ಸರ್ಕಾರಿ ಇಂಜಿನಿಯರಿಂಗ್ ಕಾಲೇಜು, ಕಾರವಾರ
ಸರ್ಕಾರಿ ತಾಂತ್ರಿಕ ಮಹಾವಿದ್ಯಾಲಯ, ಕಾರವಾರ | |
---|---|
ವಿದ್ಯಾರ್ಥಿಗಳ ಸಂಖ್ಯೆ | ೨೦೦೦ |
ಪದವಿ ಶಿಕ್ಷಣ | ೭೪೦ |
ಸ್ನಾತಕೋತ್ತರ ಶಿಕ್ಷಣ | ೧೨೦ |
ಸರ್ಕಾರಿ ತಾಂತ್ರಿಕ ಮಹಾವಿದ್ಯಾಲಯ[೧] ವು ೨೦೧೦ರಲ್ಲಿ ಸ್ಥಾಪಿತವಾಗಿದ್ದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ ದಿಂದ ಮಾನ್ಯತೆ ಹೊಂದಿದೆ. ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ನವದೆಹಲಿ)ಯು ಮಾನ್ಯತೆ ನೀಡಿದೆ .ಅದರಂತೆ ರಾಷ್ಟ್ರೀಯ ಮಾನ್ಯತಾ ಮಂಡಳಿಯು ಕೊಡ ಮಾನ್ಯತೆ ನೀಡಿದೆ.
ವಿಭಾಗಗಳು
[ಬದಲಾಯಿಸಿ]ಪದವಿ ವಿಭಾಗಗಳು
- ಸಿವಿಲ್ ಎಂಜಿನಿಯರಿಂಗ್
- ಗಣಕಯಂತ್ರ ವಿಜ್ಞಾನ ಎಂಜಿನಿಯರಿಂಗ್
- ವಿದ್ಯುತ್ ಮತ್ತು ವಿದುನ್ಮಾನ ಎಂಜಿನಿಯರಿಂಗ್
- ವಿದ್ಯುನ್ಮಾನ ಮತ್ತು ಸಂವಹನ ಎಂಜಿನಿಯರಿಂಗ್
- ಯಾಂತ್ರಿಕ ಎಂಜಿನಿಯರಿಂಗ್
ಆವರಣ
[ಬದಲಾಯಿಸಿ]ಮಹಾವಿದ್ಯಾಲಯವು ವಿಶಾಲವಾದ ಆವರಣ ಹೊಂದಿದೆ. ಆವರಣದಲ್ಲಿ ಕ್ರಿಕೇಟ್, ಟೆನ್ನಿಸ್, ಕಾಲ್ಚಂಡು, ಒಳಾಂಗಣ ಮೈದಾನ ಇದೆ.
ಗ್ರಂಥಾಲಯ
[ಬದಲಾಯಿಸಿ]ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರವು ಅತ್ಯುನ್ನತ ಡಿಜಿಟಲ್ ಗ್ರಂಥಾಲಯ ಮತ್ತು ಸಾವಿರಾರು ಎಲ್ಲ ವಿಭಾಗದ ಪುಸ್ತಕಗಳನ್ನು ಹೊಂದಿದೆ. ವೈಜ್ಞಾನಿಕ ಹಾಗೂ ತಾಂತ್ರಿಕ ದೈನಿಕ, ವಾರಪತ್ರಿಕೆ ಮತ್ತು ಮಾಸಪತ್ರಿಕೆಗಳು ಉಂಟು. ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ನಿಯತಕಾಲಿಕಗಳು ಸಿಗುತ್ತವೆ.
ಪ್ರವೇಶ
[ಬದಲಾಯಿಸಿ]ದ್ವಿತೀಯ ಪಿಯುಸಿ (೧೦+೨) ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಪ್ರವೇಶವಿದೆ. ಅದರಂತೆ ಬಿ.ಎಸ್ಸಿ , ಡಿಪ್ಲೊಮಾ, ಜಿಟಿಟಿಸಿ, ಸಿಬಿಎಸ್ಸಿ (೧೦+೨) ಮತ್ತು ಐಸಿಎಸ್ಸಿ (೧೦+೨) ವಿದ್ಯಾರ್ಥಿಗಳಿಗೂ ಪ್ರವೇಶವಿದೆ.
- ಅಂಗವಿಕಲರ ವಿದ್ಯಾರ್ಥಿವೇತನ
ವಿದ್ಯಾರ್ಥಿನಿಲಯಗಳು
[ಬದಲಾಯಿಸಿ]- ವಿದ್ಯಾರ್ಥಿನಿಲಯ
- ವಿದ್ಯಾರ್ಥಿನಿಯರ ಹಾಸ್ಟೆಲ್
ಜೀವನ ಮಾರ್ಗದರ್ಶನ ಕೇಂದ್ರ
[ಬದಲಾಯಿಸಿ]ಟಿ ಸಿ ಎಸ್ (ಟಾಟಾ ಕನ್ಸಲ್ಟನ್ಸಿ ಸರ್ವಿಸಸ್), ಮೈಂಡ್ ಟ್ರೀ, ಐ ಗೇಟ್, ಎಂಪಾಸಿಸ್ ಹಾಗೂ ಐಬಿಎಮ್ ಮುಂತಾದ ಅಂತರರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಕಂಪನಿಗಳು ಕ್ಯಾಂಪಸ್ ಸಂದರ್ಶನ ನಡುಸುತ್ತವೆ.