ಸಾಮಾನ್ಯ ಶೇರುಗಳು
ಸಾಮಾನ್ಯ ಶೇರು, ಇದು ಬಂಡವಾಳದ ಒಂದು ಭಾಗ.
ಕಂಪೆನಿಗಳು ತಮಗೆ ಅಗತ್ಯವಿರುವ ಬಂಡವಾಳ/ಹಣವನ್ನು ಹೆಚ್ಚಿಸಿಕೊಳ್ಳಲು ಬಳಸುವ ಒಂದು ಬಗೆಯ ಬಂಡವಾಳದ ಮೊಲ ಅಥವಾ ಸಾಧನ. ಶೇರುಗಳನ್ನು ಕೊಳ್ಳುವ ವ್ಯಕ್ತಿಯನ್ನು ಶೇರುದಾರನೆಂದು ಕರೆಯಲಾಗುತ್ತದೆ.ಶೇರುದಾರರನ್ನು ಆ ಕಂಪೆನಿಯ ಒಬ್ಬ ಮಾಲೀಕನೆಂದು ಪರಿಗಣಿಸಲ್ಪಡುತ್ತದೆ. ಸಾಮಾನ್ಯವಾಗಿ ಶೇರುದಾರರಿಗೆ ಕಂಪೆನಿಯು ಲಾಭಾಂಶವನ್ನು ಹಂಚಲು ಬದ್ಧವಾಗಿರುತ್ತದೆ.ಆದರೆ ಲಾಭಾಂಶದ ವಿಚಾರದಲ್ಲಿ ಆದ್ಯತಾಶೇರುದಾರರಿಗೆ ಇರುವಂತೆ ನಿಗದಿತ ಲಾಭಾಂಶ (ಒಂದು ವೇಳೆ ಕಂಪೆನಿಯು ನಷ್ಟದಲ್ಲಿ ಇದ್ದರೂ ಕೂಡ ನಿಗದಿತ ಲಾಭಾಂಶ ಪಡೆಯಲು ಅರ್ಹರಾಗಿರುತ್ತಾರೆ.) ಪಡೆಯಲು ಸಾಮಾನ್ಯ ಶೇರುದಾರರು ಅರ್ಹತೆಯನ್ನು ಹೊಂದಿರುವುದಿಲ್ಲ.ಸಾಮಾನ್ಯ ಶೇರುಗಾರರಿಗೆ ಹಣ ನಿಗದಿತಗೊಳ್ಳಿಸಿರುವುದಿಲ್ಲ. ಕಂಪನಿಗೆ ಲಾಭಾಂಶವಾದಗ ಮೊದಲು ಆದ್ಯತ ಶೇರ್ ಇರುವವರಿಗೆ ಕೊಟ್ಟ ನಂತರ ಸಾಮನ್ಯ ಶೇರ್ ಪಡೆದಿರುವವರಿಗೆ ಸಿಗುತ್ತದೆ. ಮಾರುಕಟ್ಟಯ ಬೆಲೆಯ ಮೇಲೆ ಹೆಚ್ಚಿದಂತೆ ಶೇರ್ ರಿಟನ್ಸ್ ಸಹ ಹೆಚ್ಚುತ್ತದೆ.ಕಂಪನಿಯ ಲಾಭನಷ್ಟಗಳು ಮಾರುಕಟ್ಟೆಯ ಬೆಲೆಯ ಮೇಲೆ ಆದರವಾಗಿರುತ್ತದೆ. ಕಂಪನಿಯನ್ನು ಮುಚ್ಚುವ ಸಮಯದಲ್ಲಿ ಇರುವ ಹಣವು ಮೊದಲಿಗೆ ಬಾಂಡ್ ಹೊದಿರುವವರಿಗೆ, ಸಾಲದಾತರುಗಳಿಗೆ ಮತ್ತು ಆದ್ಯತಾ ಶೇರ್ ಇರುವವರಿಗೆ ಕೊಟ್ಟು ಮುಗಿದ ನಂತರ ಸಾಮಾನ್ಯ ಶೇರ್‌ನವರಿಗೆ ಹಣ ಸೇರುತ್ತದೆ.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |