ಸಾಂತಾಕ್ಲಾಸ್
ಗೋಚರ
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
ಸೈಂಟ್ ನಿಕೋಲಸ್ ಎಂಬುವವರು ಜರ್ಮನಿಯ ಉತ್ತರ ಭಾಗದಲ್ಲಿ ಬಿಷಪರಾಗಿದ್ದರು. ಜನಪರ ಕಾಳಜಿ ಇದ್ದ ಇವರು ಮಕ್ಕಳನ್ನು ಅತಿ ಹೆಚ್ಚು ಪ್ರೀತಿಸುತ್ತಿದ್ದರು. ಕ್ರಿಸ್ಮಸ್ ಸಂದರ್ಭದಲ್ಲಿ ಏಸುಕ್ರಿಸ್ತನ ಸಂದೇಶವನ್ನು ಸಾರುವ ಅನೇಕ ಹಾಡುಗಳನ್ನು ಹಾಡುತ್ತಾ ಮಕ್ಕಳೊಂದಿಗೆ ಕುಣಿದಾಡುತ್ತಿದ್ದರು. ಇದೇ ಸಂದರ್ಭದಲ್ಲಿ ಮಕ್ಕಳಿಗೆ ಸಿಹಿತಿನಿಸು, ಚಾಕಲೇಟ್ ಗಳನ್ನು ನೀಡುತ್ತಾ ಅವರನ್ನು ಸಂತೋಷಪಡಿಸುತ್ತಿದ್ದರು. ಈಗಲೂ ಅವರ ಸ್ಮರಣಾರ್ಥ ಪ್ರಪಂಚದ ಎಲ್ಲಾ ಕಡೆ ಸಾಂತಾಕ್ಲಾಸ್ ನ ವೇಷ ಹಾಕಿಕೊಂಡು ಮಕ್ಕಳನ್ನು ಕುಣಿಸುವ ಪರಿಪಾಠವಿದೆ.