ಸಾಲದ ಖಾತೆ (ಖರ್ಚು)

ವಿಕಿಪೀಡಿಯ ಇಂದ
Jump to navigation Jump to search

ಲೆಕ್ಕ ಪರಿಶೋದನೆ ಎಂದರೆ : ಮೊಂಟಗೊಮರಿ ಅವರ ಪ್ರಕಾರ "ಯಾವುದೊಂದು ವ್ಯವಹಾರಿ ಸಂಸ್ಧೆ ಯು ಅಥವಾ ಇತರ ಸಂಸ್ಥೆ ಯ ಹಣಹಾಸಿನ ವ್ಯವಹಾರಗಳನ್ನು ಮತ್ತು ಅವುಗಳಿಂದ ಪರಿಣಾಮವನ್ನು ಕಂಡು ಹಿಡಿದು ಅವುಗಳ ಬಗ್ಗೆ ವರದಿ ಸಲ್ಲಿಸಲು ಆ ಸಂಸ್ಥೆ ಯ ಲೆಕ್ಕದ ಪತ್ರಗಳನ್ನು ಮತ್ತು ದಾಖಲೆ ಪತ್ರಗಳನ್ನು ಸುವ್ಯ ವಸ್ಥಿತವಾಗಿ ಪರಿಶೀಲುವುದೇ ಲೆಕ್ಕ ಪರಿಶೋದನೆಯಾಗಿದೆ. ಡೆಬಿಟ್ (ಸಾಲದ ಖಾತೆ) ಮತ್ತು ಕ್ರೆಡಿಟ್ (ಜಮೆಯ ಖಾತೆ) ಗಳು ಸಾಮಾನ್ಯ ಜಮಾಖರ್ಚಿನ ಲೆಕ್ಕ ಇಡುವುದಾಗಿದೆ.ಅದಲ್ಲದೇ ಇದನ್ನು ನಿಗದಿತ ವೇಳೆಗೆ ನಿಖರ ಲೆಕ್ಕಾಚಾರ ಮಾಡುವ ಪದ ವಿವರದ ಪದ್ದತಿಯೆನಿಸಿದೆ. ಇವೆರಡೂ ಒಂದು ಖಾತೆಯ ಎಡ ಬಲಕ್ಕೂ ಕಾಣಿಸಿಕೊಳ್ಳುತ್ತವೆ. ಇವು ಲೆಕ್ಕ ಗಣಿತದ ಮೂಲಭೂತ ಪರಿಕಲ್ಪನೆಯಾಗಿವೆ.ಈ ಪದ್ದತಿಯಲ್ಲಿ ಪ್ರತಿ ಖಾತೆಯಲ್ಲೂ ವೈಯಕ್ತಿಕ ಲೆಕ್ಕದ ದಾಖಲೆಗಳನ್ನು ನಮೂದಿಸಲಾಗುತ್ತದೆ. ಡೆಬಿಟ್ ಒಂದು ಆಸ್ತಿ ಅಥವಾ ಖರ್ಚು ಬಾಬತ್ತಿನ ವಹಿವಾಟು ಎನ್ನಲಾಗುತ್ತದೆ.ಕ್ರೆಡಿಟ್ ಎಂದರೆ ಒಂದು ನೀಡಿಕೆ ವ್ಯವಹಾರದ ಜವಾಬ್ದಾರಿ ಅಥವಾ ಆದಾಯದ ಬಾಬತ್ತು.ಡೆಬಿಟ್ ವಹಿವಾಟನ್ನು ಕ್ರೆಡಿಟ್ ಬಾಕಿಯನ್ನು ಕಡಿಮೆ ಮಾಡಲು ಇಲ್ಲವೆ ಡೆಬಿಟ್ ಬಾಕಿಯನ್ನು ಹೆಚ್ಚು ಮಾಡಲು ಉಪಯೋಗಿಸಲಾಗುತ್ತದೆ.(ಬ್ಯಾಲನ್ಸ್ ಎಂದರೆ ಜಮಾ-ಖರ್ಚಿನ ವ್ಯತ್ಯಾಸದ ಶಿಲ್ಕು ಅಥವಾ ಉಳಿಕೆ) ಒಂದು ಕ್ರೆಡಿಟ್ ವಹಿವಾಟನ್ನು ಡೆಬಿಟ್ ಬಾಕಿಯನ್ನು ಕಡಿಮೆ ಮಾಡಲು ಇಲ್ಲವೆ ಕ್ರೆಡಿಟ್ ವ್ಯತ್ಯಾಸವನ್ನು ಹೆಚ್ಚಿಸಲು ಉಪಯೋಗಿಸಲಾಗುತ್ತದೆ. ಡೆಬಿಟ್ ಮತ್ತು ಕ್ರೆಡಿಟ್ ಗಳು ಲೆಕ್ಕಪತ್ರದ ಪುಸ್ತಕದಲ್ಲಿ ಎರಡು ಕಡೆ ನಮೂದಾಗಿರುತ್ತವೆ. ಇದನ್ನೇ ದ್ವಿಖಾತೆ ವಹಿವಾಟಿನ ಲೆಕ್ಕಶಾಸ್ತ್ರದ ಪದ್ದತಿಗೆ ತಳಹದಿ ಎನ್ನಲಾಗಿದೆ. ಪ್ರತಿಯೊಂದು ಡೆಬಿಟ್ ಮತ್ತು ಕ್ರೆಡಿಟ್ ಮೌಲ್ಯಗಳನ್ನು ಲೆಡ್ಜೆರ್ ಗಳಲ್ಲಿ ದಾಖಲಿಸಲಾಗುತ್ತದೆ.ನಂತರ ಈ ಲೆಡ್ಜೆರ್ ಗಳಿಂದ ಹಣಕಾಸು ವರದಿಗಳನ್ನು ತಯಾರಿಸಲಾಗುತ್ತದೆ

ಪರಿಚಯ[ಬದಲಾಯಿಸಿ]

ಯಾವುದೇ ಹಣಕಾಸಿನ ವ್ಯವಹಾರದ ಘಟಕವನ್ನು ಲೆಕ್ಕಶಾಸ್ತ್ರ ಅಥವಾ ಬುಕ್ ಕೀಪಿಂಗ್ ಪದ್ದತಿಯಲ್ಲಿ ನಮೂದಿಸಲು ಈ ಡೆಬಿಟ್ಸ್ ಮತ್ತು ಕ್ರೆಡಿಟ್ಸ್ ಗಳು ವಹಿವಾಟಿನ ಸಂಕೇತಗಳಾಗಿವೆ.ಯಾವ ವಹಿವಾಟನ್ನು ಎಲ್ಲಿ ಮತ್ತು ಹೇಗೆ ದಾಖಲಿಸಬೇಕೆಂಬುದರ ಬಗ್ಗೆ ಈ ಪದ್ದತಿ ವಿವರಿಸುತ್ತದೆ. ಈ ಲೆಕ್ಕಶಾಸ್ತ್ರದಲ್ಲಿ ಸಂಕಲನಕ್ಕಾಗಿ ಇದನ್ನು '+'ಮತ್ತು ವ್ಯವಕಲನಕ್ಕಾಗಿ ಈ ಚಿನ್ಹೆ '-' ಗಳ ಬಳಸುವ ಬದಲಾಗಿ DR (ಡೆಬಿಟ್ ) ಅಥವಾ CR (ಕ್ರೆಡಿಟ್ )ಸಂಕೇತಗಳ ಬಳಸಿ ಲೆಕ್ಕಾಚಾರ ಮಾಡಲಾಗುತ್ತದೆ. ಡಬಲ್ ಎಂಟ್ರಿ ಬುಕ್ ಕೀಪಿಂಗ್ ನಲ್ಲಿ ಡೆಬಿಟ್ ನ್ನು ಆಸ್ತಿ ಮತ್ತು ಖರ್ಚಿನ ವಹಿವಾಟುಗಳಿಗೆ ಮತ್ತು ಕ್ರೆಡಿಟ್ ನ್ನು ಪಾವತಿಸಬೇಕಾದ ಹೊಣೆಗಾರಿಕೆ,ಲಾಭ ಮತ್ತು ಇಕ್ವಿಟಿ ವಹಿವಾಟುಗಳ(ನಿವ್ವಳ ಮೌಲ್ಯಗಳ) ಸಂಕೇತಿಸಲು ಸೂಚಿಸಲಾಗುತ್ತದೆ. ಬ್ಯಾಂಕ್ ಖಾತೆಯ ವಹಿವಾಟಿಗೆ ಸಂಬಂಧಿಸಿದರೆ ಪಡೆದ ಹಣದ ವ್ಯವಹಾರವನ್ನು ಡೆಬಿಟ್ ಎಂತಲೂ ಮತ್ತು ಹಣ ನೀಡಿಕೆಯನ್ನು ಕ್ರೆಡಿಟ್ ವಹಿವಾಟು ಎನ್ನಲಾಗುತ್ತದೆ. ಸಾಂಪ್ರದಾಯಿಕವಾಗಿ ಹಣಕಾಸಿನ ವಹಿವಾಟುಗಳನ್ನು ಎರಡು ವಿಂಗಡಿತ ವಿಭಾಗ,ಕಾಲಮ್ ಗಳಲ್ಲಿ ದಾಖಲಿಸಲಾಗುತ್ತದೆ:ಡೆಬಿಟ್ ಗಳನ್ನು ಎಡಭಾಗಕ್ಕೆ ಮತ್ತು ಕ್ರೆಡಿಟ್ ಗಳನ್ನು ಬಲಭಾಗಕ್ಕೂ ದಾಖಲಿಸಲಾಗುತ್ತದೆ. ಡೆಬಿಟ್ಸ್ ಮತ್ತು ಕ್ರೆಡಿಟ್ಸ್ ಗಳನ್ನು ಪ್ರತ್ಯೇಕ ಕಾಲಮ್ ಗಳಲ್ಲಿ ಇಡುವುದರಿಂದ ಅವುಗಳನ್ನು ಸ್ವತಂತ್ರವಾಗಿ ಅಲ್ಲದೇ ಸುಲಭವಾಗಿ ಒಟ್ಟು ಮೊತ್ತ ಕಂಡುಹಿಡಿಯಬಹುದು. ಒಟ್ಟು ಡೆಬಿಟ್ ಮೊತ್ತವು ಒಟ್ಟು ಕ್ರೆಡಿಟ್ ಮೊತ್ತಕ್ಕಿಂತ ಕಡಿಮೆಯಾದರೆ ಉಳಿದ ಡೆಬಿಟ್ ಮೊತ್ತವನ್ನು ಸಾಮಾನ್ಯ ಲೆಡ್ಜೆರ್ ಅಕೌಂಟ್ಸ್ ಗೆ ನಮೂದಿಸಲಾಗುತ್ತದೆ. ಈಗ ಈ ಸರ್ವಸಾಮಾನ್ಯ ಲೆಡ್ಜೆರ್ ಅಕೌಂಟ್ ಖಾತೆಯನ್ನು ಸದ್ಯ" ಸಮತೋಲನ"ಗೊಳಿಸಲಾಗುತ್ತದೆ. ಒಂದು ಖಾತೆಯು ಕ್ರೆಡಿಟ್ ಮೌಲ್ಯದ ಬಾಕಿ ಇಲ್ಲವೆ ಡೆಬಿಟ್ ಮೌಲ್ಯದ ಬಾಕಿಯನ್ನು ತೋರಿಸುತ್ತದೆ. ಆದರೆ ಎರಡನ್ನೂ ತೋರಿಸಲಾರದು.

ಡೆಬಿಟ್ ನ್ನು ಆಸ್ತಿ ಮತ್ತು ಖರ್ಚುಗಳಿಗಾಗಿ ಮಾತ್ರ ಉಪಯೋಗಿಸುವುದಿಲ್ಲ. ಇದನ್ನು ಪಾವತಿಸಬೇಕಾದ ಹೊಣೆಗಾರಿಕೆಗಳು ಮತ್ತು ಮಾಲಿಕನ ನಿವ್ವಳ ಮೌಲ್ಯ(ಬಂಡವಾಳ)ಗುರುತಿಸಲೂ ಬಳಸಲಾಗುತ್ತದೆ. ಆಸ್ತಿಗಳು ಮತ್ತು ಖರ್ಚುಗಳು,ಹೆಚ್ಚಾದರೆ ಇದು ಸಂಬಂಧಪಟ್ಟ ಖಾತೆಗಳಿಗೆ ಡೆಬಿಟ್ ಪರಿಣಾಮ ಬೀರಿದರೆ;ಆಸ್ತಿಗಳಲ್ಲಿನ ಹೆಚ್ಚಳ ಅಥವಾ ಖರ್ಚುವೆಚ್ಚಗಳು ಸಂಬಂಧಪಟ್ಟ ಖಾತೆಗಳಿಗೆ ಡೆಬಿಟ್ ಪರಿಣಾಮ ನೀಡುತ್ತವೆ. ಇನ್ನೊಂದು ಅರ್ಥದಲ್ಲಿ ನೀವು ಒಂದು ಆಸ್ತಿ ಮೌಲ್ಯವನ್ನು ಡೆಬಿಟ್ ಮಾಡಿದಾಗ ಅದು ಆಸ್ತಿ ಮೌಲ್ಯದಲ್ಲಿನ ಹೆಚ್ಚಳ ತೋರಿಸಲು,ಆದರೆ ನೀವು ಖರ್ಚಿನ ಖಾತೆಯನ್ನು ಡೆಬಿಟ್ ಮಾಡಿದಾಗ ನಿಮ್ಮ ಖರ್ಚು ಬಾಬತ್ತಿನ ಖಾತೆಯ ವೆಚ್ಚದ ಹೆಚ್ಚಳ ತೋರಿದಂತಾಗುತ್ತದೆ. ಹೀಗಾಗಿ ಡೆಬಿಟ್ ನ್ನು ಹೊಣೆಗಾರಿಕೆಗಳಿಗಾಗಿ ಮತ್ತು ಮಾಲಿಕನ ನಿವ್ವಳ ಖಾತೆಗಾಗಿಯೂ ಉಪಯೋಗಿಸಲಾಗುತ್ತದೆ. ಆದಾಗ್ಯೂ ಹೊಣೆಗಾರಿಕೆಗಳು ಮತ್ತು ಮಾಲಿಕನ ಎಕ್ವಿಟಿಗಳು ಖಾತೆಯ ಕ್ರೆಡಿಟ್ ಭಾಗದಲ್ಲಿ ನಮೂದಾಗುತ್ತವೆ;ಆಗ ಹೊಣೆಗಾರಿಕೆ ಖಾತೆಗೆ ಡೆಬಿಟ್ ನಮೂದಾದರೆ ಅಲ್ಲಿ ಹೊಣೆಗಾರಿಕೆ ಖಾತೆಯಲ್ಲಿ ಇಳಿಕೆ ಕಾಣುತ್ತದೆ. ಹಾಗೆಯೇ ಮಾಲಿಕನ ಎಕ್ವಿಟಿ ಖಾತೆಗೆ ಡೆಬಿಟ್ ಎಂದರೆ ಮಾಲಿಕನ ಎಕ್ವಿಟಿ ಖಾತೆಯಲ್ಲಿ ಇಳಿಕೆ ಎಂದರ್ಥ.

ಕ್ರೆಡಿಟ್ ನ್ನು ಕೇವಲ ಹೊಣೆಗಾರಿಕೆಗಳಿಗೆ ಮತ್ತು ಮಾಲಿಕನ ಎಕ್ವಿಟಿ ಖಾತೆಗಳಿಗೆ ಮಾತ್ರ ಉಪಯೋಗಿಸುವುದಿಲ್ಲ ಕ್ರೆಡಿಟ್ ನ್ನು ಕೂಡಾ ಆಸ್ತಿಗಳ ಮತ್ತು ವೆಚ್ಚಗಳ ಖಾತೆಗಳಿಗೂ ಉಪಯೋಗಿಸಲಾಗುತ್ತದೆ. ಹೊಣೆಗಾರಿಕೆ ಖಾತೆಯಲ್ಲಿನ ಹೆಚ್ಚಳವು ಸಂಬಂಧಪಟ್ಟ ಹೊಣೆಗಾರಿಕೆ ಖಾತೆಗೆ ಒಂದು ಕ್ರೆಡಿಟ್ ನ ಅಗತ್ಯವಿದೆ.(ಈ ಉಳಿಕೆಯು ಪೂರಕ ಖಾತೆಗಳಲ್ಲಿ ದಾಖಲಾಗಿರಬೇಕು) ಅದೇ ರೀತಿ ಮಾಲಿಕನ ಎಕ್ವಿಟಿ ಖಾತೆಯಲ್ಲಿನ ಹೆಚ್ಚಳವು ಮಾಲಿಕನ ಎಕ್ವಿಟಿ ಖಾತೆಗೆ ಒಂದು ಕ್ರೆಡಿಟ್ ನ ಅಗತ್ಯವನ್ನು ತೋರುತ್ತದೆ. ಒಂದು ಆಸ್ತಿ ಖಾತೆಗೆ ಸಾಮಾನ್ಯ ಶಿಲ್ಕು ಡೆಬಿಟ್ ಆಗಿದ್ದರೆ ಇಲ್ಲಿನ ಇಳಿಕೆಯನ್ನು ಸಂಬಂಧಿತ ಆಸ್ತಿ ಖಾತೆಗೆ ಕ್ರೆಡಿಟ್ ಎಂದು ದಾಖಲಿಸಲಾಗುತ್ತದೆ. ಹಾಗೆಯೇ ಒಂದು ಖರ್ಚಿನ ಖಾತೆಯು ಸಾಮಾನ್ಯವಾಗಿ ಡೆಬಿಟ್ ಶಿಲ್ಕನ್ನು ತೋರಿಸುತ್ತದೆ,ಖರ್ಚಿನಲ್ಲಿನ ಇಳಿಕೆಯು ಖರ್ಚು ಬಾಬತ್ತಿನ ಖಾತೆಯಲ್ಲಿ ಕ್ರೆಡಿಟ್ ನ್ನು ತೋರಿಸಬೇಕಾಗುತ್ತದೆ.

ಮುಂದಿನ ಪರಿಷ್ಕರಣೆಯಲ್ಲಿ ಅದಕ್ಕೆ ಪ್ರತಿ ಖಾತೆ ಅಥವಾ ವಿರುದ್ದ ಭಾಗದಲ್ಲಿನ ಈ ವಹಿವಾಟು ಆಸ್ತಿಯ ಖಾತೆಯನ್ನು ದಾಖಲಿಸಲಾಗುತ್ತದೆ. ಇದು ಕೆಲಮಟ್ಟಿಗೆ ಹಾದಿ ತಪ್ಪಿಸುವಂತೆ ಇದೆ. ಈ ಪ್ರತಿ ಖಾತೆಯು ಸಂಬಂಧಪಟ್ಟ ಖಾತೆಗೆ ವ್ಯವಕಲನವಾಗುತ್ತದೆ. ಒಂದು ಆಸ್ತಿ ಖಾತೆಯಲ್ಲಿ ಡೆಬಿಟ್ ಎಂಬುದು ಸಾಮಾನ್ಯ ಸಂಗತಿ;ಆದರೆ ಕೆಲವು ಅಪರೂಪದ ಸಂದರ್ಭದಲ್ಲಿ ಆಸ್ತಿ ಖಾತೆಯು ಕ್ರೆಡಿಟ್ ಬಾಕಿಯನ್ನು ತೋರಿಸುತ್ತದೆ. ಈ ಪ್ರಕರಣದಲ್ಲಿ ಕ್ರೆಡಿಟ್ ಬಾಕಿ ಹೊಂದಿರುವ ಆಸ್ತಿ ಖಾತೆಯು ಪ್ರತಿ ಅಥವಾ ವಿರುದ್ದ ಖಾತೆಯಾಗಿರುವುದಿಲ್ಲ. ಬ್ಯಾಂಕ್ ನಲ್ಲಿನ ಹಣವು ಒಂದು ಆಸ್ತಿ. ಅದು ಕ್ರೆಡಿಟ್ ಬಾಕಿ ತೋರಿಸುತ್ತಿದ್ದರೆ ಅದು ಒಂದು ಒವರ್ ಡ್ರಾಫ್ಟ್. (ಸಾಲಪಡೆದ ಖಾತೆಯಲ್ಲಿನ ಹಣ ಜಮೆ)ಹೀಗೆ ಇದು ಆಸ್ತಿ ಖಾತೆಯಿಂದ ಒಂದು ವ್ಯವಕಲನವೆಂದಾಗುತ್ತದೆ. ಉದಾಹರಣೆಗಾಗಿ ಸವಕಳಿಗಾಗಿ ತೆಗೆದಿಟ್ಟ ಭತ್ಯೆ ಮೊತ್ತ,ಇದನ್ನು ಸಂಬಂಧಿಸಿದ ಆಸ್ತಿ ಖಾತೆಗಳಿಂದ ಕಳೆಯಲಾಗುತ್ತದೆ,ಅಂದರೆ ಫರ್ನೀಚರ್ಸ್ ಮತ್ತು ಫಿಕ್ಸ್ಚರ್ಫ್ಸ್ ಅಥವಾ ಯಂತ್ರೋಪಕರಣಗಳು ಅಥವಾ ಕಟ್ಟಡ;ಆದ್ದರಿಂದ ನಾವು ಈ ಸವಕಳಿ ಖಾತೆಗಾಗಿ ಭತ್ಯೆಯೊಂದನ್ನು ನಿಗದಿ ಮಾಡುತ್ತೇವೆ,ಮರದ ಸಾಮಗ್ರಿಗಳಿಗೆ,ನಿಶ್ಚಿತ ಕಟ್ಟಡಗಳ ನಿರ್ಧಿಷ್ಟ ಸಾಮಗ್ರಿಗಳ ಸಲುವಾಗಿ ಈ ಮೊತ್ತವನ್ನು ತೆಗೆದಿರಿಸಲಾಗುತ್ತದೆ.ಅಂದರೆ ಆಯಾಯ ಆಸ್ತಿಗಳ ಉಪಯೋಗ ಆಧರಿಸಿ ನಿಶ್ಚಿತ ಆಸ್ತಿಗಳ ಮೇಲೆ ನಿರ್ಧಿಷ್ಟ ಸವಕಳಿ ಭತ್ಯೆ ಕಾಯ್ದಿರಿಸಲಾಗುತ್ತದೆ. ಅಕೌಂಟ್ಸ್ ರಿಸೀವೆಬಲ್ ಗಳಿಗಾಗಿ ಬರದ ಬಾಕಿಗಾಗಿ ಭತ್ಯೆ ಅಥವಾ ವಸೂಲಾಗದ ಖಾತೆಗಳ ಸಲುವಾಗಿ ನಾವು ಪ್ರತಿ ಖಾತೆಗಳನ್ನು ಸೃಷ್ಟಿಸುತ್ತೇವೆ. ಮಾರಾಟದ ವಹಿವಾಟಿನಲ್ಲಿ ನಾವು ಮಾರಾಟ ರಿಯಾಯ್ತಿಗಳನ್ನು ಮತ್ತು ಮಾರಾಟದ ವಾಪಸುಗಳ ಹಾಗು ಇನ್ನಿತರ ಭತ್ಯೆಗಳನ್ನು ಪ್ರತಿ ಖಾತೆಗಳೆಂದು ಪರಿಗಣಿಸಲಾಗುತ್ತದೆ. ಹೀಗೆ ಪ್ರತಿ ಅಥವಾ ವಿರುದ್ದದ ಖಾತೆಗಳೆಂದರೆ ಸಂಬಂಧಪಟ್ಟ ಖಾತೆಗಳಿಂದ ವ್ಯವಕಲನಗೊಳ್ಳುವ, ಕಳೆಯುವ ಖಾತೆಯಾಗಿವೆ.

ಡೆಬಿಟ್ ಮತ್ತು ಕ್ರೆಡಿಟ್ ಪದಗಳ ಮೂಲ[ಬದಲಾಯಿಸಿ]

ಡೆಬಿಟ್ ಎನ್ನುವ ಪದವು ಮಧ್ಯ ಫ್ರೆಂಚ್ ಡೆಬೆಟ್ ,ಲ್ಯಾಟಿನ್ ನಿಂದ ಡೆಬಿಟಮ್ "ಬರಬೇಕಾದುದು-ನೀಡಿಕೆ"ಡೆಬೆರೆ ದ ಭೂತ ಕೃದ್ವಾಚಕ)"ಹೊಂದಿರು" ಬರಬೇಕಾಗಿರುವುದು. ಡೆಬಿಟ್ ನ್ನು Dr. ಎಂದು ಸಂಕ್ಷಿಪ್ತಗೊಳಿಸಲಾಗಿದೆ.ಕ್ರೆಡಿಟ್ ಎನ್ನುವ ಪದವು ಲ್ಯಾಟಿನ್ ನ ಕ್ರೆಡಿಟಮ್ ಅಂದರೆ "ಒಳ ಪ್ರವೇಶಿಸಿದ್ದು ಅಥವಾ ಸಾಲ ಮಾಡಿದ್ದು"ಇದು ಕ್ರೆಡೆರೆ ದ ಭೂತ ಕೃದ್ವಾಚಕ ರೂಪ)ನಂಬು ಅಥವಾ ವಹಿಸಿಕೊಡು". ಕ್ರೆಡಿಟನ್ನು Cr.ಎಂದು ಸಂಕ್ಷಿಪ್ತಗೊಳಿಸಲಾಗಿದೆ. ಆದರೆ ಈ Dr. ಮತ್ತು Cr.ಗಳನ್ನು ಡೆಬಿಟರ್ ಮತ್ತು ಕ್ರೆಡಿಟರ್ ಗಳಿಗೆ ತಪ್ಪಾಗಿ ಹೊಂದಿಸಿ ಗೊಂದಲಕ್ಕೀಡಾಗಬಾರದು.

ಇದರ ಕಾರ್ಯನಿರ್ವಹಣಾ ತತ್ವಗಳು[ಬದಲಾಯಿಸಿ]

ರಿಯಲ್ ಅಕೌಂಟ್ಸ್ (ಯಥಾರ್ಥ ಮೌಲ್ಯಯುಳ್ಳ ಆಸ್ತಿಗಳ ಖಾತೆಗಳು)

 • ಈ ರಿಯಲ್ ಅಕೌಂಟ್ಸ್ ನಲ್ಲಿ ಸಂಸ್ಥೆ ಹೊಂದಿರುವ ಆಸ್ತಿ-ಪಾಸ್ತಿಯಲ್ಲಿನ ಹೆಚ್ಚಳವು ಸಂಬಂಧಿಸಿದ ಆಸ್ತಿ ಖಾತೆಯನ್ನು ಅಧಿಕಗೊಳಿಸಿ ನಂತರ ಆಸ್ತಿ ಖಾತೆಯನ್ನು ಕ್ರೆಡಿಟ್ ಮಾಡಲಾಗುತ್ತದೆ.
 • ಒಂದು ಆಸ್ತಿ ಖಾತೆಯು ಡೆಬಿಟ್ ಆದರೆ ಅದು ಹೊಣೆಗಾರಿಕೆ ಪ್ರಮಾಣದಲ್ಲಿನ ಹೆಚ್ಚಳವಾಗಿದೆ.ಇದರಿಂದ ಮಾಲಿಕನ ಎಕ್ವಿಟಿ ಪ್ರಮಾಣವು ಕಡಿಮೆಯಾಗುತ್ತದೆ.

ಒಟ್ಟಾರೆ ಇರುವ ಒಂದು ಸಂಸ್ಥೆಯ ಆಸ್ತಿಯು ತನ್ನ ಹೆಚ್ಚಳ ಮತ್ತು ಕಡಿಮೆಯಾಗುವಿಕೆಯನ್ನು ಸಂಪನ್ಮೂಲದ ಕ್ರೋಢೀಕರಣ ಅಥವಾ ಮೌಲ್ಯ ಇಳಿಕೆಯು ಅದರೆ ಖಾತೆಗೆ ಸರಿಹೊಂದಬೇಕಾಗುತ್ತದೆ.

ವೈಯಕ್ತಿಕ ಖಾತೆಗಳು

 • ಪರ್ಸನಲ್ ಅಕೌಂಟ್ಸ್ ಗಳಲ್ಲಿನ ಖಾತೆಗಳಲ್ಲಿ ಡೆಬಿಟ್ ಮಾಡುವುದರಿಂದ ಆ ಖಾತೆಯ ವೈಯಕ್ತಿಕ ಬಾಬ್ತು ಒಟ್ಟಾಗಿ ಅಧಿಕತೆಯನ್ನು ತೋರುತ್ತದೆ.ಇಲ್ಲಿ ಸಂಸ್ಥೆಯ ಸಂಪನ್ಮೂಲಗಳ ಹೊಣೆಗಾರಿಕೆಗಳ ಪಡೆಯುವಿಕೆಯೂ ತನ್ನ ಅಭಿವೃದ್ದಿ ಕಾಣಿಸುತ್ತದೆ.
 • ಅದೇ ರೀತಿ ಯಾವುದೇ ಪರ್ಸನಲ್ ಖಾತೆಯನ್ನು ಕ್ರೆಡಿಟ್ ಮಾಡಿದಾಗ ಅದು ಪಡೆಯುವ ಪ್ರಮಾಣದ ಮೊತ್ತವನ್ನು ಕಡಿಮೆ ಮಾಡುತ್ತದೆ,ಹೀಗೆ ಆ ಸಂಸ್ಥೆಯು ತಮ್ಮ ಸಂಪನ್ಮೂಲಗಳನ್ನು ಇಳಿಮುಖ ಮಾಡಿಕೊಳ್ಳುತ್ತದೆ.

ಹೆಸರು ನಮೂದಿಸುವ ನಾಮವಾಚಕ ಅಕೌಂಟ್ಸ್

 • ಈ ಖಾತೆಯಲ್ಲಿ ಖರ್ಚು ವೆಚ್ಚದ ವಹಿವಾಟುಗಳು ಆಯಾ ಕಾಲಕ್ಕೆ ಸಂಭವಿಸಿದ ವೆಚ್ಚಗಳ ಖಾತೆಗೆ ಡೆಬಿಟ್ ಮಾಡಲಾಗುತ್ತದೆ.ಇದು ವಸ್ತುಗಳು ಮತ್ತು/ಇಲ್ಲವೆ ಸೇವೆಗಳನ್ನು ಪ್ರತಿನಿಧಿಸುತ್ತವೆ,ಆಗ ತಾತ್ಕಾಲಿಕವಾಗಿ ಗ್ರಾಹಕರ ಆಸ್ತಿ ಇಲ್ಲವೆ ಸಂಪನ್ಮೂಲದಲ್ಲಿ ಒಂದು ಹೆಚ್ಚಳ ಕಾಣುತ್ತದೆ.
 • ನಾಮವಾಚಕ ಖಾತೆಗಳಲ್ಲಿ ಗಳಿಸಿದ ಆದಾಯ ಪ್ರತಿನಿಧಿಸಲು ಇಲ್ಲಿ ಖಾತೆಗಳಿಗೆ ಕ್ರೆಡಿಟ್ ಮಾಡಲಾಗುತ್ತದೆ.ಇದು ಒಟ್ಟಾರೆ ಆದಾಯದ ಮೂಲವನ್ನು ಇಲ್ಲಿ ನಮೂದಿಸಲು ಅವಕಾಶ ಕಲ್ಪಿಸುತ್ತವೆ.

ವಿವಿಧ ಪ್ರಕಾರದ ಖಾತೆಗಳಲ್ಲಿ ಪರ್ಯಾಯ-ಅಳವಡಿಕೆ

 • ಆಯಾ ಸಂದರ್ಭಕ್ಕೆ ತಕ್ಕಂತೆ ಉದ್ಭವವಾಗುವ ಖಾತೆಗಳ ವಹಿವಾಟಿಗೆ ಅನುಗುಣವಾಗಿ ವ್ಯವಹಾರವನ್ನು ದಾಖಲಿಸಲಾಗುತ್ತದೆ.ಆದರೆ ಇವುಗಳಿಗೆಲ್ಲ ಸಮರೂಪದ ತತ್ವಗಳನ್ನು ಅಳವಡಿಸಲಾಗುತ್ತದೆ.(ಡಬಲ್ ಎಂಟ್ರಿ ಬುಕ್ಮ್ ಸಿಸ್ಟೆಮ್ )
ರಿಯಲ್ ಅಕೌಂಟ್ ಡೆಬಿಟೆಡ್ ಪರ್ಸನಲ್ ಅಕೌಂಟ್ (ಖಾತೆ) ಡೆಬಿಟೆಡ್ ನಾಮವಾಚಕ ಅಕೌಂಟ್ (ಖಾತೆ) ಡೆಬಿಟೆಡ್
ರಿಯಲ್ ಅಕೌಂಟ್ (ಖಾತೆ) ಕ್ರೆಡಿಟೆಡ್ ಆಸ್ತಿಯೊಂದನ್ನು ನಗದು ಹಣ ನೀಡಿ ಪಡೆದಿದ್ದು - ಮಶಿನರಿ ಅಕೌಂಟ್ (ಖಾತೆ) ಡೆಬಿಟೆಡ್, ಕ್ಯಾಶ್ ಅಕೌಂಟ್ (ಖಾತೆ) ಕ್ರೆಡಿಟೆಡ್ 'ಕ್ರೆಡಿಟ್ ಮೇಲೆ ಆಸ್ತಿಯೊಂದರ ಮಾರಾಟ - ಖರೀದಿದಾರರನ ಅಕೌಂಟ್ (ಖಾತೆ) ಡೆಬಿಟೆಡ್, ಮಶಿನರಿ ಅಕೌಂಟ್ (ಖಾತೆ) ಕ್ರೆಡಿಟೆಡ್' ಆಸ್ತಿಯೊ6ದರ ವಿನಾಶ ಅಥವಾ ಸವಕಳಿ or ಸವಕಳಿ - ಡೆಪ್ರಿಸಿಯೇಶನ್ ಅಕೌಂಟ್ (ಖಾತೆ) ಡೆಬಿಟೆಡ್, ಮಶಿನರಿಅಕೌಂಟ್ (ಖಾತೆ) ಕ್ರೆಡಿಟೆಡ್
ವೈಯಕ್ತಿಕ ಅಕೌಂಟ್ (ಖಾತೆ) ಕ್ರೆಡಿಟೆಡ್ ಸಾಲದ ಮೇಲೆ ಆಸ್ತಿಯೊಂದರ ಖರೀದಿ - ಮಶಿನರಿ ಅಕೌಂಟ್ (ಖಾತೆ) ಡೆಬಿಟೆಡ್, ಮಾರಾಟಗಾರನ ಅಕೌಂಟ್ (ಖಾತೆ) ಕ್ರೆಡಿಟೆಡ್ ಸಾಲ ಪಡೆಯುವಿಕೆಯನ್ನು ಇನ್ನೊಬ್ಬರಿಗೆ ವರ್ಗಾವಣೆ - ಹೊಸ್ ಡೆಟರ್ ನ ಅಕೌಂಟ್ (ಖಾತೆ) ಡೆಬಿಟೆಡ್, ಹಳೆ ಡೆಟರ್ ನ ಅಕೌಂಟ್ (ಖಾತೆ) ಕ್ರೆಡಿಟೆಡ್ ಖರ್ಚು-ವೆಚ್ಚ ಆಗಿದ್ದು ವೆಚ್ಚ - ವಿದ್ಯುತ ಅಕೌಂಟ್ (ಖಾತೆ) ಡೆಬಿಟೆಡ್, ವಿದ್ಯುತ್ ಕಂಪನಿಯ ಅಕೌಂಟ್ (ಖಾತೆ) ಕ್ರೆಡಿಟೆಡ್
ನಾಮಸೂಚಕ (ನಾಮಿನಲ್ ) ಅಕೌಂಟ್ (ಖಾತೆ) ಕ್ರೆಡಿಟೆಡ್ ಖರ್ಚು ವೆಚ್ಚಗಳ ಒಟ್ಟು ಮೌಲ್ಯ - ಮಶಿನರಿ ಅಕೌಂಟ್ (ಖಾತೆ) ಡೆಬಿಟೆಡ್, ಫ್ರಿಸರ್ಚ್ ಅಂಡ್ ಡೆವಲಪ್ಮೆಂಟ್ ಅಕೌಂಟ್ (ಖಾತೆ) ಕ್ರೆಡಿಟೆಡ್ ಸಾಲದ ಮೇಲೆ ವಸ್ತುಗಳ ಮಾರಾಟ - ಖರೀದಿದಾರನ ಅಕೌಂಟ್ (ಖಾತೆ) ಡೆಬಿಟೆಡ್, ಮಾರಾಟ ಅಕೌಂಟ್ (ಖಾತೆ) ಕ್ರೆಡಿಟೆಡ್ ಒಟ್ಟಾರೆ ಮೂಲ ಖರ್ಚುಗಳ ವರ್ಗಾವನೆ - ನಿವ್ ಎಕ್ಸ್ ಪೆಂಡಿಚರ್ ಹೆಡ್ ಡೆಬಿಟೆಡ್, ಒಲ್ಡ್ ಎಕ್ಸ್ ಪೆಂಡಿಚರ್ ಹೆಡ್ ಕ್ರೆಡಿಟೆಡ್

ಯಾವುದು ಡೆಬಿಟ್ ಯಾವುದು ಕ್ರೆಡಿಟ್ ಎಂಬುದು ಕಂಡು ಹಿಡಿಯಲು ಸರಳ ಸೂತ್ರಗಳು ಅಕೌಂಟ್ (ಖಾತೆ)ಗಳು:

ಪರ್ಸನಲ್ ಅಕೌಂಟ್ (ಖಾತೆ)ಗಳು: ಡೆಬಿಟ್: ಪಡೆಯುವಾತ; ಕ್ರೆಡಿಟ್: ನೀಡುವಾತ

ರಿಯಲ್/ಆಸ್ತಿ ಅಕೌಂಟ್ (ಖಾತೆ)ಗಳು: ಡೆಬಿಟ್: ಒಳಬರುವುದನ್ನು ಮಾಡಬೇಕು; ಕ್ರೆಡಿಟ್: ಯಾವುದು ಹೊರಹೋಗುತ್ತದೆಯೋ ಅದನ್ನು

ನಾಮಿನಲ್/ಎಕ್ಸ್ ಪೆನ್ಸ್ ಅಕೌಂಟ್ (ಖಾತೆ)ಗಳು: ಡೆಬಿಟ್: ಎಲ್ಲ ಖರ್ಚುಗಳು/ನಷ್ಟಗಳು; ಕ್ರೆಡಿಟ್: ಎಲ್ಲಾ ಆದಾಯ/ಲಾಭಗಳು

ಡೆಬಿಟ್ ಮತ್ತು ಕ್ರೆಡಿಟ್ ತತ್ವಗಳು[ಬದಲಾಯಿಸಿ]

ಪ್ರತಿ ವಹಿವಾಟಿಗೂ ಒಂದು ಡೆಬಿಟ್ ಒಂದು ಕ್ರೆಡಿಟ್ ಒಳಗೊಂಡಿರುತ್ತದೆ,ಅದಲ್ಲದೇ ಎಲ್ಲಾ ವಹಿವಾಟುಗಳು ಸಮನಾಗಿರಬೇಕು.

ಪ್ರತಿಯೊಂದು ವಹಿವಾಟಿಗೂ: ಡೆಬಿಟ್ಸ್ ಗಳ ಮೌಲ್ಯವು = ಎಲ್ಲಾ ಕ್ರೆಡಿಟ್ ಗಳ ಮೌಲ್ಯವು

ಮುಂದುವರೆದ ಅಕೌಂಟ್ (ಖಾತೆ) ಮಾಡುವಾಗ ಸಮೀಕರಣದ ಪ್ರಮೇಯವು ಸಮತೋಲನ ಹೊಂದಿರಬೇಕು: 'A + E = L + OE + R

(ಇಲ್ಲಿ A = ಆಸ್ತಿಗಳು, E = ಖರ್ಚುಗಳು, L = ಹೊಣೆಗಾರಿಕೆಗಳು, OE = ಮಾಲಿಕನ ಈಕ್ವಿಟಿ ಮತ್ತು R = ಆದಾಯಗಳು)

ಆದ್ದರಿಂದ 'ಡೆಬಿಟ್ ಅಕೌಂಟ್ (ಖಾತೆಗಳು) (A + E) = ಕ್ರೆಡಿಟ್ ಅಕೌಂಟ್ (ಖಾತೆಗಳು) (L + R + OE)'

ಡೆಬಿಟ್ಸ್ ಅವುಗಳು ಎಡಭಾಗದಲ್ಲಿರುತ್ತವೆ ಅವು ಡೆಬಿಟ್ ನ್ನು ಹೆಚ್ಚಿಸುತ್ತವೆ. ಅಕೌಂಟ್ (ಖಾತೆ) ಮತ್ತು ಕ್ರೆಡಿಟ್ ನ್ನು ಇಳಿಮುಖಗೊಳಿಸುತ್ತದೆ. ಅಕೌಂಟ್ (ಖಾತೆ).

ಕ್ರೆಡಿಟ್ಸ್ ಗಳು ಬಲಭಾಗದಲ್ಲಿರುತ್ತವೆ. ಮತ್ತು ಕ್ರೆಡಿಟ್ ಅಕೌಂಟ್ (ಖಾತೆ)ನ್ನು ಹೆಚ್ಚಿಸುತ್ತವೆ, ಮತ್ತು ಡೆಬಿಟ್ ಅಕೌಂಟ್ (ಖಾತೆ)ಯನ್ನು ಇಲಿಮುಖಗೊಳಿಸುತ್ತವೆ.

ಉದಾಹರಣೆಗಳು[ಬದಲಾಯಿಸಿ]

 1. ನೀವು ಬಾಡಿಗೆಯನ್ನು ನಗದು ನೀಡಿದಾಗ:ನಿಮ್ಮ ಖರ್ಚು ಹೆಚ್ಚಾಗುತ್ತದೆ ಇಲ್ಲಿ ಡೆಬಿಟ್ ವಹಿವಾಟಾಗಿ ದಾಖಲಾಗುತ್ತದೆ.ಅದೇ ಸಂದರ್ಭದಲ್ಲಿ ನಿಮ್ಮವ ನಗದು (ಆಸ್ತಿ)ಇಳಿಕೆಯಾಗಿ ಅದನ್ನು ಕ್ರೆಡಿಟ್ ಆಗಿ ನಮೂದಿಸುತ್ತೀರಿ.
 2. ನೀವು ನಗದಿಗೆ ಮಾರಾಟ ಮಾಡಿದಾಗ:ನಿಮ್ಮ ನಗದು (ಆಸ್ತಿ)ಹೆಚ್ಚಾಗುತ್ತದೆ,ಇಲ್ಲಿ ಡೆಬಿಟ್ ದಾಖಲಾಗುತ್ತದೆ,ಅಲ್ಲದೇ ಮಾರಾಟದ ಆದಾಯ ಹೆಚ್ಚಾಗಿ ಅದನ್ನು ಕ್ರೆಡಿಟ್ ಭಾಗದಲ್ಲಿ ದಾಖಲಿಸುತ್ತೀರಿ.
 3. ನೀವು ನಗದಾಗಿ ಯಂತ್ರೋಪಕರಣ:ನೀವು ನಿಮ್ಮ ಆಸ್ತಿ ಅಧಿಕಗೊಳಿಸುತ್ತೀರಿ ಅದನ್ನು ಡೆಬಿಟ್ ಎಂದು ದಾಖಲಿಸಿ ,ನಂತರ ಕ್ರೆಡಿಟ್ ವಹಿವಾಟು ನಮೂದಿಸಿ ಅದನ್ನು ಇಳಿಮುಖವಾಗುತ್ತದೆ.
 4. ನೀವು ಹಣದ ಸಾಲ ತಂದಾಗ:ನಿಮ್ಮ ಆಸ್ತಿಅಥವಾ ನಗದು ಹೆಚ್ಚಾಗುತ್ತದೆ,ಅದು ಡೆಬಿಟ್ ವಹಿವಾಟಾಗುತ್ತದೆ,ಅದರಲ್ಲಿ ಸಾಲ (ಹೊಣೆಗಾರಿಕೆ)ವಹಿವಾಟನ್ನು ಕ್ರೆಡಿಟ್ ನ್ನು ಮಾಡಬೇಕು
 5. ನೀವು ನಗದಲ್ಲಿ ಸಂಬಳ ಕೊಟ್ಟಾಗ ನೀವು ಸಂಬಳದ (ಖರ್ಚನ್ನು ಅಧಿಕಗೊಳಿಸುವಿರಿ)ಇಲ್ಲಿ ಡೆಬಿಟ್ ವಹಿವಾಟನ್ನು ದಾಖಲಿಸುತ್ತೀರಿ,ನಂತರ ನಗದಿನಲ್ಲಾದ (ಆಸ್ತಿ)ಇಳಿಕೆಯು ನಂತರ ಕ್ರೆಡಿಟ್ ವಹಿವಾಟಾಗುತ್ತದೆ.
ಖಾತೆ ಡೆಬಿಟ್ ಸಾಲ
1 ಬಾಡಿಗೆ 100
ನಗದು 100
2 ನಗದು 50
ಮಾರಾಟ 50
3. ಈಕುಪ್. 5200
ನಗದು 5200
4. ನಗದು 11000
ಸಾಲ 11000
5. ಸಂಬಳ 5000
ನಗದು 5000

'T' ಅಕೌಂಟ್ (ಖಾತೆಗಳು[ಬದಲಾಯಿಸಿ]

ಡೆಬಿಟ್ಸ್ ಮತ್ತು ಕ್ರೆಡಿಟ್ಸ್ ಗಳ ಬಳಸುವ ಪದ್ದತಿಯನ್ನು ಲೆಡ್ಜೆರ್ ರೂಪದಲ್ಲಿ ಬರೆಯುವಾಗ ಅದು ಇಂಗ್ಲಿಷ್ 'ಟಿ'ಆಕಾರದಲ್ಲಿ ಇರುತ್ತದೆ. 'ಟಿ'ಎಂಬ ಪದವು ಸಾಮಾನ್ಯವಾಗಿ ಅಕೌಂಟ್ (ಖಾತೆ) ಯನ್ನು ಬುಕ್ ಕೀಪಿಂಗ್ ನಲ್ಲಿ ಉಪಯೋಗವಾಗುತ್ತದೆ.

ಒಂದು "ಟಿ" 'T' ಅಕೌಂಟ್ (ಖಾತೆ) ಡೆಬಿಟ್ಸ್ ತೋರಿಸುತ್ತಿದ್ದರೆ ಅದನ್ನು ಎಡಭಾಗಕ್ಕೆ ಮತ್ತು ಕ್ರೆಡಿಟ್ಸ್ ತೋರಿದರೆ ಅದನ್ನು ಬಲಭಾಗಕ್ಕೆ ತೋರಿಸಬೇಕು.

ಡೆಬಿಟ್ಸ್ ಪ್ರಶಂಸೆಗಳು
   
   
   
   
   
ಟೈಪ್ ಡೆಬಿಟ್ ಸಾಲ
ಆಸ್ತಿಗಳು +
ಹೊಣೆಗಾರಿಕೆ +
ಆದಾಯ +
ಖರ್ಚು +
ಇಕ್ವಿಟಿ +

ಆದ್ದರಿಂದ ಒಂದು ಅಸೆಟ್ ಅಕೌಂಟ್ ಡೆಬಿಟ್ ಆದರೆ ಆಸ್ತಿ ಅಥವಾ ಆ ಅಸೆಟ್ ನ ಮೌಲ್ಯ ಹೆಚ್ಚಾಗುತ್ತದೆ. ಖರ್ಚುವೆಚ್ಚದ ಸಮಪ್ರಮಾಣದ ಸಮತೋಲನದ ಅಕೌಂಟ್ (ಖಾತೆ). ಒಂದು ವೇಳೆ ಹೊಣೆಗಾರಿಕೆ ಅಥವಾ ಒಂದು ಆದಾಯ ದ ಖಾತೆಯು ಡೆಬಿಟ್ ಆದರೆ,ಅದರಲ್ಲಿನ ಸಾಂಖಿಕತೆಯು ಇಳಿಕೆಯಾಗುತ್ತದೆ.ಒಂದು ವೇಳೆ ವಿಶಿಷ್ಟ ಖಾತೆಯೊಂದನ್ನು ಕ್ರೆಡಿಟ್ ಆದರೆ ಅದಕ್ಕೆ ಪೂರಕ ಅಕೌಂಟ್ಸ್ ನಲ್ಲಿ ಅದು ಸಮ ಮೊತ್ತದಲ್ಲಿ ಡೆಬಿಟ್ ಆಗಬೇಕು.ಇದರಿಂದ ಎರಡೂ ವಹಿವಾಟಿನ ಖಾತೆಯಲ್ಲಿ ಸಮತೋಲನ ಬರುತ್ತದೆ.

ಆದರೆ ಬ್ಯಾಂಕ್ ಗಳಲ್ಲಿ "ಡೆಬಿಟ್ಸ್ "ನ್ನು ಹಣಪಡೆಯುವುದಕ್ಕಾಗಿ ಬಳಸುತ್ತಾರೆ,ಆದರೆ ಇಲ್ಲಿ ಚರ್ಚಿಸಿದ ಪಠ್ಯವನ್ನು ಅರ್ಥೈಸಬೇಕಾಗಿಲ್ಲ.

ಆಕರಗಳು[ಬದಲಾಯಿಸಿ]

ಬಾಹ್ಯ ಕೊಂಡಿಗಳು[ಬದಲಾಯಿಸಿ]