ಸಲಾಲಾಹ್, ಒಮಾನ್

ವಿಕಿಪೀಡಿಯ ಇಂದ
Jump to navigation Jump to search
ಸಲಾಲಾಹ್ Salalah
صلالة
City
2000 ರ ಆರಂಭದಲ್ಲಿ ಸಲಾಲಾದಲ್ಲಿ ರಸ್ತೆ
2000 ರ ಆರಂಭದಲ್ಲಿ ಸಲಾಲಾದಲ್ಲಿ ರಸ್ತೆ
Countryಒಮಾನ್
ಮುಹಫಧಧೋಫಾರ್
ಸರ್ಕಾರ
 • ಶೈಲಿನಿರಂಕುಶ ರಾಜಪ್ರಭುತ್ವ
 • ಸುಲ್ತಾನ್ಕ್ಯುಬೊಸ್ ಬಿನ್ ಸೇಡ್
ಜನ ಸಂಖ್ಯೆ (2016)
 • ಮೆಟ್ರೋ೩,೪೦,೮೧೫
ಸಮಯ ವಲಯOman standard time (ಯುಟಿಸಿ+4)
ಜಾಲತಾಣwww.OMANet.om

'ಒಮಾನ್ ದೇಶ'ದ ಎರಡನೆಯ ದೊಡ್ಡ ಪಟ್ಟಣವೆಂದು ಹೆಸರಾದ 'ಸಲಾಲ್' (Salalah), Salalah (Arabic: صلالة; transliterated Şalālah‎), ದಕ್ಷಿಣದ ಒಮಾನಿ ಪ್ರಾಂತ್ಯದ 'ಧೊಫಾರ್' ನಲ್ಲಿ, ಗವರ್ನರ್ (ವಾಲಿ) ರವರ ಆವಾಸ ಸ್ಥಾನವಿದೆ. 'ಸಲಾಲ್,' ಗೆ ಬಂದವಲಸಿಗರು, 'ಕಡಲತಡಿ'ಗೆ ಬರವುದು ಸಹಜ. ಸನ್, ೨೦೦೯ ರಲ್ಲಿನ ಜನಸಂಖ್ಯೆ, ೧೯೭,೧೬೯ ಎಂದು ವರದಿಗಳು ತಿಳಿಸುತ್ತವೆ. ಇಲ್ಲಿ ಪ್ರವಾಸಿಗರಿಗೆ ಬೆಚ್ಚಿಬೀಳುವ ಮೈನವಿರೇಳುವ ಅನುಭವವನ್ನು ಮಾತ್ರ ಜೀವನದಲ್ಲಿ ಮರೆಯಲು ಸಾಧ್ಯವಾಗದ ಮಾತು. 'ಸಲಾಲ್ 'ನೋಡಲೆಂದೇ ಬರುವ ಪ್ರವಾಸಿಗರಿಗೇನೂ ಕಡಿಮೆಯಿಲ್ಲ. ’ಒಮಾನ್’ ನ ರಾಜಧಾನಿ 'ಮಸ್ಕಾಟ್ 'ನಿಂದ, ೧,೦೪೦ ಕಿ.ಮೀ ದೂರದಲ್ಲಿದೆ, ದೇಶದ ಎರಡನೆಯ ರಾಜಧಾನಿ ಎಂದನ್ನಿಸಿಕೊಳ್ಳುತ್ತಿರುವ 'ಸಲಾಲ್' ಪಟ್ಟಾಣ. ದಕ್ಷಿಣ ತುದಿಯಲ್ಲಿ ಪ್ರಾವಾಸಿ ತಾಣಗಳಿವೆ. ತೆಂಗು ಮತ್ತು ಬಾಳೆತೋಟಗಳು ಯಾತ್ರಿಕರನ್ನು ಸ್ವಾಗತಿಸುತ್ತವೆ. ಕಣ್ಣಿಗೆ ಕಾಣುವಷ್ಟು ದೂರ ಕಡಲ ತೀರವಿದೆ. ವರ್ಷದಲ್ಲಿ ೨ ತಿಂಗಳು ಇಲ್ಲಿ ಮಳೆ. ಕೊಲ್ಲಿ ರಾಜ್ಯಗಳಲ್ಲಿ 'ಸಲಾಲ್' ಎದ್ದು ಕಾಣಿಸುತ್ತದೆ. ಇಲ್ಲಿನ ಅತ್ಯಾಕರ್ಷಣೆಯ ಕೇಂದ್ರವೆಂದರೆ, 'ಮೊಗ್ ಸೇಲ್ ನಲ್ಲಿರುವ ಕಡಲ ತೀರ', (Al Mughsayl), ಸಲಾಲ್ ನಿಂದ ಸುಮಾರು, ೪೦ ಕಿ.ಮೀ.ದೂರದಲ್ಲಿದೆ.

ನೈಸರ್ಗಿಕ ಕಾರಂಜಿಗಳು[ಬದಲಾಯಿಸಿ]

ಪರ್ಯಟಕರಿಗೆ ಮುದನೀಡುವ ನೈಸರ್ಗಿಕ ಕಾರಂಜಿಗಳು, 'ಮೊಗ್ ಸೇಲ್ ನ, ಸಮುದ್ರ ಕಿನಾರ'ದಲ್ಲಿವೆ. ಇಲ್ಲಿ, ಸಮುದ್ರ ತಟದಲ್ಲೇ ಭಾರಿ ಬಂಡೆಗಳ ಸಮೂಹದ ಬೆಟ್ಟಗಳಿವೆ. ಬೆಟ್ಟದ ಕಲ್ಲಿನಲ್ಲಿ ಸಮುದ್ರದ ಭಾರಿ ಬಲಯುತ ಅಲೆಗಳಿಂದ ಪೊಟರೆಗಳಾಗಿದ್ದು, ಅದರೊಳಗೆ ನೀರು ಭರದಿಂದ ನುಗ್ಗುತ್ತದೆ. ಭರಸದಿಂದ ಒತ್ತರಿಸಿಕೊಂಡು ನುಗ್ಗಿಬಂದು, ಆ ದೈತ್ಯಾಕಾರದ ಅಲೆಗಳು, ಗುಡ್ಡದಲ್ಲಿರುವ ಭಾರಿ ಪ್ರಮಾಣದ ರಂದ್ರಗಳ ಒಳಗೆ ತೂರಿ ಮತ್ತೆ ರಭಸದಿಂದ ಹೊರಬರುವ ದೃಷ್ಯ ರಮ್ಯವಾಗಿರುತ್ತದೆ. ಅದರ ಜೊತೆಗೆ ಅಲೆಗಳು ಮಾಡುವ 'ಸಿಂಹ-ಗರ್ಜನೆಯ ಆಟಾಟೋಪ', ನಿಜಕ್ಕೂ ಮುದಕೊಡುವಂತಹದು. ಅಲ್ಲಿ ಬದಿಯಲ್ಲಿ ಕೆಲವು ನೈಸರ್ಗಿಕ ಕಾರಂಜಿಗಳು ತಾವಾಗಿಯೇ ಮೇಲೆಕ್ಕೇಳುವ ದೃಷ್ಯ ನಯನ ಮನೋಹರವಾಗಿರುತ್ತದೆ. ಬೀಚಿನಲ್ಲಿನ ನೆಲ, ಅದುರುತ್ತಿದೆಯೇನೋ ಎಂದನ್ನಿಸುವ ಹಾಗೂ ಅಲೆಗಳ ಮೊರೆತದ 'ಸಿಂಹ ಗರ್ಜನೆ' ಕಿವಿ ಕಿವಿಡಾಗಿಸುತ್ತದೆ.

ಗುಡ್ಡದ ಕೆಳಗಿನ ರಮ್ಯ ದೃಷ್ಯ[ಬದಲಾಯಿಸಿ]

ಕಲ್ಲಿನ ಗುಡ್ಡದ ಕೆಳಗೆ ಕಣ್ಣು ಹಾಯಿಸಿದರೆ, ಕಡಲ ಭೋರ್ಗರೆಯುವ ಸಿಂಹ ಗರ್ಜನೆಯ ಅಲೆಗಳು ಬೆಟ್ಟದ ಬುಡಕ್ಕೆ ಅಪ್ಪಳಿಸಿ ಸ್ವಲ್ಪ ಸಮಯದಲ್ಲಿ ವಾಪಸ್ ವೇಗವಾಗಿ ಸಮುದ್ರದೆಡೆಗೆ ಧಾವಿಸುವ ನೊರೆನೊರೆ ಅಲೆಗಳು ಕಣ್ಣಿಗೆ ಹಬ್ಬವನ್ನು ಸೃಷ್ಟಿಸುತ್ತವೆ. ನೀರಿನೊಳಗೆ ಅಲ್ಲಿನ ಪ್ರದೇಶದ ವಿಶೇಷ ಬಗೆಯ ತೊರ್ಕೆ ಮೀನುಗಳನ್ನು ಕಾಣಬಹುದು. ಮೇಲಿನಿಂದ ಕೆಳಗೆ ಕಣ್ಣುಹಾಯಿಸಿ ಸಮುದ್ರದ ಒಳಮೈಯನ್ನು ಕಾಣುವುದು ಒಂದು ಪ್ರಾಕೃತಿಕ ವೈಭವ. ವಿಶೇಷ ಆಕರ್ಶಣೆ. ಅನಾದಿಕಾಲದಿಂದ ಅಲ್ಲಿಯೇ ನಿಂತಿರಬಹುದಾದ ಬೆಟ್ಟ ಸಮುದ್ರದ ಸೆಳೆತಕ್ಕೆ ಎಲ್ಲಿ ಕಳಚಿಕೊಂಡು ಪುಡಿಪುಡಿಯಾಗಿ ಬೀಳುವುದೋ ಯೆಂದು ಶಂಕೆಗೆ ಆಸ್ಪದವೀಯುತ್ತಿರುವ ಏಕಶಿಲಾ ಸುಣ್ಣಕಲ್ಲಿನ ಬೆಟ್ಟ. ಬೆಟ್ಟವನ್ನು ಹಲವು ಕಡೆಗಳಿಂದ ವೀಕ್ಷಿಸಬಹುದು. ಒಂದೊಂದು ಕಡೆಯಿಂದ ನೋಡಿದಾಗ ಒಂದೊಂದುಬಗೆಯಲ್ಲಿ ಕಾಣಿಸುವ ಅನುಭವನ್ನು, ಪರ್ಯಟಕರು, ತಮ್ಮ ಕ್ಯಾಮರಾಕಣ್ಣಿನಲ್ಲಿ ಕ್ಲಿಕ್ಕಿಸಿ, ಸವಿಯುತ್ತಾರೆ.

ಕಾರಂಜಿಗಳ ಜೊತೆಯಾಟದ ಅಪೂರ್ವ ಅನುಭವ[ಬದಲಾಯಿಸಿ]

ದೈತ್ಯಾಕಾರದ 'ನೈಸರ್ಗಿಕ ಕಾರಂಜಿ'ಗಳ ಬದಿಯಲ್ಲಿ ನಿಂತು, ಬಗ್ಗಿ, ಎದ್ದು ,ಕುಳಿತು, ನಿಂತು, ಅದರ ಬಿರುಸಿನ ವೇಗದ ಮೇಲಕ್ಕೇಳುವ ದೃಷ್ಯವನ್ನು ಅನುಭವಿಸುವ ಸಂಭ್ರಮವನ್ನು ನೋಡಿಯೇ ಮನಗಾಣಬೇಕು. ಸ್ವಲ್ಪ ಸಮಯ, ಮೀನುಹಿಡಿಯಲು ಗಾಳವನ್ನು ಬೀಸಿ, ಅವುಗಳನ್ನು ಹಿಡಿದು ಬುಟ್ಟಿಯಲ್ಲಿ ತುಂಬಿಡುವ, ಅನುಭವವನ್ನೂ ಸವಿಯಬಹುದು. ಬೀಚ್ ನಲ್ಲಿ ಸ್ನಾನ ಬಿಸಿಲು ಕಾಯಿಸಿಕೊಳ್ಳುವುದು ಪಾಶ್ಚಿಮಾತ್ಯಜನರಿಗೆ ಮೋಜಿನ ಸಂಗತಿ.ಅಲ್ಲಿಯೇ ಸ್ಥಾಪಿಸಿರುವ ರೆಸ್ಟೊರೆಂಟ್ ಗಳಲ್ಲಿ ತಿಂದು ಕುಡಿದು ಬಾಯಾರಿಕೆ ದಣಿವುಗಳನ್ನು ನಿವಾರಿಸಿಕೊಳ್ಳಬಹುದು. ಒಮಾನಿಗಳು ಅಲ್ಲಿನ ಸಮುದ್ರದಂಡೆಯಮೇಲೆ ಕಾಲ್ಚೆಂಡಾಟವನ್ನು ಆಡಲು ಬಯಸುತ್ತಾರೆ. ಪಿಕ್ ನಿಕ್ ತರಹ ಬೆಳಿಗ್ಯೆ ಬಂದು ಸಮುದ್ರದಜೊತೆ ಆಟಾವಾಡಿ ಸಾಯಂಕಾಲ ಮನೆಗೆ ತೆರೆಳುತ್ತಾರೆ.

'ಮೀನುಹಿಡಿಯುವವರಿಗೆ ನಿರ್ಮಿಸಿದ ಆವಾಸ ಸ್ಥಾನ'[ಬದಲಾಯಿಸಿ]

ಅಲ್ಲಿನ 'ಒಮಾನ್ ಸರಕಾರ', ಮೀನುಹಿಡಿಯುವವರಿಗೆ ಪುಟ್ಟ ಮನೆಗಳನ್ನು ನಿರ್ಮಿಸಿಕೊಟ್ಟಿದೆ. ಅವೆಲ್ಲಾ ಅಲ್ಲಿನ ಪರಿಸರಕ್ಕೆ ಸರಿಯೆನ್ನಿಸಬಹುದು. ಬೇರೆಯವರಿಗೆ ಅವು ವಿಸ್ಮಯವನ್ನು ಸೂಚಿಸುತ್ತವೆ. ಸಮುದ್ರದಂಡೆಯಲ್ಲಿ ಸೂಚನಾಫಲಕಗಳು ಎಲ್ಲಾಕಡೆಯಲ್ಲಿರುವಂತೆ ಇಲ್ಲೂ ಇವೆ. ಆದರೆ ಅವು ನಮ್ಮನ್ನು ಯೋಚನೆಗೆ ಈಡುಮಾಡುತ್ತವೆ.' ನೀವು ಬಂದುದಕ್ಕೆ ಯಾವ ಕುರುಹನ್ನೂ ಬಿಟ್ಟು ಹೋಗಬೇಡಿ ; ನೆನಪುಗಳನ್ನು ಮಾತ್ರ ಒಯ್ಯಿರಿ', ಎನ್ನುವ ಬಿನ್ನಹದ ಒಕ್ಕಣಿಕೆ, ಬಹಳ ಅರ್ಥ ಗರ್ಭಿತವಾಗಿದೆ.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

ಗ್ಯಾಲರಿ[ಬದಲಾಯಿಸಿ]