಚಿಟ್ಟೆ | |
ಗಂಡು ಚಿಟ್ಟೆ (ಎಡಕ್ಕೆ) ಮತ್ತು ಹೆಣ್ಣು(ಬಲಕ್ಕೆ) | |
Scientific classification | |
Unrecognized taxon (fix): | Sasakia |
ಪ್ರಜಾತಿ: | S. charonda
|
Binomial name | |
Sasakia charonda (Hewitson, 1863)
| |
Synonyms[೧][೨] | |
|
ಜಪಾನಿನ ಚಕ್ರವರ್ತಿ ಅಥವಾ ದೊಡ್ಡ ನೇರಳೆ ಚಕ್ರವರ್ತಿ ಎಂದು ಕರೆಯಲ್ಪಡುವ ಚಿಟ್ಟೆಗಳ ವೈಜ್ಞಾನಿಕ ಹೆಸರು ಸಾಸಾಕಿಯಾ ಚಾರೊಂಡ. ಇವು ನಿಂಫಾಲಿಡೆ ಕುಟುಂಬದ ಒಂದು ಚಿಟ್ಟೆ ಜಾತಿಯಾಗಿದೆ. ಇದು ಜಪಾನಿನಲ್ಲಿ ಮಾತ್ರ ಕಾಣ ಸಿಗುತ್ತವೆ. ಇದು ಜಪಾನಿನ ರಾಷ್ಟ್ರೀಯ ಚಿಟ್ಟೆಯಾಗಿದೆ. ಇದನ್ನು ಜಪಾನೀಸ್ ಭಾಷೆಯಲ್ಲಿ ಓ-ಮುರಸಾಕಿ ಎಂದು ಕರೆಯಲಾಗುತ್ತದೆ[೩].
ವಾಸಸ್ಥಾನ
[ಬದಲಾಯಿಸಿ]ಇವು ಹೊಕ್ಕೈಡೋ ಕೊರಿಯನ್ ಪೆನಿನ್ಸುಲಾ, ಚೀನಾ, ಉತ್ತರ ತೈವಾನ್ ಮತ್ತು ಉತ್ತರ ವಿಯೆಟ್ನಾಂ ವರೆಗೆ ಕಾಣಸಿಗುತ್ತವೆ
ಗುಣಲಕ್ಷಣಗಳು
[ಬದಲಾಯಿಸಿ]ಈ ಚಿಟ್ಟೆಗಳಲ್ಲಿ ಹೆಣ್ಣೆ ಚಿಟ್ಟೆಗಳು ಪುರುಷ ಚಿಟ್ಟೆಗಳಿಗಿಂತ ದೊಡ್ಡದಿರುತ್ತವೆ. ಪುರುಷ ಚಿಟ್ಟೆಗಳ ರೆಕ್ಕೆಗಳು ಸರಾಸರಿ 50 mm (2.0 in) ಇದ್ದರೆ ಮಹಿಳಾ ಚಿಟ್ಟೆಗಳ ರೆಕ್ಕೆಗಳು 65 mm (2.6 in) ಇರುತ್ತವೆ. ಅವು ಕಾಡುಗಳ ಮರಗಳ ಮೇಲೆ ಸಾಮಾನ್ಯವಾಗಿ ಕಾಣಸಿಗುತ್ತವೆ. ಕೇವಲ ಆಹಾರಕ್ಕಾಗಿ ಅಥವಾ ಉಪ್ಪಿನ ಮೂಲಗಳನ್ನು ಹುಡುಕಲು ಇವು ಕೆಳಗೆ ಬರುತ್ತವೆ. ಈ ಜಾತಿಯ ಮರಿಹುಳುಗಳು ಸೆಲ್ಟಿಸ್ ಜೆಸೊಯೆನ್ಸಿಸ್, ಸೆಲ್ಟಿಸ್ ಜಪೋನಿಕಾ ಮತ್ತು ಸೆಲ್ಟಿಸ್ ಸೈನೆನ್ಸಿಸ್ ಹ್ಯಾಕ್ಬೆರಿಗಳನ್ನು ತಿನ್ನುತ್ತವೆ.[೪]
ರಾಷ್ಟ್ರೀಯ ಚಿಟ್ಟೆಯ ಸ್ಥಾನ
[ಬದಲಾಯಿಸಿ]ಎಸ್. ಚಾರೊಂಡ ಜಪಾನ್ನ ರಾಷ್ಟ್ರೀಯ ಚಿಟ್ಟೆ. [೫] ಜಪಾನೀಯರ ಮನೆದಲ್ಲಿ ಇದು ವಿಶೇಷವಾದ ಸ್ಥಾನವನ್ನು ಹೊಂದಿದೆ. ಇದರ ಜನಪ್ರಿಯತೆ ಮತ್ತು ಜಪಾನೀಸ್ ಸಂಸ್ಕೃತಿಯಲ್ಲಿನ ಇದರ ಮಹತ್ವಕ್ಕೆ ಮನ್ನಣೆ ಕೊಡಲು ಇದಕ್ಕೆ ೧೯೫೭ರಲ್ಲಿ ರಾಷ್ಟ್ರೀಯ ಚಿಟ್ಟೆಯ ಸ್ಥಾನವನ್ನು ಕೊಡಲಾಯಿತು [೬]. ಇದು ಜಪಾನಿಗೆ ಸೀಮಿತವಾಗಿರುವುದರಿಂದ ಇದರ ವಾಸಸ್ಥಾನವಾದ ಕಾಡುಗಳನ್ನು ಉಳಿಸಲು ಜನ ಜಾಗೃತಿ ಮತ್ತು ಸಂರಕ್ಷಣೆಯ ವ್ಯಾಪಕ ಕ್ರಮಗಳು ನಡೆಯುತ್ತಿವೆ.
ಜಪಾನಿನ ಸಂಸ್ಕೃತಿಯಲ್ಲಿ ಚಾರೊಂಡ ಚಿಟ್ಟೆ
[ಬದಲಾಯಿಸಿ]ಜಪಾನಿನ ದಂತಕತೆಗಳಲ್ಲಿ ಮತ್ತು ಸಂಸ್ಕೃತಿಯಲ್ಲಿ ಈ ಚಿಟ್ಟೆಗಳು ಕಾಣಸಿಗುತ್ತವೆ. ಇದನ್ನು ಜಪಾನಿನ ದಂತಕತೆಗಳಲ್ಲಿ ಸೌಂದರ್ಯ ಮತ್ತು ರೂಪಾಂತರಗಳ ದ್ಯೋತಕವಾಗಿ ಪರಿಗಣಿಸಲಾಗುತ್ತದೆ[೭].ಅವನ್ನು ಪ್ರೀತಿ, ಖುಷಿ ಮತ್ತು ಅದೃಷ್ಟದ ಸಂಕೇತವೆಂದೂ ನಂಬಲಾಗಿದೆ.
ಉಪನಾಮಗಳು
[ಬದಲಾಯಿಸಿ]ವಿಲಿಯಮ್ಸ್ ಸಿ. ಹೆವಿಟ್ಸನ್ ಅವರು ೧೮೬೩ರಲ್ಲಿ ತಂದ ILLUSTRATIONS OF NEW SPECIES OF EXOTIC BUTTERFLIES ಎಂಬ ಕೃತಿಯಲ್ಲಿ ಈ ಚಿಟ್ಟೆಯ ಬಗ್ಗೆ ಮೊದಲ ದಾಖಲಾತಿ ಇದೆ. ಇದರಲ್ಲಿ ಇದನ್ನು ಡಿಯೋಡೆಮಾ ಚಾರೊಂಡ ಎಂದು ಕರೆಯಲಾಗಿತ್ತು.
ಫ್ರೆಡರಿಕ್ ಮೂರೆಯವರ ೧೮೮೭ರ ಕೃತಿಲೆಪಿಡೋಪ್ಟೆರಾ ಇಂಡಿಕಾದಲ್ಲಿ ಇದನ್ನು ಯೂರಿಪನ್ ಕೊರಿಯಾನಸ್ ಎಂದು ಹೆಸರಿಸಲಾಗಿತ್ತು.
ಇದನ್ನೂ ನೋಡಿ
[ಬದಲಾಯಿಸಿ]- ತೈವಾನ್ನ ಚಿಟ್ಟೆಗಳ ಪಟ್ಟಿ
ಉಲ್ಲೇಖಗಳು
[ಬದಲಾಯಿಸಿ]- ↑ William C. Hewitson (1862–1866). Illustrations of New Species of Exotic Butterflies, Selected Chiefly from the Collections of W. Wilson Saunders and William C. Hewitson. Volume III. John Van Voorst. p. 50. doi:10.5962/bhl.title.12625.
- ↑ Frederic Moore (1896). Lepidoptera Indica. Volume III. Lovell Reeve & Co. Limited. p. 39. doi:10.5962/bhl.title.8763.
- ↑ https://greenpacks.org/what-is-japan-s-national-butterfly/
- ↑ Markku Savela. "Sasakia Moore, [1896]". Lepidoptera and Some Other Life Forms.
- ↑ "Sasakia charonda (Japanese Emperor, Japanischer Kaiser)". Butterflycorner.net. Retrieved February 25, 2012.
- ↑ https://greenpacks.org/what-is-japan-s-national-butterfly/
- ↑ https://greenpacks.org/what-is-japan-s-national-butterfly/
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Media related to Sasakia charonda at Wikimedia Commons