ವಿಷಯಕ್ಕೆ ಹೋಗು

ಸರ್ ರಿಚರ್ಡ್ ಆರ್ಕ್‍ರೈಟ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸರ್ ರಿಚರ್ಡ್ ಆರ್ಕ್‍ರೈಟ್
Born(೧೭೩೨-೧೨-೨೩)೨೩ ಡಿಸೆಂಬರ್ ೧೭೩೨
Died3 August 1792(1792-08-03) (aged 59)
TitleSir Richard Arkwright
Spouse(s)Patience Holt, Margaret Biggins
ChildrenRichard Arkwright junior, Susanna Arkwright

ಸರ್ ರಿಚರ್ಡ್ ಆರ್ಕ್‍ರೈಟ್(23 ಡಿಸೆಂಬರ್ 1732–3 ಆಗಸ್ಟ್ 1792) ಇಂಗ್ಲೆಂಡಿನ ತಂತ್ರಜ್ಞ, ಯಂತ್ರ-ಸಂಶೋಧಕ. ೧೩ ಮಕ್ಕಳಲ್ಲಿ ಈತನೇ ಕಿರಿಯವ. ಚಿಕ್ಕ ವಯಸ್ಸಿನಲ್ಲಿ ಕ್ಷೌರಿಕ ವೃತ್ತಿಯನ್ನು ಈತನಿಗೆ ಕಲಿಸಿತಾದರೂ ತನ್ನ ೩೫ ನೆಯ ವಯಸ್ಸಿನಲ್ಲಿ ಇದನ್ನು ತೊರೆದು ನೂಲುವ ಕೆಲಸದಲ್ಲಿ ತನ್ನ ಆಸಕ್ತಿಯನ್ನು ತೋರಿದ. ನೇಯುವ ಚೌಕಟ್ಟನ್ನು ಕಂಡುಹಿಡಿದು (೧೭೬೯), ಹಾರ್ ಗ್ರೀವ್ಸ್ ನ ನೇಯುವ ಯಂತ್ರವನ್ನು ಅಭಿವೃದ್ಧಿಗೊಳಿಸಿದ. ಇದರಿಂದಾಗಿ ಒಂದೇ ಸಲಕ್ಕೆ ಅಧಿಕ ಸಂಖ್ಯೆಯ ದಾರದ ಎಳೆಗಳನ್ನು ಉಪಯೋಗಿಸುವುದು ಸಾಧ್ಯವಾಯಿತು. ಈ ನೇಯುವ ಯಂತ್ರದ ವಿರುದ್ಧ ಆದ ಇತರ ನೇಕಾರರ ಅಸಹಕಾರ, ಮೊದಲಾದ ಗೊಂದಲಗಳಿಂದಾಗಿ, ಈತ ಲಂಕಾಶೈರ್ ತ್ಯಜಿಸಿ ನಾಟಿಂಗ್ಹ್ಯಾಂಗೆ ಬಂದು ಸೇರಿದ. ಈತ ರಚಿಸಿದ ಈ ಯಂತ್ರದ ಬಳಕೆಯ ಬಗ್ಗೆ ಅನೇಕ ತೊಂದರೆಗಳನ್ನು ಅನುಭವಿಸಿ, ತಯಾರಿಕಾ ಸ್ವಾಮ್ಯದ ಬಗ್ಗೆ ಹಲವಾರು ಮೊಕದ್ದಮೆಗಳನ್ನೆದುರಿಸಿಯೂ, ಶ್ರೀಮಂತನಾಗಿ ಬಾಳಿದ.

'೧೭೭೫ ರಲ್ಲಿ ಆರ್ಕ್‍ರೈಟ್ ಕಂಡು ಹಿಡಿದ ಯಂತ್ರ'

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]