ಸಾಯಿ ಬಲ್ಲಾಳ್

ವಿಕಿಪೀಡಿಯ ಇಂದ
Jump to navigation Jump to search
'ಸಾಯಿ ಬಲ್ಲಾಳ್'

ಬಾಲ್ಯದಿಂದಲೂ ಅಭಿನಯದಲ್ಲಿ ಅತ್ಯಂತ ಆಸಕ್ತಿಹೊಂದಿ ಅದರ ಹುಚ್ಚುಹಚ್ಚಿಕೊಂಡಿರುವ ಅಪ್ಪಟ-ತುಳು ಭಾಷಾಮೂಲದ ಕಲಾವಿದ. ನಿರರ್ಗಳವಾಗಿ ಅರಳು ಹುರಿದಂತೆ ತುಳು ಭಾಷೆಯಲ್ಲಿ ಮಾತಾಡುವ ಸಾಯಿ ಬಲ್ಲಾಳ್, ತುಳು-ರಂಗಭೂಮಿಯಿಂದ ಮೇಲೆದ್ದು ಹಿಂದಿ ರಂಗಭೂಮಿಯಲ್ಲಿ ಅಪಾರ ಜನಪ್ರಿಯತೆಯನ್ನು ಸಾಧಿಸಿದ್ದಾರೆ. ದಿನದ ಪ್ರಾರಂಭದಿಂದ ಸಂಜೆ ಏಳೂವರೆಯವರೆವಿಗೂ, ಸ್ಟುಡಿಯೋ ಸೆಟ್ ಗಳ ರಂಗು-ರಂಗಿನ ವಿಶ್ವದಲ್ಲಿ ತೊಡಗಿರುವ ಸಾಯಿಯವರು, ಈಗ ಒಬ್ಬ ಪ್ರಬುದ್ಧ ನಟನಾಗಿಗುರುತಿಸಲ್ಪಟ್ಟಿದ್ದಾರೆ. ಸಾಯಿ ಬಲ್ಲಾಳ್, ಅತಿ ಕಡಿಮೆ ಮಾತಿನ, ಸಹೃದಯಿ; ತುಳು ರಂಗಭೂಮಿಯ ಹಿತಾಸಕ್ತ, ತಮ್ಮದೇ ಆದ ಅಭಿಮಾನಿಗಳ ಬಳಗವನ್ನು ಹೊಂದಿದ್ದಾರೆ. ಸದಾ ಅಂತರ್ಮುಖಿಯಾಗಿರುವ ವ್ಯಕ್ತಿ. ಹಸನ್ಮುಖಿ ಸಹಿತ.

ಜನನ, ಬಾಲ್ಯ ಮತ್ತು ರಂಗ ಭೂಮಿಯ ಆಸಕ್ತಿಗಳು[ಬದಲಾಯಿಸಿ]

'ಬೊಂಬಾಯಿ'ನಲ್ಲಿ ಜನಿಸಿದ, ಮೂಲ ಮಂಗಳೂರಿನವರಾದ ಸಾಯಿ ಬಲ್ಲಾಳರ ಅಭಿನಯದ ನೈಜತೆಗೆ ಮಾರುಹೋಗದ ರಸಿಕರರಿಲ್ಲ. 'ಫುಲ್ ವಾ ಧಾರವಾಹಿ'ಯಲ್ಲಿ 'ಠಾಕೂರ್ ದಾರೋಗಾ ಸಿಂಗ್'(ಬಡೇ ಥಾಕೂರ್) ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ. ಯಾವಾಗಲೂ ಗಡ್ಡಬಿಟ್ಟಿರುತ್ತಿದ್ದ ಬಲ್ಲಾಳ್ ರ ಮುಖಚರ್ಯೆಯಲ್ಲಿನ ಒಂದು ಬದಲಾವಣೆಯೆಂದರೆ, ಅನೇಕ ವರ್ಷಗಳಿಂದ ಜೋಪಾನವಾಗಿ ಬೋಳಿಸದೆ ಕಾಪಾಡಿಕೊಂಡು ಬಂದಿದ್ದ ಗಡ್ಡವನ್ನು ಬೋಳಿಸುವ ಪ್ರಮೇಯ ಒದಗಿಬಂತು. ಆದರೆ ಈಗ ಹುರಿಮೀಸೆಯನ್ನು ಇಟ್ಟುಕೊಂಡಿದ್ದಾರೆ. ಉತ್ತರ ಪ್ರದೇಶದ 'ಚಂಬಲ್ ಕಣಿವೆ'ಯಲ್ಲಿ ಧಾರಾವಾಹಿಯ ಚಿತ್ರೀಕರಣಮಾಡಲಾಗಿತ್ತು. ಮತ್ತೊಂದು ಹಿಂದಿ ಧಾರವಾಹಿ 'ಮಾತಾ ಕಿ ಚೌಕಿ'ಯಲ್ಲಿ ಅಭಿನಯಿಸಿದ ಅವರ, 'ಪಂ.ವಿದ್ಯಾಸಾಗರ್' ರ ಪಾತ್ರ ಕಳೆಕಟ್ಟಿ ಪ್ರೇಕ್ಷಕರ ಮನವನ್ನು ತಣಿಸಿತ್ತು. 'ಮಾರಿಬಲೆ' ತುಳು ಸಿನಿಮಾದಲ್ಲಿ ಅಭಿನಯಿಸಿದ, ಬಲ್ಲಾಳ್ ರವರು, ಈಗ ತುಳು ನಾಟಕ ರಂಗದಿಂದ ಸ್ವಲ್ಪ ದೂರಸರಿದು, ಹಿಂದಿಯಲ್ಲಿ ಹೆಚ್ಚು ಪಾತ್ರಆಭಿನಯವನ್ನು ಒಪ್ಪಿಕೊಳ್ಳುತ್ತಿದ್ದಾರೆ,ತುಳು ಕನ್ನಡ ನಾಟಕದ ಸಂಭಾಷಣೆಗಳನ್ನು ಹಿಂದಿಯಲ್ಲೋ ಅಥವಾ ಇಂಗ್ಲೀಷ್ ನಲ್ಲೋ ಬರೆದು ಉರುಹಚ್ಚುತ್ತಿದ್ದರು. ಉತ್ತಮ ವೈಚಾರಿಕ ಪ್ರಸಂಗಗಳು ಕನ್ನಡ ಹಾಗೂ ತುಳು ವಲಯದಲ್ಲಿ ಬಂದರೆ ತಾವು ಸದಾ ಸಿದ್ಧರಾಗಿರುವುದಾಗಿ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. 'ಏಕ್ತಾ ಕಪೂರ್' ನಿರ್ದೇಶನದಲ್ಲಿ 'ಬಲ್ಲಾಳ್' ರಿಗೆ ಹಲವಾರು 'ಉತ್ತಮ ಕಿರ್ದಾರ್' ಗಳು ಸಿಕ್ಕವು. ಹಾಗಾಗಿ ಅವರು ಅತಿ ಬೇಡಿಕೆಯ ನಟರಾಗಿ ರೂಪುಗೊಂಡಿದ್ದಾರೆ. 'ಸಾಯಿ ಬಲ್ಲಾಳ್', ಅದ್ಭುತ ನಟರಾಗಲು ಕಾರಣ, ಅವರ ಅಂಗ ಸೌಷ್ಠವ, ಭಾಷೆಯಮೇಲಿನ ಹಿಡಿತ, ಮತ್ತು ಅತ್ಯುತ್ತಮ ಕಂಠಸಿರಿ, ಅವರಿಗೆ ಹೇಳಿಮಾಡಿಸಿದಂತಿದ್ದು, ಅವರು ಆರಿಸಿಕೊಳ್ಳುವ ಪಾತ್ರಗಳಿಗೆ ಒಳ್ಳೆಯ ಕಳೆಕಟ್ಟಿದೆ.

'ಸಾಯಿ ಬಲ್ಲಾಳ್ ಅಭಿನಯಿಸಿದ ಹಿಂದಿ ಧಾರವಾಹಿಗಳು[ಬದಲಾಯಿಸಿ]

 • ಶಾಂತಿ ಕುಟುಂಬ್
 • ಕಹಾನಿ ತೇರಿಮೇರಿ
 • ಕಸೌಟಿ ಝಿಂದಗೀ ಕಿ,
 • ದೇಸ್ ಮೆ ನಿಕ್ಲಾ ಚಾಂದ್,
 • ಮಾತಾ ಕೀ ಚೌಕಿ,
 • ಪುಲ್ ವಾ

ಕನ್ನಡ ತುಳು ನಾಟಕಗಳಲ್ಲಿ[ಬದಲಾಯಿಸಿ]

 • ಜೋಕುಲು ಬಾಲೆಲು
 • ಗೋಂಧೋಳ್
 • ಟಿಪ್ಪು ಸುಲ್ತಾನ್
 • ರಾವಿ ನದಿ ದಂಡೆಯ ಮೇಲೆ,
 • ಪುರುಷೆ, (ಮರಾಠಿಯಿಂದ ಭಾಷಾಂತರ ಗೊಂಡ ಎಚ್.ಕೆ. ಕರ್ಕೆರ ನಿರ್ದೇಶನದ) ಗುಲಾಬ್ ರಾವ್ ಜಾಧವ್ ನ ಪಾತ್ರದಲ್ಲಿ,

ವರ್ಷಕ್ಕೆ ನಾಲ್ಕುಬಾರಿಯಾದರೂ ಊರಿಗೆ ಹೋಗುತ್ತಾರೆ[ಬದಲಾಯಿಸಿ]

ಊರಿನ ನಂಟನ್ನು ಉಳಿಸಿಕೊಂಡಿರುವ ಬಲ್ಲಾಳರು, ಅಲ್ಲಿನ ಆರಾಧ್ಯದೇವಿ-ದೇವತೆಗಳ ಆರಾಧನೆಯನ್ನು ತಪ್ಪದೆ ಪಾಲಿಸಿಕೊಂಡು ಬರುತ್ತಿದ್ದಾರೆ.