ವಿಷಯಕ್ಕೆ ಹೋಗು

ಸಹಾರಣ್ ಪುರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸಹಾರಣ್ ಪುರ್
ದೇಶ ಭಾರತ
ರಾಜ್ಯಉತ್ತರ ಪ್ರದೇಶ
ಜಿಲ್ಲೆಸಹರಣ ಪುರ
Population
 (2011)
 • Total೭,೦೩,೩೪೫
ಭಾಷೆ
 • ಅಧಿಕೃತಹಿಂದಿ
Time zoneUTC+5:30 (IST)
PIN
247001/02
Telephone code0132
Vehicle registrationUP-11
Sex ratio1000 /
Websitesaharanpur.nic.in
7'5male

ಉತ್ತರ ಪ್ರದೇಶದ ಸಹಾರನ್‍ಪುರ್, ಒಂದು ಗೃಹೋದ್ಯೋಗಗಳ ಪುರ

[ಬದಲಾಯಿಸಿ]

ಗಂಗೆ ಮತ್ತು ಯಮುನಾ ನದಿಗಳ ಮಧ್ಯೆ ಇರುವ ಊರು ಸಹಾರನ್‍ಪುರ್ ವೇದಕಾಲದಿಂದಲೂ ಹೆಸರುವಾಸಿಯಾಗಿರುವ ಈ ಊರು, ಇದೀಗ ಅಪೂರ್ವ ಕೆತ್ತನೆಯ ಮರದ ಶಿಲ್ಪಗಳಿಗೆ, ಮತ್ತು ಪೀಠೋಪಕರಣಗಳಿಗೆ ವಿಶ್ವಪ್ರಸಿದ್ಧಿಯನ್ನು ಪಡೆದಿದೆ. ಸಾವಿರಾರು ವರ್ಷಗಳಿಂದಲೂ ಇಲ್ಲಿನ ಕಾರೀಗರ್ ಗಳು ಮರದ ಕೆತ್ತನೆ ಕೆಲಸಗಳಲ್ಲಿ ಕುಶಲರಾಗಿದ್ದಾರೆ. ಮರದ ಪೀಠೋಪಕರಣಗಳಿಗೆ ಇದು ಪ್ರಶಸ್ತ ಜಾಗ. ಇಂದಿನ ದಿನಗಳಲ್ಲಿ ಮುಘಲ್ ಹಾಗೂ ಭಾರತೀಯ ಶೈಲಿಗಳ ಅಪೂರ್ವ ಸಂಗಮವನ್ನು ನಾವು ಕಾಣಬಹುದು.

ಪೀಠೋಪಕರಣಗಳ ತಯಾರಿಕೆ ಇಲ್ಲಿನ ಪ್ರಮುಖ ಉದ್ಯೋಗ

[ಬದಲಾಯಿಸಿ]

ವೈಶಿಷ್ಟ್ಯಪೂರ್ಣ ಕಲಾಕೃತಿಗಳ ಭಂಡಾರ

[ಬದಲಾಯಿಸಿ]

ಪುರಾತನ ಹವೇಲಿ ಅಥವಾ ಬಂಗಲೆಗಳ ಬಾಗಿಲುಗಳ ಚೌಕಟ್ಟುಗಳಲ್ಲಿ ಸಾಮಾನ್ಯವಾಗಿ ದೇವಿ-ದೇವತೆಗಳ ಚಿತ್ರಗಳನ್ನು ಬಿಡಿಸಲಾಗುತ್ತಿತ್ತು. ಆದರೆ ಮೂರ್ತಿಪೂಜೆಯನ್ನು ಒಪ್ಪದ ಮುಸಲ್ಮಾನ್ ಕಲಾಕಾರರು, ಹೂಹಣ್ಣುಗಳು, ಗಿಡ-ಬಳ್ಳಿಗಳು, ಅಂಗೂರಿ ಒಂದಕ್ಕೊಂದು ಬೆಸೆದುಕೊಂಡ ದ್ರಾಕ್ಷೀ ಬಳ್ಳಿಗಳ ವಿನ್ಯಾಸವುಳ್ಳ ಕಲಾಕೃತಿಗಳನ್ನು ನಿರ್ಮಿಸುವುದರಲ್ಲಿ ಆಸಕ್ತಿಯನ್ನು ತೋರಿಸುತ್ತಾರೆ. ಪರ್ಶಿಯಾದ ಪ್ರಭಾವದಿಂದ ಪಿಂಜರಾ ಜಾಲರಿ ಶೈಲಿಯ ಮರದ ಕಲಾಕೃತಿಗಳು ಬಳಕೆಗೆ ಬಂದವು. ಈ ಊರಿನಲ್ಲಿ ತಯಾರಾಗುವ ಎಲ್ಲಾ ವಿಧದ ಮೇಜು, ಸೋಫಾ, ಪರದೆ, ಪೀಠೋಪಕರಣಗಳು ಮುಂತಾದವುಗಳಲ್ಲಿ ಸುಂದರವಾದ ಕೆತ್ತನೆಯ ಕಾರೀಗರಿಯನ್ನು ಕಾಣಬಹುದು. ಸಹಾರನ್‍ಪುರ್ ದಲ್ಲಿ ತಯಾರಾಗುವ ಮರದ ಕಲಾಕೃತಿಗಳಿಗೆ ದೇಶ-ವಿದೇಶಗಳಲ್ಲಿ ಹೆಚ್ಚು ಬೇಡಿಕೆಯಿದೆ.