ವಿಷಯಕ್ಕೆ ಹೋಗು

ಸಾಗರ್ ಕಶ್ಯಪ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಿತ್ರ:Sagar 320x240.jpg
'ಸಾಗರ್ ಕಶ್ಯಪ್'

ತಮ್ಮ 'ಪಿಯುಸಿ ಪರೀಕ್ಷೆ,' ಮುಗಿಸುವ ವೇಳೆಗಾಗಲೇ ಟೆನ್ನಿಸ್ ನ ಯಾವುದೇ ಪರೀಕ್ಷೆಗೆ ಒಳಪಡುವ ಮೊದಲೇ 'ಲೈನ್ ಅಂಪೈರ್' ಆಗಿ, 'ಮೈಸೂರಿನ ವಿದ್ಯಾವಿಕಾಸ್ ಇಂಜಿನಿಯರಿಂಗ್ ಕಾಲೇಜ್’ ನ ನಂತಿಮ ವರ್ಷದ ವಿದ್ಯಾರ್ಥಿ, ಸಾಗರ್ ಕಶ್ಯಪ್ ಹೆಸರು, ಮೀಡಿಯಾದಲ್ಲಿ ಕೇಳಿಸಲಾರಂಭಿಸಿತು. ಪ್ರತಿವರ್ಶವೂ ವಿಂಬಲ್ಡನ್ ಟೆನ್ನಿಸ್ ಛಾಂಪಿಯನ್ಬ್ ಶಿಪ್ ನ ೨೦೦೯ ರ ಸಾಲಿನ ಪಂದ್ಯಾಟದಲ್ಲಿ ತೀರ್ಪುಗಾರನಾಗಿ ಭಾಗವಹಿಸುವ ಮೂಲಕ, ’ವಿಂಬಲ್ಡನ್ ಅಂಪೈರ್’ ಆಗಿ ಕರ್ನಾಟಕದ ಸಾಗರ್ ಕಶ್ಯಪ್ ವಿಶ್ವದ ಟೆನ್ನಿಸ್ ವಲಯದಲ್ಲಿ ಗುರುತಿಸಲ್ಪಟ್ಟಿದ್ದಾರೆ. ’ದೇಶದ ಅತಿ ಕಿರಿಯ ಟೆನ್ನಿಸ್ ವೈಟ್ ಬ್ಯಾಡ್ಜ್ ಅಫಿಶಿಯಲ್’ ಎಂದು ಖ್ಯಾತಿಪಡೆದಿದ್ದಾರೆ. ತಮ್ಮ ವಿದ್ಯಾಭ್ಯಾಸದ ಜೊತೆ-ಜೊತೆಯಲ್ಲೇ 'ಟೆನ್ನಿಸ್ ಅಂಪೈರಿಂಗ್' ಮುಂದುವರೆಸಿ, ಅದರಲ್ಲೇ ತಮ್ಮ 'ಕೆರಿಯರ್' ಕಂಡುಕೊಳ್ಳುವ ಗಟ್ಟಿನಿರ್ಧಾರವನ್ನು ಸಾಗರ್ ಕಶ್ಯಪ್ ಹೊಂದಿದ್ದಾರೆ.

ತಂದೆತಾಯಿಗಳು ಹಾಗೂ ಬಾಲ್ಯ

[ಬದಲಾಯಿಸಿ]

ಮೈಸೂರು ನಗರದ ’ಗೋಕುಲಮ್ ನಿವಾಸಿ’, ಇಂಜಿನಿಯರ್ ಟಿ. ಆರ್. ಸತ್ಯನಾರಾಯಣ, ಹಾಗೂ ಮಂಜುಳಾ ದಂಪತಿಗಳ ಪ್ರೀತಿಯ ಮಗನಾಗಿ,ಜನಿಸಿದ 'ಸಾಗರ್ ಕಶ್ಯಪ್', ಪ್ರಸ್ತುತದಲ್ಲಿ ’ಮೈಸೂರಿನ ವಿದ್ಯಾವಿಕಾಸ ಇಂಜಿನಿಯರಿಂಗ್ ಕಾಲೇಜಿನ’ ಕೊನೆಯ ವರ್ಷದ ವಿದ್ಯಾರ್ಥಿಯಾಗಿ ಇದ್ದಾರೆ. ೧೮ ವರ್ಷದ ವಿಭಾಗದಲ್ಲಿ ಟೆನ್ನಿಸ್ ಗೆ ಪಾದಾರ್ಪಣೆಮಾಡಿದಾಗ ಅವರಿಗೆ ಕೇವಲ ೧೨ ವರ್ಷದ ಪ್ರಾಯ. ಈ ವಿಭಾಗದಲ್ಲಿ ಭಾಗವಹಿಸುವ ಮೊದಲ ೨೫ ಶ್ರೇಯಾಂಕವಿರುವವರನ್ನು ಆಯ್ಕೆಮಾಡಲಾಗುತ್ತದೆ. ಆಗ ಸಾಗರ್ ರ್ಯಾಕಿಂಗ್ ೧೮ ನೆಯದಾಗಿತ್ತು. ಅಲ್ಲಿ ಜಯಗಳಿಸಿದರಿಗೆ ’ನ್ಯಾಶನಲ್ ಚಾಂಪಿಯನ್ ಶಿಪ್’ ಆಡುವ ಅವಕಾಶ ಲಬ್ಯವಾಗುತ್ತದೆ. ಹೀಗೆ ಮುಂದೆ ಸಾಗಿದ ಸಾಗರ್, ಬೆಂಗಳೂರು, ಹೈದರಾಬಾದ್, ದೆಹಲಿ, ಚಂಡೀಘಡ್, ಕೊಲ್ಕತ್ತಾ, ಗುರ್ಗಾಂವ್, ಮುಂಬಯಿ, ಚೆನ್ನೈ, ಮೊದಲಾದ ನಗರಗಳಲ್ಲಿ ನಡೆದ ವಿವಧ ಟೂರ್ನಮೆಂಟ್ ಗಳಲ್ಲಿ ’ಸಿಂಗಲ್ಸ್’ ಮತ್ತು ’ಡಬ್ಬಲ್ಸ್’ ಆಟಾಗಳಲ್ಲಿ ಭಾಗವಹಿಸಿ ಅನುಭವಪಡೆದರು. ಬೆಂಗಳೂರಿನಲ್ಲಿ ೨೦೦೨ ರಲ್ಲಿ ಜರುಗಿದ ’ಅಖಿಲ ಭಾರತ ರ‍್ಯಾಂಕಿಂಗ್ ಟೂರ್ನಮೆಂಟ್’ ನ ಸಿಂಗಲ್ಸ್ ನಲ್ಲಿ ಸಿಮಿಫನಲಿಸ್ಟ್ ಮತ್ತು ಡಬ್ಬಲ್ಸ್ ನಲ್ಲಿ ಛಾಂಪಿಯನ್ನಾಗಿ ಹೊರಹೊಮ್ಮಿದರು. ಆಗ ಅವರಿಗೆ ಕೋಚಿಂಗ್ ನೀಡಿದವರು, ’ಶ್ರೀ. ಆರ್. ನಾಗರಾಜ್’ ರವರು.

ಅಂಪೈರ್ ಆಗಲು ಸಾಗರ್ ರವರ ಮನಸ್ಸು ಹೊರಳಿದ್ದು ಆ ಸಮಯದಲ್ಲೇ

[ಬದಲಾಯಿಸಿ]

ಈ ಹಂತದಲ್ಲಿ ಸಾಗರ್ ಕಶ್ಯಪ್ ರವರ ಗಮನ ಅಂಪೈರ್ ಆಗುವ ಕಡೆ ಹೊರಳಿತು. ಮೊದಲು ಅವರು ’ಲೈನ್ ಅಂಪೈರ್’ ಆಗಿದ್ದರು. ಆಗ ಅವರು ತಮ್ಮ ಆಟದ ಬಗ್ಗೆ ಆತ್ಮಾವಲೋಕನ ಮಾಡಿಕೊಂಡು ಮುಂದೆ ಸಾಗಲು ಸಿದ್ಧರಾದರು. ಅವರ ಆಟದ ತಿಳುವಳಿಕೆ, ತೀರ್ಪುಗಾರಿಕೆಯ ಅರಿವುಗಳನ್ನು ಗಮನಿಸಿ ಸ್ಥಳೀಯ ಟೆನ್ನಿಸ್ ಟೂರ್ನಿಗಳಲ್ಲಿ ತೀರ್ಪುಗಾರರಾಗಲು ಕರೆಬಂತು. ತಮ್ಮ ಪಿಯುಸಿ ಮುಗಿಸುವ ವೇಳೆಗಾಗಲೇ ಟೆನ್ನಿಸ್ ನ ಯಾವುದೇ ಪರೀಕ್ಷೆಗೆ ಒಳಪಡುವ ಮೊದಲೇ ಲೈನ್ ಅಂಪೈರ್ ಆಗಿಮೈಸೂರಿನ ವಿದ್ಯಾವಿಕಾಸ್ ಇಂಜಿನಿಯರಿಂಗ್ ನ ನಂತಿಮ ವರ್ಷದ ವಿದ್ಯಾರ್ಥಿ, ಸಾಗರ್ ಹೆಸರು ಮೀಡಿಯಾದಲ್ಲಿ ಕೇಳಿಸಲಾರಂಭಿಸಿತು.

ಅವರ ವೃತ್ತಿಬದುಕಿನ ಮೈಲುಗಲ್ಲಾದ ಸಂಗತಿ

[ಬದಲಾಯಿಸಿ]

ಫೆಡರಲ್ ಕಪ್ ಪಾರ್ ವಿಮೆನ್’ ಎಂಬ ’ಅಂತಾರಾಷ್ಟ್ರೀಯ ಟೂರ್ನಿ’ಯಲ್ಲಿ ಅಂಪೈರ್ ಆಗುವ ಅವಕಾಶ ಅವರಿಗೆ ದೊರೆತದ್ದು, ೨೦೦೪ ರಲ್ಲಿ. ಆಗ ಆ ಟೂರ್ನಿಯಲ್ಲಿ ಭಾಗವಹಿಸಿದ್ದ ಕ್ರೀಡಾಳುಗಳು ೨೧ ದೇಶಗಳಿಂದ ಬಂದಿದ್ದರು. ಆಗ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿ, ಎಲ್ಲರ ಗಮನ ಸೆಳೆದರು. ಹಿರಿಯ ಅಂಪೈರ್ ಗಳಾಗಿದ್ದ, ಸಿಲ್ವರ್ ಬ್ಯಾಡ್ಜ್ ರೆಫ್ರಿಗಳಾದ ’ಪುನಿತ್ ಗುಪ್ತಾ, ಹಾಗೂ ’ಶೀತಲ್ ಅಯ್ಯರ್’ ರವರಿಂದ ಸೈ ಎನ್ನಿಸಿಕೊಂಡರು. ಮುಂದೆ ದೆಹಲಿ, ಹೈದರಾಬಾದ್, ಗಳಲ್ಲಿ ನಡೆದ ’ಇಂಟರ್ ನ್ಯಾಶನಲ್ ಟೂರ್ನಮೆಂಟ್’ ಗಳಲ್ಲಿ ’ಲೈನ್ ಅಂಪರ್’ ಆಗಲು ಆಹ್ವಾನ ಬಂತು. ಸಾಗರ್ ಕಶ್ಯಪ್ ರ ಆತ್ಮ ವಿಶ್ವಾಸ ಧೃಢಗೊಂಡು ಅವರು ಟೆನ್ನಿಸ್ ಒಬ್ಬ ಅಫಿಶಿಯಲ್ ಆಗುವ ಕನಸನ್ನು ಕಂಡರು. ಹಾಗಾಗಿ ಟೆನ್ನಿಸ್ ಆಟದ ಅಂಪೈರಿಂಗ್ ಗೆ ಸಂಬಂಧಿಸಿದ ಪರೀಕ್ಷೆಗಳನ್ನು ಎದುರಿಸಲು ಸಜ್ಜಾದರು. ಅನುಭವೀ ಸಾಗರ್ ಲೆವೆಲ್-೧ ಪರೀಕ್ಷೆಯಲ್ಲಿ ಸುಲಭವಾಗಿ ತೆರ್ಗಡೆಯಾದರು. ಮುಂಬಯಿನಲ್ಲಿ ೨೦೦೮ ರಲ್ಲಿ ಜರುಗಿದ ’ವೈಟ್ ಬ್ಯಾಡ್ಜ್ ಅಫಿಶಿಯಲ್’ ಲೆವೆಲ್-೨ ನಲ್ಲಿ ಭಾಗವಹಿಸಿದ್ದ ಒಟ್ಟು ೨೫ ಅಭ್ಯರ್ಥಿಗಳ ಪರಿಕ್ಷಾಕಣದಲ್ಲಿ ತೇರ್ಗಡೆಯಾದ ೯ ಮಂದಿಯಲ್ಲಿ ೩ ಭಾರತೀಯರು ಇದ್ದರು. ಅದರಲ್ಲಿ ಸಾಗರ್ ಕೂಡಾ ಒಬ್ಬರು. ಈ ಸಂದರ್ಭದಲ್ಲಿ ಅವರ ನೆರವಿಗೆ ಬಂದು ಹುರುಪಿನ ಪ್ರೋತ್ಸಾಹವನ್ನು ಕೊಟ್ಟವರು, ಟೆನ್ನಿಸ್ ಲೋಕದ ೧೬ ಜನರ ’ಗೋಲ್ಡ್ ಬ್ಯಾಡ್ಜ್ ಅಫಿಶಿಯಲ್’ ಗಳಲ್ಲಿ, ಒಬ್ಬರಾದ ಮುಂಬಯಿನ ’ನಿತಿನ್ ಕನ್ನಂವಾರ್’ ಹಾಗೂ ವೈಟ್ ಬ್ಯಾಡ್ಜ್ ಆಗಿ ಕಾರ್ಯನಿರ್ವಹಿಸಿದ ’ಪುಣೆಯ ಲೀನಾ ನಾಗೇಶ್ಕರ್’. ಹೀಗೆ ಹಂತ-ಹಂತವಾಗಿ ಮುಂದುವರೆದು, ಭಾರತದಲ್ಲಿ ನಡೆದ ಪ್ರಮುಖ ಟೆನ್ನಿಸ್ ಆಟಗಳಲ್ಲಿ ಲೈನ್ ಅಂಪೈರ್, ಚೀಫ್ ಅಂಪೈರ್, ಆಗಿ ಕಾರ್ಯ ನಿರ್ವಹಿಸಿದ ಸಾಗರ್, ಕೇವಲ ಒಂದು ವರ್ಷದಲ್ಲಿ 'ಅಂತಾರಾಷ್ಟ್ರೀಯ ಮಟ್ಟದ ಅಫಿಶಿಯಲ್' ಗಳ ಗಮನ ಸೆಳೆಯುವಷ್ಟು ಸಫಲರಾದರು.

೨೦೦೯ ರ ವಿಂಬಲ್ಡನ್ ಟೆನ್ನಿಸ್ ಸಾಗರ್

[ಬದಲಾಯಿಸಿ]

೨೦೦೯ ರಲ್ಲಿ ಸಾಗರ್ ಗೆ 'ನ್ಯಾಶನಲ್ ಟೆನ್ನಿಸ್ ಅಸೋಸಿಯೇಶನ್ ಆಫ್ ಇಂಗ್ಲೆಂಡ್, ಮತ್ತು ’ಲಾನ್ ಟೆನ್ನಿಸ್ ಅಸೋಸಿಯೇಷನ್’ಇಂಗ್ಲೆಂಡ್ ನಿಂದ ಆಹ್ವಾನ ಬಂತು. ೨೦೦೯ ರ ಜೂನ್ ೧೫ ರಿಂದ, ಜೂನ್ ೨೧ ರ ವರೆಗೆ ೭೮ ಅಂಪೈರ್ ಗಳ ಪೈಕಿ, ಅತಿ ಕಿರಿಯ ಭಾರತೀಯ ಅಂಪೈರ್ ಆಗಿ ಸಾಗರ್ ಕಶ್ಯಪ್ ನಿಯುಕ್ತರಾದರು. ಪಂದ್ಯ ಮುಗಿದ ಮೊದಲ ವಾರದಲ್ಲಿ ಮೌಲ್ಯಮಾಪನ ಪತ್ರದಲ್ಲಿ, ’ನಿನ್ನ ಕೆಲಸವನ್ನು ತುಂಬಾ ಮುತುವರ್ಜಿಯಿಂದ ನಿರ್ವಹಿಸಿದ್ದೀಯ,’ ಎಂಬ ಎಂಬ ಒಕ್ಕಣಿಕೆಯ ಪತ್ರ, ಅವರ 'ಕನಸಿನ ಸಾಧನೆಯ ಪ್ರಮಾಣಪತ್ರ' ವಾಗಿ ಮುದನೀಡಿತು. ವರ್ಷ ೨೦೦೯ ರ ವರ್ಷಪೂರ್ತಿ ದೆಹಲಿ, ಬೆಂಗಳೂರು, ಪುಣೆ, ಮುಂತಾದೆಡೆಗಳಲ್ಲಿ ನದೆದ ಐ. ಟಿ. ಎಫ್ ನ ’ಅಂತಾರಾಷ್ಟ್ರೀಯ ಟೂರ್ನಿಗಳಲ್ಲೂ ಛೇರ್ ಅಂಪೈರ್’ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಈಗಾಗಲೇ ’ಮಂಡ್ಯ’ದಲ್ಲಿ ಆಯೋಜಿಸಲಾಗಿದ್ದ ’೫ ರಾಷ್ಟ್ರಮಟ್ಟದ ಪಂದ್ಯಾಟ’ಗಳಲ್ಲೂ ’ಮುಖ್ಯ ತೀರ್ಪುಗಾರರಾಗಿ’ ಕೆಲಸಮಾಡಿದ್ದಾರೆ.

ಮೈಸೂರಿನಲ್ಲಿ ಸಿಕ್ಕ ಸೌಲಭ್ಯಗಳು ತೀರಾ ಕಡಿಮೆ

[ಬದಲಾಯಿಸಿ]

ಮೈಸೂರಿನಲ್ಲಿ ಉತ್ತಮ ’ಟೆನ್ನಿಸ್ ತರಬೇತಿ ಕೇಂದ್ರ’ವಿಲ್ಲ. ರಾಜ್ಯ ಸರಕಾರದಿಂದ ಕ್ರಿಕೆಟ್ ಕ್ರೀಡೆಗೆ ಸಾಕಷ್ಟು ಪ್ರೋತ್ಸಾಹ ದೊರೆಯುತ್ತಿದೆ. ಆದರೆ ಕ್ರಿಕೆಟ್ ಅಲ್ಲದೆ ಬೇರೆಯಾವ ಕ್ರೀಡೆಗಳಿಗೂ ಹೆಚ್ಚಿನ ಆದ್ಯತೆಯನ್ನು ಜನರಾಗಲೀ ಮೀಡಿಯಾಗಳಾಗಲೀ ತೋರಿಸುತ್ತಿಲ್ಲ.

’ಟೆನ್ನಿಸ್ ಆಟದ ಅಫಿಶಿಯಲ್ ಪರೀಕ್ಷೆಗಳ ವಿವರಗಳು’ ಹೀಗಿವೆ

[ಬದಲಾಯಿಸಿ]

ಇವು ೩ ಹಂತಗಳಲ್ಲಿ ನಡೆಯುತ್ತವೆ.

೧. ಲೆವೆಲ್-೧

[ಬದಲಾಯಿಸಿ]

ಇಲ್ಲಿ ಟೆನ್ನಿಸ್ ಅಂಪೈರಿಂಗ್ ಬಗ್ಗೆ ಪ್ರಾಥಮಿಕ ಪ್ರಸ್ತಾವನೆಗಳು, ಟೆನ್ನಿಸ್ ಆಟದ ನಿಯಮಗಳು, ನಿಬಂಧನೆಗಳು, ಹಾಗೂ ವಿಧಿಗಳು ಶಾಸನಗಳು, ಸೂತ್ರಗಳ ಬಗ್ಗೆ ತಿಳುವಳಿಕೆ ನೀಡಲಾಗುವುದು. ಲೆವೆಲ್-೧ ನ್ನು ಪೂರೈಸಿದವರು, ಪ್ರಾದೇಶಿಕ ಮಟ್ಟದಲ್ಲಿ ಅಂದರೆ, ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಅಂಪೈರ್ ಗಳಾಗಿ ಭಾಗವಹಿಸಲು ಅರ್ಹರಾಗಿರುತ್ತಾರೆ.

೨. ಲೆವೆಲ್-೨

[ಬದಲಾಯಿಸಿ]

ಈ ಪರೀಕ್ಷೆಯಲ್ಲಿ ತೇರ್ಗಡೆಯಾಗುವುದು ಸುಲಭವಲ್ಲ.’ ’ನ್ಯಾಶನಲ್ ಟೆನ್ನಿಸ್ ಅಸೋಸಿಯೇಶನ್’ ನಿಂದ ’ ಅಂತರ್ ನ್ಯಾಶನಲ್ ಫೆಡರೇಶನ್’ ಗೆ ಶಿಫಾರಿಸ್ ಪತ್ರ ಪಡೆದವರು ಮಾತ್ರ ಈ ಪರೀಕ್ಷೆಯಲ್ಲಿ ಕೂಡಲು ಅರ್ಹತೆ ಹೊಂದುತ್ತಾರೆ. ಏಶ್ಯಾದಲ್ಲಿ ವರ್ಶಕ್ಕೊಮ್ಮೆ ನಡೆಯುವ ಈ ಪರೀಕ್ಷೆಯಲ್ಲಿ ಭಾಗವಹಿಸುವ ಅಭ್ಯರ್ಥಿಗಳು ೪ ದಿನ ಖಡ್ಡಾಯವಾಗಿ ಹಾಜರಾತಿಯನ್ನು ಹೊಂದಬೇಕು. ಮೊದಲ ಎರಡುದಿನಗಳು ’ಪಠ್ಯಬೋಧನಾ ತರಗತಿಗಳ’ನ್ನು ನಂತರ ೩ ನೆಯ ದಿನ ’ಪ್ರಾಯೋಗಿಕ’ ಹಾಗೂ ಕೊನೆಯದಿನ ’ಲಿಖಿತ ಪರೀಕ್ಷೆ’. ೫೦ ಅಂಕವಿರುವ ೫೦ ನಿಮಿಷದ ಅವಧಿಯ ಈ ಪರೀಕ್ಷೆಗಳಲ್ಲಿ ೪೫ ಅಂಕ ಪಡೆಯಲೇ ಬೇಕು. ’ವೈಟ್ ಬ್ಯಾಡ್ಜ್ ಅಫಿಶಿಯಲ್’ ಗಳಿಗೆ ’ಟೆನ್ನಿಸ್ ವಲಯ’ದಲ್ಲಿ ವಿಶ್ವಮಾನ್ಯತೆ ಇದೆ. ಭಾರತದಲ್ಲಿ ಹಾಲಿ ೧೧ ಮಂದಿ ಇಂಥ ಪಡೆದವರಿದ್ದಾರೆ.

೩. ಲೆವೆಲ್-೩

[ಬದಲಾಯಿಸಿ]

ಈ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ’ಬ್ರಾನ್ಜ್ ಬ್ಯಾಡ್ಜ್ ಅಫಿಶಿಯಲ್’ ಎಂದು ಅನ್ನಿಸಿಕೊಳ್ಳುತ್ತಾರೆ. ’ಬ್ರಾನ್ಜ್ ಬ್ಯಾಡ್ಜ್’, ’ಸಿಲ್ವರ್ ಬ್ಯಾಡ್ಜ್’ ಮತ್ತು ’ಗೋಲ್ಡ್ ಬ್ಯಾಡ್ಜ್’ ಗಳು ಭಡ್ತಿಯಿಂದ ಮಾತ್ರ ದೊರೆಯುತ್ತವೆ.

’ಟೆನ್ನಿಸ್ ಅಂಪೈರಿಂಗ್ ವಲಯ’ದಲ್ಲಿ ’ಗೋಲ್ಡ್ ಬ್ಯಾಡ್ಜ್ ರೆಫ್ರಿ’ ಗಳ ಸಂಖ್ಯೆ ಕೇವಲ ೧೬ಮಾತ್ರ

[ಬದಲಾಯಿಸಿ]

’ಟೆನ್ನಿಸ್ ಅಂಪೈರಿಂಗ್ ವಲಯ’ದಲ್ಲಿ ’ಗೋಲ್ಡ್ ಬ್ಯಾಡ್ಜ್ ರೆಫ್ರಿ’ ಗಳ ಸಂಖ್ಯೆ ಕೇವಲ ೧೬ ಮಾತ್ರ. ಇದು ಒಂದು ಸ್ಥಿರ ಸಂಖ್ಯೆ. ಸದಾ ಐ. ಟಿ. ಎಫ್ ನಲ್ಲಿ ೧೬ ಜನ ಮಾತ್ರ ’ಗೋಲ್ಡ್ ಬ್ಯಾಡ್ಜ್ ಅಫಿಶಿಯಲ್’ ಆಗಿರುತ್ತಾರೆ. ಯಾರಾದರೊಬ್ಬ ವ್ಯಕ್ತಿ ನಿವೃತ್ತರಾದಾಗ ಅಥವಾ ಮರಣಿಸಿದಾಗ ಇಲ್ಲವೇ ಹಿಂಬಡ್ತಿ ಹೊಂದಿದಾಗ ಮಾತ್ರ ಇನ್ನೊಬ್ಬರು ’ಗೋಲ್ಡ್ ಬ್ಯಾಡ್ಜ್ ಅಫಿಶಿಯಲ್’ ಆಗಿ ಭಡ್ತಿ ಹೊಂದಬಹುದು.

,