ಸರೋಜಿನಿ ಮಹಿಷಿ ವರದಿ
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯನವರ ನೇತೃತ್ವದಲ್ಲಿ ಸರ್ಕಾರಕ್ಕೆ ಸರೋಜಿನಿ ಮಹಿಷಿ ಪರಿಷ್ಕೃತ ವರದಿಯನ್ನು ಸಿಎಂ ಸಿದ್ದರಾಮಯ್ಯ ಅವರಿಗೆ ಸಲ್ಲಿಸಲಾಯಿತು.
ಈ ಲೇಖನದಿಂದ ಬೇರೆ ಯಾವುದೇ ಲೇಖನಕ್ಕೆ ಬಾಹ್ಯ ಸಂಪರ್ಕ ಹೊಂದಿಲ್ಲ. |
ರಾಜ್ಯ ಸರ್ಕಾರ ಅನುಷ್ಠಾನ ಗೊಳಿಸಬೇಕಾದ 24 ಶಿಫಾರಸ್ಸುಗಳು ಹಾಗೂ ಕೇಂದ್ರ ಸರ್ಕಾರಕ್ಕೆ ಸಲ್ಲಿಸಬೇಕಾದ 7 ಸಲಹೆಗಳ ವರದಿ ಸಲ್ಲಿಸಲಾಯಿತು ಅದರ ಮುಖ್ಯಾಂಶಗಳು.
1.ಖಾಸಗಿ ವಲಯದ ಡಿ ಮತ್ತು ಸಿ ದರ್ಜೆ ನೌಕರರಿಗೆ 100% ಕನ್ನಡಿಗರ ನೇಮಕ ಮಾಡಬೇಕು.80% ಉನ್ನತ ಹುದ್ದೆಗಳು ಕನ್ನಡಿಗರಿಗೆ ಮೀಸಲಿರಬೇಕು.
2.ರಾಜ್ಯದ ಎಲ್ಲಾ ಬ್ಯಾಂಕ್ ಗುಮಾಸ್ತರ ಹುದ್ದೆ ಅಭ್ಯರ್ಥಿ ಆಯ್ಕೆ ಸಂಧರ್ಭದಲ್ಲಿ ಕನ್ನಡ ಭಾಷೆ ಕಡ್ಡಾಯ ಮಾಡಬೇಕು. 10 ನೇ ತರಗತಿಯಲ್ಲಿ ಕನ್ನಡ ಭಾಷೆ ವ್ಯಾಸಂಗ ಮಾಡದವರು ರಾಜ್ಯ ಭಾಷೆ ಪರೀಕ್ಷೆ ಕಡ್ಡಾಯವಾಗಿ ಪಾಸ್ ಮಾಡಬೇಕು.
3.ರಾಜ್ಯದ ಸರ್ಕಾರಿ ವಲಯದ ಉದ್ಯಮಗಳಿಗರ ಕನ್ನಡಿಗರನ್ನೆ ಆಯ್ಕೆ ಮಾಡಬೇಕು. ಬೇರೆ ರಾಜ್ಯದವರನ್ನ ನೇಮಕ ಮಾಡಬೇಕಾದ್ರೆ ಸರ್ಕಾರದ ಅನುಮತಿ ಕಡ್ಡಾಯ ಮಾಡಬೇಕು.
4.ಅಪ್ರೆಂಟಿಸ್ ಆಯ್ಕೆಯನ್ನ ರಾಜ್ಯದಲ್ಲಿ ಎಸ್ ಎಸ್ ಎಲ್ ಸಿ ವರೆಗೂ ಓದಿದವರಿಗೆ ನೀಡಬೇಕು.
5.ರಾಜ್ಯ ಹಾಗೂ ಕೇಂದ್ರ ಸರ್ಕಾರಿ ಉದ್ಯಮ ಹಾಗೂ ಇಲಾಖೆ ದಿನಗೂಲಿ ನೌಕರರು, ಗುತ್ತಿಗೆ ಆಧಾರದಲ್ಲಿ ನೇಮಿಸಲು ಕಡ್ಡಾಯವಾಗಿ ಕನ್ನಡಿಗರನ್ನೆ ನೇಮಿಸಬೇಕು.
6.ರಾಜ್ಯದಲ್ಲಿರುವ ಉದ್ಯಮ ಸಂಸ್ಥೆಗಳಲ್ಲಿ ನೌಕರರ ಪ್ರಮಾಣ ನೂರಕ್ಕಿಂತ ಹೆಚ್ಚಿದ್ದಾಗ ಆ ಸಂಸ್ಥೆಯ ನೇಮಕಾತಿ ಆಯ್ಕೆ ಸಮಿತಿಯಲ್ಲಿ ರಾಜ್ಯ ಸರ್ಕಾರದ ಕನ್ನಡ ಪ್ರತಿನಿಧಿ ಕಡ್ಡಾಯವಾಗಿ ಇರಬೇಕು.
7.ಖಾಸಗಿ ಕೇಂದ್ರ ಸಾರ್ವಜನಿಕ ಉದ್ಯಮಗಳ ನೇಮಕಾತಿ ಪಟ್ಟಿಯನ್ನು ನಿಯಮಿತವಾಗಿ ಪ್ರತಿ ವರ್ಷ ಸಂಬಂಧಪಟ್ಟ ಇಲಾಖೆಗೆ ಕಳಿಸಬೇಕು. ಜೊತೆಗೆ ಕಡ್ಡಾಯವಾಗಿ ಕನ್ನಡ ಅಭಿವೃದ್ದಿ ಪ್ರಾಧಿಕಾರಕ್ಕೆ ಸಲ್ಲಿಸಬೇಕು.
8.ಉದ್ಯೋಗ ತರಬೇತಿ ಕೇಂದ್ರಗಳಲ್ಲಿ ತರಬೇತಿ ನೀಡುವ ಹೊಣೆಯನ್ನ ನಿರ್ವಹಿಸಲು ಪ್ರತ್ಯೇಕ ತಾಂತ್ರಿಕ ಸಲಹಾ ಮಂಡಳಿಯನ್ನ ಆಯೋಜಿಬೇಕು.
9.ಕೇಂದ್ರ ಸರ್ಕಾರ ಎಂಪ್ಲಾಯ್ ಮೆಂಟ್ ನ್ಯೂಸ್ ಮಾದರಿಯಲ್ಲಿ ರಾಜ್ಯ ಸರ್ಕಾರ ಉದ್ಯೋಗ ಮಾಹಿತಿಯನ್ನ ಕನ್ನಡದಲ್ಲಿಯೇ ಜಾಹೀರಾತು ಮೂಲಕ ನೀಡಬೇಕು. ಅಲ್ಲದೆ ಉದ್ಯೋಗ ಮಾಹಿತಿ ನೀಡುವ ವೆಬ್ ಸೈಟ್ ಪ್ರಾರಂಭಿಸಬೇಕು.
10.ಸ್ಥಳೀಯರೆಂದು ಪರಿಗಣಿಸಲು ರಾಜ್ಯದಲ್ಲಿ 15 ವರ್ಷ ವಾಸವಿರಬೇಕು..ಕನ್ನಡ ಭಾಷ ಜ್ಞಾನ ಇರಬೇಕು. ಅಲ್ಲದೆ ಎಸ್.ಎಸ್.ಎಲ್.ಸಿ ಸರ್ಟಿಫಿಕೇಟ್, ಪಡಿತರ ಚೀಟಿ, ಜನ್ಮ ದಾಖಲೆ. ಆಧಾರ್ ಕಾರ್ಡ್ ಯಾವುದಾದರು ಒಂದು ದಾಖಲೆ ಹೊಂದಿರಬೇಕು.
11.ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಚೇರಿಗಳು, ಉದ್ಯಮಗಳು, ಖಾಸಗಿ ವಲಯದ ನಾಮಫಲಕ, ಹೆದ್ದಾರಿ ಫಲಕಗಳನ್ನ ಕನ್ನಡದಲ್ಲಿ ಕಡ್ಡಾಯವಾಗಿ ಮೊದಲ ಆದ್ಯತೆಯಲ್ಲಿ ಪ್ರದರ್ಶಿಸಬೇಕು.
12.ಐಸಿಎಸ್ಸಿ, ಸಿಬಿಎಸ್ ಇ, ಕೇಂದ್ರೀಯ ವಿದ್ಯಾಲಯ, ನವೋದಯ ಇತರ ಆಂಗ್ಲ ಭಾಷೆಯ ಶಿಕ್ಷಣ ಸಂಸ್ಥೆಗಳು 1-10 ತರಗತಿವರೆಗೆ ಕನ್ನಡ ಒಂದು ವಿಷಯವಾಗಿ ಕಡ್ಡಾಯಗೊಳಿಸಬೇಕು.
13.ರಾಜ್ಯ ಹಾಗೂ ಕೇಂದ್ರ ಸರ್ಕಾರದ ಉನ್ನತ ಶಿಕ್ಷಣ ಅಥವಾ ಹುದ್ದೆಗಳ ನೇಮಕಾತಿ ನಡೆಸುವ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳ ಕನ್ನಡದಲ್ಲಿ ಇರಬೇಕು. ಉತ್ತರ ಕನ್ನಡದಲ್ಲಿ ಬರೆಯಲು ರಾಜ್ಯ ಸರ್ಕಾರ ಆಯಾ ಇಲಾಖೆಗಳಿಗೆ ಅಗತ್ಯ ಪದ ಭಂಡಾರ, ಪಠ್ಯ ಸೃಷ್ಟಿಸುವ ಕೆಲಸ ಮಾಡಬೇಕು.
14.ರಾಜ್ಯ ಸರ್ಕಾರದ ಆಡಳಿತದಲ್ಲಿ ಬಳಸುವ ಎಲ್ಲ ತಂತ್ರಾಂಶಗಳಲ್ಲಿ, ಸಾರ್ವಜನಿಕ ಸಂಪರ್ಕದಲ್ಲಿ ಬಳಸುವ ಎಲ್ಲ ಸಾಧನಗಳಲ್ಲಿ ,ಖಾಸಗಿ ವಲಯದ ಸಾರ್ವಜನಿಕ ಸಂಪರ್ಕದ ಅಭಿವ್ಯಕ್ತಿ ಮಾಹಿತಿಗಳಲ್ಲಿ ಕನ್ನಡವನ್ನು ಕಡ್ಡಾಯವಾಗಿ ಬಳಸಬೇಕು.