ಸರ್ ಥಾಮಸ್ ವ್ಯಾಟ್
ಸರ್ ಥಾಮಸ್ ವ್ಯಾಟ್ | |
---|---|
ಜನನ | Thomas Wyatt 1503 Allington Castle, Kent |
ಮರಣ | 11 October 1542 (ವಯಸ್ಸು ೩೮–೩೯) Clifton Maybank House, Dorset |
Resting place | Sherborne Abbey, Dorset |
ವೃತ್ತಿ | ಬ್ರಿಟಿಶ್ ರಾಯಭಾರಿ ಮತ್ತು ಕವಿ |
ಸಂಗಾತಿ | Elizabeth Brooke |
ಮಕ್ಕಳು | Sir Thomas Wyatt Henry Francis Edward |
ಪೋಷಕ(ರು) | Sir Henry Wyatt Anne Skinner |
ಸರ್ ಥಾಮಸ್ ವ್ಯಾಟ್ (೧೫೦೩-೧೫೪೨) ೧೬ನೇ ಶತಮಾನದ ಇಂಗ್ಲೀಶ್ ರಾಯಭಾರಿ ಮತ್ತು ಸಾಹಿತ್ಯಕ ಕವಿ.ಈತನು ಸಾನೆಟ್ ನ್ನು ಇಂಗ್ಲೀಶ್ ನಲ್ಲಿ ಪರಿಚಯ ಮಾಡಿದವನು.
ಬಾಲ್ಯ ಮತ್ತು ಜೀವನ
[ಬದಲಾಯಿಸಿ]ಈತನು ಆಲಿಂಗ್ಟನ್ ಕ್ಯಾಸ್ಟಲ್‍ನಲ್ಲಿ ಜನಿಸಿದನು.ಇವರ ಕುಟುಂಬವು ಮೂಲತಃ ಯಾರ್ಕ್‍ಶೈರ್‍ನವರು,ಈತನ ತಾಯಿ ಆನ್ನೆ ಸ್ಕಿನ್ನಾರ್ ಮತ್ತು ತಂದೆ ಹೆನ್ರಿ ವ್ಯಾಟ್, ಈತನು ೭ನೇ ಹೆನ್ರಿಯ ಕೌನ್ಸಿಲರ್ ಅಗಿದ್ದನು.ಹೆನ್ರಿ ವ್ಯಾಟ್ ೭ ನೇ ಹೆನ್ರಿಯ ನಂಬಿಕಸ್ಥ ಸಲಹೆಗಾರನಾಗಿ ೧೫೦೯ ರವರೆಗೆ ಸೇವೆ ಸಲ್ಲಿಸಿದ್ದನು.ಥಾಮಸ್ ವ್ಯಾಟ್ ಆಲಿಂಗ್ಟನ್,ಕೇಂಟ್ ನಲ್ಲಿ ೧೫೦೩ ರಲ್ಲಿ ಹುಟ್ಟಿದನು. ತಂದೆ ಹೆನ್ರಿ ವ್ಯಾಟ್ ಹಾಗು ತಾಯಿ ಆನ್ನೆ ಸ್ಕಿನ್ನರ್ ದಂಪತಿಯ ಮಗನಾಗಿ ಜನಿಸಿದನು.ಈತನಿಗೆ ಒಬ್ಬ ತಂಗಿ ಹಾಗೂ ಒಬ್ಬ ತಮ್ಮನು ಇದ್ದರು.ಥಾಮಸ್ ವ್ಯಾಟ್ ರವರು ೬ ಅಡಿ ಎತ್ತರವಾಗಿದ್ದರು,ಹಾಗಯೇ ಸುಂದರವಾಗಿಯೂ ಹಾಗೂ ಬಲಶಾಲಿಯಾಗಿದ್ದನು.ಥಾಮಸ್ ವ್ಯಾಟ್ ಮೊದಲೆನಯದಾಗಿ ಹೆನ್ರಿ ಯ ಹತ್ತಿರ ೧೫೧೫ರಲ್ಲಿ ಸ್ವೀರ್ ಎಕ್ಸ್ತ್ರಾಡಿನರಿ ಯಾಗಿ ಸೇವೆ ಸಲ್ಲಿಸಿದನು.ಅದೇ ಇಸವಿಯಲ್ಲಿ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಕೆಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಅದ್ಯಯನ ಪ್ರಾರಂಬಿಸಿದರು.ಥಾಮಸ್ ವ್ಯಾಟ್ ತನ್ನ ಶಿಕ್ಸಣವವನ್ನು ಸೇಂಟ್ ಜೋಸೆಫ್ ಕಾಲೇಜು ಕೇಂಬ್ರಿಡ್ಜ್ ನಲ್ಲಿ ಮುಗಿಸಿದ ನಂತರ ತಂದೆಯ ದಾರಿಯನ್ನು ಪಾಲಿಸಿದನು.ಈತನ ಹಲವಾರು ಕಾವ್ಯಗಳು ಈತನು ಬದುಕಿದ್ದಾಗಲೇ ಪ್ರಕಟಣೆಗೊಂದವು ; ಆದರೆ ಈತನ ಪುಸ್ತಕವಾದ ಟೋಟೆಲ್ ಮಿಸ್ಸೆಸೆಲನಿ(೧೫೫೭)ಈತನು ಮರಣ ಹೊಂದಿದ ನಂತರ ಪ್ರಕಟವಾಯಿತು. ೧೯೨೦ ರಲ್ಲಿ ಥಾಮಸ್ದ್ ವ್ಯಾಟ್ ರವರು ಎಲಿಜೆಬೆಥ್ ಬ್ರೂಕ್ ರವರನ್ನು ವಿವಾಹವಾದರು.ಎಲಿಜಬೆಥ್ ಬ್ರೂಕ್ ರವರು ಥಾಮಸ್ ಬ್ರೂಕ್ ರವರ ಮಗಳು.ಒಂದು ವರುಶದ ನಂತರ ಒಂದು ಮಗುವನ್ನು ಪದೆದರು.ನಂತರ ಥಾಮಸ್ ವ್ಯಾಟ್ ತನ್ನ ತಂದೆಯ ಮರಣದ ನಂತರ ೮ನೇ ಹೆನ್ರಿಯು ರಾಯಬಾರಿಯನ್ನಾಗಿ ನೇಮಿಸಿಕೊಂಡನು.ಕೆಲವು ದಿನಗಳ ನಂತರ ಇಬ್ಬರು ವೈವಾಹಿಕ ಜೀವನದಿಂದ ಬೇರಾದರು.
ವ್ಯಾಟ್‍ನ ಕಾವ್ಯ ಮತ್ತು ಪ್ರಭಾವ
[ಬದಲಾಯಿಸಿ]ಥಾಮಸ್ ವ್ಯಾಟ್ ರವರ ಒಂದು ಪ್ರಮುಖವಾದ ಅಂಶವೆಂದರೆ ಯಾವುದಾದರೊಂದು ವಿಶಯವನ್ನು ಪ್ರಕಟಣೆಯನ್ನು ಇಂಗ್ಲೀಶ್ ಸಾಹಿತ್ಯದ ಮೂಲಕ ಬಹಿರಂಗಗೊಳಿಸುವುದು.ಎಕೆಂದರೆ ಅದರ ನಾಗರೀಕಥೆಯನ್ನು ತಿಳಿಸುವುದು ಇಂಗ್ಲೀಶ್ ಸಾಹಿತ್ಯದ ಮುಖ್ಯ ಉದ್ದೇಶವೆಂದು ವ್ಯಾಟ್ ತಿಳಿದಿದ್ದರು. ಥಾಮಸ್ ವ್ಯಾಟ್ ರವರು ಇಟಲಿಯ ಖ್ಯಾತ ಕವಿ ಪೆಟ್ರಾರ್ಕ್ ರವರಿಂದ ಪ್ರಭಾವಿತರಾಗಿದ್ದರು.ಥಾಮಸ್ ವ್ಯಾಟ್ ರವರು ಕೆಲವು ಭಾಶಾಂತರಗಳನ್ನು ಸಹ ಮಾಡಿದ್ದಾರೆ,ಈ ಭಾಶಾಂತರಗಳು ಪೆಟ್ರಾರ್ಕ್ ರವರ ಬರಹಗಳಂತೆ ಹೋಲುತ್ತವೆ.ವ್ಯಾಟ್ ರವರು ಹಲವರು ಸಾನೆಟ್ ಗಳನ್ನು ಸಹ ರಚಿಸಿದ್ದಾರೆ. ಥಾಮಸ್ ವ್ಯಾಟ್ ರವರು ರಚಿಸುವ ಸಾನೆಟ್ ಗಳು ಸಹ ಪೆಟ್ರಾರ್ಕ್ ರವರ ಸಾನೆಟ್ ನ ವಿಶಯಳಾಗಿವೆ.ಸರ್ ಥಾಮಸ್ ವ್ಯಾಟ್ ಬರೆದಿರುವಂತಹ ಸಾನೆಟ್ ಗಳು ಇಂಗ್ಲೀಶ್ ಸಾಹಿತ್ಯದ ಪ್ರಾರಂಬಿಕ ಹಂತದಲ್ಲಿ ತುಂಬಾ ಪ್ರಮುಖವಾಗಿ ಕಂಡು ಬರುತ್ತವೆ. ಸರ್ ಥಾಮಸ್ ವ್ಯಾಟ್ ರವರ ಮರಣದ ನಂತರ ಈತನ ಒಟ್ಟೂ ೯೭ ಸಾನೆಟ್ ಗಳನ್ನು ರಿಚರ್ಡ್ ಟೋಟೆಲ್ ರವರು ಟೋಟೆಲ್ ಮಿಸೆಲನಿ(೧೫೫೭) ಎನ್ನುವಂತಹ ಕೃತಿಯಲ್ಲಿ ಪ್ರಕಟಿಸಿದ್ದಾರೆ.
ಸರ್ ಥಾಮಸ್ ವ್ಯಾಟ್ ರವರ ಕವಿತೆಗಳು ಶಾಸ್ತ್ರೀಯ ಮತ್ತು ಇಟಾಲಿಯನ್ ಮಾದರಿಯನ್ನು ಹೋಲುತ್ತವೆ.ಇವರ ಹಲವಾರು ಕವಿತೆಗಳು ಚಾಸರ್ ನ ಕುರಿತಾಗಿಯೂ ಇರುವುದು ಕಂಡು ಬರುತ್ತವೆ.ಹಾಗೆಯೇ ಇವರ ಹಲವಾರು ಕವಿತೆಗಳು ಪ್ರಣಯ ಗೀತೆಗಳಾಗಿಯೂ ಕಂಡು ಬರುತ್ತವೆ.ಹಾಗೆಯೇ ಇವರು ಹಲವಾರು ವಿಡಂಬನಾತ್ಮಕ ಕವಿತೆಗಳನ್ನು ರಚಿಸಿದ್ದಾರೆ. ಸರ್ ಥಾಮಸ್ ವ್ಯಾಟ್ ರವರು ಪುನರುಜ್ಜೀವನ ಕಾಲದ ಒಬ್ಬ ಉತ್ತಮವಾದಂತಹ ಸಾಹಿತ್ಯಕ ಕವಿ.ಇವರು ಇಂಗ್ಲೀಶ್ ಸಾಹಿತ್ಯದಲ್ಲಿ ಆಗಿರುವಂತಹ ಹಲವಾರು ಸಂಶೊಧನೆಗಳಿಗೆ ಕಾರಣರಾಗಿದ್ದಾರೆ.ಸಾನೆಟ್ ಇಟಲಿಯಿಂದ ಇಂಗ್ಲೆಂಡ್ ಗೆ ಪರಿಚಯ ಮಾಡಿದ ಕೀರ್ತಿ ಸಹ ಸರ್ ಥಾಮಸ್ ವ್ಯಾಟ್ ರವರಿಗೆ ಸಲ್ಲುತ್ತದೆ.
ಥಾಮಸ್ ವ್ಯಾಟ್ ಮತ್ತು ಆನ್ನೆ ಬೊಯ್ಲಿನ್
[ಬದಲಾಯಿಸಿ]ಹಲವಾರು ಮಹಾನ್ ವ್ಯಕ್ತಿಗಳು,ದಂತಕತೆಗಳು ಅವರು ಯುವಕರಾಗಿದ್ದಾಗ ಬೆಳೆದಿದ್ದು ಕೆಲವು ಸಮಸ್ಯೆಗಳಿಂದ ಹಾಗೂ ವೈವಾಹಿಕ ಜೀವನದ ತೊಂದರೆಯಿಂದ ಹಾಗೂ ಪ್ರೀತಿಯ ಸಮಸ್ಯೆಯಿಂದ ಹಾಗೆಯೇ ವ್ಯಾಟ್ ಸಹ ಆನ್ನೆಯನ್ನು ಪ್ರೀತಿ ಮಾಡಿದನು (೧೫೨೦), ಪ್ರಣಯದಲ್ಲಿ ಹಲವಾರು ಸಮಯವನ್ನು ಕಳೆದರು,ಹದಿನೆಂಟನೆ ಶಥಮಾನದ ಚಿಂತಕ ಜಾರ್ಜ್ ಆನ್ನೆ ಮತ್ತು ವ್ಯಾಟ್ ಇಬ್ಬರೂ ಪ್ರೀತಿಯ ಸಂಬಂದ ಹೊಂದಿದ್ದರೆಂದು ಹೇಳಿದ್ದಾರೆ.ಹಾಗೆಯೇ ವ್ಯಾಟ್ ನ ಮೊಮ್ಮಗ ಜಾರ್ಜ್ ವ್ಯಾಟ್ ನ ಪ್ರಕಾರ ಆನ್ನೆ ಮತ್ತು ವ್ಯಾಟ್ ಸಂಬಂದ ಹೊಂದಿದ್ದರೆಂದು ತಿಳಿಸುತ್ತಾರೆ(೧೫೨೨),ಆದರೆ ೮ನೇ ಹೆನ್ರಿಯು ಆನ್ನೆಯ ಮೇಲೆ ಮೋಹಿತನಾಗಿ ೧೫೨೫ರಲ್ಲಿ ಅವಳನ್ನು ವಿವಾಹವಾಗುತ್ತನೆ.ವ್ಯಾಟ್ ಅವಳಿಗೆ ಹೊಂದುವ ಒಬ್ಬ ವ್ಯಕ್ತಿಯಗಿದ್ದ ಎಂದು ಅವರು ಹೆಳುತ್ತಾರೆ.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Sir Thomas Wyatt Find A Grave
- Life and works
- Modern English translation of "Whoso List to Hunt"
- ಟೆಂಪ್ಲೇಟು:Npg name
- WYATT, Sir Thomas I (by 1504–42), of Allington Castle, Kent. History of Parliament Online