ಸಾರ್ಬೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶಸಾರ್ಬೆ ಪರಿಮಳಕಾರಕವಿರುವ ಸಿಹಿ ನೀರಿನಿಂದ (ಸಾಮಾನ್ಯವಾಗಿ ಹಣ್ಣಿನ ರಸ ಅಥವಾ ಹಣ್ಣಿನ ತಿಳ್ಳು, ವೈನ್, ಮತ್ತು/ಅಥವಾ ಮದ್ಯ, ಮತ್ತು ಬಹಳ ವಿರಳವಾಗಿ ಜೇನು) ತಯಾರಿಸಲಾದ ಒಂದು ಘನೀಕೃತ ಡಿಜ಼ರ್ಟ್. ಸಾರ್ಬೆಗಳು ಮದ್ಯಸಾರವನ್ನೂ ಹೊಂದಿರಬಹುದು, ಇದು ಘನೀಕರಣ ಉಷ್ಣಾಂಶವನ್ನು ಕಡಿಮೆ ಮಾಡುತ್ತದೆ, ಪರಿಣಾಮವಾಗಿ ಸಾರ್ಬೆಯ ಮೃದು ರಚನೆ. ಐಸ್ ಕ್ರೀಂ ಹೈನುಗಾರಿಕೆ ಉತ್ಪನ್ನಗಳ ಮೇಲೆ ಆಧಾರಿತವಾಗಿ ಜೊತೆಗೆ ಯಥೇಚ್ಛವಾಗಿ ಕಡೆದ ಗಾಳಿಯನ್ನು ಒಳಗೊಂಡಿದ್ದರೆ, ಸಾರ್ಬೆ ಎರಡನ್ನೂ ಹೊಂದಿಲ್ಲ, ಇದರಿಂದಾಗಿ ಸಾರ್ಬೆ ತನ್ನ ದಟ್ಟ ಮತ್ತು ಅತ್ಯಂತ ಸ್ವಾದಿಷ್ಟತೆಯನ್ನು ಕಾಯ್ದುಕೊಳ್ಳಲು ನೆರವಾಗುತ್ತದೆ.

"https://kn.wikipedia.org/w/index.php?title=ಸಾರ್ಬೆ&oldid=613249" ಇಂದ ಪಡೆಯಲ್ಪಟ್ಟಿದೆ