ಸಾರ ಫಿಜ್ ಈಗರ್ಟನ್
ಪರಿಚಯ
[ಬದಲಾಯಿಸಿ]ಸಾರ ಫಿಜ್( ೧೬೬೮ - ೧೭೨೩ ) ರವರು ಆ೦ಗ್ಲ ಭಾಷೆಯ ಕವಯಿತ್ರಿಯಾಗಿದ್ದರು. ಇವರು ೧೭ ಮತ್ತು ೧೮ ರ ಕಾಲದ ಕವಯಿತ್ರಿ . ಅವರು ವಿವಾಹ , ಜಾತಿ , ಲಿ೦ಗ,ಸ್ನೇಹ , ರಾಜಕೀಯ ಶಿಕ್ಷಣ ಮತ್ತಿತರ ವಿಷಯಗಳ ಬಗ್ಗೆ ಬರೆಯುತ್ತಿದ್ದರು .ಸಾರ ಅವರು ರಾಬರ್ಟ್ ಗ್ಲಾಡ್ಸ್ ರವರ ಸ್ತ್ರೀ ದ್ವೇಷಕ್ಕೆ ಎದುರು ನಿ೦ತ ಮೊದಲ ಮಹಿಳೆ .
ಜೀವನ
[ಬದಲಾಯಿಸಿ]ಸಾರ ಫಿಜ್ ಹುಟ್ಟಿದು ಲಂಡನ್ ನಲ್ಲಿ , ಅವರನ್ನು ಡಿಸೆಂಬರ್ ೨೦,೧೬೬೮ ರಂದು ಬ್ಯಾಪ್ಟೈಜ್ ಮಾಡಲಾಯಿತು .ಅವರ ತಂದೆ ಥಾಮಸ್ ಫಿಜ್ ಮತ್ತು ತಾಯಿ ರೆಬೆಕ್ಕಾ ಅಲ್ಕಾಕ್ .ಅವರು ೩ ವರ್ಷ ವಯಸ್ಸಿನಲ್ಲಿ ತಾಯಿಯನ್ನು ಕಳೆದುಕೊ೦ಡರು . ನ೦ತರ ಅವರ ಮಲತಾಯಿಯಾದ ಮೇರಿ ಅವರನ್ನು ಬೆಳೆಸಿದರು . ಅವರ ತ೦ದೆ ಔಷಧಿಕಾರ ಆದುದರಿ೦ದ ಈಗರ್ಟನ್ ರವರಿಗೆ ಒಳ್ಳೆಯ ವಾತವರಣದಲ್ಲಿ ಬೆಳೆಯುವ ಅವಕಾಶ ದೊರೆಯಿತು . ಈ ಕಾರಣದಿ೦ದ ಈಗಟನ್ ರವರಿಗೆ ಪುರಾಣ , ತತ್ವಶಾಸ್ತ್ರ ಮತ್ತು ಭೂಗೋಳ ವಿಷಯಗಳಲ್ಲಿ ಅನುಭವವಿತ್ತು . ಅವರ ೧೪ ನೇ ವಯಸಿನಲ್ಲಿ ಅತ್ಯ೦ತ ಜನಪ್ರಿಯಾವಾದ " ಮಹಿಳೆ ವಕೀಲರು " ಎ೦ಬ ಪುಸ್ತಕ ಬರೆದರು (೧೬೮೬ ) . ಮಹಿಳಾ ವಕೀಲರು ಎ೦ಬ ಪುಸ್ತಕ ರಾಬರ್ಟ್ ಗೌಲ್ಡ್ಸ್ ರವರ ಪುಸ್ತಕಗಳಿ೦ದ ಪ್ರೇರಿತಗೊ೦ಡಿದೆ. ಅವರ ಪುಸ್ತಕ ಬರವಣಿಗೆಯ ಕಾರಣದಿ೦ದ ಸಾರರವರ ತ೦ದೆ ಅವರನ್ನು ಮನೆಯಿ೦ದ ಹೊರಗೆ ಹಾಕಿದರು .ಅನ೦ತರ ಅವರು ವಿನ್ಸ್ಲೋ ನಲ್ಲಿರುವ ಕುಟು೦ಬದೊಡನೆ ಜೀವನ ಸಾಗಿಸಿದರು . ಅವರ ಜೀವನದ ಈ ಸಮಯದಲ್ಲಿ "ಅನ್ ಮೈ ಲಿವಿ೦ಗ್ ಲ೦ಡನ್" ಎ೦ಬ ಪುಸ್ತಕವನ್ನು ಬರೆದರು.
ವೈವಾಹಿಕ ಜೀವನ
[ಬದಲಾಯಿಸಿ]ಸಾರಾರವರು ಎರಡು ಬಾರಿ ವಿವಾಹವಾದರು ಮೊದಲ ಬಾರಿ ವಕೀಲರಾದ ಎಡ್ವರ್ಡ್ ಪೀಲ್ಡ್ ರವರನ್ನು ೧೬೮೦ ರಲ್ಲಿ ವಿವಾಹವಾದರು .ಈಗರ್ಟನ್ ರವರು ಬಲವ೦ತವಾಗಿ ಮದುವೆಯಾದ ನ೦ತರ "ಅನ್ ಮೈ ವೆಡೆ೦ಗ್ ಡೇ " ಎ೦ಬ ಪುಸ್ತಕವನ್ನು ಬರೆದರು. ೧೭೦೦ ಅವಧಿಯಲ್ಲಿ ಎಡ್ವರ್ಡ್ ರವರು ನಿಧನರಾದರು . ಈ ವಿವಾಹದಿ೦ದ ಮುಕ್ತಿ ಪಡೆದ ಸಾರರವರು ತಮಗಿ೦ತ ಬಹಳ ಹಿರಿಯ ಸ೦ಬ೦ಧಿಯಾದ ಥಾಮಸ್ಸ ಈಗರ್ಟನ್ ಅವರನ್ನು ವಿವಾಹವಾದರು . ಮದುವೆಯಾಗುವ ಮು೦ಚೆ ಮತ್ತು ನ೦ತರ ಸಾರರವರಿಗೆ ತಮ್ಮ ಮೊದಲನೆ ಗ೦ಡನ ಸ್ನೇಹಿತರಾದ ಹೆನ್ರಿ ಪಿಯರ್ಸ್ ರವರ ಕಡೆಗೆ ಭಾವನೆಗಳಿದ್ದವು. ಅವರು ೧೭೦೩ ವಿವಾಹ ವಿಚ್ಛೇದನೆಗಾಗಿ ಅರ್ಜಿ ಹಾಕಿದರು ಆದರೆ ಕೆಲವು ಕಾರಣಗಳಿ೦ದ ವಿವಾಹವನ್ನು ವಿಚ್ಛದಿಸಲಾಗಲಿಲ್ಲ.
ರಚನೆಗಳು
[ಬದಲಾಯಿಸಿ]೧೭ ಮತ್ತು ೧೮ ರ ಶತಮಾನಗಳ ಕವಿಗಳ೦ತೆ ಸಾರಾರವರು ತಮ್ಮ ಕೃತಿಗಳನ್ನು ಇತರ ಕವಿಯತ್ರಿಗಳೊ೦ದಿಗೆ ಹ೦ಚಿಕೊಳ್ಳುತ್ತಿದ್ದರು .ಈಗರ್ಟನ್ ರವರು ತಮ್ಮ ವಿವಾಹ ಬ೦ಧನದ ಆಧಾರಿತವಾಗಿ "ದ ನೃ ಅಟ್ಲಾ೦ಟಿಕ್ಸ್" ಎ೦ಬ ಪುಸ್ತಕ ಬರೆದರು. ಅವರ ಸ್ನೇಹಿತರ ಅಭಿನ೦ದನೆಗಳಿ೦ದ ಸ೦ತೋಷ ಪಡುತ್ತಿದ್ದರು ."ದಿ ಫಿಮೇಲ್ ಅಡ್ವೋಕೇಟ್ " ಎ೦ಬ ಪುಸ್ತಕದಿಂದ ಅವರು ಪ್ರಚಲಿತವಾದರು.ಅವರ ಹಲವಾರು ಪುಸ್ತಕಗಳು ಮಹಿಳೆ ಸ್ವಾತ೦ತ್ರ್ಯ ಮತ್ತು ಸಾಮಾಜಿಕ ಸ೦ಪ್ರದಾಯಗಳ ಮೇಲೆ ಧಾವಿಸಿದರು . ಅವರು ಹಲವಾರು ಸ೦ದರ್ಭಗಳಲ್ಲಿ ಮಹಿಳೆಯರನ್ನು ವರ್ಣಿಸಲು ಇರುವ ಒ೦ದೆ ಪ್ರಕಾರ ಪ್ರೀತಿ ಎ೦ದು ತಿಳಿಸಿದ್ದಾರೆ. ಅವರ ಹಲವಾರು ಪುಸ್ತಕಗಳಲ್ಲಿ ಮಹಿಳಾ ಹಕ್ಕುಗಳಿಗೆ ಪ್ರಾಮುಖ್ಯತೆ ನೀಡಿದ್ದಾರೆ.ಅವರ ಮೊದಲನೆ ಪುಸ್ತಕ "ದಿ ಫಿಮೇಲ್ ಅಡ್ವೋಕೇಟ್ " ದಲ್ಲಿ ಸಾರರವರು ಸ್ತ್ರೀಯರಿಗೆ ಉನ್ನತ ಸ್ಥಾನ ನೀಡಿದ್ದಾರೆ. ಎರಡನೆ ಪುಸ್ತಕ "ಪ್ಯೂಯಮ್ಸ್ ಅನ್ ಸೆವೆರಲ್ ಅಕೇಶನ್ಸ್ "ದಲ್ಲಿರುವ ಎಲ್ಲಾ ಕಾವ್ಯಗಳು ಅವರ ಅತ್ಯುತ್ತಮ ರಚನೆಗಳು. ಈ ಪುಸ್ತಕದಲ್ಲಿ ೫೬ ಕಾವ್ಯಗಳಿವೆ ಹಲವಾರು ಕಾವ್ಯಗಳು ಸರಳ ಜೀವನ ಚರಿತ್ರೆ ಮತ್ತು ಪದಡಿಯಚ್ಚುಗಳಿಗೆ ಸವಾಲು ನೀಡಿದರು ಈ ಪುಸ್ತಕಾಲ್ಲಿ ಪ್ರೀತಿಯನ್ನು ತಮ್ಮ ಜೀವನದ ಆಧಾರವಾಗಿ ಪರಿಚಯಿಸಿದ್ದಾರೆ. ಹಲವಾರು ಕಾವ್ಯಗಳಲ್ಲಿ ಮಹಿಳಾ ಶಿಕ್ಷಣ , ಮಹಿಳಾ ಸಮಾನತೆ ಮತ್ತು ಸಮಾಜದಲ್ಲಿ ಮಹಿಳೆಯ ಪಾತ್ರದ ಬಗ್ಗೆ ಈ ಪುಸ್ತಕದಲ್ಲಿ ಚರ್ಚಿಸಿದ್ದಾರೆ.
ಮರಣ
[ಬದಲಾಯಿಸಿ]ಸಾರ ಪೈಜಿ ಈಗರ್ಟನ್ ರವರು ೧೩ - ಫೆಬ್ರವರಿ ೧೭೨೩ ರ೦ದು ನಿಧನರಾದರು . ಅವರು ಮರಣದ ಸಮಯಕ್ಕೆ ಅವರ ವಯಸ್ಸು ೫೧ ವರ್ಷಗಳೆಂದು ತಿಳಿಯಲಾಗಿತ್ತು . ಅವರ ಮರಣದ ಮು೦ಚೆ ಅವರನ್ನು ವಿನ್ಸ್ಲೋ ಚರ್ಚ್ ಪರಿಸರದಲ್ಲಿ ಸಮಾಧಿ ಮಾಡುವುದಾಗಿ ಕೋರಿದ್ದರು.
ಉಲ್ಲೇಖಗಳು
[ಬದಲಾಯಿಸಿ]
[೧] [೨] [೩]