ಸಾಂಟಾ ಕ್ಲಾಸ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಸಾ೦ಟಾ ಕ್ಲಾಸ್

ಸಾಂಟಾ ಕ್ಲಾಸ್ (ಸಂತ ನಿಕೋಲಾಸ್, ಸಂತ ನಿಕ್, ಫಾದರ್ ಕ್ರಿಸ್ಮಸ್, "ಸಾಂಟಾ") ಕ್ರೈಸ್ತ ಧರ್ಮದ ಜಾನಪದ ಸಂಸ್ಕೃತಿಯಲ್ಲಿ ಬೆಳೆದುಬಂದಿರುವ ಒಬ್ಬ ವ್ಯಕ್ತಿ. ಮಕ್ಕಳ ಜಾನಪದ ನಂಬಿಕೆಯಂತೆ, ಕ್ರಿಸ್ಮಸ್ ಹಬ್ಬದ ದಿನ ಮಕ್ಕಳಿಗೆ ಉಡುಗೊರೆಗಳನ್ನು ತಂದುಕೊಡುವುದು ಇವನೇ.

ಜಾನಪದ ಕತೆ[ಬದಲಾಯಿಸಿ]

ಮಕ್ಕಳಿಗೆ ಸಾಮಾನ್ಯವಾಗಿ ಹೇಳಲಾಗುವ ಕತೆಯಂತೆ, ಸಾಂಟಾ ಕ್ಲಾಸ್ ಒಳ್ಳೆಯ, ನಗುಮುಖದ, ಬಿಳಿ ದಾಡಿಯುಳ್ಳ ಡುಮ್ಮ ಹೊಟ್ಟೆಯ ವ್ಯಕ್ತಿ; ಕ್ರಿಸ್ಮಸ್ ನ ಹಿಂದಿನ ದಿನ ("ಕ್ರಿಸ್ಮಸ್ ಈವ್") ಹಿಮಜಿಂಕೆಗಳಿಂದ (ರೀಯಿಂಡೀರ್) ತನ್ನ ಗಾಡಿಯಲ್ಲಿ ಹಾರುತ್ತ ಎಲ್ಲರ ಮನೆಗೂ ಹೋಗಿ ಅಲ್ಲಿರುವ ಮಕ್ಕಳಿಗಾಗಿ ಉಡುಗೊರೆಗಳನ್ನು ಇಟ್ಟು ಹೋಗುತ್ತಾನೆ. ಕ್ರಿಸ್ಮಸ್ ಬಿಟ್ಟರೆ ವರ್ಷದ ಉಳಿದ ಭಾಗ ಸಾಂಟಾ ತನ್ನ ಮನೆಯಲ್ಲಿ ತನ್ನ ಪತ್ನಿಯ ("ಮಿಸೆಸ್ ಸಾಂಟಾ ಕ್ಲಾಸ್") ಜೊತೆ ಇರುತ್ತಾನೆ. ಸಾಂಟಾ ನ ಮನೆ ಎಲ್ಲಿದೆ ಎಂಬುದರ ಬಗ್ಗೆ ಬೇರೆ ಬೇರೆ ಸಂಸ್ಕೃತಿಗಳಲ್ಲಿ ಬೇರೆ ಬೇರೆ ಕಥೆಗಳಿವೆ - ಉತ್ತರ ಅಮೆರಿಕದ ಜಾನಪದ ಕಥೆಯಂತೆ ಸಾಂಟಾ ಕ್ಲಾಸ್ ವಾಸಿಸುವುದು ಉತ್ತರ ಧ್ರುವದಲ್ಲಿ!

ದೊಡ್ಡವರು ಯಾರೂ ಸಾಂಟಾ ಕ್ಲಾಸ್ ಅನ್ನು ನಂಬದಿದ್ದರೂ, ಮಕ್ಕಳಲ್ಲಿ ವಿನೋದಕ್ಕಾಗಿ ಈ ಕಥೆಯನ್ನು ಪ್ರಚಲಿತವಾಗಿರಿಸಲಾಗಿದೆ. ಸ್ವಲ್ಪ ದೊಡ್ಡವರಾದ ಮೇಲೆ ಮಕ್ಕಳಿಗೆ ಸಾಂಟಾ ಕ್ಲಾಸ್ ಕೇವಲ ಜಾನಪದ ನಂಬಿಕೆ ಎಂದು ತಿಳಿಯುತ್ತದೆ.

ಉಗಮ[ಬದಲಾಯಿಸಿ]

ಸಾಂಟಾ ಕ್ಲಾಸ್ ನ ವ್ಯಕ್ತಿತ್ವ ಎರಡು ಬೇರೆ ಬೇರೆ ವ್ಯಕ್ತಿಗಳಿಂದ ಸ್ಫೂರ್ತಿತವಾದದ್ದು.

  • ಸಂತ ನಿಕೋಲಾಸ್: ಸಂತ ನಿಕೋಲಾಸ್ ಸುಮಾರು ನಾಲ್ಕನೆಯ ಶತಮಾನದಲ್ಲಿ ಮೈರಾ (ಇಂದಿನ ಟರ್ಕಿ ದೇಶದಲ್ಲಿದೆ) ದ ಕ್ರೈಸ್ತ ಪಾದ್ರಿ - ಬಡಜನರಿಗೆ ಧಾರಾಳವಾಗಿ ಉಡುಗೊರೆಗಳನ್ನು ಕೊಡುತ್ತನಿದ್ದನೆಂದು ಹೇಳಲಾಗುತ್ತದೆ.
  • ಫಾದರ್ ಕ್ರಿಸ್ಮಸ್: ಇಂಗ್ಲೆಂಡೀನ ಜಾನಪದ ನಂಬಿಕೆಯಲ್ಲಿ ಜನ್ಮ ತಾಳಿದ ಈ ವ್ಯಕ್ತಿ ಪುರಾತನ ಜರ್ಮನ್ ದೇವರಾದ "ಓಡಿನ್" ನ ವ್ಯಕ್ತಿತ್ವದಿಂದ ಸ್ಫೂರ್ತಿತವಾದದ್ದು.