ಸಾವಿರ ಕಂಬದ ಬಸದಿ
ಸಾವಿರ ಕಂಬದ ಬಸದಿಯು ಕರ್ನಾಟಕದ ಪ್ರಮುಖ ಬಸದಿ (ಜೈನ ಮಂದಿರ). ಈ ಮಂದಿರವನ್ನು ತ್ರಿಭುವನ ತಿಲಕ ಚೂಡಾಮಣಿ ಬಸದಿ ಎಂದೂ ಕರೆಯಲಾಗುತ್ತದೆ. ೧೦೦೦ ಕಂಬಗಳನ್ನು ಹೊಂದಿರುವ ಈ ಬಸದಿಯು, ಕರ್ನಾಟಕ ರಾಜ್ಯದ, ದಕ್ಷಿಣ ಕನ್ನಡ ಜಿಲ್ಲೆಯ, ಮೂಡುಬಿದಿರೆ ತಾಲೂಕು ಕೇಂದ್ರದಲ್ಲಿದೆ.
ಸಾವಿರ ಕಂಬದ ಬಸದಿ | |
---|---|
![]() ಸಾವಿರ ಕಂಬದ ಬಸದಿ, ಕರ್ನಾಟಕ |
ಸಾವಿರ ಕಂಬದ ಬಸದಿ | |
---|---|
![]() Sāvira Kambada Temple, Karnataka | |
ಧರ್ಮ ಮತ್ತು ಸಂಪ್ರದಾಯ | |
ಧರ್ಮ | Jainism |
ಅಧಿ ನಾಯಕ/ದೇವರು | Chandraprabha |
Governing body | Shri Moodabidri Jain Matha |
Bhattaraka | Charukeerti Panditacharya Varya |
ಸ್ಥಳ | |
ಸ್ಥಳ | Moodabidri, Karnataka |
ವಾಸ್ತುಶಿಲ್ಪ | |
ಸ್ಥಾಪನೆ | 1430 AD |
Temple(s) | 18 |
Website | |
www |
ಇತಿಹಾಸ[ಬದಲಾಯಿಸಿ]
- ಈ ಬಸದಿಯ ನಿರ್ಮಾಣವನ್ನು ೧೪೩೦ರಲ್ಲಿ ಮಾಡಲಾಗಿದೆ. ಇದನ್ನು ೧೯೬೨ರಲ್ಲಿ ಕೃಷ್ಣದೇವರಾಯರ ಆಸ್ಥಾನದಲ್ಲಿದ್ದ ದೇವರಾಯ ಒಡೆಯರ್ ಜಿರ್ಣೋದ್ಧಾರ ಮಾಡಿದರು. ಇದರಲ್ಲಿ ೬೦ ಅಡಿಯ ಒಂಟಿ ಸ್ತಂಭವಿದ್ದು, ಇದನ್ನು ಕಾಕ೯ಳದ ಭೈರವ ರಾಣಿ ನಾಗಳ ದೇವಿ ಸ್ಥಾಪಿಸಿದರು. ಈ ಒಂದೆ ಸ್ಥಳದಲ್ಲಿ ೧೮ ದೇವಸ್ಥಾನಗಳು, ೧೮ ರಸ್ತೆಗಳು, ೧೮ ಕೆರೆಗಳು ಹಾಗು ೧೮ ಬಸದಿಗಳಿವೆ. ಇವೆಲ್ಲವೂ ಮಂಗಳೂರಿನಿಂದ ೩೭ ಕಿಲೊಮಿಟರ್ ದೂರವಿರುವ ಮೂಡಬಿದರೆಯಲ್ಲಿದೆ.
- ಇಲ್ಲಿ ತುಂಬ ಬಿದಿರು ಗಳಿರುವ ಕಾರಣ ಈ ಪಟ್ಟಣಕ್ಕೆ ಮೂಡುಬಿದಿರೆ ಎಂಬ ಹೆಸರು ಬಂತು, ಮೂಡ- ಪೂವ೯ ಮತ್ತು ಬಿದಿರೆ- ಬಿದಿರು. ಮೂಡಬಿದಿರೆಯು ಚೌಟ ಎಂಬ ಕುಟುಂಬದ ಆಳ್ವಿಕೆಗೆ ಒಳಪಟ್ಟಿತ್ತು. ಅವರ ನಿಜವಾದ ಆಳ್ವಿಕೆ ಪುತ್ತಿಗೆ ಎಂಬ ಸ್ಥಳದಲ್ಲಿತ್ತು.ಅದು ಮೂಡುಬಿದಿರೆಯಿಂದ ೫ ಕಿ.ಮಿ. ದೂರದಲ್ಲಿದೆ. ಅವರು ೧೭ನೇ ಶತಮಾನದಲ್ಲಿ ಮೂಡಬಿದಿರೆಯನ್ನು ರಾಜಧಾನಿಯಾಗಿ ಮಾಡಿಕೊಂಡರು.
- ಅಲ್ಲಿ ಅವರು ಅರೆಮನೆಯನ್ನು ನಿಮಿ೯ಸಿದರು ಅದನ್ನು ಈಗಲೂ ನೋಡ ಕಾಣಬಹುದು. ಮೂಡುಬಿದಿರೆಯು ಪುರಾತನ ಆಕಷ೯ಣೆಯನ್ನು ಈಗಲೂ ಉಳಿಸಿಕೊಂಡಿದೆ. ಹಲವು ಜೈನ ಹಬ್ಬಗಳನ್ನು ವಷ೯ವಿಡಿ ಆಚರಿಸಲಾಗುತ್ತದೆ. ಇಲ್ಲಿ ಸುಂದರವಾದ ಜೈನ ತೀಥ೯ಂಕರ ಮೂತಿ೯ಗಳಿವೆ. ಪ್ರತಿಯೊಂದು ಜೈನ ಬಸದಿಯಲ್ಲೂ ಯಕ್ಷ ಮತ್ತು ಯಕ್ಷಿಣಿ ಇವೇ. ಮೂಡುಬಿದಿರೆಯಲ್ಲಿ ಜೈನ ಧಮ೯ದ ಇತಿಹಾಸವು ೧೩ನೇ ಶತಮಾನದಲ್ಲಿ ಪ್ರಾರಂಭವಾಯಿತು.
- ಆದರೆ ೧೪ ಮತ್ತು ೧೬ನೇ ಶತಮಾನದ ಜೈನ ಧಮ೯ದ ಸಂಸ್ಕೃತಿ, ಕಲೆ ಮತ್ತು ವಾಸ್ತುಶಿಲ್ಪ ಈ ಸ್ಥಳದ ಬೆಳವಣಿಗೆ ಸಾಕ್ಷಿಯಾಗಿದೆ. ತ್ರಿಭುವನ ತಿಲಕ ಚೂಡಮಣಿ ಬಸದಿಯು ಕರ್ನಾಟಕದ ಕರಾವಳಿ ತೀರದ ದೊಡ್ಡ ಬಸದಿ ಎನ್ನಲಾಗುತ್ತದೆ. ಇದೊಂದು ಅಮೂಲ್ಯವಾದ ಜೈನ ದೇವಸ್ಥಾನ,ಯಾಕೆಂದರೆ ಇದರಲ್ಲಿ ವಿವಿಧ ತರಹದ ಸಾವಿರ ಸ್ತಂಭಗಳು ಇವೆ. ಇವುಗಳಿಂದಲೇ ಈ ಮಂದಿರವು ಸಾವಿರ ಕಂಬಗಳ ಬಸದಿ ಎಂದು ಜನಜನಿತವಾಗಿದೆ.
ತೀಥ೯ಂಕರರು[ಬದಲಾಯಿಸಿ]
- ತೀಥ೯ಂಕರರ ಭಕ್ತಿಯು ಎಷ್ಟೆಂದರೆ ಧ್ಯಾನದಲ್ಲಿ ಅವರು ನೀರಿನ ಮೇಲೆ ಸಹಾ ನಡೆಯಬಲ್ಲರು ಎನ್ನಲಾಗುತ್ತದೆ. ಜೈನರ ಪ್ರಕಾರ ಸಮಯಕ್ಕೆ ಹುಟ್ಟು ಹಾಗೂ ಸಾವು ಇಲ್ಲ. ಅವರ ಪ್ರಕಾರ ೨೪ ತೀಥ೯ಂಕರರಿದ್ದಾರೆ. ಆದಿನಾಥ ಎಂಬುವವರನ್ನು ಮೊದಲ ತೀಥ೯ಂಕರ ಎಂದು ಕರೆಯಲಾಗುತ್ತದೆ. ಅವರನ್ನು ವೃಷಭ ದೇವ ಎಂದೂ ಕರೆಯುತ್ತಾರೆ .
- ಪಾರ್ಶ್ವನಾಥ ಎಂಬುವವರನ್ನು ೨೩ನೇ ತೀಥ೯ಂಕರ ಎಂದು ಕರೆಯಲಾಗುತ್ತದೆ. ಕೊನೆಯದಾಗಿ ಮಹಾವೀರರು ೨೪ನೇ ತೀಥ೯ಂಕರರು. ಇವರು ೬ನೇ ಶತಮಾನದಲ್ಲಿ ಅಂದರೆ ಬುದ್ದನ ಕಾಲದಲ್ಲಿ ಜೀವಿಸಿದ್ದರು. ೨೪ ತೀಥ೯ಂಕರರ ವಿಗ್ರಹಗಳನ್ನು ಪ್ರತಿಯೊಂದು ಜೈನ ಬಸದಿಗಳಲ್ಲೂ ಕಾಣಬಹುದು.
ಗುರು ಬಸದಿ[ಬದಲಾಯಿಸಿ]
ಇಲ್ಲಿರುವ ಗುರು ಬಸದಿಯು ಜೈನ ಧಮ೯ದ ಪ್ರಾಚೀನ ಬಸದಿ. ಈ ಬಸದಿಯಲ್ಲಿರುವ ಪಾರ್ಶ್ವನಾಥರ ಕಲ್ಪನ ಮೂತಿ೯ಯು ೩.೫ ಮೀಟರ್ ಎತ್ತರ ಇದೆ. ಇಲ್ಲಿ ಜೈನರ ೧೨ನೇ ಶತಮಾನದ ತಾಳೆಗರಿಯಲ್ಲಿ ಬರೆದಿರುವ "ಧವಳ ಕೈ ಬರಹ" ಗ್ರಂಥವನ್ನು ಸಂಗ್ರಹಿಸಿ ಇಡಲಾಗಿದೆ.
ಜೈನ ಮಠ[ಬದಲಾಯಿಸಿ]
ಈ ಮಠವು ಮೂಡಬಿದಿರೆಯಲ್ಲಿರುವ ಎಲ್ಲಾ ಬಸದಿಗಳ ಕಾಯ೯ನಿವ೯ಹಣೆಯನ್ನು ಮಾಡುತ್ತದೆ. ಈ ಮಠವನ್ನು ಜೈನರ ದಕ್ಷಿಣ ಕಾಶಿ ಎಂದು ಕರೆಯಲಾಗುತ್ತದೆ.
ಭಟ್ಟಾರಕ ಚಾರುಕೀತಿ೯[ಬದಲಾಯಿಸಿ]
ಭಟ್ಟಾರಕ ಚಾರುಕೀತಿ೯ಯವರು ಮೂಡಬಿದಿರೆಯಲ್ಲಿರುವ ೧೮ ಜೈನ ಬಸದಿಗಳು ಮತ್ತು ಸುತ್ತಲಿನ ದೇವಸ್ಥಾನಗಳ ಉಸ್ತುವಾರಿಯನ್ನು ನಿವ೯ಹಿಸುತ್ತಾರೆ.
ಸ್ತಂಭಗಳ ಕಥೆ[ಬದಲಾಯಿಸಿ]
- ಬಸದಿಯನ್ನು ವೀಕ್ಷಿಸಲು ಬಂದ ಪ್ರತಿಯೊಬ್ಬರಿಗೂ ಬಸದಿಯ ಮುಂದೆ ನಿಂತಾಗ ಸ್ತಂಭಗಳನ್ನು ವೀಕ್ಷಿಸಿದಾಗ ಪ್ರತಿಯೊಂದು ಸ್ತಂಭವು ತನ್ನ ಯುಗಗಳ ಇತಿಹಾಸವನ್ನು ವಿಸ್ತಾರವಾಗಿ ಬಿಂಬಿಸುತ್ತದೆ. ಪ್ರತಿಯೊಂದು ಸ್ತಂಭವು ಗ್ರಾನೈಟ್ ಕಲ್ಲಿನಿಂದ ಮೂಡಲ್ಪಟ್ಟಿದೆ. ಕೆತ್ತನೆಗಳು ತುಂಬಾ ಮನಮೋಹಕವಾಗಿದ್ದು, ತುಂಬಾ ಶಾಂತಿ ಮತ್ತು ಹಿತವಾದ ಅನುಭವವನ್ನು ನೀಡುತ್ತದೆ.
- ಕೆತ್ತನೆಗಳಲ್ಲಿ ಮನುಷ್ಯ ಮತ್ತು ಪ್ರಕೃತಿಯ ನಡುವಿನ ಸಂಬಂಧಗಳನ್ನು ಅದರಲ್ಲಿ ಚಿತ್ರಿಸಲಾಗಿದೆ. ಇದರಲ್ಲಿ ಚೈನಾ ಮತ್ತು ಆಪ್ರಿಕಾದ ಪ್ರಾಣಿ ಪಕ್ಷಿಗಳ ಕೆತ್ತನೆಗಳನ್ನು ಕೆತ್ತಲಾಗಿದೆ, ಹಾಗೂ ವಾಣಿಜ್ಯ ವ್ಯಾಪಾರದ ಖಂಡಗಳ ದಾರಿಯನ್ನು ಚಿತ್ರಿಸಲಾಗಿದೆ.
ಕೀತಿ೯ಸ್ತಂಭ[ಬದಲಾಯಿಸಿ]
- ಕೀತಿ೯ಸ್ತಂಭವನ್ನು ವ್ಯಾಪಾರಿಯಾದ ಸಹಾಜೀಯಾರವರು, ಅವರ ಸ್ವಂತ ದುಡಿದ ದುಡಿಮೆಯಿಂದ ಆದಿನಾಥ ದೇವರ ದೇವಸ್ಥಾನದಲ್ಲಿ ಕಟ್ಟಿದರು. ನಂತರ ೧೪೮೯ರಲ್ಲಿ ಅವರ ಮರಿಮೊಮ್ಮಗ ಅದನ್ನು ಜೀಣೊ೯ದ್ದಾರ ಮಾಡಿದರು.ಆದರೆ ಅದರ ನಿಜವಾದ ದಿನಾಂಕ ತಿಳಿದು ಬಂದಿಲ್ಲ.
- ಕೆಲವರ ನಂಬಿಕೆಯ ಪ್ರಕರ ಸಹಾಜೀಯಾರವರು ಇದನ್ನು ೧೨ನೇ ಶತಮಾನದಲ್ಲಿ ಕಟ್ಟಿದರು ಎಂದು ತಿಳಿಸಲಾಗಿದೆ. ನಂತರ ರಾಣಾಕುಂಭರವರು ೧೪೫೮-೬೮ರಲ್ಲಿ ಮಹಮ್ಮದ್ ಕಿಲ್ಜಿಯವರ ಮೇಲೆ ಜಯ ಸಾಧಿಸಿದ ಗುರುತಿಗಾಗಿ ಜಯಸ್ತಂಭವನ್ನಾಗಿ ಸ್ಥಾಪಿಸಿದರು.
ಮಾನಸ್ತಂಭ[ಬದಲಾಯಿಸಿ]
ಮಾನಸ್ತಂಭವನ್ನು ಗೌರವ ಸ್ತಂಭವೆಂದು ಕರೆಯಲಾಗುತ್ತದೆ. ಈ ಸ್ತಂಭಗಳನ್ನು ಎಲ್ಲಾ ಜೈನ ಬಸದಿಗಳ ಮುಂಬಾಗದಲ್ಲಿ ಸ್ಥಾಪಿಸಲಾಗುತ್ತದೆ. ಜೈನ ಬಸದಿಗಳನ್ನು ನಾವು ಭಾರತದ ಉತ್ತರಖಂಡದಲ್ಲಿ ಇದು ನಾಲ್ಕು ತೀಥ೯ಂಕರದಲ್ಲಿ ಇದು ಉತ್ತುಂಗದಲ್ಲಿದೆ. ಜೈನ ಪುಸ್ತಕದ ಪ್ರಕಾರ ಜೈನರು ಮಾನಸ್ತಂಭದ ಮುಂದೆ ತಲೆಭಾಗುತ್ತಾರೆ. ಮಾನಸ್ತಂಭವು ಬ್ರಹ್ಮದೇವರಿಗೆ ಹೊಲಿಕೆಯಾಗಿದೆ.
ಇತರ ಜೈನ ಮಂದಿರಗಳು[ಬದಲಾಯಿಸಿ]
- ವಿಕ್ರಮ ಶೆಟ್ಟಿ ಬಸದಿ
- ಮಹದೇವ ಶೆಟ್ಟಿ ಬಸದಿ
- ಚೋಳ್ ಶೆಟ್ಟಿ ಬಸದಿ
- ಮದ್ಯ ಶೆಟ್ಟ ಬಸದಿ
- ಧಮ೯ ಶೆಟ್ಟಿ ಬಸದಿ
- ಅಮ್ಮನವರ ಬಸದಿ
- ಬದಗ ಬಸದಿ
- ಕೆರೆ ಬಸದಿ
- ಶೆಟ್ಟಿರ ಬಸದಿ
- ಜೈನ ಪಾಠಶಾಲಾ ಬಸದಿ
- ಬದಗ ಬಸದಿ
- ಕೆರೆ ಬಸದಿ
- ಶೆಟ್ಟರ ಬಸದಿ
ಚಿತ್ರಗಳು[ಬದಲಾಯಿಸಿ]
-
ಬಸದಿಯ ಮಾನಸ್ತಂಭ
-
ಬಸದಿಯ ಬಲಭಾಗದ ಚಿತ್ರಣ
-
ಬಸದಿಯ ಎಡಭಾಗದ ಚಿತ್ರಣ
-
ಬಸದಿ ಒಳಭಾಗದ ಚಿತ್ರಣ
-
ಬಸದಿಯ ಒಳಭಾಗದ ಕಂಬದ ಚಿತ್ರಣ
-
ಸಾವಿರ ಕಂಬದ ಬಸದಿಯಲ್ಲಿರುವ ವರ್ಣಚಿತ್ರ
-
ಆವರಣದೊಳಗಿಂದ ಸಾವಿರ ಕಂಬದ ಬಸದಿಯ ಚಿತ್ರ
-
ಗುರು ಬಸದಿಯಲ್ಲಿರುವ ಬಾಹುಬಲಿ ಮೂರ್ತಿ
-
ಕಲ್ಲು ಬಸದಿ
-
ಕೋಟಿ ಬಸದಿ
-
ಗುರು ಬಸದಿ
-
ಲೆಪ್ಪದ ಬಸದಿ
-
ವಿಕ್ರಮ ಶೆಟ್ಟಿ ಬಸದಿ
-
ಧಮ೯ ಶೆಟ್ಟಿ ಬಸದಿ
See also[ಬದಲಾಯಿಸಿ]

ಇವನ್ನೂ ನೋಡಿ[ಬದಲಾಯಿಸಿ]
ಉಲ್ಲೇಖನೆಗಳು[ಬದಲಾಯಿಸಿ]
- Articles using infobox templates with no data rows
- Articles containing explicitly cited Kannada-language text
- Articles containing Marathi-language text
- Pages using infobox religious building with unsupported parameters
- Commons link is locally defined
- Commons category with local link different than on Wikidata
- ಕ್ರೈಸ್ಟ್ ವಿಶ್ವವಿದ್ಯಾಲಯ ವಿಕಿಪೀಡಿಯ ಶಿಕ್ಷಣ ಯೋಜನೆ-೨೦೧೫-೧೬
- ಬಸದಿಗಳು
- ದೇವಾಲಯಗಳು
- ವಿಕಿಕ್ಲಬ್ ಕ್ರೈಸ್ಟ್ ಯೂನಿವರ್ಸಿಟಿ ರಚಿಸಿದ ಲೇಖನಗಳು
- ಮೂಡುಬಿದಿರೆಯ ಬಸದಿಗಳು