ಸವಾಯ್ ಹೋಟೆಲ್

ವಿಕಿಪೀಡಿಯ ಇಂದ
Jump to navigation Jump to search

ಸವಾಯ್, ಭಾರತದ ಉತ್ತರಾಖಂಡ ರಾಜ್ಯದಲ್ಲಿ ಇರುವ ಮಸ್ಸೂರಿ ಗಿರಿಧಮದಲ್ಲಿರುವ ಒಂದು ಐತಿಹಾಸಿಕ ಐಷಾರಾಮಿ ಹೋಟೆಲ್. ಇದನ್ನು ಹೋಟೆಲ್ ಕಂಟ್ರೋಲ್ಸ ಪ್ರೈವೇಟ್ ಲಿಮಿಟೆಡ್ ITC ವೆಲ್ ಕಮ್ ಗ್ರೂಪ್ ಹೊಟೇಲ್ ನಿಯಂತ್ರಿಸುತ್ತದೆ. ಇಂಗ್ಲೀಷ್ ಗೋಥಿಕ್ ವಾಸ್ತುಶಿಲ್ಪ ಶೈಲಿಯಲ್ಲಿ ಹೆಚ್ಚಾಗಿ ಮರವನ್ನು ಬಳಸಿ ನಿರ್ಮಿಸಲಾಯಿತು, 1902 ರಲ್ಲಿ ಸ್ಥಾಪಿತವಾದ ಹೋಟೆಲ್ ಪ್ರಸ್ತುತ 11 ಎಕರೆ (45,000 ಮೀ 2)ಗಳಲ್ಲಿ ಹರಡಿದ್ದು 50 ಕೋಣೆಗಳನ್ನು ಹೊಂದಿದೆ, ಮತ್ತು ಹಿಮಾಲಯ ಪರ್ವತ ಶ್ರೇಣಿಯನ್ನು ಕಾಣಬಹುದಾಗಿದೆ. ರೈಲ್ವೆ 1900 ರಲ್ಲಿ ದೆಹ್ರಾದೂನ್ ತಲುಪಿದ ನಂತರ, ಮಸ್ಸೂರಿ ಹೆಚ್ಚು ಜನಪ್ರಿಯವಾಯಿತು ಮತ್ತು ಸಂಯುಕ್ತ ಪ್ರಾಂತಗಳ ಬಯಲುಸೀಮೆಯವರು, ಬ್ರಿಟಿಷ್ ಆಡಳಿತದ ಯುರೋಪಿಯನ್ ನಿವಾಸಿಗಳಿಗೆ ಮುಖ್ಯ ಬೇಸಿಗೆ ತಾಣವಾಗಿತ್ತು. 'ರೈಟರ್ಸ್ ಬಾರ್' ಎಂದು ಕರೆಯಲ್ಪಡುವ ಇದರ ಬಾರ್, ಭಾರತದ ಸ್ವಾತಂತ್ರ್ಯ 1947 ರ ನಂತರದ ಅನೇಕ ದಶಕಗಳ ಕಾಲದವರೆಗೂ ಪ್ರಸಿದ್ಧವಾಗಿತ್ತು . [೧]


ಬ್ರಿಟಿಷ್ ಆಳ್ವಿಕೆಯ ಅವಧಿಯಲ್ಲಿ ತನ್ನ ಉತ್ತುಂಗದಲ್ಲಿಇದ್ದ ಇದರ ಬಗ್ಗೆ ಇತ್ತೀಚಿನ ವಿಮರ್ಶಕರೊಬ್ಬರ ಪ್ರಕಾರ,"ಇಡಿ ಪಟ್ಟಣವೆ ಸುಖದ ಸುಪ್ಪತಿಗೆಯಲ್ಲಿದ್ದಾಗ , ಸವಾಯ್ ಹೋಟೆಲ್, ಉಳಿದು ಕೊಳ್ಳಲು ಇರುವ ಏಕೈಕ ಸ್ಥಳ(ಒಂದು ವೇಳೆ ಅದರ ವೆಚ್ಚವನ್ನು ಭರಿಸುವ ಶಕ್ತಿ ಇದ್ದಲ್ಲಿ ) ಇಲ್ಲವಾದಲ್ಲಿ , ಸವಾಯ್ ಹೋಟೆಲ್ ಒಂದರಲ್ಲಷ್ಟೇ ಗಣ್ಯರ ನಡುವೆ ಗುರುತಿಸಿಕೊಳ್ಳುವ ಅವಕಾಶವಿದ್ದದ್ದು."[೨][೩]

ಹೋಟೆಲ್ ಕ್ರಮೇಣ ಕಣ್ಮರೆಯಾಯಿತು ಮತ್ತು ಹೊಸ ಹೋಟೆಲ್ ಪಟ್ಟಣದಲ್ಲಿ ಏಳಿಗೆ ಹೊಂದಲು ಪ್ರಾರಂಭಿಸಿದವು , ಮತ್ತು ಕಡಿಮೆ ರಾಜ್ ಗೃಹವಿರಹ ಪ್ರಯಾಣಿಕರು ತಂಗುತ್ತಿದ್ದರು, 1960 ನಂತರ ಅದೃಷ್ಟ ನಶಿಸಿ ಹೋಗಿತ್ತು. ಇದರ ಅದೃಷ್ಟ 2000 ನಂತರ ಪುನಶ್ಚೇತನ ಕಂಡಿತು ಮತ್ತು 2009 ರಲ್ಲಿ ಐಟಿಸಿ ವೆಲ್ಕಮ್ ಗ್ರೂಪ್ ಖರೀದಿಸಿತು [೪]

ಇತಿಹಾಸ[ಬದಲಾಯಿಸಿ]

ಇದು ಮಸ್ಸೂರಿಯಲ್ಲಿ ತೆರೆಯಲಾದ ಮೊದಲ ಹೋಟೆಲ್ 1838 ರಲ್ಲಿ ನಿರ್ಮಿಸಲಾಯಿತು. "ಒಂದು ದೊಡ್ಡ ಹೋಟೆಲ್ ಇಲ್ಲಿ ಬೆಟ್ಟದ ಮೇಲೆ ನಿರ್ಮಿಸಲಾಗಿದೆ, ಮತ್ತು ಸ್ಲೇಟ್ ಬಿಲಿಯರ್ಡ್ ಟೇಬಲ್ಗಳನ್ನೂ ಹೊಂದಿದೆ (ಫ್ಯಾನಿ ಈಡನ್ ಗವರ್ನರ್ ಜನರಲ್ ಲಾರ್ಡ್ ಆಕ್ಲೆಂಡ್ ಅವರ ಸಹೋದರಿ ಮಾರ್ಚ್ 17 1838 ರ ತಮ್ಮ ಜರ್ನಲ್ನಲ್ಲಿ ಹೀಗೆ ಬರೆಯುತ್ತಾರೆ . ಇಲ್ಲಿರುವ ಪರ್ವತಗಳ ಚಿತ್ರ ವನ್ನು ಬರೆಯಲು ಪ್ರಯತ್ನ ಮಾಡುವುದು ಈ ಪುಸ್ತಕದಲ್ಲಿ ಅಸಾಧ್ಯ ಆದರೆ ನಾವು ಎಲ್ಲಿ ಇದ್ದೇವೆಂದು ನೀವು ನೋಡಿದರೆ ಮತ್ತು ನಾವು ಎನನ್ನು ನೋಡುತ್ತಿದ್ದೇವೆ ಇಲ್ಲಿಂದ ಎಂದು ತಿಳಿದರೆ ನೀವು ಆಶ್ಚರ್ಯಚಕಿತರಾಗುತ್ತಿರಿ ಹೇಗೆ ಹೋಟೆಲ್ಗಳು ಮತ್ತು ಸ್ಲೇಟ್ ಬಿಲಿಯರ್ಡ್ಸ್ ಮೇಜುಗಳನ್ನು ಇಲ್ಲಿವರೆಗೂ ತರಲಾಗಿದೆ ಎಂದು. ಇಲ್ಲಿರುವ ಎಲ್ಲಾ ವಸ್ತುಗಳನ್ನು ಸಮತಟ್ಟು ನೆಲಗಳಿಂದ ಇಲ್ಲಿಗೆ ತರಲಾಗಿದೆ" . "ಹುಲಿಗಳು, ದರ್ಬಾರ್ಗಳು ಮತ್ತು ರಾಜರು"; ಫ್ಯಾನಿ ಈಡನ್ಸ್ ಭಾರತೀಯ ಜರ್ನಲ್ಸ್ ಜಾನೆಟ್ ಡನ್ಬಾರ್, ಜಾನ್ ಮುರ್ರೆ, ಲಂಡನ್ 1988) ಲಿಪ್ಯಂತರ ಮತ್ತು ಸಂಪಾದಕರಾಗಿ ಕೆಲಸ ಮಾಡಿದ ಪುಸ್ತಕದಿಂದ ತೆಗೆದುಕೊಳ್ಳಲಾಗಿದೆ. "ಚಾರ್ಲ್ಸ್ ವಿಲ್ಲೆ" ಹೋಟೆಲ್ 1861 ರಲ್ಲಿ ನಿರ್ಮಿಸಲಾಯಿತು ಸೆಸಿಲ್ ಡಿ ಲಿಂಕನ್, ಲಕ್ನೋ ಮೂಲದ ಒಬ್ಬರು ಐರಿಷ್ ವಕೀಲರು , "ರೆವರೆಂಡ್ ಮ್ಯಾಡ್ಡಾಕ್ ನ ಮಸ್ಸೂರಿ ಸ್ಕೂಲ್" ಎಸ್ಟೇಟ್ ಅನ್ನು 1895 ಆಸುಪಾಸಿನಲ್ಲಿ ಸ್ವಾಧೀನಪಡಿಸಿಕೊಂಡರು. ಅವರು ಸವಾಯ್ ನೆಲಕ್ಕೆ ಶಾಲೆಯನ್ನು ನೆಲಕ್ಕೆ ಕೆಡುವಿದ ನಂತರ, ಮುಂದಿನ ಐದು ವರ್ಷಗಳಲ್ಲಿ ನಿರ್ಮಿಸಿದರು. ಕಾರಣ ದೆಹ್ರಾದೂನ್ ರಸ್ತೆ ಸಿದ್ಧ ಇನ್ನೂ ಆಗಿರಲಿಲ್ಲವಾದ್ದರಿಂದ, ಎಡ್ವರ್ಡಿಯನ್ ಪೀಠೋಪಕರಣ, ಗ್ರ್ಯಾಂಡ್ ಪಿಯಾನೊಗಳು, ಬಿಲಿಯರ್ಡ್-ಕೋಷ್ಟಕಗಳು, ಸೈಡರ್ ಬ್ಯಾರೆಲ್, ಷಾಂಪೇನ್ ಮತ್ತು ಇತರ ವಸ್ತುಗಳ ಕ್ರೇಟುಗಳು ಎಲ್ಲಾ ಎತ್ತಿನ ಗಾಡಿಯ ಮೂಲಕ ಹೊತ್ತು ನಡೆದವು ಇಷ್ಟಲ್ಲದೆ ಬೃಹತ್ ಪ್ರಮಾಣದ ಓಕ್ ಮರದ ತುಣುಕುಗಳನ್ನು ಒಳಗೊಂಡ ಮುಂದೆ ತನ್ನ ಗಾತ್ರಕ್ಕೆ ಹೆಸರುವಾಸಿಯಾದ ಈ ಹೋಟೆಲ್ನ ಭೋಜನ ಕೋಣೆಯ ಟೇಬಲ್ ಸಹ ಒಳಗೊಂಡಿತ್ತು ಮತ್ತು ಅದನ್ನು ನಂತರ ಒಟ್ಟುಗೂಡಿಸಿ ಟೇಬಲ್ ಮಾಡಲಾಯಿತು.

ಸವಾಯ್ 1902 ರ ಬೇಸಿಗೆಯಲ್ಲಿ ತೆರೆಯಲಾಯಿತು ಮತ್ತು ಶಿಮ್ಲಾನಲ್ಲಿನ ಸೆಸಿಲ್ ಮತ್ತು ಲಕ್ನೋದಲ್ಲಿನ ಕಾರ್ಲ್ಟನ್ ಹೋಟೆಲ್ಗಳನ್ನು ಪ್ರತಿಸ್ಪರ್ಧಿಸಿತು. ಇದು ಶೀಘ್ರದಲ್ಲೇ ಶಿಮ್ಲಾ, ಬೇಸಿಗೆ ರಾಜಧಾನಿಯ ಬಲವಾದ ಅಧಿಕೃತ ಪರಿಸರ ತಪ್ಪಿಸಲು ನೌಕರರು ಮತ್ತು ಮಿಲಿಟರಿ ಅಧಿಕಾರಿಗಳು ಮತ್ತು ಬ್ರಿಟಿಷ್ ರಾಜ್ನ ಮೇಲಿನ ಅಧಿಕಾರಿಗಳ ನಡುವೆ ಜನಪ್ರಿಯವಾಯಿತು. ಇದು ರಾಜ್ 'ಆನಂದ ರಾಜಧಾನಿ' ಆಯಿತು. ಮಾರ್ಚ್ 1906 ರಲ್ಲಿ ವೇಲ್ಸ್ ನ ರಾಣಿ (ನಂತರ ರಾಣಿ ಮೇರಿ) ಇಲ್ಲಿ ಉಳಿದರು ಮತ್ತು ಸವಾಯ್ನ ಒಂದು ಉದ್ಯಾನ ಕೂಟದಲ್ಲಿ ಕೂಡ ಸೇರಿದ್ದರು ಮಾತ್ತು ಆ ಸ್ಥಳವನ್ನು ಬಿಯರ್ ಗಾರ್ಡನ್ ಎಂದು ಕರೆಯಲಾಗುತ್ತದೆ. ಕೂಡಲೇ ತನ್ನ ನಿರ್ಗಮನದ ನಂತರ ನಗರವು ಭೂಕಂಪ ಎದುರಿಸಬೇಕಾಯಿತು, ಮತ್ತು ಅನೇಕ ಕಟ್ಟಡಗಲು ನೆಲಸಮ ಮಾಡಿತು, ಹೋಟೆಲ್ ಕೂಡ ಕೆಲವು ನಷ್ಟವನ್ನು ಅನುಭವಿಸಿತ್ತು ಮತ್ತು ರಿಪೇರಿ ನಂತರ 1907 ರಲ್ಲಿ ಪುನಃ ತೆರೆಯಿತಾದರು ತಾತ್ಕಾಲಿಕವಾಗಿ ಮುಚ್ಚಲಾಯಿತು. ವಿದ್ಯುತ್ ಶಕ್ತಿಯು 1909 ರಲ್ಲಿ ಮಸ್ಸೂರಿ ತಲುಪಿತು ಮತ್ತು ಹೋಟೆಲಿನ ಸವಲತ್ತುಗಳನ್ನು ಮತ್ತಷ್ಟು ಹೆಚ್ಚಿಸಿತು.

ಜುಲೈ 2009 ರಲ್ಲಿ ಭಾರತದ ಎರಡನೆಯ ದೊಡ್ಡ ಹೊಟೆಲ್ ಸರಣಿಯು, ITC ವೆಲ್ ಕಮ್ ಹೊಟೇಲ್, ಅರಮನೆಗಳು ಮತ್ತು ಹೊಟೇಲ್ ಕಂಟ್ರೋಲ್ ಪ್ರೈ ಲಿಮಿಟೆಡ್ನ ರೆಸಾರ್ಟ್ಸ್ ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆ ಫಾರ್ಚೂನ್ ಹೊಟೇಲ್, ಅದರ ಹಿಂದಿನ ಮಾಲೀಕರಿಂದ ವಶಪಡಿಸಿಕೊಂಡಿತು. ಪ್ರಸ್ತುತ ಹೋಟೆಲ್ ಪ್ರಸಿದ್ಧ ಇಂಟೀರಿಯರ್ ಡಿಸೈನರ್ ಫ್ಯಾಬ್ ಒಳಾಂಗಣ ಸರಬ್ಜಿತ್ ಸಿಂಗ್ ಮತ್ತು 50 ಕೊಠಡಿಗಳು ಮೂಲಕ ಪುನಃ ನಿರ್ಮಾಣ ಹಂತದಲ್ಲಿದೆ ರೈಟರ್ಸ್ ಬಾರ್, ರೆಸ್ಟೋರೆಂಟ್ ಮತ್ತು ಔತಣದ ಸೌಲಭ್ಯಗಳನ್ನು ಕಲ್ಪಿಸಲು, 2010 ರ ಅಂತ್ಯದ ವೇಳೆಗೆ ಕಾರ್ಯಾಚರಣೆಯ ನಿರೀಕ್ಷಿಸಲಾಗಿದೆ.

ಉಲ್ಲೇಖಗಳು[ಬದಲಾಯಿಸಿ]

  1. "Los Angeles Times". Los Angeles Times. Retrieved October 28, 2016.
  2. "About Fortune The Savoy , Mussoorie". cleartrip.com. Retrieved October 28, 2016.
  3. "High living at the hill station". The Telegraph. Retrieved October 28, 2016.
  4. "High living at the hill station". The Guardian. Retrieved October 28, 2016.