ಸರ್ ಗಿಲ್ ಬರ್ಟ್ ಸ್ಕಾಟ್

ವಿಕಿಪೀಡಿಯ ಇಂದ
Jump to navigation Jump to search
ಮುಂಬಯಿ ವಿಶ್ವವಿದ್ಯಾಲಯ ಕಟ್ಟಡ

'ಸರ್ ಗಿಲ್ ಬರ್ಟ್ ಸ್ಕಾಟ್ ', ಒಬ್ಬ ಬ್ರಿಟಿಷ್ ವಾಸ್ತುಶಿಲ್ಪಿಯಾಗಿದ್ದರು. ಅವರು ದಕ್ಷಿಣ ಮುಂಬಯಿನಗರದ ಕೋಟೆಪ್ರದೇಶದಲ್ಲಿ ನಿರ್ಮಿಸಿದ ಗಾಥಿಕ್ ಶೈಲಿಯ ಕಟ್ಟಡಗಳು ಬಹಳ ಮಹತ್ವದ ಸ್ಥಾನವನ್ನು ಗಳಿಸಿವೆ. ವಿಶ್ವದ ಮಹಾನ್ ಕಟ್ಟಡ ನಿರ್ಮಾಪಕರಲ್ಲಿ ಅವರೂ ಒಬ್ಬರು;

ಜನನ, ವೃತ್ತಿಜೀವನ[ಬದಲಾಯಿಸಿ]

'ಸರ್ ಗಿಲ್ ಬರ್ಟ್ ಸ್ಕಾಟ್ ' ಹುಟ್ಟಿದ್ದು : ಜುಲೈ ೧೩, ೧೮೧೧, ಗಕಾಟ್ , ಬಕಿಂಗ್ ಹ್ಯಾಮ್ ಶೈರ್, ಇಂಗ್ಲೆಂಡ್.ಮರಣ : ಮಾರ್ಚ್ ೨೭, ೧೮೭೮, ಲಂಡನ್, ಇಂಗ್ಲೆಂಡ್.

ಮುಂಬಯಿನಗರದ ಗಾಥಿಕ್ ಶೈಲಿಯ ಕಟ್ಟಡಗಳು[ಬದಲಾಯಿಸಿ]

ಸರ್ ಗಿಲ್ ಬರ್ಟ್ ಸ್ಕಾಟ್ ರವರು, ವಿಕ್ಟೋರಿಯನ್ ಶಿಲ್ಪಶಾಸ್ತ್ರದಲ್ಲಿನ ಗೊಥಿಕ್ ಶೈಲಿಯ ಪುನರ್ ನಿರ್ಮಾಣಮಾಡುವ ದಿಶೆಯಲ್ಲಿ ಕೆಲಸಮಾಡಿದವರಲ್ಲಿ, ಅಗ್ರಗಣ್ಯರು. ಆಗಿನ ಬೊಂಬಾಯಿನ ಪ್ರಖ್ಯಾತ ಕಟ್ಟಡಗಳಲ್ಲಿ ಅತ್ಯಂತ ಜನಪ್ರಿಯವಾಗಿದ್ದ, ಹಾಗೂ ಇಂದಿಗೂ ಜನರು ಹುಬ್ಬೇರಿಸಿ ಬೆರಗಾಗಿ ವೀಕ್ಷಿಸುವ, 'ಮುಂಬಯಿ ವಿಶ್ವವಿದ್ಯಾನಿಲಯ' ದ, ಭವ್ಯ ಕಟ್ಟಡವನ್ನು ನಿರ್ಮಿಸುವಲ್ಲಿ ತಮ್ಮ ಅಮೋಘ ಕೊಡುಗೆಯನ್ನು ಕೊಟ್ಟಿದ್ದಾರೆ. ಈ ಸುಂದರ ಕಟ್ಟಡ, ಮುಂಬಯಿ ನ ಕೋಟೆ ಪ್ರದೇಶದಲ್ಲಿದೆ.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]